Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ರಾಜ್ಯ ರಾಜಧಾನಿ ಬೆಂಗಳೂರಿನ ಮಡಿಲಲ್ಲಿ ಇರುವ ವಿಧಾನಸಭಾ ಕ್ಷೇತ್ರ ಅಂದ್ರೆ ಅದು ವಿಜಯನಗರ. ಹೆಸರಲ್ಲೇ 'ವಿಜಯ' ತುಂಬಿಕೊಂಡಿರುವ ಈ ಕ್ಷೇತ್ರದಲ್ಲಿ 'ವಿಜಯ' ಅಷ್ಟು ಸುಲಭವಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು. ಸದ್ಯ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಅವರೇ 'ವೀರಪುತ್ರ'! ಹಾಗಿದ್ರೆ ಹೇಗಿದೆ ಕ್ಷೇತ್ರದಲ್ಲಿ ರಾಜಕೀಯ ಪರಿಸ್ಥಿತಿ ಎಂಬ ಬಗ್ಗೆ ಇಲ್ಲಿದೆ ಒಂದು ವರದಿ...

ಹಾಲಿ ಶಾಸಕ ಎಂ. ಕೃಷ್ಣಪ್ಪ

ಹಾಲಿ ಶಾಸಕ ಎಂ. ಕೃಷ್ಣಪ್ಪ

  • Share this:
ರಾಜ್ಯದಲ್ಲಿ ಈ ಬಾರಿ ವಿಧಾನಸಭಾ ಎಲೆಕ್ಷನ್ (Assembly Election) ಹಂಗಾಮ. ಮಳೆಗಾಲ (Rainy Season) ಮುಗಿಯುತ್ತಿದ್ದಂತೆ ಚಳಿಗಾಲದ (Winter) ಜೊತೆಗೆ ಎಲೆಕ್ಷನ್‌ನ ಬಿಸಿಯೂ ಹೆಚ್ಚುತ್ತಾ ಹೋಗುವುದರಲ್ಲಿ ಡೌಟೇ ಇಲ್ಲ. ಹೀಗಾಗಿ ರಾಜ್ಯದ ಒಂದೊಂದೇ ಕ್ಷೇತ್ರಗಳ ರಾಜಕೀಯ ದರ್ಶನ ಮಾಡುವುದು ಸೂಕ್ತ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿಲಲ್ಲಿ ಇರುವ ವಿಧಾನಸಭಾ ಕ್ಷೇತ್ರ (Assembly Constituencies) ಅಂದ್ರೆ ಅದು ವಿಜಯನಗರ (Vijay Nagar). ಹೆಸರಲ್ಲೇ ‘ವಿಜಯ’ ತುಂಬಿಕೊಂಡಿರುವ ಈ ಕ್ಷೇತ್ರದಲ್ಲಿ ‘ವಿಜಯ’ ಅಷ್ಟು ಸುಲಭವಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು! ಸದ್ಯ ಕಾಂಗ್ರೆಸ್‌ನ (Congress) ಭದ್ರಕೋಟೆಯಾಗಿರುವ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ (M. Krishnappa) ಅವರೇ ‘ವೀರಪುತ್ರ’! ಹಾಗಿದ್ರೆ ವಿಜಯನಗರ ಕ್ಷೇತ್ರದಲ್ಲಿ ಹೇಗಿದೆ ಸದ್ಯದ ರಾಜಕೀಯ ಪರಿಸ್ಥಿತಿ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

‘ವಿಜಯನಗರದ ವೀರಪುತ್ರ’ ಎಂ ಕೃಷ್ಣಪ್ಪ!

ಹಾಲಿ ಶಾಸಕ ಎಂ. ಕೃಷ್ಣಪ್ಪ ಅವರು ಬೆಂಗಳೂರು ದಕ್ಷಿಣದಲ್ಲಿರುವವ ವಿಜಯನಗರ ಕ್ಷೇತ್ರವನ್ನು ಈಗಾಗಲೇ ತಮ್ಮ ‘ಕೈ’ವಶ ಮಾಡಿಕೊಂಡಿದ್ದಾರೆ. ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಎಂ. ಕೃಷ್ಣಪ್ಪ ಅವರು ಲೋಕಸಭಾ ಎಲೆಕ್ಷನ್‌ಗೆ ಸ್ಪರ್ಧಿಸಿರುವ ಅನುಭವವನ್ನೂ ಹೊಂದಿದ್ದಾರೆ.

ಸತತ ಮೂರು ಬಾರಿ ಕ್ಷೇತ್ರದಲ್ಲಿ ಗೆಲುವು

2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಂ. ಕೃಷ್ಣಪ್ಪ ಸ್ಪರ್ಧಿಸಿದರು. ಅಲ್ಲಿಂದ ಇಲ್ಲಿವರೆಗೆ ಸತತ 3 ಬಾರಿ ಸ್ಪರ್ಧಿಸಿದ್ದು, 3 ಬಾರಿಯೂ ಗೆಲುವು ಪಡೆದು, ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಬಾರಿ 2023ರ ಚುನಾವಣೆಯಲ್ಲಿ ನಾಲ್ಕನೇ ವಿಜಯ ಸಾಧಿಸಲು ಕಾತರರಾಗಿದ್ದಾರೆ.

ಇದನ್ನೂ ಓದಿ: Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾರು?

ಸದ್ಯ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಎಂ ಕೃಷ್ಣಪ್ಪ ಅವರೇ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೃಷ್ಣಪ್ಪ, ನಾಲ್ಕನೇ ಬಾರಿಯೂ ಗೆಲುವು ನನ್ನದೇ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್‌ ಕೂಡ ತನ್ನ ಭದ್ರಕೋಟೆಯಾದ ವಿಜಯನಗರದಲ್ಲಿ ಕೃಷ್ಣಪ್ಪ ಅವರನ್ನೇ ಕಣಕ್ಕಿಳಿಸಲು ನಿರ್ಧಾರಮಾಡಿದೆ. ಹೀಗಾಗಿ ಅಲ್ಲಿಗೆ ಕಾಂಗ್ರೆಸ್‌ ಹಾದಿ ಯಾವುದೇ ಗೊಂದಲಗಳಿಲ್ಲದಂತೆ ಸುಗಮವಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?

ಈಗಾಗಲೇ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಎಚ್. ರವೀಂದ್ರ ಅವರೇ ಬಿಜೆಪಿ ಅಭ್ಯರ್ಥಿ ಎನ್ನಲಾಗುತ್ತಿದೆ. ಬಿಬಿಎಂಪಿ ಸದಸ್ಯರಾಗಿಯೂ ಅನುಭವ ಹೊಂದಿದ್ದ ರವೀಂದ್ರ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಈ ಬಾರಿಯೂ ಸ್ಪರ್ಧಿಸಿ, ಕೃಷ್ಣಪ್ಪನವರಿಗೆ ಸೋಲು ಉಣಿಸಬೇಕು ಎಂಬ ಉತ್ಸಾಹದಲ್ಲಿ ಇದ್ದಾರೆ. ಇವರ ಜೊತೆಗೆ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕೂಡ ಬಿಜೆಪಿಯಿಂದ ಆಕಾಂಕ್ಷಿ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಜೆಡಿಎಸ್‌ ಆಕಾಂಕ್ಷಿಗಳು ಯಾರು

ಸದ್ಯ ಜೆಡಿಎಸ್ ವಿಜಯನಗರದಲ್ಲಿ ನೆಲೆ ಕಳೆದುಕೊಂಡ ಸ್ಥಿತಿಯಲ್ಲಿದೆ. ಹೀಗಾಗಿ ಅಲ್ಲಿ ನಾವೇ ಅಭ್ಯರ್ಥಿಗಳು ಅಂತ ಹೇಳಿಕೊಳ್ಳುವಂತಾ ಪರಿಸ್ಥಿತಿಯಲ್ಲಿ ಆಕ್ಷಾಂಕ್ಷಿಗಳು ಇದ್ದಂತೆ ಕಾಣಿಸುತ್ತಿಲ್ಲ. ಹೀಗಾಗಿ ವಿಜಯನಗರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಯಾರು ಅಂತ ಹೇಳುವುದು ಕಷ್ಟ ಸಾಧ್ಯ!

ಇದನ್ನೂ ಓದಿ: Karnataka BJP: ಮಂತ್ರಿ ಮಾಡ್ತೀನಿ ಅಂತ ಮಾತು ತಪ್ಪಿದ್ರಿ, ಆರ್ ಶಂಕರ್ ಆಕ್ರೋಶ; ಇತ್ತ ಸಿಎಂ ಕಿವಿಮಾತು!

ವಿಜಯನಗರ ವಿಧಾನಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ

ಬೆಂಗಳೂರು ದಕ್ಷಿಣದಲ್ಲಿರುವ ವಿಜಯ ನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಅಲ್ಲಿ ಒಟ್ಟು ಮತದಾರರ ಸಂಖ್ಯೆ 2,10,400 ರಷ್ಟಿದೆ.

ಒಟ್ಟು ಮತದಾರರುಒಕ್ಕಲಿಗಲಿಂಗಾಯತಬ್ರಾಹ್ಮಣ
2,10,40051,00017,5009,000

ಅದರಲ್ಲಿ ಒಕ್ಕಲಿಗರದ್ದೇ ಪಾರುಪತ್ಯವಿದ್ದು, 51,000ರಷ್ಟು ಒಕ್ಕಲಿಗ ಮತದಾರರಿದ್ದಾರೆ. ಇವರೊಂದಿಗೆ ಎಸ್ಸಿ,ಎಸ್ಟಿ ಮತದಾರರ ಸಂಖ್ಯೆ 42,500, ಮುಸ್ಲಿಂ ಮತದಾರರು 37,000 ಹಾಗೂ 38,500ರಷ್ಟು ಒಬಿಸಿ ಮತದಾರರಿದ್ದಾರೆ.ಒಬಿಸಿಎಸ್‌ಸಿ-ಎಸ್‌ಟಿಮುಸ್ಲಿಂಇತರೇ
38,50042,50037,00014,900

ಇನ್ನು ರಾಜ್ಯದ ಮತ್ತೊಂದು ಪ್ರಬಲ ಸಮುದಾಯವಾದ ಲಿಂಗಾಯತ ಮತದಾರರ ಸಂಖ್ಯೆ 17,500ರಷ್ಟಿದೆ. ಜೊತೆಗೆ 9 ಸಾವಿರದಷ್ಟು ಬ್ರಾಹ್ಮಣ ಮತದಾರರರಿದ್ದರೆ ಇತರೇ ಮತದಾರರ ಸಂಖ್ಯೆ 14,900ರಷ್ಟಿದೆ.
Published by:Annappa Achari
First published: