• Home
  • »
  • News
  • »
  • state
  • »
  • Karnataka Assembly Elections: ಯುವ ನಾಯಕನ ಜೊತೆ ಸ್ಪರ್ಧಿಸ್ತಾರಾ ಹಳೆ ನಾಯಕ? ಕುತೂಹಲದ ಕಣವಾದ ಶಿವಾಜಿನಗರ

Karnataka Assembly Elections: ಯುವ ನಾಯಕನ ಜೊತೆ ಸ್ಪರ್ಧಿಸ್ತಾರಾ ಹಳೆ ನಾಯಕ? ಕುತೂಹಲದ ಕಣವಾದ ಶಿವಾಜಿನಗರ

ರೋಶನ್ ಬೇಗ್ ಮತ್ತು ರಿಜ್ವಾನ್ ಅರ್ಷದ್

ರೋಶನ್ ಬೇಗ್ ಮತ್ತು ರಿಜ್ವಾನ್ ಅರ್ಷದ್

ಶಿವಾಜಿನಗರ ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದಲ್ಲಿ ಆಳಿದ, ಹಿಂದೂ ಹೃದಯ ಸಾಮ್ರಾಟ ಅಂತಾನೇ ಗೌರವಿಸಲ್ಪಡುವ ಚಕ್ರವರ್ತಿ ಶಿವಾಜಿ ಅವರಿಗೂ ಈ ಕ್ಷೇತ್ರಕ್ಕೂ ಸಂಬಂಧವಿದೆಯಂತೆ! 17ನೇ ಶತಮಾನದಲ್ಲಿ ಮರಾಠಾ ರಾಜ ಶಿವಾಜಿ ತನ್ನ ಬಾಲ್ಯದ ದಿನಗಳನ್ನು ಇಲ್ಲಿಯೇ ಕಳೆದಿದ್ದರಿಂದ ಇದಕ್ಕೆ ಹೆಸರಿಡಲಾಗಿದೆ ಅಂತ ಇತಿಹಾಸ ಹೇಳುತ್ತದೆ. ಸದ್ಯ ಇಲ್ಲಿ ಹೇಗಿದೆ ಚುನಾವಣಾ ಹವಾ?

ಮುಂದೆ ಓದಿ ...
  • Share this:

ಬೆಂಗಳೂರಿನ ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರ (assembly constituency) ಅಂದರೆ ಅದು ಶಿವಾಜಿ ನಗರ (Shivajianagar). ಅತ್ಯಂತ ಹೆಚ್ಚು ಮುಸ್ಲಿಂ ಸಮುದಾಯದ (Muslim Community) ಜನರಿರುವ ಶಿವಾಜಿನಗರ ವಿವಿಧ ಭಾಷಿಕರ ಸಮ್ಮಿಶ್ರ ಪ್ರದೇಶ. ಕನ್ನಡ (Kannada), ಉರ್ದು (Urdu), ಅರೇಬಿಕ್ (Arabic), ಹಿಂದಿ (Hindi), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam) ಹೀಗೆ ವಿವಿಧ ಭಾಷೆಯನ್ನು ಮಾತನಾಡುವ ಜನ ಇಲ್ಲಿದ್ದಾರೆ. ಅತ್ಯಂತ ದೊಡ್ಡ ವ್ಯಾಪಾರ ಕೇಂದ್ರಗಳಲ್ಲಿ (business hubs) ಒಂದಾಗಿರುವ ಶಿವಾಜಿನಗರ, ಅಪರಾಧದಿಂದಲೂ (Crime) ಕುಖ್ಯಾತಿ ಪಡೆದಿದೆ. ಹಲವು ಅಭಿವೃದ್ಧಿ ಕಾರ್ಯಗಳ ಜೊತೆಗೆ ಹಲವು ಸಮಸ್ಯೆಗಳಿಂದಲೂ ಈ ವಿಧಾನಸಭಾ ಕ್ಷೇತ್ರ ಕಂಗೆಟ್ಟಿದೆ. ಕಾಂಗ್ರೆಸ್‌ (Congress) ಭದ್ರಕೋಟೆಯಾಗಿರುವ ಶಿವಾಜಿನಗರದಲ್ಲಿ ಯುವ ನಾಯಕ ರಿಜ್ವಾನ್ ಅರ್ಷದ್ (Rizwan Arshad) ಶಾಸಕರಾಗಿದ್ದಾರೆ. ಈ ಹಿಂದೆ ಹಲವು ಬಾರಿ ಇಲ್ಲಿಂದಲೇ ಗೆದ್ದು, ಸಚಿವರೂ ಆಗಿದ್ದ ಹಿರಿಯ ರಾಜಕಾರಣಿ ಆರ್. ರೋಷನ್ ಬೇಗ್ (Roshan Baig) ಅವರು ಮತ್ತೊಮ್ಮೆ ಇಲ್ಲಿಂದ ಗೆದ್ದು ವಿಧಾನಸಭೆ ಪ್ರವೇಶಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.


ಶಿವಾಜಿನಗರ ಕ್ಷೇತ್ರದ ಇತಿಹಾಸ


ಶಿವಾಜಿನಗರ ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದಲ್ಲಿ ಆಳಿದ, ಹಿಂದೂ ಹೃದಯ ಸಾಮ್ರಾಟ ಅಂತಾನೇ ಗೌರವಿಸಲ್ಪಡುವ ಚಕ್ರವರ್ತಿ ಶಿವಾಜಿ ಅವರಿಗೂ ಈ ಕ್ಷೇತ್ರಕ್ಕೂ ಸಂಬಂಧವಿದೆಯಂತೆ! 17ನೇ ಶತಮಾನದಲ್ಲಿ ಮರಾಠಾ ರಾಜ ಶಿವಾಜಿ ತನ್ನ ಬಾಲ್ಯದ ದಿನಗಳನ್ನು ಇಲ್ಲಿಯೇ ಕಳೆದಿದ್ದರಿಂದ ಇದಕ್ಕೆ ಹೆಸರಿಡಲಾಗಿದೆ ಅಂತ ಇತಿಹಾಸ ಹೇಳುತ್ತದೆ.


ಘಟಾನುಘಟಿಗಳಿಗೆ ಸೋಲು-ಗೆಲುವಿನ ಸಿಹಿ ಉಣ್ಣಿಸಿದ ಕ್ಷೇತ್ರ


ಶಿವಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯದ ಹಲವಾರು ಹಿರಿ –ಕಿರಿಯ ನಾಯಕರು ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಈ ಪೈಕಿ ಕಟ್ಟಾ ಸುಬ್ರಹ್ಮಣ್ಯ  ನಾಯ್ಡು, ಡಿಎಚ್ ಶಂಕರಮೂರ್ತಿ, ರೋಶನ್ ಬೇಗ್, ಸಿಎಂ ಇಬ್ರಾಹಿಂ ಪ್ರಮುಖರು.


ಇದನ್ನೂ ಓದಿ: Karnataka Assembly Elections: ರಾಜಾಜಿನಗರದಲ್ಲಿ ಮಾಜಿ ಸಚಿವ, ಮಾಜಿ ಮೇಯರ್ ಫೈಟ್! ಕಣಕ್ಕಿಳಿಯುತ್ತಾರಾ ಸಿನಿಮಾ ಮಂದಿ?


7 ವಾರ್ಡ್‌ಗಳಲ್ಲೂ ಇದೆ ಸಮಸ್ಯೆ


ಶಿವಾಜಿನಗರ ಬಿಬಿಎಂಪಿಯ 7 ವಾರ್ಡ್‌ಗಳನ್ನು ಹೊಂದಿದೆ. ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮ ನಗರ ವಾರ್ಡ್ ಗಳು ಈ ಕ್ಷೇತ್ರದ ಅಡಿಯಲ್ಲಿ ಬರುತ್ತವೆ. ಬೆಂಗಳೂರಿನ ಹಲವು ಪ್ರದೇಶಗಳಂತೆ ಶಿವಾಜಿನಗರ ಸಹ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಜೊತೆಗೆ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ದೂರುಗಳು ಆಗಾಗ ಕೇಳಿಬರುತ್ತವೆ.


ಕಾಂಗ್ರೆಸ್ ಯುವ ನಾಯಕ ರಿಜ್ವಾನ್ ಅರ್ಷದ್


ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಶಿವಾಜಿನಗರದಲ್ಲಿ ಪ್ರಸ್ತುತ ಕಾಂಗ್ರೆಸ್ ಯುವನಾಯಕ ರಿಜ್ವಾನ್ ಅರ್ಷದ್ ಶಾಸಕರಾಗಿದ್ದಾರೆ. ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಯಲ್ಲಿ 4 ಬಾರಿ ಸೋತಿದ್ದ ರಿಜ್ವಾನ್ ಅರ್ಷದ್ ಪ್ರಸ್ತುತ ಗೆದ್ದು, ಶಾಸಕರಾಗಿದ್ದಾರೆ. ವಿದ್ಯಾವಂತ, ಯುವಕ ಎನ್ನುವುದು ಅವರ ಹೆಚ್ಚುಗಾರಿಕೆ. ಸಮಸ್ಯೆಗೆ ಸ್ಪಂದಿಸುತ್ತಾರೆ, ಎಲ್ಲಾ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಕ್ಷೇತ್ರದ ಬಹುತೇಕ ಅಭಿಪ್ರಾಯ.


ಮತ್ತೊಮ್ಮೆ ಸ್ಪರ್ಧೆಗೆ ಯತ್ನಿಸುತ್ತಿರುವ ರೋಷನ್ ಬೇಗ್


ಇನ್ನು ಕ್ಷೇತ್ರದ ಅತ್ಯಂತ ಪ್ರಭಾನಿ ನಾಯಕ, ಮಾಜಿ ಸಚಿವ ಆರ್. ರೋಷನ್ ಬೇಗ್ ಮತ್ತೊಮ್ಮೆ ಶಿವಾಜಿನಗರದಿಂದ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಬಹುಕೋಟಿ ಐಎಂಎ ಹಗರಣದ ಉರುಳು ಇರವ ಕೊರಳಿಗೆ ಸುತ್ತಿಕೊಂಡು, ಅದರಿಂದ ತಪ್ಪಿಸಿಕೊಳ್ಳಲಾಗದೇ ಈಗಲೂ ನರಳುತ್ತಿದ್ದಾರೆ. ಅಲ್ಲಿಂದ ಬಿಜೆಪಿಗೆ ಬಂದು, ಅಲ್ಲಿಯೂ ಟಿಕೆಟ್ ಸಿಗದೇ ನಿರಾಶರಾಗಿದ್ದಾರೆ.


ಜೆಡಿಎಸ್ ಸೇರುತ್ತಾರಾ ರೋಷನ್ ಬೇಗ್?


ಬಿಜೆಪಿಯಿಂದ ರೋಷನ್ ಬೇಗ್ ಏನೋ ಟಿಕೆಟ್ ಬಯಸಿದ್ದಾರೆ. ಆದರೆ ಐಎಂಎ ಹಗರಣ ಅವರಿಗೆ ಮುಳ್ಳಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಈ ಬಾರಿಯೂ ಸ್ಪರ್ಧೆಗೆ ಬೇಗ್ ಒಲವು ತೋರಿದ್ದಾರೆ. ಆದರೆ ಐಎಂಎ ಹಗರಣದ ತನಿಖೆ ಇನ್ನೂ ನಡೆಯುತ್ತಿರುವುದಿಂದ ಈ ಬಾರಿಯೂ ಟಿಕೆಟ್ ಸಿಗುವುದು ಕಷ್ಟ. ನನಗೆ ಟಿಕೆಟ್ ಕೊಟ್ಟಿಲ್ಲದಿದ್ದರೆ, ಮಗನಿಗಾದರೂ ಟಿಕೆಟ್ ನೀಡಿ ಅಂತ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅದೂ ಸಾಧ್ಯವಾಗದಿದ್ದರೆ ಜೆಡಿಎಸ್‌ ಹೋಗಲು ನಿರ್ಧರಿಸಿದ್ದಾರೆ ಅಂತ ಹೇಳಲಾಗುತ್ತಿದೆ.

ಕಾಂಗ್ರೆಸ್ಬಿಜೆಪಿಜೆಡಿಎಸ್
ರಿಜ್ವಾನ್ ಅರ್ಷದ್ಎಂ. ಸರವಣಗೊತ್ತಿಲ್ಲ
ರೋಷನ್ ಬೇಗ್?ರೋಷನ್ ಬೇಗ್?

ಈ ಬಾರಿ ಶಿವಾಜಿನಗರದಲ್ಲಿ ಟಿಕೆಟ್ ಯಾರಿಗೆ?


ಈ ಬಾರಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರೇ ಸ್ಪರ್ಧಿಸುವ ಸಾಧ್ಯತೆ ಇದೆ. ಅತ್ತ ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಎಂ. ಸರವಣ ಟಿಕೆಟ್ ಬಯಸಿದ್ದಾರೆ. ಇನ್ನು ರೋಷನ್ ಬೇಗ್ ಬಿಜೆಪಿ ಟಿಕೆಟ್ ಬಯಸಿದ್ದು, ಅಲ್ಲಿ ಸಿಗದಿದ್ದರೆ ಜೆಡಿಎಸ್ ಕಡೆ ವಾಲುವ ಸಾಧ್ಯತೆಯೂ ಇದೆ. ಹೀಗಾಗಿ ಜೆಡಿಎಸ್ ಸದ್ಯ ಅಭ್ಯರ್ಥಿಯ ಹುಡುಕಾಟದಲ್ಲೇ ಇದೆ.


ಇದನ್ನೂ ಓದಿ: Karnataka Assembly Elections: ಯಶವಂತಪುರದಲ್ಲಿ ಈ ಬಾರಿ ಯಶಸ್ಸು ಸಿಗೋದು ಯಾರಿಗೆ? ಮತ್ತೆ ಗೆಲುವು ಸಾಧಿಸ್ತಾರಾ ಸಚಿವ ಸೋಮಶೇಖರ್?


ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕ


ಶಿವಾಜಿನಗರ ಕ್ಷೇತ್ರ ಮುಸ್ಲಿಂ ಬಾಹುಳ್ಯವುಳ್ಳ ಕ್ಷೇತ್ರ. ಹೀಗಾಗಿ ಇಲ್ಲಿ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಅದನ್ನು ಸೆಳೆಯಲು ಎಲ್ಲಾ ಪಕ್ಷಗಳು ಓಲೈಕೆಯಲ್ಲಿ ತೊಡಗಿವೆ. ಸದ್ಯ ಕ್ಷೇತ್ರದ ಮತದಾರರ ಸಂಖ್ಯೆ 1,93,600ರಷ್ಟಿದೆ.

ಒಟ್ಟು ಮತದಾರರು1,93,600
ಮುಸ್ಲಿಂ75,000
ಇತರೇ ಭಾಷಿಕರು45,000
ಎಸ್‌ಸಿ-ಎಸ್‌ಟಿ19,000
ಇತರೇ ಸಮುದಾಯ11,000
ಒಕ್ಕಲಿಗ7,500
ಲಿಂಗಾಯತ7,000

ಈ ಪೈಕಿ ಮುಸ್ಲಿಂ – 75,000 ಹಾಗೂ ತೆಲುಗು, ತಮಿಳು ಸೇರಿ ಇತರೇ ಭಾಷಿಕರು – 45,000 ಇದ್ದಾರೆ. ಇನ್ನು ಎಸ್‌ಸಿ-ಎಸ್‌ಟಿ – 19,000, ಇತರೇ ಜನಾಂಗದ ಮತದಾರರು 11,000 ಮಂದಿ ಇದ್ದಾರೆ. ಜೊತೆಗೆ ಈ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ 7,500 ಇದ್ದರೆ, 7 ಸಾವಿರ ಲಿಂಗಾಯತ ಮತದಾರರಿದ್ದಾರೆ.

Published by:Annappa Achari
First published: