Karnataka Weather Report: ಉತ್ತರ ಭಾರತದಲ್ಲಿ ಮಳೆಯ ಅಲರ್ಟ್; ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ

ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ, ಆದರೆ ಕನಿಷ್ಠ ತಾಪಮಾನವು ಎರಡು ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಮಾನ್ಯ ಮಿತಿಯನ್ನು ಮೀರಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today: ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona Virus And Omicron Variant) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ. ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (north Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಶೀತ ಗಾಳಿ (Clod Wave) ಆರಂಭಗೊಂಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 28-17, ಮೈಸೂರು 31-18, ಚಾಮರಾಜನಗರ 30-18, ರಾಮನಗರ 30-18, ಮಂಡ್ಯ 30-18, ಬೆಂಗಳೂರು ಗ್ರಾಮಾಂತರ 28-17, ಚಿಕ್ಕಬಳ್ಳಾಪುರ 28-17, ಕೋಲಾರ 28-17, ಹಾಸನ 29-16, ಚಿಕ್ಕಮಗಳೂರು 29-16, ದಾವಣಗೆರೆ 31-17, ಶಿವಮೊಗ್ಗ 32-17, ಕೊಡಗು 28-16, ತುಮಕೂರು 29-17, ಉಡುಪಿ 31-22

ಇದನ್ನೂ ಓದಿ:  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

ಮಂಗಳೂರು 31-22, ಉತ್ತರ ಕನ್ನಡ 31-16, ಧಾರವಾಡ 29-15, ಹಾವೇರಿ 31-17, ಹುಬ್ಬಳ್ಳಿ 30-16, ಬೆಳಗಾವಿ 28-14, ಗದಗ 31-17, ಕೊಪ್ಪಳ 31-18, ವಿಜಯಪುರ 30-17, ಬಾಗಲಕೋಟ 31-17, ಕಲಬುರಗಿ 31-18, ಬೀದರ್ 28-17, ಯಾದಗಿರಿ 30-19, ರಾಯಚೂರ 31-19, ಬಳ್ಳಾರಿ 32-19

ಉತ್ತರದ ರಾಜ್ಯಗಳಲ್ಲಿ ಹಳದಿ ಅಲರ್ಟ್

ಪಂಜಾಬ್‌ನ ಪಿಪಾ ರಂಗಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭಾನುವಾರ ಡೈರಿಯ ಮೇಲ್ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದ್ದು, ಜನವರಿ 11 ಮತ್ತು 13 ರಂದು ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ.

ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ, ಆದರೆ ಕನಿಷ್ಠ ತಾಪಮಾನವು ಎರಡು ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಮಾನ್ಯ ಮಿತಿಯನ್ನು ಮೀರಿದೆ.

ಈ ಭಾಗದಲ್ಲಿ ಮಳೆ

ಚಂಡೀಗಢ, ಕಪುರ್ತಲ, ಅಮೃತಸರ, ಲೂಧಿಯಾನ, ಪಟಿಯಾಲ, ಫಿರೋಜ್‌ಪುರ, ಬಟಿಂಡಾ, ಹೋಶಿಯಾರ್‌ಪುರ, ರೂಪನಗರ್, ಮೊಹಾಲಿ, ಗುರುದಾಸ್‌ಪುರ, ಅಂಬಾಲಾ, ಹಿಸಾರ್, ಪಂಚಕುಲ, ರೋಹ್ಟಕ್, ಗುರುಗ್ರಾಮ್, ಸಿರ್ಸಾ ಮತ್ತು ಯಮುನಾನಗರ ಭಾಗದಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ:  ಕಾಂಗ್ರೆಸ್‌ ನಡಿಗೆ, ಕೃಷ್ಣೆಯ ಕಡೆಗೆ ಪಾದಯಾತ್ರೆಗೆ 9 ವರ್ಷ: ಕೊಟ್ಟ ಮಾತು ಉಳಿಸಿಕೊಂಡಿದೆಯಾ Congress?

ಓಡಿಶಾದಲ್ಲಿ ಆರೆಂಜ್ ಅಲರ್ಟ್

ಒಡಿಶಾದಲ್ಲಿ ಜನವರಿ 11 ಮತ್ತು 12 ರಂದು ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಆರೆಂಟ್ ಅಲರ್ಟ್ ನೀಡಿದೆ.

ಅಕಾಲಿಕ ಮಳೆಗೆ ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rain)ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ (Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ದೆಹಲಿಯಲ್ಲಿ ಲಘು ಮಳೆ ಸಾಧ್ಯತೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ 13.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಇಂದು ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇಂದು ಸಹ ಮೋಡ ಕವಿದ ವಾತಾವರಣದ ಜೊತೆ ಲಘು ಮಳೆಯಾಗಲಿದೆ.
Published by:Mahmadrafik K
First published: