• Home
  • »
  • News
  • »
  • state
  • »
  • Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​!

Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​!

ಉಡುಪಿ ಕ್ಷೇತ್ರದಲ್ಲಿ ಗೆಲ್ಲೋರು ಯಾರು?

ಉಡುಪಿ ಕ್ಷೇತ್ರದಲ್ಲಿ ಗೆಲ್ಲೋರು ಯಾರು?

Karnataka Assembly Elections 2023: ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯಲ್ಲೂ ರಾಜಕೀಯ ನಾಯಕರ ಈ ಕಸರತ್ತು ಮುಂದುವರೆದಿದೆ. ಒಟ್ಟು ಐದು ವಿಧಾನಭಾ ಕ್ಷೇತ್ರಗಳಿರುವ ಉಡುಪಿ ಬಿಜೆಪಿಯ ಭದ್ರಕೋಟೆ ಯಾಕೆಂದರೆ 2018ರ ಚುನಾವಣೆಯಲ್ಲಿ ಇಲ್ಲಿನ ಐದೂ ಕ್ಷೇತ್ರಗಳನ್ನು ಕೇಸರಿ ಪಾಳಯ ವಶಪಡಿಸಿಕೊಂಡಿತ್ತು. ಹಾಗಾದರೆ ಈ ಬಾರಿ ಇಲ್ಲಿನ ಐದು ಕ್ಷೇತ್ರಗಳ ಪೈಕಿ ಒಂದಾದ ಉಡುಪಿಯಲ್ಲಿ ಚುನಾವಣಾ ಸಮರದ ಸಿದ್ಧತೆ ಹೇಗೆ ನಡೆಯುತ್ತಿದೆ? ಆಕಾಂಕ್ಷಿಗಳು ಯಾರು? ಯಾವ ಪಕ್ಷ ಗೆಲುವು ಸಾಧಿಸಬಹುದು? ಎಂಬಿತ್ಯಾದಿಗಳ ಉತ್ತರವಿರುವ ಕ್ಷೇತ್ರ ಸಮೀಕ್ಷೆ ಇಲ್ಲಿದೆ ನೋಡಿ.

ಮುಂದೆ ಓದಿ ...
  • Share this:

ಉಡುಪಿ ವಿಧಾನಸಭಾ ಕ್ಷೇತ್ರ: ಉಡುಪಿ ವಿಧಾನಸಭಾ ಕ್ಷೇತ್ರ: 2013 ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಅತ್ತ ಚುನಾವಣಾ ಅಖಾಡ ತಯಾರಾಗುತ್ತಿದ್ದಂತೆಯೇ ಇತ್ತ ರಾಜಕೀಯ ನಾಯಕರು ಮತದಾರರ ಓಲೈಕೆಗೆ ತಮ್ಮ ದಾಳ ಬೀಸಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಹಾಗೂ ಆಡಳಿತರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಉಡುಪಿಯಲ್ಲೂ ರಾಜಕೀಯ ನಾಯಕರ ಈ ಕಸರತ್ತು ಮುಂದುವರೆದಿದೆ. ಒಟ್ಟು ಐದು ವಿಧಾನಭಾ ಕ್ಷೇತ್ರಗಳಿರುವ ಉಡುಪಿ ಸ್ಥಾನ (Udupi Assembly Constituency) ಬಿಜೆಪಿಯ ಭದ್ರಕೋಟೆ ಯಾಕೆಂದರೆ 2018ರ ಚುನಾವಣೆಯಲ್ಲಿ ಇಲ್ಲಿನ ಐದೂ ಕ್ಷೇತ್ರಗಳನ್ನು ಕೇಸರಿ ಪಾಳಯ ವಶಪಡಿಸಿಕೊಂಡಿತ್ತು. ಹಾಗಾದರೆ ಈ ಬಾರಿ ಇಲ್ಲಿನ ಐದು ಕ್ಷೇತ್ರಗಳ ಪೈಕಿ ಒಂದಾದ ಉಡುಪಿಯಲ್ಲಿ ಚುನಾವಣಾ ಸಮರದ ಸಿದ್ಧತೆ ಹೇಗೆ ನಡೆಯುತ್ತಿದೆ? ಆಕಾಂಕ್ಷಿಗಳು ಯಾರು? ಯಾವ ಪಕ್ಷ ಗೆಲುವು ಸಾಧಿಸಬಹುದು? ಎಂಬಿತ್ಯಾದಿಗಳ ಉತ್ತರವಿರುವ ಕ್ಷೇತ್ರ ಸಮೀಕ್ಷೆ ಇಲ್ಲಿದೆ ನೋಡಿ.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಉಡುಪಿಯ ನಗರ ಪ್ರದೇಶ ಮತ್ತು ಒಂದಷ್ಟು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವೇ ಉಡುಪಿ. ಕೃಷ್ಣನೂರು ಎಂದೇ ಖ್ಯಾತಿ ಗಳಿಸಿರುವ ಉಡುಪಿಯ ಅಷ್ಟಮಠಗಳು ಜಗತ್ ಪ್ರಸಿದ್ಧಿ ಗಳಿಸಿವೆ. ಅಲ್ಲದೇ ಮಣಿಪಾಲ ಸಂಸ್ಥೆಗಳು, ಹೆಸರಾಂತ ಎಂಜಿಎಂ ಕಾಲೇಜು, ಮನಸೂರೆಗೊಳಿಸುವ ಮಲ್ಪೆ ಬೀಚ್, ಸೈಂಟ್ ಮೆರೀಸ್ ದ್ವೀಪ, ಕೋಡಿ ಬೇಂಗ್ರೆ ಕಡಲ ಕಿನಾರೆ ಜತೆಗೆ 'ಉಡುಪಿ' ಬ್ರಾಹ್ಮಣರ ಹೋಟೆಲ್ ಇವೆಲ್ಲವೂ ಬಹಳ ಫೇಮಸ್​. ಇವೆಲ್ಲವನ್ನೂ ಮೀರಿಸಿ ಉಡುಪಿ ಹಲವು ಬ್ಯಾಂಕ್​ಗಳಿಗೆ ತವರೂ ಹೌದು.


ಉಡುಪಿಯಲ್ಲಿ ಅಷ್ಟ ಮಠಗಳ ಪ್ರಭಾವ


ಉಡುಪಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನೀತಿ ನಿರ್ಧರಿತವಾಗುವುದು ಇಲ್ಲಿನ ಅಷ್ಟ ಮಠಗಳ ಪ್ರಾಂಗಣದಲ್ಲಿ ಎಂದು ಹೇಳಲಾಗುತ್ತದೆ. ಲಕ್ಷಾಂತರ ಜನ ಸೇರುವ ವಿಜೃಂಭಣೆಯ ನಡೆಯುವ ಪ್ರತಿ ಪರ್ಯಾಯಕ್ಕೂ ದೇಶ-ವಿದೇಶದಿಂದ ಭಾರೀ ಮೊತ್ತದ ದೇಣಿಗೆ ಹರುದು ಬರುತ್ತದೆ. ಇನ್ನು ಇವುಗ್ಳ ಪ್ರಭಾವ ಎರಷ್ಟಿದೆ ಎಂದರೆ ಇಲ್ಲಿ ಪ್ರಧಾನಿಯಿಂದ ಸಾಮಾನ್ಯ ಶಾಸಕನವರೆಗೆ ಎಲ್ಲಾ ಪಕ್ಷದ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಮಠದ ಕೃಪಾಶೀರ್ವಾದ ಪಡೆಯುತ್ತಾರೆ. ಇನ್ನು ಕರಾವಳಿಯ ಚುನಾವಣಾ ರಾಜಕಾರಣದಲ್ಲೂ ಇವುಗಳು ನಿರ್ಣಾಯಕ ಪಾತ್ರ ವಹಿಸುತ್ತದೆ.


ರಾಜಕೀಯ ಸ್ಥಿತಿಗತಿ


1972ರಲ್ಲಿ ಇಲ್ಲಿ ಭಾರತೀಯ ಜನಸಂಘದಿಂದ ಕಣಕ್ಕಿಳಿದಿದ್ದ ವಿ.ಎಸ್ ಆಚಾರ್ಯ ಮತ್ತು ಕಾಂಗ್ರೆಸ್​ನ ಮನೋರಮಾ ಮಧ್ವರಾಜ್ ನಡುವೆ ಭಾರೀ ಸ್ಫರ್ಧೆ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಮಧ್ವರಾಜ್ ಗೆಲುವಿನ ನಗೆ ಬೀರಿದ್ದರು. ಇದೇ ರೀತಿ 1978ರಲ್ಲೂ ಮಧ್ವರಾಜ್ ಗೆದ್ದರು. ಆದರೆ 1983ರಲ್ಲಿ ಈ ಲೆಕ್ಕಾಚಾರ ಬದಲಾಯ್ತು ಅಂದು ಉಡುಪಿಯಲ್ಲಿ ವಿ.ಎಸ್ ಆಚಾರ್ಯರು ಗೆದ್ದು ಬಿಜೆಪಿ ಪಾಲಿಗೆ ಗೆಲುವಿನ ಖಾತೆ ತೆರೆದರು. ಕೇವಲ 3 ಸಾವಿರ ಮತಗಳ ಅಂತರದಲ್ಲಿ ಅವರು ಎರಡು ಬಾರಿ ಶಾಸಕಿಯಾಗಿದ್ದ ಮನೋರಮಾ ಮಧ್ವರಾಜ್​ಗೆ ಸೋಲುಣಿಸಿದ್ದರು. ಇದರ ಬೆನ್ನಲ್ಲೇ 1985ರಲ್ಲಿ ಮತ್ತೆ ಮಧ್ವರಾಜ್ ಗೆದ್ದರು. ಇದು 1989ರ ಫಲಿತಾಂಶದಲ್ಲೂ ಪುನರಾವರ್ತನೆಯಾಯಿತು.


ಸ್ವತಂತ್ರ ಅಭ್ಯರ್ಥಿಯ ಗೆಲುವು 


ಆದರೆ 1994ರಲ್ಲಿಅಚ್ಚರಿ ಎಂಬಂತೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯು.ಆರ್.ಸಭಾಪತಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ನಾಲ್ಕು ಬಾರಿಯ ಶಾಸಕಿಗೆ ಸೋಲುಣಿಸಿದರು. ಈ ಕಾರಣದಿಂದ 1999ರಲ್ಲಿ ಮನೋರಮಾ ಮಧ್ವರಾಜ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಸಭಾಪತಿ ಕಾಂಗ್ರೆಸ್​ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು. ಈ ಬಾರಿ ಎರಡನೇ ಸ್ಥಾನದಲ್ಲಿ ಬಿಜೆಪಿ ಬಂದು ಇತ್ತು. ಅಲ್ಲದೇ ಕೇವಲ 1 ಸಾವಿರ ಮತಗಳ ಅಂತರದಲ್ಲಿ ಬಿ. ಸುಧಾಕರ್ ಶೆಟ್ಟಿ ಸೋಲನುಭವಿಸಿದ್ದರು. ಇನ್ನು 2004ರ ಹೊತ್ತಿಗೆ ಮನೋರಮಾ ಮಧ್ವರಾಜ್ ಬಿಜೆಪಿಗೆ ಬಂದು ಉಡುಪಿಯಿಂದ ಲೋಕಸಭೆಗೆ ಪ್ರವೇಶ ಪಡೆದರು. ಇತ್ತ 2004ರ ಅಸೆಂಬ್ಲಿ ಚವುನಾವಣೆಯಲ್ಲಿ ಮತ್ತೆ ಬಿಜೆಪಿಯ ರಘುಪತಿ ಭಟ್ ಉಡುಪಿಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿತು. ಈ ಚುನಾವಣೆಯಲ್ಲಿ ಸಭಾಪತಿ ಸೋಲನುಭವಿಸಿದರು.


ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?


ಅಮ್ಮ ಪಕ್ಷ ಬದಲಾಯಿಸಿದರೂ ಮಗ ಕಾಂಗ್ರೆಸ್​ ಬಿಡಲಿಲ್ಲ


ವಿಶೇಷವೆಂದರೆ ಅಮ್ಮ ಬಿಜೆಪಿ ತೆಕ್ಕೆಗೆ ಜಾರಿದರೂ ಮಗ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಲ್ಲೇ ಉಳಿದಿದ್ದರು. 2004ರ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಈ ಹಿಂದೆ ಇದ್ದ ಬ್ರಹ್ಮಾವರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೋತಿದ್ದರು. 2008ರ ಹೊತ್ತಿಗೆ ಮನೋರಮಾ ಮಧ್ವರಾಜ್ ಮತ್ತೆ ಕಾಂಗ್ರೆಸ್​ಗೆ ಬಂದರು. ಹೀಗಿರುವಾಗ ಮಗ ಪ್ರಮೋದ್ ಮಧ್ವರಾಜ್ ತಾಯಿಯ ತವರು ಕ್ಷೇತ್ರ ಉಡುಪಿಯಲ್ಲಿ ಕಣಕ್ಕಿಳಿದರು. ಆದರೆ ಈ ಚುನಾವಣೆಯಲ್ಲಿ ರಘುಪತಿ ಭಟ್ ವಿರುದ್ಧ 2 ಸಾವಿರ ಮತಗಳಿಂದ ಸೋಲನುಭವಿಸಿದರು.


ರಘುಪತಿ ಭಟ್​ಗೆ ಹೊಡೆತ ಕೊಟ್ಟ ಲೈಂಗಿಕ ಹಗರಣ


ಆದರೆ, 2013ರ ಚುನಾವಣೆಯಲ್ಲಿ ಶಾಸಕ ರಘುಪತಿ ಭಟ್ ಲೈಂಗಿಕ ಹಗರಣ ಭಾರೀ ಸದ್ದು ಮಾಡಿತು. ಈ ಕಾರಣದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿತು. ಕಮಲ ಪಾಳಯ ಮತ್ತೆ 1999ರಲ್ಲಿ ಕಣಕ್ಕಿಳಿದಿದ್ದ ಬಿ. ಸುಧಾಕರ್ ಶೆಟ್ಟಿಯವರಿಗೆ ಮತ್ತೆ ಟಿಕೆಟ್ ನೀಡಿತ್ತು. ಆದರೆ ದುರಾದೃಷ್ಟವಶಾತ್ ಬಿಜೆಪಿ ತನ್ನ ಅಭ್ಯರ್ಥಿ ಬದಲಿಸಿದರೂ ಗೆಲ್ಲಲಿಲ್ಲ. ಶೆಟ್ಟಿ ವಿರುದ್ಧ ಪ್ರಮೋದ್ ಮಧ್ವರಾಜ್ ಬರೋಬ್ಬರಿ 39 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲೇರಿದರು. ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.


ಕೈ ಪಾಳಯಕ್ಕೆ ಪರೇಶಧ್ ಮೇಸ್ತ ಸಾವಿನ ಪೆಟ್ಟು


ಆದರೆ 2018ರ ಚುನಾವಣೆಗೂ ಮುನ್ನ ಸದ್ದು ಮಾಡಿದ್ದ ಬಳಿಕ ಕೋಮು ಬಣ್ಣ ಪಡೆದ ಪರೇಶ್ ಮೇಸ್ತ ಸಾವಿನ ಪ್ರಕರಣ ಕಾಂಗ್ರೆದ್​ಗೆ ಭಾರೀ ಹೊಡೆತ ನೀಡಿತ್ತು. ಇದರಿಂದಾಗಿ ನಿರೀಕ್ಷೆಯಂತೆ ಕಾಂಗ್ರೆಸ್​ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲನುಭವಿಸಿದರು ಹಾಗೂ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್​ ಗೆಲುವಿನ ನಗೆ ಬೀರಿದರು.


ಈ ಬಾರಿ ಉಡುಪಿ ಕ್ಷೇತ್ರದ ಅಭ್ಯರ್ಥಿಗಳಾರು?


2018ರ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಮೋದ್ ಮಧ್ವರಾಜ್ ನಿರೀಕ್ಷೆಯಂತೆ ಕಮಲ ಪಾಳಯ ಸೇರ್ಪಡೆಯಾಗಿದ್ದಾರೆ. ಒಂದು ಮೂಲಗಳಿಂದ ಪ್ರಮೋದ್ ಮಧ್ವರಾಜ್ ವಿಧಾನ ಪರಿಷತ್​ ಸದಸ್ಯರಾಗುವತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗುತ್ತಿದ್ದರೆ, ಮತ್ತೊಂದು ಮೂಲ ನಿರ್ಮಲಾ ಸೀತಾರಾಮನ್‌ರಿಂದ ತೆರವಾಗಲಿರುವ ರಾಜ್ಯಸಭಾ ಸದಸ್ಯತ್ವ ಬೇಡಿಕೆಯಿಟ್ಟು ಮಾತುಕತೆ ನಡೆಸುತ್ತಿದ್ದಾರೆನ್ನಲಾಗಿದೆ. ಇನ್ನು ಕೆಲ ಮೂಲಗಳಿಂದ ಅವರು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.


Pramodh Madhwaraj and Other party leaders joined BJp
ಪ್ರಮೋದ್ ಮಧ್ವರಾಜ್​


ಹಾಗಾದ್ರೆ ಬಿಜೆಪಿ ಅಭ್ಯರ್ಥಿಗಳಾರು?


* ರಘುಪತಿ ಭಟ್: ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್​ ಪಡೆಯಲು ಅನೇಕ ಆಕಾಂಕ್ಷಿಗಹಳು ರೇಸ್​ನಲ್ಲಿದ್ದಾರೆ. ಇದರಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರು ಹಾಲಿ ಶಾಸಕ ರಘುಪತಿ ಭಟ್. ಆದರೆ ಇವರ ಬಗ್ಗೆ ಅಸಮಾಧಾನಗಳೂ ಕೇಳಿ ಬರುತ್ತಿದ್ದು, ಬೇರೆ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ನೀಡುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.


ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್
ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್


* ಉದಯ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ


* ಬೈಕಾಡಿ ಸುಪ್ರಸಾದ್ ಶೆಟ್ಟಿ, ವಿಎಚ್​ಪಿ ಮುಖಂಡ


* ನಯನ ಗಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ


* ತಿಂಗಳೆ ವಿಕ್ರಮರ್ಜುನ ಹೆಗ್ಡೆ, ಮಾಜಿ ಜಿಲ್ಲಾಧ್ಯಕ್ಷ


ಕಾಂಗ್ರೆಸ್​ ಆಕಾಂಕ್ಷಿಗಳು ಯಾರು?


ಒಂದೆಡೆ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ್ದರೆ, ಇತ್ತ ಉಡುಪಿ ಕಾಂಗ್ರೆಸ್‌ನ ಹೈಕಮಾಂಡ್ ಆಗಿದ್ದ ಆಸ್ಕರ್ ಫರ್ನಾಂಡಿಸ್ ನಿಧನದ ನಂತರ ಆ ಪಕ್ಷದ ಚುಕ್ಕಾಣಿ ಹಿಡಿದು ಮಾರ್ಗದರ್ಶನ ನೀಡುವವರು ಯಾರೂ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಪರ್ಯಾಯ ಅಭ್ಯರ್ಥಿಯ ಹುಡುಕಾಟವೂ ನಡೆದಿದೆ.


* ಪ್ರಸಾದ್ ಕಾಂಚನ್: ಹುಂಡೈ ಕಾರು ಮಾರಾಟಗಾರ ’ಕಾಂಚನ ಹುಂಡೈ’ ಮಾಲಿಕ ಪ್ರಸಾದ್‌ರಾಜ್​ರನ್ನು ಕಾಂಗ್ರೆಸ್​ ಕಣಕ್ಕಿಳಿಸುವ ಸಾಧ್ಯತೆ ಇದೆ.


ಪ್ರಸಾದ್ ಕಾಂಚನ್
ಪ್ರಸಾದ್ ಕಾಂಚನ್


* ಅಶೋಕ್‌ ಕುಮಾರ್ ಕೊಡವೂರು: ಉಡುಪಿಯ ನಾಡಿಮಿಡಿತ ಅರಿತಿರುವ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೂಡಾ ಈ ಕ್ಷೇತ್ರದಿಂದ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯಾಗಬಹುದೆಂಬ ಚರ್ಚೆಯೂ ಕಾಂಗ್ರೆಸ್​ ಪಾಳಯದಲ್ಲಿ ಹರಿದಾಡುತ್ತಿದೆ.


* ರಮೇಶ್ ಕಾಂಚನ್, ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷ


* ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್​ ಮುಖಂಡ


ಇದನ್ನೂ ಓದಿKarnataka Assembly Elections: ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!


ಇನ್ನುಳಿದಂತೆ ಇಲ್ಲಿ ಜೆಡಿಎಸ್ ಸ್ಪರ್ಧೆ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಪೈಪೋಟಿ ನೀಡಿದ ಉದಾಹರಣೆ ಇಲ್ಲ.


ಜಾತಿ ಲೆಕ್ಕಾಚಾರ

ಒಟ್ಟು ಮತದಾರರು1,90,785
ಮೊಗವೀರ42,000
ಬಿಲ್ಲವ40,000
ಬಂಟ್ಸ್​30,785
ಬ್ರಾಹ್ಮಣ18,000
ಮುಸ್ಲಿಂ14,000
ಕ್ರಿಶ್ಚಿಯನ್13,000
ಪರಿಶಿಷ್ಟ ಜಾತಿ10,000
ಪರಿಶಿಷ್ಟ ಪಂಗಡ10,000
ಇತರೆ13,000

2018ರಲ್ಲಿ ಉಡುಪಿ ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಘುಪತಿ ಭಟ್ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಮಿಂದ್ ಪ್ರಮೋದ್ ಮಧ್ವರಾಜ್ ಸ್ಪರ್ಧೆಯೊಡ್ಡಿದ್ದರು. ಆದರೆ ಕೋಮುಗಲಭೆ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಮಲ ಪಾಳಯ ಅಭ್ಯರ್ಥಿ 12,044 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.


ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ

ಪಕ್ಷಅಭ್ಯರ್ಥಿ ಹೆಸರು ಮತಗಳು
ಬಿಜೆಪಿರಘುಪತಿ ಭಟ್84946
ಕಾಂಗ್ರೆಸ್ಪ್ರಮೋದ್ ಮಧ್ವರಾಜ್72902

Published by:Precilla Olivia Dias
First published: