• Home
  • »
  • News
  • »
  • state
  • »
  • Karnataka Assembly Elections: ಸಾಗರದಲ್ಲಿ ಕೈ-ಕಮಲ ಮುಖಾಮುಖಿ ಕದನ, ಅಭ್ಯರ್ಥಿ ಯಾರು ಅನ್ನೋದೇ ಯಕ್ಷಪ್ರಶ್ನೆ!

Karnataka Assembly Elections: ಸಾಗರದಲ್ಲಿ ಕೈ-ಕಮಲ ಮುಖಾಮುಖಿ ಕದನ, ಅಭ್ಯರ್ಥಿ ಯಾರು ಅನ್ನೋದೇ ಯಕ್ಷಪ್ರಶ್ನೆ!

ಸಾಗರದಲ್ಲಿ ಈ ಬಾರಿ ಗೆಲ್ಲೋರು ಯಾರು?

ಸಾಗರದಲ್ಲಿ ಈ ಬಾರಿ ಗೆಲ್ಲೋರು ಯಾರು?

Karnataka Assembly Elections 2023: ಸಪ್ತ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆ ವಿಚಾರವಾಗಿಯೇ ಹೆಚ್ಚು ಸದ್ದು ಮಾಡುತ್ತಿದೆ ಎಂಬುವುದು ಕಹಿ ಸತ್ಯ. ಹೀಗಿರುವಾಗ ಶಿವಮೊಗ್ಗದ ಕ್ಷೇತ್ರಗಳಲ್ಲೊಂದಾಗಿರುವ ಲಿಂಗನಮಕ್ಕಿ ಜಲಾಶಯವನ್ನು ತನ್ನ ಒಡಲಿಲ್ಲಿ ಇಟ್ಟುಕೊಂಡು ನಾಡಿಗೆ ಬೆಳಕು ನೀಡುತ್ತಿರುವ ಸಾಗರ. ವಿಧಾನಸಭಾ ಕ್ಷೇತ್ರದ ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ವಿಶೇಷತೆ ಏನು? ಕಣಕ್ಕಿಳಿಯಲು ಬಯಸುವ ಪ್ರಮುಖ ಆಕಾಂಕ್ಷಿಗಳು ಯಾರು? ಜಾತಿ ಸಮೀಕರಣ ಹೇಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ ನೋಡಿ.

ಮುಂದೆ ಓದಿ ...
  • Share this:

ಸಾಗರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ತಿಂಗಳು ಬಾಕಿ. ಆದರೆ ಈಗಾಗಲೇ ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಮತದಾರರ ಮನಸ್ಸು ಗೆಲ್ಲಲು ಬೇಕಾದ ಸಿದ್ಧತೆ ಆರಂಭಿಸಿದ್ದಾರೆ. ಹೀಗಿರುವಾಗ ತಮ್ಮ ಎದುರಾಳಿಗಳ ಬಗ್ಗೆ ಎಗ್ಗಿಲ್ಲದ ವಾಗ್ದಾಳಿಯೂ ಸರ್ವೇ ಸಾಮಾನ್ಯವಾಗಿದೆ. ಇನ್ನು ಚುನಾವಣೆ ವಿಚಾರ ಬಂದಾಗ ಸದ್ದು ಮಾಡುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಸಪ್ತ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆ ವಿಚಾರವಾಗಿಯೇ ಹೆಚ್ಚು ಸದ್ದು ಮಾಡುತ್ತಿದೆ ಎಂಬುವುದು ಕಹಿ ಸತ್ಯ. ಹೀಗಿರುವಾಗ ಶಿವಮೊಗ್ಗದ ಕ್ಷೇತ್ರಗಳಲ್ಲೊಂದಾಗಿರುವ ಲಿಂಗನಮಕ್ಕಿ ಜಲಾಶಯವನ್ನು ತನ್ನ ಒಡಲಿಲ್ಲಿ ಇಟ್ಟುಕೊಂಡು ನಾಡಿಗೆ ಬೆಳಕು ನೀಡುತ್ತಿರುವ ಸಾಗರ. ಸಾಗರ ವಿಧಾನಸಭಾ ಕ್ಷೇತ್ರದ (Sagar Assembly constituency) ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ವಿಶೇಷತೆ ಏನು? ಕಣಕ್ಕಿಳಿಯಲು ಬಯಸುವ ಪ್ರಮುಖ ಆಕಾಂಕ್ಷಿಗಳು ಯಾರು? ಜಾತಿ ಸಮೀಕರಣ ಹೇಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ ನೋಡಿ.


ವಿಶ್ವವಿಖ್ಯಾತ ಜೋಗ ಜಲಪಾತ, ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯವನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರ ಸಾಗರ. ವರದಾ ನದಿಯ ದಡದಲ್ಲಿರುವ ಇದು ಹಚ್ಚಹಸುರಿನ ದಟ್ಟ ಮಲೆನಾಡಿನ ಹೃದಯ. ಪಶ್ಚಿಮಘಟ್ಟಗಳ ಹೆಬ್ಬಾಗಿಲಾಗಿರುವ ಸಾಗರದ ಸಿಗಂಧೂರು ದೇವಸ್ಥಾನ, ವರದಹಳ್ಳಿಯ ಶ್ರೀಧರಾಶ್ರಮ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳನ್ನು ನೋಡಲು ಸಾವಿರಾರು ಪ್ರವಾಸಿಗರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಕಾಗೋಡು ಚಳವಳಿ ಮೂಲಕ ರಾಷ್ಟ್ರದ ಗಮನ ಸೆಳೆದ ಕ್ಷೇತ್ರ ಕೂಡಾ ಹೌದು ಈ ಸಾಗರ.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


ರಾಜಕೀಯ ಇತಿಹಾಸ:


1957ರಿಂದಲೂ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಸಾಗರ ಕ್ಷೇತ್ರದಿಂದ 1972ರಲ್ಲಿ ಮೊದಲ ಬಾರಿ ಕಾಗೋಡು ತಿಮ್ಮಪ್ಪ ಅವರು ಸಂಯುಕ್ತ ಸೋಶಿಯಲಿಸ್ಟ್​ ಪಾರ್ಟಿಯಿಂದ ಕಣಕ್ಕಿಳಿದು ಗೆಲುವು ಕಂಡಿದ್ದರು. 1972 ರಿಂದಲೂ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರು ಸೋಲು-ಗೆಲುವನ್ನು ಕಂಡಿದ್ದಾರೆ. ಇದಾದ ಬಳಿಕ 1978 ಹಾಗೂ 1983ರಲ್ಲಿ ಮತ್ತೆ ಕಾಂಗ್ರೆಸ್​ ಪಕ್ಷದ ಎಲ್​. ಟಿ. ತಿಮ್ಮಪ್ಪ ಹೆಗಡೆ ಅವರು ಜಯ ಗಳಿಸಿದ್ದರು. ತದ ನಂತರ 1985ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ ಹಿಡಿತದಿಂದ ತಪ್ಪಿಸಿಕೊಂಡಿದ್ದ ಸಾಗರ ಕ್ಷೇತ್ರದಲ್ಲಿ ಜನತಾ ಪಾರ್ಟಿಯ ಬಿ. ಧರ್ಮಪ್ಪ ಗೆಲುವಿನ ನಗೆ ಬೀರಿದ್ದರು. ಆದರೆ ಇದಾದ ಬೆನ್ನಲ್ಲೇ ಬದಲಾದ ರಾಜಕೀಯ ಬೆಳವಣಿಗೆಯಿಂದ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. ಅಲ್ಲದೇ 1989, 94 ಹಾಗೂ 99ರ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಕಣಕ್ಕಿಳಿದರು. ಈ ಮೂರೂ ಅವಧಿಯಲ್ಲೂ ತಮ್ಮ ಎದುರಾಳಿಗೆ ಸೋಲುಣಿಸಿ ಗೆದ್ದು ಬೀಗಿದರು.


ಗೆಲುವಿನ ನಿರೀಕ್ಷೆಯಲ್ಲಿದ್ದ ತಿಮ್ಮಪ್ಪಗೆ ನಿರಾಸೆ


ಆದರೆ 2004 ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸದಲ್ಲಿ ಮತ್ತೆ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿದ ಕಾಗೋಡು ತಿಮ್ಮಪ್ಪರವರಿಗೆ ಭಾರೀ ನಿರಾಸೆಯಾಯ್ತು. ಈ ಕ್ಷೇತ್ರದಿಂದ ಅವರ ಪ್ರತಿಸ್ಪರ್ಧಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬೇಲೂರು ಗೋಪಾಲಕೃಷ್ಣ ಗೆದ್ದು ಬೀಗಿದ್ದರು. ಆದರೆ ತದ ನಂತರ 2008ರ ಚುನಾವಣೆಯಲ್ಲಿ ಬಿಎಸ್​ವೈ ಕೃಪಾಕಟಾಕ್ಷದಿಂದ ಮತ್ತೆ ಕಣಕ್ಕಿಳಿದ ಬೇಲೂರು ಗೋಪಾಲಕೃಷ್ಣ, ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಕಾಗೋಡು ವಿರುದ್ಧ ಗೆಲುವು ಸಾಧಿಸಲು ಹರಸಾಹಸಪಟ್ಟರು. ಹೀಗಾಗೇ ಅವರ ಗೆಲುವಿನ ಅಂತರ 2,845 ಮತಗಳಷ್ಟೇ ಇದ್ದವು.


ಕಾಗೋಡು ತಿಮ್ಮಪ್ಪ


ಮತ್ತೆ ಕಾಗೋಡು ತಿಮ್ಮಪ್ಪ ಮೇಲುಗೈ


ಆದರೆ 2013ರ ಚುನಾವಣೆ ವೇಳೆಗೆ ಮಾಜಿ ಸಿಎಂ ಬಿ. ಎಸ್​. ಯಡಿಯೂರಪ್ಪ ಬಿಜೆಪಿಯಿಂದ ದೂರವಾಗಿ ತಮ್ಮದೇ ಆದ ಕೆಜೆಪಿ ಪಕ್ಷ ಕಟ್ಟಿದ್ದರು. ಹೀಗಾಗಿ ಆ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ.ಆರ್.ಜಯಂತ್, ಜೆಡಿಎಸ್ ಹುರಿಯಾಳಾಗಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪರ ಮಧ್ಯೆ ತ್ರಿಕೋನ ಕದನ ಏರ್ಪಟ್ಟಿತ್ತು. ಆದರೆ ಈ ಚುಣಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸಮೀಪ ಪ್ರತಿಸ್ಪರ್ಧಿ ಕೆಜೆಪಿಯ ಜಯಂತ್‌ರನ್ನು 41,248 ಮತಗಳ ಅಂತರದಿಂದ ಸೋಲಿಸಿದರು.


ಸೊರಬ ಬಿಟ್ಟು ಸಾಗರದಿಂದ ಕಣಕ್ಕಿಳಿದ ಹಾಲಪ್ಪ ಮೇಲುಗೈ


ಇದಾದ ಬಳಿಕದ ಚುನಾವಣೆಯಲ್ಲಿ ಕಳೆದ 2018ರ ಚುನಾವಣೆಗೂ ಮೊದಲೇ ಬಿಎಸ್​ವೈ ಬಿಜೆಪಿಗೆ ಮರಳಿದ್ದರು. ಗೋಪಾಲಕೃಷ್ಣ ಕೂಡಾ ಜತೆಯಾಗಿದ್ದರು. ಹೀಗಾಗಿ ಮತ್ತೆ ಗೋಪಾಲಕೃಷ್ಣರೆ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆಂಬ ವಿಚಾರ ಸದ್ದು ಮಾಡುತ್ತಿತ್ತು. ಆದರೆ ಅಷ್ಟರಲ್ಲಿ 2013ರಲ್ಲಿ ಸೊರಬದಿಂದ ಸ್ಪರ್ಧಿಸಿ ಮಧು ಬಂಗಾರಪ್ಪ ಕೈಯಿಂದ ಸೋತಿದ್ದ ಹಾಲಪ್ಪ ಕೂಡಾ ಸಾಗರದ ಮೇಲೆ ಕಣ್ಣು ಹಾಕಿದ್ದರು. ಬಿಎಸ್​ವೈ ಕೃಪಾಕಟಾಕ್ಷದಿಂದ ಅಂದು ಹಾಲಪ್ಪ ಬಿಜೆಪಿ ಟಿಕೆಟ್​ ಗಳಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಕಾಗೋಡು ತಿಮಮ್ಪ್ಪ ವಿರುದ್ಧ ಗೆಲುವಿನ ನಗೆ ಬೀರಿದ್ದರು.


ಹರತಾಳು ಹಾಲಪ್ಪ


ಟಿಕೆಟ್​ ಆಕಾಂಕ್ಷಿಗಳು ಯಾರು?


ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಇದ್ದರೂ ಉಭಯ ಪಕ್ಷಗಳಿಂದ ಯಾರು ಟಿಕೆಟ್​ ಗಳಿಸಬಹುದೆಂಬುವುದು ಇನ್ನೂ ಖಚಿತವಾಗಿಲ್ಲ. ಒಂದು ಮೂಲಗಳ ಪ್ರಕಾರ ಹಾಲಪ್ಪರ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಮೂಡಿಸಿದ್ದು, ಅವರು ಜನರನ್ನು ಒಲಿಸಿಕೊಳ್ಳಲು ವಿಫಲರಾಗಿದ್ದಾರೆಂಬ ಮಾತುಗಳು ಜೋರಾಗಿವೆ. ಹೀಗಾಗಿ ಅವರ ಬದಲಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇತ್ತ ಕಾಗೋಡು ತಿಮ್ಮಪ್ಪ ಅವರು ಇಳಿ ವಯಸ್ಸಿನಲ್ಲೂ ಕ್ಷೇತ್ರಾದ್ಯಂತ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕಾಂಗ್ರೆಸ್​ ಇದನ್ನೇ ತನ್ನ ಲಾಭವಾಗಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಜೋರಾಗಿವೆ.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


* ಹರತಾಳು ಹಾಲಪ್ಪ: ಬಿಜೆಪಿ ಹಾಲಿ ಶಾಸಕ ಹರತಾಳು ಹಾಲಪ್ಪ ಈ ಬಾರಿಯೂ ಬಿಜೆಪಿಯಿಂದ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ.


* ಗುರುಮೂರ್ತಿ: ಹಾಲಪ್ಪ ಮತ್ತೆ ತಮ್ಮ ಮಾತೃ ಕ್ಷೇತ್ರ ಸೊರಬಕ್ಕೆ ಹೋದರೆ ಗುರುಮೂರ್ತಿ ಸಾಗರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


* ಬೇಳೂರು ಗೋಪಾಲಕೃಷ್ಣ: ಮಾಜಿ ಶಾಸಕರಾಗಿರುವ ಗೋಪಾಲಕೃಷ್ಣ 2004 ಹಾಗೂ 2008 ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ತದ ನಂತರ ಕಮಲ ಪಾಳಯದ ವಿರುದ್ಧ ಕೋಪಗೊಂಡಿದ್ದ ಅವರು ಕಾಂಗ್ರೆಸ್​ ಸೇರಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್​ನಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.


ಬೇಳೂರು ಗೋಪಾಲಕೃಷ್ಣ


* ಪ್ರಶಾಂತ್: 1991 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಕೆ. ಜಿ. ಶಿವಪ್ಪ ಅವರ ಪುತ್ರ ಪ್ರಶಾಂತ್ ಕೂಡಾ ಈ ಕೈ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


* ಡಾ. ರಾಜನಂದಿನಿ: ಮಾಜಿ ಶಾಸಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಕೂಡಾ ಕಾಂಗ್ರೆಸ್​ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ.


ಜಾತಿ ಲೆಕ್ಕಾಚಾರ:

ಒಟ್ಟು ಮತದಾರರು1,82,622
ಲಿಂಗಾಯತ14,733
ಬ್ರಾಹ್ಮಣ37,551
ಒಕ್ಕಲಿಗ7,754
ಈಡಿಗ42,907
ಕುರುಬ2,900
ಮುಸ್ಲಿಂ19,815
ಎಸ್​ಸಿ/ಎಸ್​ಟಿ21,603

Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​! 


2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹರತಾಳು ಹಾಲಪ್ಪ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ 8,039 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಹರತಾಳು ಹಾಲಪ್ಪ78,475
ಕಾಂಗ್ರೆಸ್ಕಾಗೋಡು ತಿಮ್ಮಪ್ಪ70,436

Published by:Precilla Olivia Dias
First published: