• Home
  • »
  • News
  • »
  • state
  • »
  • Karnataka Assembly Elections: ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯದಲ್ಲಿ ಸೋಲಿಲ್ಲದ ಸರದಾರನಿಗೆ ಕೈ ತಪ್ಪುತ್ತಾ ಬಿಜೆಪಿ ಟಿಕೆಟ್?

Karnataka Assembly Elections: ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯದಲ್ಲಿ ಸೋಲಿಲ್ಲದ ಸರದಾರನಿಗೆ ಕೈ ತಪ್ಪುತ್ತಾ ಬಿಜೆಪಿ ಟಿಕೆಟ್?

ಎಸ್​ ಅಂಗಾರ, ಹಾಲಿ ಶಾಸಕ

ಎಸ್​ ಅಂಗಾರ, ಹಾಲಿ ಶಾಸಕ

Karnataka Assembly Elections 2023: ಕೇಸರಿ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ ಜನ ನಾಯಕರು ಹಾಗೂ ಇಡೀ ರಾಜ್ಯದ ಚಿತ್ತ ಹೊರಳಿದೆ. ಚುನಾವಣೆ ಸಮೀಪಿಸುವ ಸಂದರ್ಭದಲ್ಲಿಜನರ ಈ ಕುತೂಹಲಕ್ಕೆ ಕಾರಣವಾಗಿದ್ದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಹಾಗೂ ಕೋಮು ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯ ಸುಳ್ಯ ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಪ್ರಮುಖ ಅಭ್ಯರ್ಥಿಗಳು ಯಾರು? ಜಾತಿ ಸಮೀಕರಣ ಹೇಗಿದೆ? ಇಲ್ಲಿದೆ ವಿವರ

ಮುಂದೆ ಓದಿ ...
  • Share this:

ಸುಳ್ಯ ವಿಧಾನಸಭಾ ಕ್ಷೇತ್ರ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಹೀಗಿರುವಾಗ ಆಡಳಿತ, ವಿರೋಧ ಪಕ್ಷಗಳು ಒಂದೆಡೆ ಮತದಾರನ ಓಲೈಕೆಯಲ್ಲಿ ತೊಡಗಿಕೊಂಡಿದ್ದರೆ, ಮತ್ತೊಂದೆಡೆ ರಾಜಕೀಯ ಕೆಸರೆರಚಾಟವನ್ನೂ ನಡೆಸುತ್ತಿದ್ದಾರೆ. ಈ ಪೈಪೋಟಿಯಲ್ಲಿ ಮತದಾರರು ಮಾತ್ರ ಮೌನವಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಸರಿ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ (Dakshina Kannada) ಜನ ನಾಯಕರು ಹಾಗೂ ಇಡೀ ರಾಜ್ಯದ ಚಿತ್ತ ಹೊರಳಿದೆ. ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಈ ಕುತೂಹಲಕ್ಕೆ ಕಾರಣವಾಗಿದ್ದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಹಾಗೂ ಕೋಮು ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯ ಸುಳ್ಯ ಕ್ಷೇತ್ರದ (Sullia Assembly Constituency) ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಪ್ರಮುಖ ಅಭ್ಯರ್ಥಿಗಳು ಯಾರು? ಜಾತಿ ಸಮೀಕರಣ ಹೇಗಿದೆ? ಇಲ್ಲಿದೆ ವಿವರ


1965ರಲ್ಲಿ ರಚನೆಯಾದ ತಾಲೂಕು  


ಹಾಸನ, ಕೊಡಗು ಮತ್ತು ಕೇರಳದೊಂದಿಗೆ ಗಡಿಹಂಚಿಕೊಂಡಿರುವ ಸುಳ್ಯದಲ್ಲಿ ಜನವಸತಿಗಿಂತ ಕಾಡು ಪ್ರದೇಶವೇ ಹೆಚ್ಚು ಇದೆ. ಹಸಿರಿನಿಂದ ನಳನಳಿಸುವ ಎರಡೂ ತಾಲೂಕಿಗೆ ಪಯಸ್ವಿನಿ ಮತ್ತು ಕುಮಾರಧಾರಾ ನದಿಗಳೇ ಜೀವ. ಪುತ್ತೂರು ಉಪವಿಭಾಗಕ್ಕೆ ಸೇರಿದ್ದ ಸುಳ್ಯ 1965ರಲ್ಲಿ ಸ್ವತಂತ್ರ ತಾಲೂಕಾಯಿತು.  ದೊಡ್ಡ ತಾಲೂಕಾದ ಸುಳ್ಯದ ಕಡಬ ಮತ್ತದರ ಸುತ್ತಲಿನ ಗ್ರಾಮಗಳನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚಿಸುವಂತೆ ಎರಡು ದಶಕಗಳ ಕಾಲ ಹೋರಾಟ ನಡೆದಿತ್ತು. 2018ರಲ್ಲಿ ಸುಳ್ಯ-ಪುತ್ತೂರು ಮತ್ತು ಬೆಳ್ತಂಗಡಿಯ ಕೆಲವು ಹಳ್ಳಿಗಳನ್ನು ಸೇರಿಸಿ ಕಡಬ ತಾಲೂಕು ಘೋಷಿಸಲಾಗಿದೆ. ಇನ್ನು ಬಹುಜನ ಸಮಾಜವೇ ದೊಡ್ಡದಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ.


ಇದನ್ನೂ ಓದಿKarnataka Assembly Elections: ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!


ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ


ಇನ್ನು  ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. ಮೊದಲು ಪುತ್ತೂರು ಕ್ಷೇತ್ರದೊಂದಿಗೆ ಸೇರಿಕೊಂಡಿದ್ದ ಸುಳ್ಯ ದ್ವಿಸದಸ್ಯ ಕ್ಷೇತ್ರವಾಗಿತ್ತು. ಇನ್ನು 1962ರಲ್ಲಿ ಸುಳ್ಯ ಸ್ವತಂತ್ರ ಕ್ಷೇತ್ರವಾಯಿತಾದರೂ ಮೀಸಲಾತಿ ಬದಲಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಕ್ಷೇತ್ರ ಕಾಯ್ದಿಡಲಾಯಿತು. 1972ರಿಂದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶವಾಗಿರುವುದು ಕಂಡುಬರುತ್ತದೆ.


2013ರಲ್ಲಿ ಬಿಜೆಪಿ ಕೈ ಹಿಡಿದಿದ್ದ ಕರಾವಳಿ ಜಿಲ್ಲೆಯ ಏಕೈಕ ಕ್ಷೇತ್ರ


1962ರಲ್ಲಿ ಸುಳ್ಯ ಸ್ವತಂತ್ರ ಕ್ಷೇತ್ರವಾಯಿತಾದರೂ ಮೀಸಲಾತಿ ಬದಲಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಕ್ಷೇತ್ರ ಕಾಯ್ದಿಡಲಾಯಿತು. 1972ರಿಂದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶವಾಗಿರುವುದು ಕಂಡುಬರುತ್ತದೆ. ಮುಂದೆ 1985, 89ರ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತಾದರೂ 1994ರಲ್ಲಿ ಮರಳಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ನಂತರ ಒಮ್ಮೆಯೂ ಇಲ್ಲಿ ಬಿಜೆಪಿ ಸೋತಿದ್ದಿಲ್ಲ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಕಮಲ ಪಕ್ಷದ ಅಭ್ಯರ್ಥಿ ಅಂದರೆ ಎಸ್ ಅಂಗಾರ ಆಗಿದ್ದಾರೆ. ತಮ್ಮ ಗೆಲುವಿನ ಮೂಲಕ ಕರಾವಳಿ ಜಿಲ್ಲೆಯಲ್ಲಿ ಅವರು ಬಿಜೆಪಿಯ ಮಾನ ಉಳಿಸಿದ್ದರು. ಇನ್ನು ಇಲ್ಲಿ ವರ್ಷದಿಂದ ವರ್ಷಕ್ಕೆ ಗೆಲುವಿನ ಅಂತರ ಕಡಿಮೆಯಾಗುತ್ತಿದ್ದುದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತಾದರೂ, 2018ರ ಚುನಾವಣೆಯಲ್ಲಿ ಮತ್ತೆ ಅಂಗಾರ ಭಾರೀ ಅಂತರದಿಂದ ತಮ್ಮ ಎದುರಾಳಿಯನ್ನು ಸೋಲಿಸಿರುವುದು ಬಿಜೆಪಿಯನ್ನು ಕೊಂಚ ನಿರಾಳವನ್ನಾಗಿಸಿದೆ.


ಈ ಬಾರಿ ಅಭ್ಯರ್ಥಿಗಳಾರು?


ಮೀಸಲು ಕ್ಷೇತ್ರದಲ್ಲಿ ಕೇಸರಿ ಪಡೆ ನಿರಂತರವಾಗಿ ಜಯ ದಾಖಲಿಸಿಕೊಳ್ಳುತ್ತಿದ್ದರೂ, ಇತ್ತ ಕಾಂಗ್ರೆಸ್​ ಸೋಲಿಲ್ಲದ ಸರದಾರ ಅಂಗಾರರನ್ನು ಸೋಲಿಸಲು ತುದಿಗಾಲಿಲ್ಲ ನಿಂತಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷವೂ ಈ ಕ್ಷೇತ್ರದಲ್ಲಿ ಬಲೆ ಹೆಣೆಯಲಾರಂಭಿಸಿದ್ದು, ಜನ ಸಾಮಾನ್ಯರ ಗಮನ ಸೆಳೆಯಲು ಪ್ಲಾನ್ ಮಾಡಿದೆ.


ಹಾಗಾದ್ರೆ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


*  ಎಸ್​ ಅಂಗಾರ, ಹಾಲಿ ಶಾಸಕ: ಸತತ ಆರು ಬಾರಿ ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಎಸ್. ಅಂಗಾರ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಆದರೆ ಅಂಗಾರ ಅವರ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರಿಗಷ್ಟೆ ಅಲ್ಲ, ಸಂಘ ಪರಿವಾರ ಮತ್ತು ಬಿಜೆಪಿ ಬಿಡಾರದಲ್ಲಿಯೂ ಅಸಮಾಧಾನದ ಹೊಗೆಯಾಡುತ್ತಿದೆ ಎನ್ನಲಾಗಿದೆ. ಇನ್ನು ಸುಳ್ಯ-ಕಡಬದ ಭೌಗೋಳಿಕ ಸ್ಥಿತಿಗತಿ, ಜನಜೀವನದ ನಾಡಿಮಿಡಿತವೇ ತಿಳಿಯದ ಶಾಸಕ ಅಂಗಾರ ತಮ್ಮ 28 ವರ್ಷಗಳ ಶಾಸಕತ್ವದ ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದು ಯೋಜನೆಯನ್ನೂ ಹಾಕಿಕೊಂಡಿಲ್ಲ ಎಂಬ ಅಸಮಾಧಾನವೂ ಜನರಲ್ಲಿದೆ.


*  ಚನಿಯ ಕಲ್ತಡ್ಕ: ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ಚನಿಯ ಕಲ್ತಡ್ಕ ಕೂಡಾ ಬಿಜೆಪಿ ಟಿಕೆಟ್​ ಆಕಾಂಕ್ಷಿ ಎನ್ನಲಾಗಿದೆ.


ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿದ್ದ ಡಾ. ಬಿ. ರಘು ಹಾಗೂ ಹಾಲಿ ಶಾಸಕ ಎಸ್​. ಅಂಗಾರ


ಕಾಂಗ್ರೆಸ್​ ಆಕಾಂಕ್ಷಿಗಳು ಯಾರು?


*  ಡಾ. ಬಿ. ರಘು: ಕಾಂಗ್ರೆಸ್​ನಿಂದ ಈವರೆಗೆ ಡಾ. ರಘು ಅವರು ಸ್ಪರ್ಧಿಸುತ್ತಿದ್ದರು ಆದರೆ ಕಳೆದ ಬಾರಿ ಅವರು ಸೋಲನುಭವಿಸಿದ್ದರು. ಸತತ ನಾಲ್ಕು ಬಾರಿ ಸೋತಿರುವ ಕಾಂಗ್ರೆಸ್‌ನ ಡಾ.ರಘು ಈ ಬಾರಿ ಸ್ಪರ್ಧಿಸುವ ಉತ್ಸಾಹ ತೋರಿಸುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ. ಸರಕಾರಿ ವೈದ್ಯ ಎನಿಸಿಕೊಂಡಿದ್ದ ಡಾ.ರಘು ಈಗಲೂ ಬೇರುಮಟ್ಟದ ಜನ ಸಂಪರ್ಕ ಉಳಿಸಿಕೊಂಡಿದ್ದಾರೆಂಬ ಅಭಿಪ್ರಾಯವಿದೆ.


*  ಎಚ್​. ಎಮ್​. ನಂದಕುಮಾರ್: ಡಾ. ರಘು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದರಿಂದ ಕಾಂಗ್ರೆಸ್​ ಟಿಕೆಟ್​ ಈ ಬಾರಿ ಎಚ್​. ಎಮ್​. ನಂದಕುಮಾರ್​ ಅವರಿಗೆ ಸಿಗುವ ಸಾಧ್ಯತೆಗಳಿವೆ. ಇವರು ಬ್ಲಾಕ್​ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.


ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?


ಜಾತಿ ಸಮೀಕರಣ:


ಇನ್ನು ಸುಳ್ಯ ಕ್ಷೇತ್ರದ ಒಟ್ಟು ಮತದರಾರರೆಷ್ಟು? ಯಾವ ಜಾತಿಯ ಪ್ರಾಬಲ್ಯ ಹೆಚ್ಚು ಇದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒಟ್ಟು ಮತದಾರರು1,98,686
ಒಕ್ಕಲಿಗ80000
ಮುಸ್ಲಿಂ30000
ಎಸ್​ಸಿ/ಎಸ್​ಟಿ15000
ವಿಶ್ವಕರ್ಮ4000
ಕುಲಾಲ್3000

2018ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯ ಎಸ್. ಅಂಗಾರ ಗೆಲುವು ಸಾಧಿಸಿದ್ದರು.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಎಸ್. ಅಂಗಾರ95,205
ಕಾಂಗ್ರೆಸ್ಡಾ. ಬಿ. ರಘು69,137

Published by:Precilla Olivia Dias
First published: