• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yamakanakaradi: ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಸಿಗುತ್ತಾ 4ನೇ ಗೆಲುವು? ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಪ್ರಯತ್ನ

Yamakanakaradi: ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಸಿಗುತ್ತಾ 4ನೇ ಗೆಲುವು? ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಪ್ರಯತ್ನ

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

Yamakanakaradi Assembly Constituency: 2018ರ ಯಮಕನಮರಡಿ ಅಸೆಂಬ್ಲಿ ಚುನಾವಣೆಯನ್ನು ಗೆದ್ದಿದ್ದ ಸತೀಶ್ ಜಾರಕಿಹೊಳಿ ಬಿಜೆಪಿಯ ಅಷ್ಟಗಿ ಮಾರುತಿ ಮಲ್ಲಪ್ಪ ಹಾಗೂ ಜೆಡಿಎಸ್‌ನ ಶಂಕರ್ ಭರಾಮ ಗಸ್ತಿ ಅವರನ್ನು ಸೋಲಿಸಿ ಯಮಕನಮರಡಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಸ್ಥಾಪಿಸಿದ್ದಾರೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Belgaum, India
  • Share this:

ಬೆಳಗಾವಿ: 224 ಸ್ಥಾನಗಳ ಕರ್ನಾಟಕ ವಿಧಾನಸಭೆಗೆ (Karnataka Assembly Election 2023) ಮೇ 10 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಪ್ರಕಟಿಸಿದೆ. ಕರ್ನಾಟಕ ಚುನಾವಣೆ 2023 ರ ಫಲಿತಾಂಶವನ್ನು (Karnataka Election Results) ಮೇ 13 ರಂದು ಪ್ರಕಟಿಸಲಾತ್ತದೆ. ಚುನಾವಣೆಯು ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೆ ನಿರ್ಣಾಯಕ ಎಂದೆನಿಸಿದ್ದು ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ (Loksabha Election) ಮುನ್ನ ಆಡಳಿತ ಪಕ್ಷ ಬಿಜೆಪಿಗೆ(BJP) ಅತ್ಯಂತ ಮಹತ್ವದ್ದು ಎಂದೆನಿಸಿದೆ. ಯಮಕನಮರಡಿ ಕ್ಷೇತ್ರ (Yamakanakaradi) ಕಾಂಗ್ರೆಸ್‌ನ ಭದ್ರಕೋಟೆ ಎಂದೆನಿಸಿದೆ. ಪ್ರತಿ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ (Satish Jarkiholi) ಇತರ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ಜಯಭೇರಿ ಬಾರಿಸುತ್ತಿದ್ದಾರೆ.


ಪ್ರಭಾವಿ ಬಿಜೆಪಿ ನಾಯಕರುಗಳು ಹಾಗೂ ಮುತ್ಸದ್ದಿಗಳು ಎಂದೆನಿಸಿರುವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಹಾಗೂ ರಾಜನಾಥ್ ಸಿಂಗ್ ಬಿಜೆಪಿಯ ಚುನಾವಣಾ ಮತಯಾಚನಾ ಕ್ಯಾಂಪೇನ್‌ನಲ್ಲಿ ರಾರಾಜಿಸುತ್ತಿದ್ದಾರೆ.


ಸ್ವತಃ ಮತದಾರರ ಮನವೊಲಿಸುವ ನಿಟ್ಟಿನಲ್ಲಿ ಖುದ್ದಾಗಿ ಹಲವಾರು ಮೆರವಣಿಗೆಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ಭರ್ಜರಿಯಿಂದಲೇ ಮತಯಾಚನೆ ನಡೆಸುತ್ತಿದ್ದಾರೆ.


ಪ್ರಮುಖ ನಾಯಕರಿಂದ ಪ್ರಚಾರ


ಇತರ ಪಕ್ಷಗಳೂ ಕೂಡ ತಮ್ಮ ಮುಖ್ಯ ನಾಯಕರುಗಳನ್ನು ಚುನಾವಣಾ ಪ್ರಚಾರದ ಅಖಾಡಾಕ್ಕೆ ಇಳಿಸಿದ್ದು, ಭರ್ಜರಿಯಾಗಿಯೇ ಚುನಾವಣೆಯಲ್ಲಿ ಪಕ್ಷಗಳ ಪ್ರಮುಖ ನಾಯಕರುಗಳು ಭಾಗವಹಿಸಿದ್ದಾರೆ.


 karnataka assembly election 2023 yamakanakaradi congress candidate satish jarkiholi political profile stg mrq
ಸತೀಶ್ ಜಾರಕಿಹೊಳಿ


ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಕೂಡ ಭರ್ಜರಿ ಪ್ರಚಾರ ನಡೆಸಿ ಪಕ್ಷದ ಗೆಲುವಿಗಾಗಿ ಪರಿಶ್ರಮಿಸುತ್ತಿದ್ದಾರೆ.


ಕಾಂಗ್ರೆಸ್ ಭದ್ರಕೋಟೆ ಯಮಕನರಮರಡಿ ಕ್ಷೇತ್ರ


224 ಚುನಾವಣಾ ಕ್ಷೇತ್ರಗಳಲ್ಲಿ ಯಮಕನರಮರಡಿ ಕ್ಷೇತ್ರ ಕೂಡ ಒಂದಾಗಿದ್ದು ಇದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಎಸ್‌ಟಿ ಸಮುದಾಯಕ್ಕೆ ಈ ಕ್ಷೇತ್ರದ ಸೀಟು ಮೀಸಲಾಗಿದ್ದು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಇಲ್ಲಿ ಪ್ರಬಲ ಅಭ್ಯರ್ಥಿ ಎಂದೆನಿಸಿದ್ದಾರೆ.


ಕಳೆದ ಮೂರು ಚುನಾವಣೆಗಳಲ್ಲಿ ಜಾರಕಿಹೊಳಿ ಜಯಭೇರಿ ಬಾರಿಸಿದ್ದು ಕ್ರಮವಾಗಿ 2008, 2013 ಹಾಗೂ 2018 ರ ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ.


ಕ್ಷೇತ್ರದಲ್ಲಿರುವ ಮತದಾರರ ಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಮಾಹಿತಿ


ಹಿಂದಿನ ಡೇಟಾದ ಪ್ರಕಾರ ಯಮಕನಮರಡಿ ಅಸೆಂಬ್ಲಿ ಕ್ಷೇತ್ರದಲ್ಲಿ 1,85,780 ಮತದಾರರಿದ್ದು ಇದರಲ್ಲಿ 92,126 ಪುರುಷರು ಹಾಗೂ 92,226 ಮಹಿಳಾ ಮತದಾರರಿದ್ದಾರೆ.


 karnataka assembly election 2023 yamakanakaradi congress candidate satish jarkiholi political profile stg mrq
ಶಾಸಕ ಸತೀಶ್ ಜಾರಕಿಹೊಳಿ


ಯಮಕನಮರಡಿ ಅಸೆಂಬ್ಲಿ ಚುನಾವಣೆ 2023 ಪೈಪೋಟಿ ಹೇಗಿದೆ?


ಈ ಬಾರಿ ಕೂಡ ಕಾಂಗ್ರೆಸ್ ತನ್ನ ಭರವಸೆಯನ್ನು ಸತೀಶ್ ಜಾರಕಿಹೊಳಿ ಮೇಲೆ ಇರಿಸಿದ್ದು 2008 ರಿಂದ ಸತೀಶ್ ಜಾರಕಿಹೊಳಿ ಜಯಗಳಿಸುತ್ತಾ ಇರುವುದೇ ಇದಕ್ಕೆ ಕಾರಣವಾಗಿದೆ. ಜಾರಕಿಹೊಳಿ ನಾಲ್ಕನೇ ಬಾರಿಗೆ ಚುನಾವಣೆಗೆ ನಿಂತಿದ್ದು ಬಿಜೆಪಿಯ ಬಸವರಾಜ್ ಹುಂದ್ರಿಯೊಂದಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.




ಗೆಲುವಿನ ರುವಾರಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ


ಬೆಳಗಾವಿಯ ಕಟ್ಟಾ ಕಾಂಗ್ರೆಸ್ ಅಭ್ಯರ್ಥಿ ಎಂದೆನಿಸಿರುವ ಸತಿಶ್ ಜಾರಕಿಹೊಳಿ, ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ವರ್ಚಸ್ಸಿನಿಂದಲೇ ಯಮಕನಮರಡಿಯಲ್ಲಿ ಜಯಭೇರಿ ಬಾರಿಸುತ್ತಿದ್ದಾರೆ.


ಇವರ ಇಬ್ಬರೂ ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕ್ರಮವಾಗಿ ಗೋಕಾಕ್ ಹಾಗೂ ಅರಬಾವಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಇಬ್ಬರೂ ಕೂಡ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದೆನಿಸಿದ್ದಾರೆ.




ಯಮಕನಮರಡಿ ಅಸೆಂಬ್ಲಿ ಚುನಾವಣೆ 2018


2018ರ ಯಮಕನಮರಡಿ ಅಸೆಂಬ್ಲಿ ಚುನಾವಣೆಯನ್ನು ಗೆದ್ದಿದ್ದ ಸತೀಶ್ ಜಾರಕಿಹೊಳಿ ಬಿಜೆಪಿಯ ಅಷ್ಟಗಿ ಮಾರುತಿ ಮಲ್ಲಪ್ಪ ಹಾಗೂ ಜೆಡಿಎಸ್‌ನ ಶಂಕರ್ ಭರಾಮ ಗಸ್ತಿ ಅವರನ್ನು ಸೋಲಿಸಿ ಯಮಕನಮರಡಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಸ್ಥಾಪಿಸಿದ್ದಾರೆ.


ಇದನ್ನೂ ಓದಿ:  Karnataka Polls 2023: ‘ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳೋದನ್ನ ನಿಲ್ಲಿಸಿ’ -ಸೋನಿಯಾ ಹೇಳಿಕೆ ವಿರುದ್ಧ ಅಣ್ಣಾಮಲೈ ಕಿಡಿ

top videos


    2013 ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಬಿಜೆಪಿಯ ಅಷ್ಟಗಿ ಹಾಗೂ ಜೆಡಿಎಸ್‌ನ ಶಂಕರ್ ಅವರನ್ನು ಸೋಲಿಸಿ ಅಸೆಂಬ್ಲಿ ಸೀಟನ್ನು ಭದ್ರಪಡಿಸಿಕೊಂಡಿದ್ದಾರೆ.

    First published: