• Home
  • »
  • News
  • »
  • state
  • »
  • Karnataka Assembly Elections: ಸರ್ವಜನಾಂಗದ ತೋಟ ಸರ್ವಜ್ಞನಗರ! ಕಾಂಗ್ರೆಸ್ ಕೋಟೆಯಲ್ಲಿ ಈ ಬಾರಿ ಗೆಲ್ಲೋದ್ಯಾರು?

Karnataka Assembly Elections: ಸರ್ವಜನಾಂಗದ ತೋಟ ಸರ್ವಜ್ಞನಗರ! ಕಾಂಗ್ರೆಸ್ ಕೋಟೆಯಲ್ಲಿ ಈ ಬಾರಿ ಗೆಲ್ಲೋದ್ಯಾರು?

ಮಾಜಿ ಸಚಿವ ಕೆಜೆ ಜಾರ್ಜ್

ಮಾಜಿ ಸಚಿವ ಕೆಜೆ ಜಾರ್ಜ್

ಸದ್ಯ ಮಾಜಿ ಸಚಿವರು, ಕಾಂಗ್ರೆಸ್ನ ಪ್ರಭಾವಿ ರಾಜಕಾರಣಿ ಕೆಲಚಂದ್ರ ಜೋಸೆಫ್ ಜಾರ್ಜ್ ಅಂದರೆ ಕೆಜೆ ಜಾರ್ಜ್ ಅವರು ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿದ್ದು, ಸರ್ವಜ್ಞನಗರವನ್ನು ಪ್ರತಿನಿಧಿಸುತ್ತಿದ್ದಾರೆ. ಹಲವು ಭಾಷಿಕರು, ಬೇರೆ ಬೇರೆ ಧರ್ಮ ಜನಾಂಗ, ಬೇರೆ ಬೇರೆ ಸಮುದಾಯದ ಜನರಿರುವ ಸರ್ವಜ್ಞನಗರ ಕಾಂಗ್ರೆಸ್ ಭದ್ರಕೋಟೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ (Sarvagnanagar Assembly Constituency) ಬೆಂಗಳೂರು ನಗರದ (Bengaluru City) 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಸದ್ಯ ಮಾಜಿ ಸಚಿವರು (Ex Minister), ಕಾಂಗ್ರೆಸ್‌ನ (Congress) ಪ್ರಭಾವಿ ರಾಜಕಾರಣಿ  ಕೆಲಚಂದ್ರ ಜೋಸೆಫ್ ಜಾರ್ಜ್ ಅಂದರೆ ಕೆಜೆ ಜಾರ್ಜ್ (KJ George) ಅವರು ಈ ಕ್ಷೇತ್ರದ ಶಾಸಕರಾಗಿದ್ದು, ಸರ್ವಜ್ಞನಗರವನ್ನು ಪ್ರತಿನಿಧಿಸುತ್ತಿದ್ದಾರೆ. ಹಲವು ಭಾಷಿಕರು, ಬೇರೆ ಬೇರೆ ಧರ್ಮಮ ಜನಾಂಗ, ಬೇರೆ ಬೇರೆ ಸಮುದಾಯದ ಜನರಿರುವ ಸರ್ವಜ್ಞನಗರ ಕಾಂಗ್ರೆಸ್ ಭದ್ರಕೋಟೆ. 1967ರಿಂದ 20018ರವರೆಗೆ ನಡೆದ ಚುನಾವಣೆಗಳಲ್ಲಿ ಬಹುಕೇತ ಕಾಂಗ್ರೆಸ್ ಸದಸ್ಯರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿ (Development) ಕಡಿಮೆ, ಸಮಸ್ಯೆಗಳು (Problems) ಜಾಸ್ತಿ ಎನ್ನುವುದು ಇಲ್ಲಿನ ಮತದಾರರ ಆರೋಪ. ಹಲವು ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವುದರಿಂದ ಕ್ಷೇತ್ರದಲ್ಲಿ ಅಪರಾಧ (Crime) ಚಟುವಟಿಕೆಗಳೂ ಜಾಸ್ತಿ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.


ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಪರಿಚಯ


ಸರ್ವಜ್ಞನಗರದ ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಜತೆಗೆ ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸದ್ಯ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ನಾಗವಾರ, ಎಚ್‌ಬಿಆರ್‌ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳಿ, ಕಾಡು ಗೊಂಡನಹಳ್ಳಿ, ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ ಸೇರಿದಂತೆ ಬಿಬಿಎಂಪಿಯ 8 ವಾರ್ಡ್‌ಗಳು ಈ ಕ್ಷೇತ್ರದಲ್ಲಿವೆ.


ಡಿವೈಎಸ್‌ಪಿ ಗಣಪತಿ ಸೂಸೈಡ್‌ ಕೇಸ್‌ನ ಕಳಂಕ ಜಾರ್ಜ್‌ಗೆ ಅಂಟಿತ್ತು


ಮಾಜಿ ಸಚಿವ, ಹಾಲಿ ಶಾಸಕ ಕೆಜೆ ಜಾರ್ಜ್


ಕೆಜೆ ಜಾರ್ಜ್ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಕಾಂಗ್ರೆಸ್‌ನ ಪ್ರಭಾವಿ ನಾಯಕರು, ಅಷ್ಟೇ ಅಲ್ಲ ಮಾಜಿ ಗೃಹಸಚಿವರು. ಕ್ಷೇತ್ರದ ಎಲ್ಲಾ ಧರ್ಮ, ಎಲ್ಲಾ ವರ್ಗಗಳ ಜನರ ಅಭಿಮಾನ ಗಳಿಸಿದ್ದರೂ, ಸರಕಾರದ ಯೋಜನೆಗಳನ್ನು ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ ಎಂಬ ಮಾತಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. ಅವರ ಪುತ್ರ ರಾಣಾ ಜಾರ್ಜ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆಪಾದನೆಯೂ ಇದೆ.


ಜಾರ್ಜ್ ಪುತ್ರ ರಾಣಾ ಜಾರ್ಜ್


ಇದನ್ನೂ ಓದಿ: Karnataka Assembly Elections: ಯಲಹಂಕ ಉಪನಗರದಲ್ಲಿ ವಿಶ್ವನಾಥನ ದರ್ಬಾರ್! ಬಿಜೆಪಿಯನ್ನು ಸೋಲಿಸುವವರು ಯಾರು?


ಈ ಬಾರಿ ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ


ಈ ಬಾರಿಯೂ ಸರ್ವಜ್ಞನಗರದಲ್ಲಿ ಹಾಲಿ ಶಾಸಕ ಕೆಜೆ ಜಾರ್ಜ್ ಅವರೇ ಕಾಂಗ್ರೆಸ್ ಹುರಿಯಾಳಾಗುವುದು ನಿಶ್ಚಿತ. ಈಗಾಗಲೇ 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿರುವ ಜಾರ್ಜ್ ಈ ಬಾರಿ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಇನ್ನು ಬಿಜೆಪಿಯಿಂದ ಬಿಬಿಎಂಪಿ ಮಾಜಿ ಮೇಯರ್ ಪದ್ಮನಾಭರೆಡ್ಡಿ ಟಿಕೆಟ್ ಬಯಸಿದ್ದರೆ, ಪ್ರಬಲ ಪೈಪೋಟಿ ನೀಡಲು ಆಮ್ ಆದ್ಮಿ ಪಕ್ಷ ಕೂಡ ಸಜ್ಜಾಗಿದೆ. ಇನ್ನು ಸದ್ಯ ಕ್ಷೇತ್ರದಲ್ಲಿ ಪ್ರಾಬಲ್ಯ ಕಳೆದುಕೊಂಡಿರುವ ಜೆಡಿಎಸ್‌ನಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಇದ್ದೇ ಇದೆ.

ಕಾಂಗ್ರೆಸ್ಬಿಜೆಪಿಜೆಡಿಎಸ್ಎಎಪಿ
ಕೆ.ಜೆ. ಜಾರ್ಜ್ಪದ್ಮನಾಭರೆಡ್ಡಿಗೊತ್ತಿಲ್ಲಗೊತ್ತಿಲ್ಲ

ಕ್ಷೇತ್ರದ ಮತದಾರರ ಲೆಕ್ಕಾಚಾರ


ಒಟ್ಟು 3,34,420 ಮತದಾರರು ಇರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಇತರೇ ಸಮುದಾಯದ ವೋಟೇ ನಿರ್ಣಾಯಕ. ಸದ್ಯ ಇಲ್ಲಿ ಮುಸ್ಲಿಂ – 1,20,000, ಇತರೇ ಸಮುದಾಯದ ಮತಗಳು 56,420 ರಷ್ಟಿವೆ. ಎಸ್‌ಸಿ-ಎಸ್‌ಟಿ - 50,000, ಕ್ರಿಶ್ಚಿಯನ್ – 40,000, ಕುರುಬ – 30,000, ಒಕ್ಕಲಿಗ – 20,000 ಮತಗಳಿವೆ. ಇನ್ನು ರೆಡ್ಡಿ – 10,000 ವೋಟ್ ಇದ್ದರೆ, ಲಿಂಗಾಯತರ ವೋಟ್ ಕೇವಲ 8,000ದಷ್ಟಿದೆ. 

ಒಟ್ಟು ಮತದಾರರು3,34,420
ಮುಸ್ಲಿಂ1,20,000
ಇತರೇ56,420
ಎಸ್‌ಸಿ-ಎಸ್‌ಟಿ50,000
ಕ್ರಿಶ್ಚಿಯನ್40,000
ಕುರುಬ30,000
ಒಕ್ಕಲಿಗ20,000
ರೆಡ್ಡಿ10,000
ಲಿಂಗಾಯತ8,000

ಸರ್ವಜ್ಞನಗರದಲ್ಲಿದೆ ಸಾವಿರ ಸಮಸ್ಯೆ


ಸರ್ವಜ್ಞನಗರವೂ ಇತರೇ ಕ್ಷೇತ್ರಗಳಂತೆ ಸಮಸ್ಯೆಯಿಂದ ಕಂಗೆಟ್ಟಿದೆ. ಕಮ್ಮನಹಳ್ಳಿ, ಮಾರುತಿ ಸೇವಾನಗರ, ಬಾಣಸವಾಡಿ, ಎಚ್‌ಬಿಆರ್ ಲೇಔಟ್ ಮುಂತಾದವುಗಳಲ್ಲಿ ಸಿರಿವಂತರು ಹಾಗೂ ಮಧ್ಯಮವರ್ಗದ ಜನರು ಹೆಚ್ಚಿದ್ದಾರೆ. ದೊಡ್ಡಮಟ್ಟದ ವ್ಯಾಪಾರ ವಹಿವಾಟು ಈ ಪ್ರದೇಶಗಳಲ್ಲಿ ನಡೆಯುತ್ತದೆ. ಈಗಲೂ ನೆರೆಯ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಆಶ್ರಯ ಪಡೆದುಕೊಳ್ಳುವುದು ಈ ಭಾಗದಲ್ಲಿಯೇ.


ಇದನ್ನೂ ಓದಿ: Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?


ಹೀಗಾಗಿ ಜನಸಂಖ್ಯೆ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಲಿಂಗರಾಜಪುರ, ಕಾಡುಗೊಂಡನಹಳ್ಳಿ, ನಾಗವಾರ, ವೆಂಕಟೇಶನಗರ ಮುಂತಾದವುಗಳಲ್ಲಿನ ಅವ್ಯವಸ್ಥೆ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

Published by:Annappa Achari
First published: