ಶಿವಮೊಗ್ಗ ವಿಧಾನಸಭಾ ಕ್ಷೇತ್ರ: ಬಹುನಿರೀಕ್ಷಿತ ಕರ್ನಾಟಕ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಸದ್ಯ ಇಡೀ ದೇಶದ ಚಿತ್ತ ಕರ್ನಾಟಕದತ್ತ ಹೊರಳಿದೆ, ರಾಜ್ಯ ನಾಯಕರು ಈಗಾಗಲೇ ಮತದಾರರ ಓಲೈಕೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ರಾಷ್ಟ್ರೀಯ ನಾಯಕರೂ ನಿಧಾನವಾಗಿ ಕರ್ನಾಟಕ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ವಿವಿಧ ವಿವಾದಗಳು ರಾಜಕೀಯ ವಾಕ್ಸಮರ ಮುಂದುವರೆದಿದೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ (Shivamogga Assembly Constituency)ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಪ್ರಕೃತಿ ಮಡಿಲಿಗೆ ಸ್ವಾಗತ ಕೋರುವ ಶಿವಮೊಗ್ಗ ಮಲೆನಾಡ ಹೆಬ್ಬಾಗಿಲು. ಆದರೆ ಸಾಹಿತ್ಯ, ರಾಜಕೀಯ, ಚಳವಳಿಗಳ ತವರು ಜಿಲ್ಲೆಯಾಗಿದ್ದರೂ, ಇತ್ತೀಚೆಗೆ ಇಲ್ಲಿನ ಶಿವಮೊಗ್ಗ ನಗರ ದಿನದಿಂದ ದಿನಕ್ಕೆ ಬೆಳೆದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಇತ್ತೀಚೆಗೆ ಇಲ್ಲಿ ಕಂಡು ಬರುತ್ತಿರುವ ಉಗ್ರ ಸಂಬಂಧಿ ಚಟುವಟಿಕೆಗಳು, ಧರ್ಮಗಳ ನಡುವಿನ ಗಲಭೆ ಪ್ರಕರಣಗಳಿಂದ ರಾಜ್ಯ ಹಾಗೂ ದೇಶಾದ್ಯಂತ ಸದ್ದು ಮಾಡುತ್ತಿದ್ದು ಎರಡನೇ ’ಕೋಮು ಸೂಕ್ಷ್ಮ ಪ್ರದೇಶ’ ಎಂದೇ ಕುಖ್ಯಾತಿ ಗಳಿಸಿಕೊಳ್ಳುತ್ತಿದೆ.
2007ರ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮರುವಿಂಗಡಣೆ
2007ರ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ 25 ವಾರ್ಡುಗಳಲ್ಲಿ 23ನ್ನು ಸೇರಿಸಿ ಶಿವಮೊಗ್ಗ ನಗರ ಎಂಬ ಕ್ಷೇತ್ರ ರಚಿಸಲಾಗಿದೆ. ಹೀಗಾಗಿ ಇದು ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರವೂ ಒಂದು. ಇಲ್ಲಿ ಜಮೀನು ಕೊಳ್ಳಲು ಬಹುತೇಕ ಜನರು ಹವಣಿಸುತ್ತಿದ್ದು, ಬಂಗಾರದಂತೆ ಮೌಲ್ಯ ಏರಿಕೆಯಾಗುತ್ತಿದೆ. ಇನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶ ನಗರದ ವ್ಯಾಪ್ತಿಗೆ ಒಳಗೊಂಡಿರುವುದರಿಂದ ಮೂಲಸೌಕರ್ಯಗಳು ಅಭಿವೃದ್ಧಿಗೊಂಡಿವೆ. ಕುಡಿಯುವ ನೀರಿನ ಪೂರೈಕೆ, ಕೆಲವು ಬಡಾವಣೆಗಳ ರಸ್ತೆಗಳ ಸ್ಥಿತಿ ಇನ್ನೂ ಅಭಿವೃದ್ಧಿಯಾಗಬೇಕು.
ಭತ್ತದ ಸ್ಥಾನ ಕಸಿದ ಅಡಿಕೆ
ಈ ಹಿಂದೆ ಭತ್ತವನ್ನೇ ಅತೀ ಹೆಚ್ಚು ಬೆಳೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯನ್ನು ’ಅನ್ನದ ಬಟ್ಟಲು’ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಶಕದಲ್ಲಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಯಾದ ಅಡಿಕೆಯ ತೋಟಗಳು ಆಕ್ರಮಿಸಿವೆ. ಇಲ್ಲಿ ಸುಮಾರು ಒಂದೂಕಾಲು ಸಾವಿರ ಅಡಿಕೆ ವ್ಯಾಪಾರದ ಮಂಡಿಗಳಿವೆ. ಅಡಿಕೆ ಸುತ್ತ ಶಿವಮೊಗ್ಗದ ಆರ್ಥಿಕ ವಲಯ ಸೃಷ್ಟಿಯಾಗಿದೆ. ಹೀಗಾಗಿ ಅಡಿಕೆ ವ್ಯಾಪಾರ ಶಿವಮೊಗ್ಗದ ಆರ್ಥಿಕ ಮಾರುಕಟ್ಟೆಯ ಏರಿಳಿತ ಅವಲಂಬಿಸಿದೆ. ಅಡಿಕೆ ಇಲ್ಲಿನ ಆರ್ಥಿಕತೆಯ ಅಡಿಪಾಯ ಎಂಬುವುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?
ರಾಜಕೀಯ ಇತಿಹಾಸ:
1957 ರಿಂದ 1978ರವರೆಗಿನ ಐದು ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್ ಅಧಿಕಾರವೇ ಇತ್ತು. ಆದರೆ 1983ರಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮೊದಲ ಬಾರಿ ಸೋಲನುಭವಿಸಿತು. ಈ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಮೊದಲ ಬಾರಿ ಈ ಕ್ಷೇತ್ರದಲ್ಲಿ ಕೇಸರಿ ಬಾವುಟ ನೆಟ್ಟಿತು. ಇದಾದ ಬಳಿಕದ 1985ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತಾದರೂ ಈ ಖುಷಿ ಆ ಅವಧಿಗಷ್ಟೇ ಸೀಮಿತವಾಯ್ತು. ಯಾಕೆಂದರೆ ಮುಂದೆ ನಡೆದ 1989ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಕೆ. ಎಸ್ ಈಶ್ವರಪ್ಪ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಮತೀಯ ಧ್ರುವೀಕರಣದಿಂದಲೇ ಈಶ್ವರಪ್ಪ ಈ ಗೆಲುವು ಸಾಧಿಸಿದ್ದರೆನ್ನಲಾಗಿದೆ. ಈ ಗೆಲುವಿನ ಓಟ ಮುಂದಿನ 1994ರ ಚುನಾವಣೆಯಲ್ಲೂ ಮುಂದುವರೆದಿತ್ತು.
ಬ್ರಾಹ್ಮಣರ ಬದಲು ಲಿಂಗಾಯತ ಅಭ್ಯರ್ಥಿ
ಆದರೆ 1999 ,ಚುನಾವಣೆಯಲ್ಲಿ ಈಶ್ವರಪ್ಪ ಹಿಂದುತ್ವದ ಲೆಕ್ಕಾಚಾರ ಬಂಗಾರಪ್ಪನವರಿಂದ ತಲೆಕೆಳಗಾಗಿತ್ತು. ಹೌದು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೊಸ ಸ್ಟ್ರಾಟಜಿ ಹೆಣೆದ ಬಂಗಾರಪ್ಪನವರು ಬ್ರಾಹ್ಮಣರ ಬದಲು ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಪರಿಣಾಮ ಈಶ್ವರಪ್ಪ ಸೋಲನುಭವಿಸಿದ್ದರು. 2004ರಲ್ಲಿ ಈಶ್ವರಪ್ಪನವರ ಅದೃಷ್ಟ ಮತ್ತೆ ಖುಲಾಯಿಸಿತು. ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ನೇರ ಬಿಜೆಪಿಗೆ ಸೇರಿದ್ದರು. ಇವೆಲ್ಲದರ ಪರಿಣಾಮವಾಗಿ ಈಶ್ವರಪ್ಪ ಬಲ ಇಮ್ಮಡಿಯಾಗತ್ತು. ಎಲ್ಲರ ಬೆಂಬಲದೊಂದಿಗೆ ಅವರು ಗೆಲುವು ದಾಖಲಿಸಿದ್ದರು. ಇನ್ನು 2008ರ ಚುನಾವಣೆ ವೇಳೆಗೆ ಕುಮಾರಸ್ವಾಮಿ ಬಿಎಸ್ವೈ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡದೆ ಮಸ ಮಾಡಿದ್ದರೆಂಬ ಅನುಕಂಪ ರಾಜ್ಯಾದ್ಯಂತ ಆವರಿಸಿತ್ತು. ಇದರ ಪರಿಣಾಮ ಎಂಬಂತೆ ಈ ಚುನಾವಣೆಯಲ್ಲೂ ಈಶ್ವರಪ್ಪ ಗೆಲುವಿನ ನಗೆ ಬೀರಿದರು. ಆದರೆ ಅಷ್ಟರಲ್ಲಾಗಲೇ ಈಶ್ವರಪ್ಪ ಹಾಗೂ ಬಿಎಸ್ವೈ ಮಧ್ಯೆ ಶೀತಲ ಸಮರ ಆರಂಭವಾಗಿತ್ತು.
ಈಶ್ವರಪ್ಪ, ಬಿಎಸ್ವೈ ಶೀತಲ ಸಮರ
2008ರಲ್ಲಿ ಯಡಿಯೂರಪ್ಪ ತಮ್ಮ ಸರಕಾರದಲ್ಲಿ ಈಶ್ವರಪ್ಪರನ್ನು ವಿದ್ಯುತ್ ಇಲಾಖೆಯ ಮಂತ್ರಿ ಮಾಡಿದರು. ಸದಾನಂದ ಗೌಡ ಸಿಎಂ ಆದಾಗ ಈಶ್ವರಪ್ಪರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು; ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈಶ್ವರಪ್ಪರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು. 2013ರ ಅಸೆಂಬ್ಲಿ ಚುನಾವಣೆಗೂ ಮುನ್ನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಎಸ್ವೈ ಬಿಜೆಪಿಯಿಂದ ದೂ ಸರಿದು ತಮ್ಮದೇ ಆದ ಕೆಜೆಪಿ ಪಕ್ಷ ಕಟ್ಟಿದ್ದರು. ಈ ವೇಳೆ ಈಶ್ವರಪ್ಪರನ್ನು ಸೋಲಿಸುವ ಹಠ ಯಡಿಯೂರಪ್ಪರದ್ದಾಗಿತ್ತೆನ್ನಲಾಗಿದೆ. ಉಭಯ ನಾಯಕರ ನಡುವಿನ ಈ ಮುನಿಸು ಬಿಜೆಪಿಗೆ ವರವಾಯ್ತು. ಹೀಗಾಗೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಗೆಲುವು ಸಾಧಿಸಿದರು. ಇದೇ ವೇಳೆ ಕೆಜೆಪಿಯಿಂದ ಕಣಕ್ಕಿಳಿದಿದ್ದ ರುದ್ರೇಗೌಡ ಎರಡನೇ ಅತೀಹೆಚ್ಚು ಮತಗಳಿಸಿದ ಸ್ಪರ್ಧಿಯಾದರೆ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಕುಸಿದರು.
2013ರ ಚುನಾವಣೆಯಲ್ಲಿ ಸೋಲನುಭವಿಸಿದರೂ ಬಿಎಸ್ವೈಸೆಡ್ಡು ಹೊಡೆಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕಾಗಿ 2014ರಲ್ಲಿ ಈಶ್ವರಪ್ಪನವರಮ್ಮಿ ವಿಧಾನಪರಿಷತ್ಗೆ ಕಳುಹಿಲಾಯಿತು. ಅಷ್ಟೇ ಅಲ್ಲ ಕ್ಯಾಬಿನೆಟ್ ಮಂತ್ರಿಯಂತೆ ವಿರೋಧ ಪಕ್ಷದ ನಾಯಕನಾಗಿಯೂ ಮಾಡಲಾಯಿತು. ಇನ್ನು 2018ರ ಚುನಾವಣೆ ಸಂದರ್ಭದಲ್ಲಿ ಕೋಮು ಧ್ರುವೀಕರಣ. ಬಿಎಸ್ವೈ ಬಿಜೆಪಿಗೆ ಮರುಳಿದ್ದ ಪ್ರಭಾವದಿಂದ ಈಶ್ವರಪ್ಪ ಮತ್ತೆ ಗೆಲುವು ಸಾಧಿಸಿದ್ದರು.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ರಾಜಕೀಯವಾಗಿ ಶಿವಮೊಗ್ಗ ನಗರ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರ. ರಾಜ್ಯದಲ್ಲಿ ಪಕ್ಷದೊಳಗೆ ಪ್ರಭಾವಿ ಮುಖಂಡ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ವಯಸ್ಸಿನ ಕಾರಣಕ್ಕೆ ಈ ವರ್ಷ ಟಿಕೆಟ್ ಸಿಗುವುದು ಅನುಮಾನವೆಂದು ಹೇಳಲಾಗುತ್ತಿದೆ. ಆದರೆ ರಾಜಕೀಯ ನಿವೃತ್ತಿಯಾಗದಿದ್ದರೆ ಇವರೇ ಟಿಕೆಟ್ ಗಳಿಸುತ್ತಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಯಾರು?
* ಕೆ. ಬಿ. ಪ್ರಸನ್ನ ಕುಮಾರ್: ಮಾಜಿ ಶಾಸಕ ಪ್ರಸನ್ನ ಕುಮಾರ್ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ನ ಪ್ರಮುಖ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.
* ಎಚ್. ಡಿ. ಯೋಗೀಶ್: ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಯೋಗೀಶ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.
* ಎಚ್. ಎಸ್. ಸುಂದರೇಶ್: ಕಾಂಗ್ರೆಸ್ನ ಜಿಲ್ಲಾಧ್ಯಕ್ಷರಾಗಿರುವ ಯೋಗೀಶ್ ಕೂಡಾ ಟಿಕೆಟ್ ಆಕಾಂಕ್ಷಿ
ಬಿಜೆಪಿಯಿಂದ ಯಾರೆಲ್ಲಾ ರೇಸ್ನಲ್ಲಿ?
* ಎಸ್ ದತ್ತಾತ್ರಿ: ಬಿಜೆಪಿ ಮುಖಂಡ ದತ್ತಾತ್ರಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
* ಕೆ. ಇ. ಕಾಂತೇಶ್: ಈಶ್ವರಪ್ಪ ಅವರ ಪುತ್ರ ಕಾಂತೇಶ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಯಡಿಯೂರಪ್ಪರ ಮಗನಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡುವುದಾದರೆ ತನ್ನ ಮಗನಿಗೇಕೆ ಶಿವಮೊಗ್ಗದಲ್ಲಿ ಟಿಕೆಟ್ ಕೊಡಬಾರದೆಂಬ ವಾದ ಈಶ್ವರಪ್ಪರದು ಎನ್ನಲಾಗಿದೆ.
* ಎಸ್. ಎಸ್. ಜ್ಯೋತಿಪ್ರಕಾಶ್: ಸುಡಾ ಮಾಜಿ ಅಧ್ಯಕ್ಷರಾಗಿರುವ ಜ್ಯೋತಿಪ್ರಕಾಶ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ
* ಎಸ್. ರುದ್ರೇಗೌಡ: ಪರಿಷತ್ ಸದಸ್ಯರಾಗಿರುವ ರುದ್ರೇಗೌಡ ಕೂಡಾ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಜೆಡಿಎಸ್ನಿಂದ ಯಾರಿಗೆ ಟಿಕೆಟ್?
ಜೆಡಿಎಸ್ನಿಂದ ಎಂ ಶ್ರೀಕಾಂತ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಪಕ್ಷೇತರ: ಈ ಬಾರಿ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆನ್ನಲಾಗಿದೆ. ವೈದ್ಯ ಡಾ.ಧನಂಜಯ್ ಸರ್ಜಿ ಬಿಜೆಪಿ ಅಥವಾ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆ.
ಜಾತಿ ಲೆಕ್ಕಾಚಾರ:
ಒಟ್ಟು ಮತದಾರರು | 2,10,413 |
ಲಿಂಗಾಯತ | 72,910 |
ಬ್ರಾಹ್ಮಣ | 29,546 |
ಒಕ್ಕಲಿಗ | 10,723 |
ಈಡಿಗ | 4,350 |
ಕುರುಬ | 16,566 |
ಮುಸ್ಲಿಂ | 26,158 |
ಎಸ್ಸಿ/ಎಸ್ಟಿ | 21,670 |
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಅವರುಜೆಡಿಎಸ್ನ ಪ್ರಸನ್ನ ಕುಮಾರ್ ಅವರನ್ನುಬರೋಬ್ಬರಿ 57,920 ಮತಗಳ ಅಂತರದಿಂಸ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಕೆ. ಎಸ್. ಈಶ್ವರಪ್ಪ | |
ಕಾಂಗ್ರೆಸ್ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ