• Home
  • »
  • News
  • »
  • state
  • »
  • Karnataka Assembly Elections: ವಿರಾಜಪೇಟೆಯಲ್ಲಿ ಬಿಜೆಪಿ ಹವಾ, ಕಮಲ ಕೋಟೆ ಬೇಧಿಸಲು ಈ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಕಾಂಗ್ರೆಸ್​?

Karnataka Assembly Elections: ವಿರಾಜಪೇಟೆಯಲ್ಲಿ ಬಿಜೆಪಿ ಹವಾ, ಕಮಲ ಕೋಟೆ ಬೇಧಿಸಲು ಈ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಕಾಂಗ್ರೆಸ್​?

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಪರಿಚಯ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಪರಿಚಯ

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Virajpet, India
  • Share this:

ಮಡಿಕೇರಿ ವಿಧಾನಸಭಾ ಕ್ಷೇತ್ರ: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ನಡೆಯುವುದಿದೆ. ಹೀಗಿರುವಾಗ ರಾಜಕೀಯ ವಲಯದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಯತ್ನಿಸುತ್ತಿದ್ದರೆ, ಅತ್ತ ಹಿರಿಯ ನಾಯಕರು ಪಕ್ಷ ಬಲವರ್ಧನೆಗೆ ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆ. ಈ ನಡುವೆ ಆರೋಪ, ಪ್ರತ್ಯಾರೋಪಗಳೂ ನಾಯಕರ ಮುಖವಾಡವನ್ನು ಕಳಚುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ (Madikeri Assembly Constituency) ಸಂಪೂರ್ಣ ವಿವರ ನೀಡಲಾಗಿದೆ.


ವಿರಾಜಪೇಟೆ ಕೊಡಗು ಜಿಲ್ಲೆಯ ತಾಲೂಕು ಕೇಂದ್ರ. ಈ ಪಟ್ಟಣವನ್ನು ಕೊಡಗಿನ ದೊರೆ ವೀರರಾಜೇಂದ್ರ 1792ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಪುಟಗಳು ಹೇಳುತ್ತವೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಬ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ ಜನರ ಗಮನ ಸೆಳೆಯುತ್ತದೆ. 250 ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್​ ಕೂಡಾ ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿದೆ. ಅಲ್ಲದೇ ಇಲ್ಲಿನ ಇರ್ಪು ಜಲಪಾತ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಬರ ಸೆಳೆಯುತ್ತದೆ. ಇಲ್ಲಿನ ಸಾಂಪ್ರದಾಯಿಕ ಕ್ರೀಡೆಯಾದ ಹಾಕಿ ಉತ್ಸವ, ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವ ಜತೆಗೆ ಇದೇ ವ್ಯಾಪ್ತಿಯ ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ಉತ್ಸವವು ಬಹಳ ಪ್ರಸಿದ್ಧವಾಗಿದೆ.


ರಾಜಕೀಯ ಇತಿಹಾಸ:


ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕೂಡ ಬಿಜೆಪಿಯ ಭದ್ರಕೋಟೆ. ಕ್ಷೇತ್ರದಿಂದ 2008ರಿಂದ ಸತತವಾಗಿ ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಗೆಲುವು ಸಾಧಿಸಿದ್ದಾರೆ. ಇನ್ನು ಇಲ್ಲಿನ ರಾಜಕೀಯ ಇತಿಹಾಸ ನೋಡುವುದಾದರೆ ವಿರಾಜಪೇಟೆ 2008ರ ತನಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಇಲ್ಲಿ 1972, 78, 83ರಲ್ಲಿ ಜಿಕೆ ಸುಬ್ಬಯ್ಯ ಕಾಂಗ್ರೆಸ್​ನಿಂದ ಗೆದ್ದಿದ್ದರು. 1985, 89ರಲ್ಲಿ ಸುಮಾ ವಸಂತ್ ಕಾಂಗ್ರೆಸ್​ನಿಂದ ವಿಧಾನಸಭೆ ಪ್ರವೇಶಿಸಿದ್ದರು.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


1994ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿಯ ಬಸವರಾಜು ಎಚ್.ಡಿ ಒಡೆದು 1 ಸಾವಿರ ಚಿಲ್ಲರೆ ಮತಗಳಿಂದ ಇಲ್ಲಿ ಗೆಲುವು ಸಾಧಿಸಿದರು. 1999ರಲ್ಲಿ ಸುಮಾ ವಸಂತ್ ಗೆದ್ದರೆ ಬಸವರಾಜ್ ಸೋತರು. 2004ರಲ್ಲಿ ಮತ್ತೆ ಬಸವರಾಜ್ ಗೆದ್ದರು, ಸುಮಾ ವಸಂತ್ ಸೋತರು. ಇನ್ನು 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವಿರಾಜಪೇಟೆ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಆಗ ಮಡಿಕೇರಿಯಲ್ಲಿ ಸ್ಪರ್ಧಿಸಿ ಅದಾಗಲೇ ಒಮ್ಮೆ ಗೆದ್ದಿದ್ದ ಕೆಜಿ ಬೋಪಯ್ಯ ವಿರಾಜಪೇಟೆಗೆ ವರ್ಗವಾದರು.


ಹಾಗೆ ಬಂದವರು 2008ರಲ್ಲಿ ಕಾಂಗ್ರೆಸ್ ನ ವೀಣಾ ಅಚ್ಚಯರನ್ನು 15 ಸಾವಿರ ಮತಗಳಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 2013ರಲ್ಲೂ ಕಾಂಗ್ರೆಸ್​ನ ಬಿದ್ದಾಟಂಡ ಪ್ರದೀಪ್ ರನ್ನು ಬೋಪಯ್ಯ 4 ಸಾವಿರ ಮತಗಳಿಂದ ಸೋಲಿಸಿದರು. ಇನ್ನು 2018ರ ಚುನಾವಣೆ ವೇಳೆ ಮಡಿಕೇರಿಯಂತೆ ಇಲ್ಲೂ ಬಿಜೆಪಿಯ ಗೆಲುವಿಗೆ ಡಿವೈಎಸ್ಪಿ ಎಂ.ಕೆ ಗಣಪತಿ ಪ್ರಕರಣ, ಸಿದ್ದರಾಮಯ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ಸಹಾಯಕ್ಕೆ ಬರಬಹುದು ಎಂದು ಅಂದಾಜಿಸಲಾಗಿತ್ತು. ನಿರೀಕ್ಷೆಯಂತೆ ಕಳೆದ ಚುನಾವಣೆಯಲ್ಲೂ ಇಲ್ಲಿ ಕೆ. ಜಿ. ಬೋಪಯ್ಯ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸಿದರು.


ಕೆ. ಜಿ. ಬೋಪಯ್ಯ


2023ರ ಟಿಕೆಟ್​ ಆಕಾಂಕ್ಷಿಗಳು ಯಾರು?


ಕೆ.ಜಿ. ಬೋಪಯ್ಯ ಈ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆಯಾದರೂ ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕೆಂಬ ಕೂಗು ಪಕ್ಷದೊಳಗೆ ಹೆಚ್ಚಿದೆ. ಈ ನಡುವೆ ಇಲ್ಲಿ ಕೊಡವರ ಮತಗಳೇ ಅತ್ಯಂತ ನಿರ್ಣಾಯಕ ಎಂಬುವುದು ಉಲ್ಲೇಖನೀಯ.


ಬಿಜೆಪಿಯಿಂದ ಸ್ಪರ್ಧಿಸೋರು ಯಾರು?


ಬಿಜೆಪಿಯಿಂದ ಹಲವು ಮಂದಿ ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳಿದ್ದು, ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೇ ಹಾಲಿ ಶಾಸಕ ಬೋಪಯ್ಯ ಅವರನ್ನು ಬದಿಗಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂಬ ಕೂಗೂ ಕೇಳಿ ಬಂದಿದೆ. ಆದರೆ ಹೈಕಮಾಂಡ್‌ ಹಾಲಿ ಶಾಸಕರಿಗೆ ಮಣೆ ಹಾಕುತ್ತದೆಯೋ ಅಥವಾ ಹೊಸಬರಿಗೆ ಅವಕಾಶ ನೀಡುತ್ತದೆಯೇ ಎಂಬುದು ಮಾತ್ರ ಇನ್ನೂ ಗೌಪ್ಯ.


* ಕೆ. ಜಿ. ಬೋಪಯ್ಯ:ಕಳೆದ ಮೂರು ಅವಧಿಗೆ ಇಲ್ಲಿನ ಶಾಸಕರಾಗಿ ಆಯ್ಕೆಯಾದ, ಬಿಜೆಪಿಯ ಗೆಲುವುಗೆ ಕಾರಣರಾಗಿರುವ ಬೋಪಯ್ಯ ಅವರಿಗೇ ಈ ಬಾರಿ ಟಿಕೆಟ್​ ಸಿಗುವ ಸಾಧ್ಯತೆ ಅಧಿಕವಿದೆ.


* ರವಿ ಕುಶಾಲಪ್ಪ: ಇವರು ಪಶ್ಚಿಮಘಟ್ಟಸಂರಕ್ಷಣೆ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ. ಆರೆಸ್ಸೆಸ್‌ ಹಿನ್ನೆಲೆಯುಳ್ಳವರಾಗಿದ್ದು, ತಾನು ವಿರಾಜಪೇಟೆ ಟಿಕೆಟ್‌ ಆಕಾಂಕ್ಷಿ ಎಂಬುದನ್ನು ಈಗಾಗಲೇ ಹೇಳಿಕೊಂಡಿದ್ದಾರೆ.


* ತೇಲಪಂಡ ಶಿವಕುಮಾರ್‌ ನಾಣಯ್ಯ : ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ


* ರೀನಾ ಪ್ರಕಾಶ್‌


* ಮನು ಮುತ್ತಪ್ಪ


* ಮಾಚಿಮಾಡ ರವೀಂದ್ರ


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


* ವೀಣಾ ಅಚ್ಚಯ್ಯ: ವಿಧಾನ ಪರಿಷತ್‌ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಬಲ ಆಕಾಂಕ್ಷಿ.


* ಎ.ಎಸ್‌. ಪೊನ್ನಣ್ಣ: ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷ


* ಕದ್ದಣಿಯಂಡ ಹರೀಶ್‌ ಬೋಪಣ್ಣ: ಮಾಜಿ ಸಚಿವ ಸೀತಾರಾಂ ಅವರ ಆಪ್ತ ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.


2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೆ. ಜಿ ಬೋಪಯ್ಯ, ಕಾಂಗ್ರೆಸ್​ನ ಅರುಣ್ ಮಚ್ಚಯ್ಯ​ ಅವರನ್ನು ಬರೋಬ್ಬರಿ 13,353 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರು ಮತಗಳು
ಬಿಜೆಪಿಕೆ. ಜಿ ಬೋಪಯ್ಯ77,944
ಕಾಂಗ್ರೆಸ್ಅರುಣ್ ಮಚ್ಚಯ್ಯ64,591
ಜೆಡಿಎಸ್​ಸಂಕೇತ್ ಪೂವಯ್ಯ11,224

Published by:Precilla Olivia Dias
First published: