• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Tiptur Elections: ತಿಪಟೂರಿನಲ್ಲಿ ಶಿಕ್ಷಣ ಸಚಿವರಿಗೆ ಸವಾಲಾದ ಕೈ, ಜೆಡಿಎಸ್​ ಅಭ್ಯರ್ಥಿಗಳು

Tiptur Elections: ತಿಪಟೂರಿನಲ್ಲಿ ಶಿಕ್ಷಣ ಸಚಿವರಿಗೆ ಸವಾಲಾದ ಕೈ, ಜೆಡಿಎಸ್​ ಅಭ್ಯರ್ಥಿಗಳು

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ತಿಪಟೂರು ವಿಧಾನಸಭಾ ಕ್ಷೇತ್ರದ  ಸಂಪೂರ್ಣ ವಿವರ ನೀಡಲಾಗಿದೆ.

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ತಿಪಟೂರು ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ತಿಪಟೂರು ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Tiptur, India
  • Share this:

08ತಿಪಟೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಕಲ್ಪತರು ನಾಡು ತುಮಕೂರಿನ (Tumakuru) ತಿಪಟೂರು ವಿಧಾನಸಭಾ ಕ್ಷೇತ್ರದ (Tiptur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.


ಕ್ಷೇತ್ರದ ವಿಶೇಷತೆ


ಬೆಂಗಳೂರಿನಿಂದ ಸುಮಾರು 150 ಕಿ.ಮಿ. ದೂರದಲ್ಲಿರುವ ತಿಪಟೂರು ತನ್ನ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ 70 ಕಿ.ಮೀ ದೂರದಲ್ಲಿದೆ. ಐತಿಹಾಸಿಕವಾಗಿ ಈ ಪಟ್ಟಣಕ್ಕೆ ತಿಪಟೂರು ಹೆಸರು ಬರಲಿಕ್ಕೆ ಕಾರಣ ಇಲ್ಲಿನ ಅಣತಿ ದೂರದಲ್ಲಿರುವ ನೊಣವಿನಕೆರೆ ಕಲ್ಲೇಶ್ವರ ದೇಗುಲದಲ್ಲಿ ನೊಳಂಬ ರಾಜರಿಗೆ ಪಟ್ಟಕಟ್ಟಿದ್ದು. ಮೂರು ರಾಜರಿಗೆ ಪಟ್ಟಕಟ್ಟಿದ ತ್ರಿಪಟ್ಟದೂರು ಬರುಬರುತ್ತಾ ಜನರ ಬಾಯಲ್ಲಿ ತಿಪಟೂರು ಎಂದಾಗಿದೆ. ತಿಪಟೂರಿಗೆ ಎರಡು ಕಿ.ಮೀ. ದೂರದಲ್ಲಿರುವ ಹಳೇಪಾಳ್ಯ ಗ್ರಾಮವು ನೇಕಾರಿಕೆಗೆ ಪ್ರಸಿದ್ಧಿಯಾಗಿದೆ.ಇಲ್ಲಿರುವ ಚೌಡೇಶ್ವರಿ ದೇವಾಲಯವು ಅತ್ಯಂತ ಸುಂದರವಾಗಿದ್ದು ಪ್ರತೀ ಶ್ರಾವಣ ಹುಣ್ಣಿಮೆಯಂದು ಇಲ್ಲಿ ಅಪರೂಪದ ಉತ್ಸವ ನಡೆಯುತ್ತದೆ. ಅಲ್ಲದೆ ಈ ಒಂದು ಚಿಕ್ಕ ಗ್ರಾಮದಲ್ಲೇ ಹತ್ತಕ್ಕೂ ಹೆಚ್ಚು ಸುಂದರ ದೇವಾಲಯಗಳಿದ್ದು ದೇವಾಲಯಗಳ ಗ್ರಾಮ ಎಂದೂ ಪ್ರಸಿದ್ಧವಾಗಿದೆ.


ಇನ್ನು ತಿಪಟೂರು, ತೆಂಗು ಮತ್ತು ಕೊಬ್ಬರಿಗೆ ಹೆಸರು ವಾಸಿಯಾದ ಊರು,ಇಲ್ಲಿ ಬಹು ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯಿದೆ. ಸುತ್ತಮುತ್ತಲಿನ ತಾಲೂಕಿನ ಜನರು ಕೂಡ ಇಲ್ಲಿಗೆ ತಾವು ಬೆಳೆದ ಕೊಬ್ಬರಿಯನ್ನು ಇಲ್ಲಿಗೆ ತಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಶನಿವಾರ ಮತ್ತು ಬುಧವಾರ ಹರಾಜು ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಶೈಕ್ಷಣಿಕವಾಗಿ, ವಾಣಿಜ್ಯವಾಗಿ, ಸಾಹಿತ್ಯಿಕವಾಗಿ ತಿಪಟೂರು ಎಂದಿಗೂ ತುಮಕೂರು ನಗರಕ್ಕೆ ಒಂದು ಕಿರೀಟದಂತೆ ಕಾಣುತ್ತದೆ.


ರಾಜಕೀಯ ಹಿನ್ನೋಟ


1951ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಜಿ.ತಿಮ್ಮೇಗೌಡ ಗೆದ್ದರೆ, ಬಳಿಕ 1957 ಮತ್ತು 1962ರ ಚುನಾವಣೆಗಳಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿ ಕೆ.ಪಿ. ರೇವಣ್ಣಸಿದ್ದಪ್ಪ ಗೆಲುಉವಿನ ನಗೆ ಬೀರಿದ್ದರು. 1967ರಲ್ಲಿ ಕಾಂಗ್ರೆಸ್‌ನ ಎಂ. ಎಸ್. ನೀಲಕಂಠಸ್ವಾಮಿ ಶಾಸಕರಾದರೆ. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ವಿ. ಎಲ್. ಶಿವಪ್ಪ ಗೆಲುವು ಸಾಧಿಸಿದ್ದರು.


1972 ರಲ್ಲಿ ಕಾಂಗ್ರೆಸ್​ನ ಟಿ.ಎಂ. ಮಂಜುನಾಥ್ ಶಾಸಕರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ 1978ರ ಚುನಾವಣೆಯಲ್ಲಿ ವಿ. ಎಲ್ ಶಿವಪ್ಪ ಅವರಿಗೆ ಸಿಕ್ಕ ಗೆಲುವಿನಿಂದ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೇರಿತು. 1983ರಲ್ಲೂ ಮತ್ತೆ ಕೈ ಪಾಳಯದ ಎಸ್​. ಪಿ. ಗಂಗಾಧರಪ್ಪ ಗೆದ್ದು ಬೀಗಿದರು. ಆದರೆ ಕಾಂಗ್ರೆಸ್​ನ ಗೆಲುವಿನ ಓಟಕ್ಕೆ ಜನತಾ ಪಾರ್ಟಿಯ ಚಂದರಶೇಖರಯ್ಯ ಬ್ರೇಕ್ ಹಾಕಿದರು. ತದ ನಂತರ 1989ರಲ್ಲಿ ಮತ್ತೆ ಟಿ, ಎಂ ಮಂಜುನಾಥ್ ಗೆದ್ದು, ಕಾಂಗ್ರೆಸ್​ನ್ನು ಗೆಲುವಿನ ಹಳಿಗೆ ಮರಳಿ ತಂದರು. ಆದರೆ, 1994 ರಲ್ಲಿ ಮತ್ತೆ ಕೈಪಾಳಯ ಸೋಲನುಭವಿಸಿತು. ಭಾರತೀಯ ಜನತಾ ಪಕ್ಷದ ಬಿ. ನಂಜಾಮರಿ ಶಾಸಕರಾದರು. ಆದರೆ 1999ರಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದ ಷಡಕ್ಷರಿ ಗೆಲುವಿನ ನಗೆ ಬೀರಿದರು.


2004ರಲ್ಲಿ ಮತ್ತೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿ ಜೆಡಿಎಸ್​ನಿಂದ ಸ್ಪರ್ಧಿಸಿದ ಬಿ.ನಂಜಾಮರಿ ಮತ್ತೆ ಶಾಸಕರಾದರು. ಆದರೆ 2008ರಲ್ಲಿ ತಿಪಟೂರು ಬಿಜೆಪಿಯಿಂದ ಕಣಕ್ಕಿಳಿದ ಹಾಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮೊದಲ ಗೆಲುವು ಸಾಧಿಸಿದರು. ಆದರೆ ಈ ಗೆಲುವು 2013ರ ವೇಳೆಗೆ ಕಾಂಗ್ರೆಸ್​ನ ಕೆ.ಷಡಕ್ಷರಿ ಪಾಲಾಯ್ತು. ಇದರಿಂದ ಕುಗ್ಗದ ಬಿ. ಸಿ. ನಾಗೇಶ್ ಕಳೆದ 2018ರ ಚುನಾವಣೆಗೆ ಭರ್ಜರಿ ತಯಾರಿ ನಡೆಸಿ ಬಿಜೆಪಿಯಿಂದ ಕಣಕ್ಕಿಳಿದು, ಕೆ ಷಡಕ್ಷರಿ ವಿರುದ್ಧ ಗೆಲುವು ಸಾಧಿಸಿದರು.


2023ರ ಅಭ್ಯರ್ಥಿಗಳು ಯಾರು?


ಕಾಂಗ್ರೆಸ್: ಕೆ. ಷಡಕ್ಷರಿ
ಬಿಜೆಪಿ: ಬಿ. ಸಿ. ನಾಗೇಶ್
ಜೆಡಿಎಸ್​: ಶಾಂತಕುಮಾರ್


ಮತದಾರರೆಷ್ಟು?


ಒಟ್ಟು 1,79,318 ಮತದಾರರಿರುವ ತಿಪಟೂರು ಕ್ಷೇತ್ರದಲ್ಲಿ 87,904 ಪುರುಷ ಮತದಾರರಿದ್ದು, 91,352 ಮಹಿಳಾ ಮತದಾರರಿದ್ದಾರೆ. ಅಲ್ಲದೇ ಲೈಂಗಿಕ ಅಲ್ಪಸಂಖ್ಯಾತ ಮತದಾರರು 20 ಮಂದಿ ಇದ್ದಾರೆ

top videos


    2018ರಲ್ಲಿ ಫಲಿತಾಂಶವೇನಾಗಿತ್ತು?

    ಪಕ್ಷಅಭ್ಯರ್ಥಿ ಹೆಸರುಮತಗಳು
    ​ಬಿಜೆಪಿಬಿ ಸಿ ನಾಗೇಶ್61,383
    ಕಾಂಗ್ರೆಸ್​ಕೆ ಷಡಕ್ಷರಿ35,820

    First published: