• Home
  • »
  • News
  • »
  • state
  • »
  • Karnataka Assembly Elections: ಆರನೇ ಬಾರಿ ಮುಖಾಮುಖಿಯಾಗ್ತಾರಾ ಹಳೇ ವೈರಿಗಳು? ತೀರ್ಥಹಳ್ಳಿಗಾಗಿ ಕೈ-ಕಮಲ ಸೆಣಸಾಟ!

Karnataka Assembly Elections: ಆರನೇ ಬಾರಿ ಮುಖಾಮುಖಿಯಾಗ್ತಾರಾ ಹಳೇ ವೈರಿಗಳು? ತೀರ್ಥಹಳ್ಳಿಗಾಗಿ ಕೈ-ಕಮಲ ಸೆಣಸಾಟ!

ಯಾರಾಗ್ತಾರೆ ತೀರ್ಥಹಳ್ಳಿ ಸರದಾರ?

ಯಾರಾಗ್ತಾರೆ ತೀರ್ಥಹಳ್ಳಿ ಸರದಾರ?

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಮತದಾರರಿಗೆ ಕ್ಷೇತ್ರದ ರಾಜಕೀಯ ಇತಿಹಾಸ, ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಸೇರಿ ಜಾತಿ ಲೆರಕ್ಕಾಚಾರದ ಮಾಹಿತಿಯನ್ನೂ ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ (Tirthahalli Assembly Constituency)ಸಂಪೂರ್ಣ ವಿವರ ಇಲ್ಲಿ ನೀಡಿದ್ದೇವೆ.

ಮುಂದೆ ಓದಿ ...
  • News18 Kannada
  • Last Updated :
  • Shimoga, India
  • Share this:

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ತಿಂಗಳು ಬಾಕಿ. ಈಗಾಗಲೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷಗಳು ಹಾಗೂ ನಾಯಕರು ತಮ್ಮ ಕೈಚಳಕ ಆರಂಭಿಸಿದ್ದಾರೆ. ಅನೇಕ ಬಗೆಯ ಭರವಸೆಗಳನ್ನು ಈಡೇರಿಸುವ ಮಾತುಗಳನ್ನಾಡುತ್ತಿರುವ ರಾಜಕೀಯ ನಾಯಕರು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಯನ್ನೂ ಮುಂದುವರೆಸಿದ್ದಾರೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಮತದಾರರಿಗೆ ಕ್ಷೇತ್ರದ ರಾಜಕೀಯ ಇತಿಹಾಸ, ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಸೇರಿ ಜಾತಿ ಲೆಕ್ಕಾಚಾರದ ಮಾಹಿತಿಯನ್ನೂ ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ (Tirthahalli Assembly Constituency)ಸಂಪೂರ್ಣ ವಿವರ ಇಲ್ಲಿ ನೀಡಿದ್ದೇವೆ.


ತುಂಗಾ ನದಿ ತಟದಲ್ಲಿರುವ ಅಪ್ಪಟ ಮಲೆನಾಡ ಕ್ಷೇತ್ರ ತೀರ್ಥಹಳ್ಳಿ. ಸಮಾಜವಾದಿ ಚಳವಳಿ, ಸಾಹಿತ್ಯ ಕ್ಷೇತ್ರಕ್ಕೆ ಕ್ಷೇತ್ರದ ಕೊಡುಗೆ ಅಪಾರ. ಶಿವಮೊಗ್ಗದಿಂದ 61 ಕಿ. ಮೀಟರ್​ ದೂರದಲ್ಲಿರುವ ತೀರ್ಥಹಳ್ಳಿ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಹಬ್ಬಿದ ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಹೀಗಿದ್ದರೂ ಇಲ್ಲಿ ಮತದಾರರ ಸಂಖ್ಯೆ . ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ತೀರ್ಥಹಳ್ಳಿ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ದಟ್ಟ ಕಾಡಿನಿಂದ ಸುತ್ತುವರೆದಿದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆಗಳಲ್ಲೊಂದು. ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಏಲಕ್ಕಿ, ಕಾಳುಮೆಣಸು ಮತ್ತು ಬಾಳೆಯನ್ನು ಬೆಳೆಯುತ್ತಾರೆ. ಇನ್ನು ಈ ಕ್ಷೇತ್ರ ತುಂಗಾ ನದಿ ತೀರದಲ್ಲಿ ಇದೆಯಾದರೂ ಮರಳಿಗೆ ಮಾತ್ರ ಬಂಗಾರದ ಬೆಲೆ ಇದೆ. ಅಕ್ರಮ ಮರಳು ಸಾಗಣೆಗೆ ತಡೆ ಹಾಕಬೇಕು ಎಂಬ ಕೂಗಿಗೆ ಸರಿಯಾದ ಬೆಲೆ ಸಿಕ್ಕಿಲ್ಲ.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ರಾಜಕೀಯ ಇತಿಹಾಸ


ಮಾಜಿ ಸಿಎಂ ಕಡಿದಾಳ್‌ ಮಂಜಪ್ಪ ಈ ಕ್ಷೇತ್ರದ ಪ್ರಥಮ ಶಾಸಕ. ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರಂತಹ ಜನಪರವಾದ ಅತ್ಯುತ್ತಮ ನಾಯಕರನ್ನು ನೀಡಿದ ಕೀರ್ತಿ ಈ ಕ್ಷೇತ್ರದ ಮತದಾರರಿಗಿದೆ. ಕೋಣಂದೂರು ಲಿಂಗಪ್ಪರಂತಹ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸಿದ್ದಲ್ಲದೆ ಕೇವಲ 26 ವರ್ಷದ ಕಡಿದಾಳ್‌ ದಿವಾಕರ್‌ರಂತಹ ಯುವ ನಾಯಕರನ್ನೂ ಗೆಲ್ಲಿಸಿದ ಖ್ಯಾತಿ ಇದೆ. ಹೀಗೆ ಆರಂಭದಿಂದಲೂ ಬಿಜೆಪಿಯೇತರ ಪಕ್ಷಗಳ ಹಿಡಿತದಲ್ಲಿದ್ದ ತೀರ್ಥಹಳ್ಳಿ ಕ್ಷೇತ್ರ 1994ರಲ್ಲಿ ಕಮಲ ಪಾಳಯದ ತೆಕ್ಕೆಗೆ ಜಾರಿತ್ತು. ತದ ನಂತರ ಎರಡು ಅವಧಿಗೆ ಕಿಮ್ಮನೆ ರತ್ನಾಕರ್ ಶಾಸಕರಾಗಿ ಆಯ್ಕೆಯಾದರಾದರೂ 2018ರಲ್ಲಿ ನಡೆದ ಚುನಾವಣೆರಲ್ಲಿ ಆರಗ ಜ್ಞಾನೇಂದ್ರ ಮತ್ತೆ ಇಲ್ಲಿ ತಮ್ಮ ಅಧಿಪತ್ಯ ಸಾಧಿಸಿದರು. ಕಳೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು 6 ಬಾರಿ, ಸಮಾಜವಾದಿ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 3 ಬಾರಿ, ಜನತಾ ಪಕ್ಷ ಮತ್ತು ಜನತಾ ದಳದ ಅಭ್ಯರ್ಥಿಗಳು ತಲಾ ಒಮ್ಮೆ ಜಯಗಳಿಸಿದ್ದಾರೆ.


ಆರಗ ಜ್ಞಾನೇಂದ್ರ


ಆರಗ ಜ್ಞಾನೇಂದ್ರಗೆ ಮೊದಲ ಗೆಲುವು


ಆದರೆ 1994ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಮೊದಲ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಈಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ ಡಾ. ಬಿ ಚಂದ್ರೇಗೌಡರನ್ನು ಅವರು ಸೋಲಿಸಿದ್ದರು. ಗೆಲುವಿನ ಅಂತರ ಬಹಳ ಕಡಿಮೆಯಾಗಿತ್ತಾದರೂ ಕ್ಷೇತ್ರದಲ್ಲಿ ಕೇಸರಿ ಧ್ವಜ ನೆಟ್ಟಿದ್ದರು. ಇದಾದ ಬಳಿಕ 1999 ಹಾಗೂ 2004ರ ಚುನಾವಣೆಗಳಲ್ಲೂ ಮತ್ತದೇ ಕ್ಷೇತ್ರದಿಂದ ಕಣಕ್ಕಿಳಿದ ಆರಗ ಜ್ಞಾನೇಂದ್ರ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್​ರನ್ನು ಸೋಲಿಸಿ ಹ್ಯಾಟ್ರಿಕ್ ಬಾರಿಸಿದ್ದರು. ಆದರೆ ಜೆಡಿಎಸ್​ನಲ್ಲಿದ್ದು ಆರಗ ಜ್ಞಾನೇಂದ್ರರನ್ನು ಸೋಲಿಸುವುದು ಕಷ್ಟ ಎಂದು ಅರಿತುಕೊಂಡ ಕಿಮ್ಮನೆ ರತ್ನಾಕರ್ 2008ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಆರಗ ಜ್ಞಾನೇಂದ್ರರನ್ನೂ ಸೋಲಿಸಿದರು.


ಕೆಜೆಪಿಯಿಂದ ಆರಗ ಜ್ಞಾನೇಂದ್ರಗೆ ಹೊಡೆತ


ಈ ಚುನಾವಣೆ ಬೆನ್ನಲ್ಲೇ ಬಿಎಸ್​ವೈ ಬಿಜೆಪಿಯಿಂದ ದೂರ ಸರಿದು ತಮ್ಮದೇ ಆದ ಕೆಜೆಪಿಯನ್ನು ಸ್ಥಾಪಿಸಿದ್ದರು. ಹೀಗಿರುವಾಗ 2013ರ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕೆಜೆಪಿಯಿಂದ ಮಂಜುನಾಥ್ ಗೌಡ ಕಣಕ್ಕಿಳಿದಿದ್ದರು. ಆದರೆ ಮಂಜುನಾಥ್​ ಅವರ ಸ್ಪರ್ಧೆ ಆರಗ ಜ್ಞಾನೇಂದ್ರರಿಗೆ ಭಾರೀ ಹೊಡೆತ ನೀಡಿತ್ತು. ಹೀಗಾಗಿ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನಮಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಮಂಜುನಾಥ್ ಎರಡನೇ ಸ್ಥಾನದಲ್ಲಿದ್ದರು. ಆದರೆ ಆರಗ ಜ್ಞಾನೇಂದ್ರ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಇದಾದ ಬಳಿಕ 2018ರ ಚುನಾವಣೆಗೂ ಮುನ್ನ ನಂದಿತಾ ಹೆಸರಿನ ವಿದ್ಯಾರ್ಥಿನಿಯ ಸಾವಿನ ಪ್ರಕರಣ ಭಾರೀ ಸದ್ದು ಮಾಡಿತ್ತು. ಕೋಮುರೂಪ ಪಡೆದ ಈ ಗಲಭೆಯಿಂದಾಗಿಯೇ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರೆಂಬ ಮಾತುಗಳು ಜೋರಾಗಿದ್ದವು. ಅಲ್ಲದೇ ಕಿಮ್ಮನೆ ರತ್ನಾಕರ್​ ಬರೋಬ್ಬರಿ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದರು.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


ಟಿಕೆಟ್​ ಆಕಾಂಕ್ಷಿಗಳು ಯಾರು?


ಹಸಿರ ಹೊದಿಕೆ ಹೊತ್ತಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಡುವುದಂತೂ ಪಕ್ಕಾ ಹಾಲಿ ಶಾಸಕ ಹಾಗೂ ಮಾಜಿ ಶಾಸ. ಹೀಗಾಗಿ ಪಕ್ಷಗಳ


ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


ಆರಗ ಜ್ಞಾನೇಂದ್ರ: ಬಿಜೆಪಿ ಹಾಲಿ ಶಾಸಕ ಆರಗ ಜ್ಞಾನೇಂದ್ರ ಹೊರತುಪಡಿಸಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಬೇರಾವ ಆಕಾಂಕ್ಷಿಯೂ ಇಲ್ಲ.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


ಕಿಮ್ಮನೆ ರತ್ನಾಕರ್: ಮಾಜಿ ಸಚಿವರು ಹಾಗೂ ಎರಡು ಬಾರಿ ಇದೇ ಕ್ಷೇತ್ರದಿಂದ ಗೆದ್ದ ನಾಯಕ.


ಕಿಮ್ಮನೆ ರತ್ನಾಕರ್


ಆರ್​ ಎಂ ಮಂಜುನಾಥ ಗೌಡ: ಡಿ. ಕೆ. ಶಿವಕುಮಾರ್ ಆಪ್ತರಾಗಿರುವ ಮಂಜುನಾಥ ಗೌಡ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ


ಜಾತಿ ಲೆಕ್ಕಾಚಾರ:

ಒಟ್ಟು ಮತದಾರರು1,71,373
ಲಿಂಗಾಯತ19,634
ಬ್ರಾಹ್ಮಣ20,714
ಒಕ್ಕಲಿಗ50,758
ಈಡಿಗ30,069
ಮುಸ್ಲಿಂ12,257
ಎಸ್​ಸಿ5,298

2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಆರಗ ಜ್ಞಾನೇಂದ್ರ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಕಿಮ್ಮನೆ ರತ್ನಾಕರ್ ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಆರಗ ಜ್ಞಾನೇಂದ್ರ 21,955 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಆರಗ ಜ್ಞಾನೇಂದ್ರ67,527
ಕಾಂಗ್ರೆಸ್​ಕಿಮ್ಮನೆ ರತ್ನಾಕರ್45,572

Published by:Precilla Olivia Dias
First published: