• Home
 • »
 • News
 • »
 • state
 • »
 • Karnataka Assembly Elections: ರಾಣೇಬೆನ್ನೂರಲ್ಲಿ ರಾಜ ಯಾರು? ಮಾಜಿ ಸ್ಪೀಕರ್, ಮಾಜಿ ಸಚಿವರ ತವರಲ್ಲಿ ಹೇಗಿದೆ ಮತ ಚಿತ್ರಣ?

Karnataka Assembly Elections: ರಾಣೇಬೆನ್ನೂರಲ್ಲಿ ರಾಜ ಯಾರು? ಮಾಜಿ ಸ್ಪೀಕರ್, ಮಾಜಿ ಸಚಿವರ ತವರಲ್ಲಿ ಹೇಗಿದೆ ಮತ ಚಿತ್ರಣ?

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ

ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್. ಶಂಕರ್ ಗೆದ್ದು ಶಾಸಕರಾಗಿದ್ದರು. ಬಳಿಕ ಬಿಜೆಪಿ ಸೇರಿದ ಮೇಲೆ 2019ರಲ್ಲಿ ಕ್ಷೇತ್ರ ಮತ್ತೊಮ್ಮೆ ಉಪ ಚುನಾವಣೆ ಎದುರಿಸಬೇಕಾಯ್ತು. ಆಗ ಬಿಜೆಪಿ ಅರುಣ್ ಕುಮಾರ್ ಪೂಜಾರಾಗೆ ಟಿಕೆಟ್ ನೀಡಿತ್ತು. ಸದ್ಯ ಈ ಬಾರಿ ಈ ಕ್ಷೇತ್ರ ಮತ್ತಷ್ಟು ಕುತೂಹಲ ಮೂಡಿಸೋದ್ರಲ್ಲಿ ಡೌಟೇ ಇಲ್ಲ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Haveri, India
 • Share this:

ಹಾವೇರಿ (Haveri) ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರವೂ (Ranebennur assembly constituency) ಒಂದಾಗಿದೆ. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ (Former Speaker K.B. Koliwada), ಮಾಜಿ ಸಚಿವ ಆರ್. ಶಂಕರ್ (Former Minister R. Shankar) ಪ್ರತಿನಿಧಿಸಿದ್ದ ಕ್ಷೇತ್ರ ಇದು. ಮೊದಲು ಕಾಂಗ್ರೆಸ್ (Congress) ಭದ್ರಕೋಟೆಯಾಗಿದ್ದ ರಾಣೇಬೆನ್ನೂರು, ಬಳಿಕ ಬಿಜೆಪಿ ತೆಕ್ಕೆಗೆ ಸೇರಿದೆ. ಕೆಪಿಜೆಪಿ ಪಕ್ಷದಿಂದ (KPJP Party) ಸ್ಪರ್ಧಿಸಿದ್ದ ಆರ್. ಶಂಕರ್ ಗೆದ್ದು ಶಾಸಕರಾಗಿದ್ದರು. ಬಳಿಕ ಬಿಜೆಪಿ ಸೇರಿದ ಮೇಲೆ 2019ರಲ್ಲಿ ಕ್ಷೇತ್ರ ಮತ್ತೊಮ್ಮೆ ಉಪ ಚುನಾವಣೆ (Bye Election) ಎದುರಿಸಬೇಕಾಯ್ತು. ಆಗ ಬಿಜೆಪಿ ಅರುಣ್‌ ಕುಮಾರ್ ಪೂಜಾರಾಗೆ (Arunkumar Pujar) ಟಿಕೆಟ್ ನೀಡಿತ್ತು.  ಸದ್ಯ ಈ ಬಾರಿ ಈ ಕ್ಷೇತ್ರ ಮತ್ತಷ್ಟು ಕುತೂಹಲ ಮೂಡಿಸೋದ್ರಲ್ಲಿ ಡೌಟೇ ಇಲ್ಲ.


ರಾಣೇಬೆನ್ನೂರು ಕ್ಷೇತ್ರ ಪರಿಚಯ


ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಾಮಾನ್ಯವಾಗಿ ರಾಣೇಬೆನ್ನೂರು ತಾಲ್ಲೂಕನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರಿತಿಸಲಾಗುತ್ತಿದೆ. ಇಲ್ಲಿನ ತುಂಗಭದ್ರ ನದಿಯು ತಾಲ್ಲೂಕಿನ ಸಂಪತ್ತು. ಇಲ್ಲಿನ ಕೃಷ್ಣಮೃಗ ಅಭಯಾರಣ್ಯ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿದೆ. ರಾಣೇಬೆನ್ನೂರ ಇದು ವ್ಯಾಪಾರಕ್ಕೆ ಪ್ರಸಿದ್ದವಾದ ಊರು ಎಂದು ಹೇಳಬಹುದಾಗಿದೆ ಇಲ್ಲಿ ಎಲ್ಲಾ ರೀತಿಯ ವಸ್ತುಗಳು ದೊರೆಯುತ್ತವೆ.


ಶಾಸಕ ಅರುಣ್ ಕುಮಾರ್ ಪೂಜಾರ


ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ


ರಾಣೇಬೆನ್ನೂರ ಕ್ಷೇತ್ರದ 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಶಂಕರ್ ಅವರು ಕಾಂಗ್ರೆಸ್​ನ ಪ್ರಬಲ ಸ್ಪರ್ಧಿ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನೇ ಸೋಲಿಸಿದ್ದರು. ಆ ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರು ಆದರು. ಆದರೆ, ಆ ಬಳಿಕ ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಂಕರ್ ಅವರಿಗೆ ಬಿಜೆಪಿ ಭಾರೀ ಶಾಕ್ ನೀಡಿತ್ತು. ಇವರಿಗೆ ಟಿಕೆಟ್ ನೀಡದ ಕಮಲ ಪಕ್ಷ ಅರುಣ್ ಕುಮಾರ್ ಪೂಜಾರ ಅವರಿಗೆ ಟಿಕೆಟ್ ನೀಡಿತ್ತು. ಉಪ ಚುನಾವಣೆಯಲ್ಲಿ ಗೆದ್ದಿದ್ದ ಅರುಣ್ ಕುಮಾರ್ ಪೂಜಾರ ಸದ್ಯ ಶಾಸಕರಾಗಿದ್ದಾರೆ.


ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ


ಇದನ್ನೂ ಓದಿ: Karnataka Assembly Elections: 'ಬ್ಯಾಡಗಿ' ಮೆಣಸು ಈ ಬಾರಿ ಯಾರಿಗೆ ಖಾರ? ಕ್ಷೇತ್ರದಲ್ಲಿ ಹೇಗಿದೆ ಮತದಾರರ ಲೆಕ್ಕಾಚಾರ?


ಈ ಬಾರಿ ಯಾರಿಗೆ ಟಿಕೆಟ್?


ಈ ಬಾರಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಾಗದೇ, ಬಳಿಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಇದೀಗ ಈ ಬಾರಿಯಾದರೂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಆರ್. ಶಂಕರ್. ಇನ್ನು ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ ಈ ಬಾರಿ ಸ್ಪರ್ಧೆ ಬಯಸಿದ್ದಾರೆ. ಇವರ ನಡುವೆ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.


ಮಾಜಿ ಸಚಿವ ಆರ್. ಶಂಕರ್


ಅತ್ತ ಕಾಂಗ್ರೆಸ್‌ನಲ್ಲಿ ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಿರುವ ಪ್ರಕಾಶ್, ಕ್ಷೇತ್ರವನ್ನು ಕಾಂಗ್ರೆಸ್‌ಗೆ ಮರಳಿ ತರುತ್ತೀನಿ ಎನ್ನುತ್ತಿದ್ದಾರೆ. ಇವರೊಂದಿಗೆ ಕೋಳಿವಾಡ ಆಪ್ತ ಜಟ್ಟೆಪ್ಪ ಎಂಬುವರೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ಪ್ರಕಾಶ್ ಕೋಳಿವಾಡ


ರಾಣೇಬೆನ್ನೂರು ಮತದಾರರ ವಿವರ


ಇನ್ನು ಜಾತಿ ಲೆಕ್ಕಾಚಾರಕ್ಕೆ ಬರುವುದಾದರೆ, ಇಲ್ಲಿ ಲಿಂಗಾಯತ ಮತಗಳೇ ಬಹುತೇಕ ನಿರ್ಣಾಯಕವಾಗಲಿವೆ. ಇನ್ನುಳಿದಂತೆ ಕುರುಬ ಮತ್ತು ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವಿನ ತಕ್ಕಡಿಯಾಗಿವೆ. ಕ್ಷೇತ್ರದಲ್ಲಿ ಒಟ್ಟೂ 2,34,988 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತ – 85,000, ಕುರುಬರು – 36,000 ಹಾಗೂ ಮುಸ್ಲಿಂಮರು 37,000 ಮಂದಿ ಇದ್ದಾರೆ.


ಇದನ್ನೂ ಓದಿ: Karnataka Assembly Elections: 'ಕೌರವ'ನ ಕೋಟೆಯೊಳಗೆ ರಂಗೇರಿದ ರಣಕಣ! ಹಿರೇಕೆರೂರು ಕುರುಕ್ಷೇತ್ರದಲ್ಲಿ ಗೆಲ್ಲುವವರು ಯಾರು?


ಕಳೆದ ಬಾರಿ ಚುನಾವಣೆ ಫಲಿತಾಂಶ


2018 ರ ವಿಧಾನಸಭಾ ಚುನಾವಣೆ ಫಲಿತಾಂಶ ನೋಡುವುದಾದರೆ, ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ಶಂಕರ್ 63,910 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಕೆ.ಬಿ. ಕೋಳಿವಾಡ ಅವರು 59,572 ಮತಗಳನ್ನು ಪಡೆಯುವ ಮೂಲಕ 4338 ಮತಗಳ ಅಂತರದಿಂದ ಪರಾಭವಗೊಂಡು, ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಇನ್ನು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಷಣ್ಮುಖಪ್ಪ ಕೇಲಗಾರ 48,973 ಮತಗಳನ್ನು ಪಡೆದಿದ್ದರು. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಶ್ರೀಪಾದ ಹನುಮಪ್ಪ ಸಾವಕಾರ ಅವರು ಕೇವಲ 1,219 ಮತಗಳನ್ನಷ್ಟೇ ಗಳಿಸಿದ್ದರು. ಇನ್ನು 2019ರ ಉಪ ಚುನಾವಣೆಯಲ್ಲಿ ಬಿಜೆಪಿಯ ಅರುಣ್ ಕುಮಾರ್ ಪೂಜಾರಾ ವಿಜಯ ಸಾಧಿಸಿದ್ದರು.

Published by:Annappa Achari
First published: