Karnataka Weather Today: ರಾಜ್ಯದಲ್ಲಿ ಬೇಸಿಗೆಯ ಧಗೆ ಆರಂಭ; ಇತ್ತ ತಮಿಳುನಾಡಿಗೆ ಮಳೆರಾಯನ ಎಂಟ್ರಿ

Karnataka Weather Today 10 Feb 2022: ರಾಜ್ಯದಲ್ಲಿ ಬೇಸಿಗೆ (Summer) ಆರಂಭವಾಗಿದ್ದು, ಚಳಿ ಚಳಿ (Cold) ಎನ್ನುತ್ತಿದ್ದ ಜನರು ಬಿಸಿಲಿನ ತಾಪಕ್ಕೆ ಶಿವ ಶಿವ ಅನ್ನುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today 10 Feb 2022: ರಾಜ್ಯದಲ್ಲಿ ಬೇಸಿಗೆ (Summer) ಆರಂಭವಾಗಿದ್ದು, ಚಳಿ ಚಳಿ (Cold) ಎನ್ನುತ್ತಿದ್ದ ಜನರು ಬಿಸಿಲಿನ ತಾಪಕ್ಕೆ ಶಿವ ಶಿವ ಅನ್ನುವಂತಾಗಿದೆ. ಕರಾವಳಿ(Coastal), ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಪೂರ್ಣ ಒಣ ಹವೆ ಇರಲಿದ್ದು, ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆ ಸಣ್ಣ ಪ್ರಮಾಣದ ಚಳಿ ಬಿಸಿಲಿನಿಂದ ಬಳಲಿದ ಜನತೆಗೆ ತಂಪಾದ ಹಿತವನ್ನು ನೀಡುತ್ತಿದೆ.ಇನ್ನೂ ಮಲೆನಾಡು, ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಚಳಿ ಕೊಂಚ ಇಳಿಕೆಯಾಗಿದೆ. ಇಂದು ಬೆಂಗಳೂರಿ(Bengaluru Weather)ನಲ್ಲಿ ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 30-16, ಮೈಸೂರು 32-17, ಚಾಮರಾಜನಗರ 32-17, ರಾಮನಗರ 32-17, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 30-16, ಕೋಲಾರ 30-15, ಹಾಸನ 31-16, ಚಿಕ್ಕಮಗಳೂರು 31-16, ದಾವಣಗೆರೆ 33-19, ಶಿವಮೊಗ್ಗ 34-18, ಕೊಡಗು 31-17, ತುಮಕೂರು 31-17, ಉಡುಪಿ 31-22

ಮಂಗಳೂರು 31-22, ಉತ್ತರ ಕನ್ನಡ 34-19, ಧಾರವಾಡ 33-19, ಹಾವೇರಿ 34-19, ಹುಬ್ಬಳ್ಳಿ 33-19, ಬೆಳಗಾವಿ 32-19, ಗದಗ 32-19, ಕೊಪ್ಪಳ 32-19, ವಿಜಯಪುರ 32-21, ಬಾಗಲಕೋಟ 33-21, ಕಲಬುರಗಿ 32-21, ಬೀದರ್ 30-18, ಯಾದಗಿರಿ 32-21, ರಾಯಚೂರ 32-20, ಬಳ್ಳಾರಿ 33-19

ಇದನ್ನೂ ಓದಿ:  Hijab Row Hearing: ಹಿಜಾಬ್​​ ಪ್ರಕರಣ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡ ಹೈಕೋರ್ಟ್

ರಾಜ್ಯದ ಜಲಾಶಯಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ

ಕಳೆದ ವರ್ಷ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆಯ ಅಬ್ಬರವಿತ್ತು. ಅಲ್ಲದೆ, ಹೆಚ್ಚು ಸೈಕ್ಲೋನ್‌ಗಳು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸುರಿದ ಅಕಾಲಿಕ ಮಳೆಯಿಂದ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಅಲ್ಲದೆ, ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು.

ಉತ್ತರ ಭಾರತದ ಹಲವೆಡೆ ಮಳೆ

ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್, ಬಿಹಾರ, ಒಡಿಶಾ  ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ದೆಹಲಿ ಮತ್ತು ಚಂಡೀಗಢ ಸೇರಿ 15 ರಾಜ್ಯಗಳಲ್ಲಿ ಮಳೆಯಾಗಲಿದೆ (Rain Updates) ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ದೆಹಲಿಯಲ್ಲಿ ತಗ್ಗಿದ ಗಾಳಿಮಟ್ಟ ಗುಣಮಟ್ಟ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Delhi Air Quality) ತಗ್ಗಿದೆ. ದೆಹಲಿಯ ವ್ಯಾಪ್ತಿಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಮಂಜಿನ ವಾತಾವರಣ ಕೂಡ ಇರಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹಿಮಾಲಯನ್ ಪ್ರದೇಶಗಳಲ್ಲಿ ಹಿಮಪಾತ ಸಾಧ್ಯತೆ

ಇಂದು ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಲಘು ಮಳೆ ಅಥವಾ ಹಿಮಪಾತವಾಗಲಿದೆ. ಇಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:  Rose Rate: ಅಬ್ಬಬ್ಬಾ..ಈ ಸಲ ಫೆ.14ರ ಪ್ರೇಮಿಗಳ ದಿನದಂದು ಒಂದು ರೋಸ್ ಬೆಲೆ ಇಷ್ಟೊಂದಾ?

ತಮಿಳುನಾಡಿನಲ್ಲಿ ಮತ್ತೆ ಮಳೆ

ಈ ವರ್ಷದಲ್ಲಿ ಮಳೆಯಿಂದ ತತ್ತರಿಸಿರುವ ತಮಿಳುನಾಡಿಗೆ ಮತ್ತೆ ವರುಣರಾಯ ಎಂಟ್ರಿ ಕೊಡಲಿದ್ದಾರೆ. ಇಂದಿನಿಂದ ಮುಂದಿನ ಮೂರು ದಿನ  ಮಳೆಯಾಗಲಿದೆ. ಮಧುರೈ, ಥೇಣಿ, ದಿಂಡಿಗಲ್, ವಿರುದುನಗರ, ಶಿವಗಂಗಾ, ತೆಂಕಶಿ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಭಾಗಗಳಲ್ಲಿ ಗುರುವಾರದಿಂದ ಶನಿವಾರದವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Published by:Mahmadrafik K
First published: