• Home
  • »
  • News
  • »
  • state
  • »
  • Karnataka Assembly Elections: ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್​ ನಾಯಕಿ ಎದುರಿಸಲು ಕೈ-ಕಮಲದಿಂದ ಕಣಕ್ಕಿಳಿಯೋರು ಯಾರು?

Karnataka Assembly Elections: ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್​ ನಾಯಕಿ ಎದುರಿಸಲು ಕೈ-ಕಮಲದಿಂದ ಕಣಕ್ಕಿಳಿಯೋರು ಯಾರು?

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯೋರು ಯಾರು?

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯೋರು ಯಾರು?

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮುಂದೆ ಓದಿ ...
  • News18 Kannada
  • Last Updated :
  • Shimoga, India
  • Share this:

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ: ಇನ್ನು ಸರಿಸುಮಾರು ಐದಾರು ತಿಂಗಳಲ್ಲಿ ಕರ್ನಾಟಕ ಚುನಾವಣೆ (Karnataka Assembly Elections 2023) ನಡೆಯಲಿದೆ. ಹೀಗಿರುವಾಗ ಸದ್ಯ ಇಡೀ ದೇಶದ ಚಿತ್ತ ಕರ್ನಾಟಕದತ್ತ ಹೊರಳಿದೆ, ರಾಜ್ಯ ನಾಯಕರು ಈಗಾಗಲೇ ಮತದಾರರ ಓಲೈಕೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ರಾಷ್ಟ್ರೀಯ ನಾಯಕರೂ ನಿಧಾನವಾಗಿ ಕರ್ನಾಟಕ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ವಿವಿಧ ವಿವಾದಗಳು ರಾಜಕೀಯ ವಾಕ್ಸಮರ ಮುಂದುವರೆದಿದೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ  ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ (Shivamogga Rural Assembly Constituency)ಸಂಪೂರ್ಣ ವಿವರ ಇಲ್ಲಿದೆ ನೋಡಿ.


ಸಹ್ಯಾದ್ರಿ ಒಡಲಲ್ಲಿ ಮೈದುಂಬಿ ಹರಿಯುವ ತುಂಗೆ-ಭದ್ರೆಯ ತಟದಲ್ಲಿ ಹಚ್ಚಹಸುರಾಗಿ ನಳನಳಿಸುವ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಳ್ಳಿ ಸೊಗಡಿನ ಸೀಮೆ. ನದಿಯ ಎರಡೂ ಬದಿಯಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಅಡಿಕೆ ತೋಟಗಳು, ಭತ್ತದ ಗದ್ದೆಗಳು ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಮಲೆನಾಡಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಶಿವಮೊಗ್ಗ ಗ್ರಾಮೀಣ ಕ್ಷೇತ್ರ ಕೊಂಚ ಹಿಂದುಳಿದಿದೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕ್ಷೇತ್ರದ ಹೆಚ್ಚಿನ ಜನರು ಕೃಷಿಯನ್ನು ನಂಬಿದ್ದಾರೆ. ಇಲ್ಲಿ ಲಂಬಾಣಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇನ್ನುಳಿದಂತೆ ಮಲೆನಾಡಿನ ಸಂಸ್ಕೃತಿಯ ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಅಂಟಿಗೆಪಿಂಟಿಗೆ, ಹೋರಿ ಬೆರೆಸುವ ಸ್ಪರ್ಧೆಯ ಸಂಪ್ರದಾಯವೂ ನಡೆದು ಬಂದಿದ್ದು, ಸೂಫಿ ಸಂಸ್ಕೃತಿಯ ಮುಸ್ಲಿಮರೂ ಇದ್ದಾರೆ. ನದಿ ದಡದಲ್ಲಿ ಹಚ್ಚ ಹಸಿರಿನ ದೃಶ್ಯ ಕಂಡು ಬರುವ ಇಲ್ಲಿ ಅಡಿಕೆ, ಭತ್ತ ಮತ್ತು ಶುಂಠಿ ಜೀವನಾಧಾರ ಬೆಳೆಗಳು.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


ಮೀಸಲು ವಿಧಾನಸಭಾ ಕ್ಷೇತ್ರ


ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ಇದು ಮೊದಲು ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ಬಳಿಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆಯ ಎರಡು ವಾರ್ಡ್ ಮತ್ತು ತಾಲೂಕಿನ ಅಷ್ಟೂ ಗ್ರಾಮಗಳ ಜತೆ ಭದ್ರಾವತಿ ಹಾಗು ಹೊಸನಗರ ತಾಲೂಕುಗಳ ಕೆಲವು ಹಳ್ಳಿಗಳನ್ನು ಸೇರಿಸಿ ಈ ಕ್ಷೇತ್ರ ರಚಿಸಲಾಗಿದೆ. ಆದ್ದರಿಂದ, ಕ್ಷೇತ್ರ ಮೂರು ಚುನಾವಣೆಗಳನ್ನು ಮಾತ್ರ ಕಂಡಿದೆ. ದಲಿತರೇ ಹೆಚ್ಚು ಜನರಿರುವ ಈ ಕ್ಷೇತ್ರದಲ್ಲಿ ಲಿಂಗಾಯತರು ದ್ವಿತೀಯ ಬಹುಸಂಖ್ಯಾತರು.


ರಾಜಕೀಯ ಇತಿಹಾಸ:


2008ರ ಚುನಾವಣೆಯಲ್ಲಿ ಬಿಜೆಪಿಯ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, 2013ರ ಚುನಾವಣೆ ವೇಳೆಗೆ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಜೊತೆ ಮುನಿಸಿಕೊಂಡು ತಮ್ಮದೇ ಆದ ಕೆಜೆಪಿ ಸ್ಥಾಪಿಸಿದ್ದರು. ಇದರ ಪರಿಣಾಮ ಎಂಬಂತೆ ಕೆಜೆಪಿ-ಬಿಜೆಪಿ ಅಭ್ಯರ್ಥಿಗಳ ನಡುವೆ ಮತ ವಿಭಜನೆ ಕಾರಣ ಬಿಜೆಪಿಗೆ ಸೋಲು ಉಂಟಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಕರಿಯಣ್ಣರಿಗೆ ಟಿಕೆಟ್ ಕೊಟ್ಟಿತು. ಜಿಪಂ ಮಾಜಿ ಅಧ್ಯಕ್ಷೆ ಶಾರದಾ ಪೂರ್ಯಾ ನಾಯ್ಕ್ ಜೆಡಿಎಸ್ ಅಭ್ಯರ್ಥಿಯಾದರು. ಈ ತ್ರಿಕೋನ ಕಾಳಗದಲ್ಲಿ ಶಾರದಾ ನಾಯ್ಕ್ ಗೆಲುವು ಸಾಧಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.


ಜೆಡಿಎಸ್​ಗೆ ಆಘಾತ


ತದನಂತರದ 2018ರ ವಿಧಾನಸಭಾ ಚುನಾವಣೆ ವೇಳೆಗೆ ಶಾಂತರಾಗಿದ್ದ ಬಿಎಸ್​ವೈ ಬಿಜೆಪಿ ಜೊತೆ ತಮ್ಮ ಪಕ್ಷ ಕೆಜೆಪಿಯನ್ನು ವಿಲೀನಗೊಳಿಸಿದ್ದರು. ಅಲ್ಲದೇ ಜಿಪಂ ಸದಸ್ಯರಾಗಿದ್ದ ಲಂಬಾಣಿ ಸಮುದಾಯದ ಕೆ. ಬಿ. ಅಶೋಕ್ ನಾಯ್ಕ್‌ರನ್ನು ಬಿಜೆಪಿ ಅಭ್ಯರ್ಥಿ ಮಾಡಲಾಯಿತು. ಕಾಂಗ್ರೆಸ್ ಮಾಜಿ ಶಾಸಕ ಕರಿಯಣ್ಣರ ಬದಲಿಗೆ ಅವರ ಮಗ ಡಾ. ಶ್ರೀನಿವಾಸ್ ಕರಿಯಣ್ಣರನ್ನು ಆಖಾಡಕ್ಕೆ ಇಳಿಸಿತು. ಜೆಡಿಎಸ್‌ನಿಂದ ಶಾರದಾ ಪೂರ್ಯಾ ನಾಯ್ಕ್ ಅವರನ್ನು ಕಣಕ್ಕಿಳಿಸಲಾಯ್ತು. ಆದರೆ ಕೊನೇ ಕ್ಷಣದ ರಾಜಕೀಯ ಬದಲಾವಣೆಯಿಂದ ಶಾರದಾ ನಾಯ್ಕ್ ಸೋಲನುಭವಿಸಿದರೆ ಬಿಜೆಪಿಯ ಅಶೋಕ್ ನಾಯ್ಕ್ ಗೆಲುವಿನ ನಗೆ ಬೀರಿದ್ದರು.
2023ರ ಟಿಕೆಟ್​ ಆಕಾಂಕ್ಷಿಗಳು ಯಾರು?


ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್​ನಿಂದ ಶಾರದಾ ಪೂರ್ಯಾ ನಾಯ್ಕ್ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ. ಹೀಗಿರುವಾಗ ಕಾಂಗ್ರೆಸ್​ ಹಾಗೂ ಬಿಜೆಪಿಯಿಂದ ಯಾರು ಸ್ಪರ್ಧೆ ನೀಡಬಹುದೆಂಬ ಕುತೂಹಲ ಮನೆ ಮಾಡಿದೆ.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


* ಪಲ್ಲವಿ: ಜಿಲ್ಲಾ ಕಾಂಗ್ರೆಸ್​ ವಕ್ತಾರೆಯಾಗಿರುವ ಪಲ್ಲವಿ ಈ ಬಾರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


* ಶ್ರೀನಿವಾಸ್​ ಕರಿಯಣ್ಣ: ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿರುವ ಶ್ರೀನಿವಾಸ್​ ಕರಿಯಣ್ಣ ಪರಾಜಿತ ಅಭ್ಯರ್ಥಿ.


* ರವಿ ಕುಮಾರ್: ಕಾಂಗ್ರೆಸ್​ ಮುಖಂಡರಾಗಿರುವ ರವಿ ಕುಮಾರ್ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದಾರೆ.


ಬಿಜೆಪಿಯಿಂದ ಯಾರೆಲ್ಲಾ ರೇಸ್​ನಲ್ಲಿ?


* ಕೆ. ಬಿ ಅಶೋಕ್ ನಾಯ್ಕ್: ಹಾಲಿ ಶಾಸಕರಾಗಿರುವ ಅಶೋಕ್ ನಾಯ್ಕ್ ಈ ಬಾರಿ ಬಿಜೆಪಿಯ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


ಕೆ. ಬಿ ಅಶೋಕ್ ನಾಯ್ಕ್


* ಕೆ. ಜಿ. ಕುಮಾರಸ್ವಾಮಿ: ಮಾಜಿ ಶಾಸಕರಾಗಿದ್ದ ಕುಮಾರಸ್ವಾಮಿ ಕೂಡಾ ಬಿಜೆಪಿ ಟಿಕೆಟ್​ ಪಡೆದು ಕಣಕ್ಕಿಳಿಯುವ ಆಕಾಂಕ್ಷೆ ಹೊಂದಿದ್ದಾರೆ.


ಜೆಡಿಎಸ್​ನಿಂದ ಯಾರಿಗೆ ಟಿಕೆಟ್?


ಜೆಡಿಎಸ್​ನಿಂದ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿಯೂ ಟಿಕೆಟ್​ ಪಡೆದು ಕಣಕ್ಕಿಳಿಯುವ ಆಕಾಂಕ್ಷೆ ಹೊಂದಿದ್ದಾರೆ.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಜಾತಿ ಲೆಕ್ಕಾಚಾರ:

ಒಟ್ಟು ಮತದಾರರು1,91, 525
ಲಿಂಗಾಯತ67,840
ಬ್ರಾಹ್ಮಣ12,516
ಒಕ್ಕಲಿಗ9,218
ಈಡಿಗ1,605
ಕುರುಬ14,506
ಮುಸ್ಲಿಂ11,453
ಎಸ್​ಸಿ/ಎಸ್​ಟಿ41,729

2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಶಾರದಾ ಪೂರ್ಯಾ ನಾಯ್ಕ್ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಡಾ. ಶ್ರೀನಿವಾಸ್ ಕರಿಯಣ್ಣ ಸ್ಪರ್ಧೆಯೊಡ್ಡಿದ್ದರು. ಬಿಜೆಪಿಯಿಂದ ಅಶೋಕ್ ನಾಯ್ಕ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ​ ಅಭ್ಯರ್ಥಿಯಾಗಿದ್ದ ಅಶೋಕ್ ನಾಯ್ಕ್ 3,777 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರು ಮತಗಳು
ಬಿಜೆಪಿಅಶೋಕ್ ನಾಯ್ಕ್69,326
ಜೆಡಿಎಸ್​ಶಾರದಾ ಪೂರ್ಯಾ ನಾಯ್ಕ್65,549

Published by:Precilla Olivia Dias
First published: