Karnataka Weather Report: ಉತ್ತರ ಒಳನಾಡು ಸೇರಿದಂತೆ ರಾಜ್ಯದಲ್ಲಿ ಶುಷ್ಕ ಹವಾಮಾನ

ಉತ್ತರ ಒಳನಾಡು ಸೇರಿದಂತೆ ರಾಜ್ಯದ (Karnataka Werather) ಬಹುತೇಕ ಭಾಗಗಳಲ್ಲಿ ಶುಷ್ಕ ಹಮಾಮಾನ ಇರಲಿದೆ.ಯಾದಗಿರಿ(Yadagiri), ರಾಯಚೂರು(Raichur), ಬಳ್ಳಾರಿ(Ballary)ಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಮಲೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಚದುರಿದ ರೀತಿ ಹಗುರವಾದ ಮಳೆ(Low Rain)ಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಒಳನಾಡು ಸೇರಿದಂತೆ ರಾಜ್ಯದ (Karnataka Werather) ಬಹುತೇಕ ಭಾಗಗಳಲ್ಲಿ ಶುಷ್ಕ ಹಮಾಮಾನ ಇರಲಿದೆ.ಯಾದಗಿರಿ(Yadagiri), ರಾಯಚೂರು(Raichur), ಬಳ್ಳಾರಿ(Ballary)ಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಮಲೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಚದುರಿದ ರೀತಿ ಹಗುರವಾದ ಮಳೆ(Low Rain)ಯಾಗಲಿದೆ. ಚಳಿಗಾಲ (Winter) ಆರಂಭವಾಗಿರೋದರಿಂದ ಬೆಳಗ್ಗೆ ಮತ್ತು ಸಂಜೆ ತಂಪು ಗಾಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather Today) ಗರಿಷ್ಠ 28, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ ( ಗರಿಷ್ಠ – ಕನಿಷ್ಠ, ಡಿಗ್ರಿ ಸೆಲ್ಸಿಯಸ್)

ಬೆಂಗಳೂರು 28-19, ಮೈಸೂರು 29-19, ಚಾಮರಾಜನಗರ 28-19, ರಾಮನಗರ 29-20, ಮಂಡ್ಯ 29-19, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 27-18, ಕೋಲಾರ 28-18, ಹಾಸನ 28-18, ಚಿಕ್ಕಮಗಳೂರು 28-17, ದಾವಣಗೆರೆ 31-19, ಶಿವಮೊಗ್ಗ 31-19, ಕೊಡಗು 28-17, ತುಮಕೂರು 29-19, ಉಡುಪಿ 32-23, ಮಂಗಳೂರು 32-24, ಉತ್ತರ ಕನ್ನಡ 32-23

ಇದನ್ನೂ ಓದಿ:  ಕೆಲಸದ ವಿಚಾರದಲ್ಲಿ ಕುಂಭರಾಶಿಯವರು ಜಾಗ್ರತೆವಹಿಸುವುದು ಅವಶ್ಯ; ಇಲ್ಲಿದೆ 12 ರಾಶಿಗಳ ಭವಿಷ್ಯ

ಧಾರವಾಡ 31-18, ಹಾವೇರಿ 31-19, ಹುಬ್ಬಳ್ಳಿ 31-18, ಬೆಳಗಾವಿ 30-17, ಗದಗ  30-19, ಕೊಪ್ಪಳ 30 – 20, ವಿಜಯಪುರ 31-19, ಬಾಗಲಕೋಟ 31-19, ಕಲಬುರಗಿ 32-20, ಬೀದರ್ 29-19, ಯಾದಗಿರಿ 32-21, ರಾಯಚೂರ 32-21, ಬಳ್ಳಾರಿ 31-21

ಬಂಗಾಳ ಕೊಲ್ಲಿ ಕಡಲತೀರದ ಪ್ರದೇಶದಲ್ಲಿ ಮಳೆ ಸಾಧ್ಯತೆ

ಇಂದು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಅಲ್ಲಲ್ಲಿ ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಲಡಾಖ್ ವ್ಯಾಪ್ತಿಯಲ್ಲಿ ಹಿಮ ಬೀಳುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶ, ಮಣಿಪುರ, ಒಡಿಶಾ, ತೆಲಂಗಾಣ ಮತ್ತು ಲಕ್ಷದ್ವೀಪಗಳ ವಿವಿಧಡೆ ಚದುರಿದ ಮಳೆಯಾಗುವ ಸಂಭವಗಳಿವೆ,

ದೇಶದ ಉಳಿದ ಭಾಗಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನವನ್ನು ಮುಂದುವರಿಯಲಿದೆ. ಅಸ್ಸಾಂ, ಮೇಘಾಲಯ, ಬಿಹಾರ, ಒಡಿಶಾ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬೆಳಗಿನ ವೇಳೆ  ಮಧ್ಯಮ ಮಂಜು ಇರಲಿದೆ.

ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಮಳೆ

ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಕರಾವಳಿಯಲ್ಲಿ ವಾಯುಭಾರ ಕುಸಿತವಾಗುತ್ತಿರುವ ಪರಿಣಾಮ ಮಂಗಳವಾರದಿಂದಲೇ ಈಶಾನ್ಯ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ.

ಇದನ್ನೂ ಓದಿ:  ಮದುವೆಯಾಗೋದು ಈಕೆಯ ಖಯಾಲಿ.. 4ನೇ ಗಂಡನ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದ ಚಾಲಾಕಿ!

ಲಘು ಹಿಮಪಾತ

ಈ ನಡುವೆ ಉತ್ತರ ಭಾರತದಲ್ಲಿ ಬುಧವಾರ ಮಧ್ಯಾಹ್ನದಿಂದ ವಾತಾವರಣ ಬದಲಾಗಿದ್ದು, ಗುರುವಾರ ರಾತ್ರಿಯೊಳಗೆ ಚದುರಿತ ರೀತಿ ಹಿಮ ಬೀಳಲಿದೆ. ಡಿಸೆಂಬರ್ 8 ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಲಘು ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

ಚಳಿಗಾಲ, ಅಕಾಲಿಕ ಮಳೆ ಎಫೆಕ್ಟ್, ತರಕಾರಿ ಬೆಲೆ ಏರಿಕೆ

ಚಳಿಗಾಲದಲ್ಲಿ ಹೆಚ್ಚಾಗಿ ಬೇಡಿಕೆಯಲ್ಲಿರುವ ತರಕಾರಿ ನುಗ್ಗೆಕಾಯಿ. ಮೊನ್ನೆ ಮೊನ್ನೆವರೆಗೂ 30 ರೂಪಾಯಿ ಇದ್ದ ನುಗ್ಗೆಕಾಯಿ ಬೆಲೆ ಈಗ ಬರೋಬ್ಬರು 353 ರೂ.ಗೆ ಏರಿಕೆಯಾಗಿದೆ ಅಂದ್ರೆ ನೀವು ನಂಬಲೇಬೇಕು.

ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (HOPCOMS) ಪ್ರಕಾರ, ಕಳೆದ ತಿಂಗಳು 30 ರಿಂದ 40 ರೂಪಾಯಿಯಿದ್ದ ನುಗ್ಗೆಕಾಯಿ ಬಲೆ ಈಗ 353 ಕ್ಕೆ ಏರಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆಗೆ ಅಡ್ಡಿಯಾಗಿರುವುದರಿಂದ ಬೆಂಗಳೂರಿನಲ್ಲಿ ಬೆಲೆ ಏರಿಕೆಯಾಗಿದೆ.
Published by:Mahmadrafik K
First published: