ರಾಯಚೂರು: ಮತದಾನದ ಹಕ್ಕು (Right to vote) ಚಲಾಯಿಸಿದ ಬಳಿಕ ವೃದ್ಧೆಯೊಬ್ಬರು (Woman) ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichuru) ಸಿಂಧನೂರು ತಾಲೂಕಿನ ಅಲಬನೂರಿನಲ್ಲಿ ನಡೆದಿದೆ. ಮೃತ ವೃದ್ಧೆಯನ್ನು 82 ವರ್ಷದ ಮಂಗಮ್ಮ ಎಂದು ಗುರುತಿಸಲಾಗಿದೆ. ಮತದಾನ ಮಾಡಿ ಅರ್ಧ ಗಂಟೆ ಬಳಿಕ ವೃದ್ಧೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಚುನಾವಣಾ ಆಯೋಗ (Election Commission) ಮೊಟ್ಟ ಮೊದಲ ಬಾರಿಗೆ 80 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮನೆಯಲ್ಲೇ ಮತ ಚಲಾಯಿಸಲು (Vote From Home) ಅವಕಾಶ ನೀಡಿದೆ. ಈ ಸೌಲಭ್ಯವನ್ನು ಪಡೆದುಕೊಂಡ ಅಜ್ಜಿ ಬದುಕಿನ ಕೊನೆಯಲ್ಲಿಯೂ ಮತದಾನದ ಹಕ್ಕು ಚಲಾಯಿಸಿದ ಅರ್ಧ ಗಂಟೆ ಬಳಿಕ ಕೊನೆಯುಸಿರೆಳೆದಿದ್ದಾರೆ.
ಇಂದು ಮಧ್ಯಾಹ್ನ 12:19ಕ್ಕೆ ಮಂಗಮ್ಮ ಅವರು ಮತ ಚಲಾಯಿಸಿದ್ದರು, ಆದರೆ 12:50ರ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಸಿಂಧನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 84ರ ವ್ಯಾಪ್ತಿಯಲ್ಲಿ ಮೃತರು ಮತ ಚಲಾಯಿಸಿದ್ದರು.
ಇದನ್ನೂ ಓದಿ: PM Modi: ಪದ್ಮಶ್ರೀ ಪುರಸ್ಕೃತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮೋದಿ; ಪ್ರಧಾನಿಗಳನ್ನ ಕಂಡು ಖುಷಿಯಿಂದ ಕಣ್ಣೀರಿಟ್ಟ ವೃದ್ಧೆ
ಮನೆಯಿಂದಲೇ ಮತ ಚಲಾಯಿಸಿದ ವೃದ್ಧರು
ವಯಸ್ಸಿನ ಕಾರಣದಿಂದ ಪ್ರಜಾಪ್ರಭುತ್ವದ ಪವಿತ್ರವಾದ ಹಕ್ಕು ಚಲಾಯಿಸಲಾಗಿದೆ ಹಲವರು ವಂಚಿತರಾಗುತ್ತಿದ್ದರು. ವಯೋವೃದ್ಧರಿಗೆ ಮತ ಚಲಾಯಿಸಲು ಈ ಬಾರಿ ಚುನಾವಣಾ ಆಯೋಗ ವಿನೂತನ ವ್ಯವಸ್ಥೆ ಜಾರಿ ಮಾಡಿರುವುದರಿಂದ ಸಹಜವಾಗಿಯೇ ಹಲವರು ಖುಷಿ ಪಟ್ಟಿದ್ದಾರೆ. ಹಲವು ಮನೆಯಿಂದಲೇ ಮತ ಚಲಾಯಿಸಿ ಮಾಧ್ಯಮಗಳ ಎದುರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯಲಿದೆ. 80 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಯರು ಮತಗಟ್ಟೆಗೆ ಬಂದು ಮತ ಹಾಕಲು ತೊಂದರೆಯಾಗುವ ಹಿನ್ನಲೆ ಇಂದಿನಿಂದ 80 ವರ್ಷ ಮೇಲ್ಪಟ್ಟವರ ಮನೆಗೆ ತೆರಳಿ ಚುನಾವಣಾಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಮನೆಯಲ್ಲೇ ಗುಪ್ತ ಮತದಾನಕ್ಕೆ ಅವಕಾಶ ಕಲ್ಪಿಸಿರುವುದರಿಂದ ವೃದ್ಧರು ಹಕ್ಕು ಚಲಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ