• Home
  • »
  • News
  • »
  • state
  • »
  • Karnataka Assembly Elections: ರಾಜರಾಜೇಶ್ವರಿ ಕೃಪೆ ಯಾರಿಗೆ? ಬಿಜೆಪಿ, ಕಾಂಗ್ರೆಸ್‌ಗೋ? ಜೆಡಿಎಸ್‌ಗೋ?

Karnataka Assembly Elections: ರಾಜರಾಜೇಶ್ವರಿ ಕೃಪೆ ಯಾರಿಗೆ? ಬಿಜೆಪಿ, ಕಾಂಗ್ರೆಸ್‌ಗೋ? ಜೆಡಿಎಸ್‌ಗೋ?

ರಾಜರಾಜೇಶ್ವರಿನಗರ ಹೆಬ್ಬಾಗಿಲು

ರಾಜರಾಜೇಶ್ವರಿನಗರ ಹೆಬ್ಬಾಗಿಲು

ಈ ಹಿಂದೆ ಉಪ ಚುನಾವಣೆಯಲ್ಲಿ ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಗಮನ ಸೆಳೆದಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಚುನಾವಣಾ ಕಾವು ಏರುತ್ತಿದೆ. ಉಪ ಚುನಾವಣೆ ಗೆದ್ದು, ಶಾಸಕರಾಗಿ, ಬಳಿಕ ಸಚಿವ ಸಂಪುಟವನ್ನೂ ಸೇರಿರುವ ಮುನಿರತ್ನ ಈ ಬಾರಿ ಮತ್ತೊಮ್ಮೆ ಸ್ಪರ್ಧಿಸೋದು ಖಚಿತವಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಂದು ಹೋದ ಮೇಲೆ ಕರ್ನಾಟಕದಲ್ಲಿ (Karnataka) ಅಧಿಕೃತವಾಗಿ ಎಲೆಕ್ಷನ್ (Election) ಕಾವು ಏರುತ್ತಿದೆ. ಬಿಜೆಪಿ ಕಾರ್ಯಕರ್ತರಲ್ಲಿ (BJP Workers) ಹೊಸ ಹುಮ್ಮಸ್ಸು ಬಂದಿದ್ದರೆ, ಕಾಂಗ್ರೆಸ್ (Congress)‌, ಜೆಡಿಎಸ್‌ (JDS) ಪಾಳೆಯದಲ್ಲೂ ಚಟುವಟಿಕೆ ಗರಿಗೆದರಿದೆ. ಇನ್ನು ರಾಜಧಾನಿ ಬೆಂಗಳೂರಿನ (Bengaluru) ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ (Assembly Constituency) ರಾಜರಾಜೇಶ್ವರಿ ನಗರ (Rajarajeshwari Nagar) ವಿಧಾನಸಭಾ ಕ್ಷೇತ್ರವೂ ಒಂದು. ಈ ಹಿಂದೆ ಉಪ ಚುನಾವಣೆಯಲ್ಲಿ (By Election) ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಗಮನ ಸೆಳೆದಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಚುನಾವಣಾ ಕಾವು ಏರುತ್ತಿದೆ. ಉಪ ಚುನಾವಣೆ ಗೆದ್ದು, ಶಾಸಕರಾಗಿ, ಬಳಿಕ ಸಚಿವ ಸಂಪುಟವನ್ನೂ ಸೇರಿರುವ ಮುನಿರತ್ನ (Muniratna) ಈ ಬಾರಿ ಮತ್ತೊಮ್ಮೆ ಸ್ಪರ್ಧಿಸೋದು ಖಚಿತವಾಗಿದೆ.


ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ


ರಾಜರಾಜೇಶ್ವರಿ ದೇವಿ ನೆಲೆಗೊಂಡ ಕ್ಷೇತ್ರವೇ ರಾಜರಾಜೇಶ್ವರಿ ನಗರ. ರಾಜರಾಜೇಶ್ವರಿ ನಗರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. 2008ರಲ್ಲಿ ರಚನೆಗೊಂಡ ಈ ಕ್ಷೇತ್ರ ಉಪ ಚುನಾವಣೆ ಸೇರಿದಂತೆ ಈಗಾಗಲೇ 3 ಚುನಾವಣೆ ಎದುರಿಸಿದೆ. ಸದ್ಯ ಅಲ್ಲಿನ ಶಾಸಕ ಮುನಿರತ್ನ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ.


ಸಚಿವ ಮುನಿರತ್ನ


9 ಬಿಬಿಎಂಪಿ ವಾರ್ಡ್ ಇರುವ ಕ್ಷೇತ್ರ


ಕ್ಷೇತ್ರದಲ್ಲಿ ಬಿಬಿಎಂಪಿಯ 9 ವಾರ್ಡ್‌ಗಳು ಇವೆ. ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ, ಎಚ್‌.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ಮುಂತಾದವು ಇವುಗಳನ್ನು ಒಳಗೊಂಡಿದೆ.


ಪ್ರಧಾನಿ ಜೊತೆ ತುಳಸಿ ಮುನಿರಾಜು ಗೌಡ


ಹಾಲಿ ಶಾಸಕ ಮುನಿರತ್ನ


ನಿರ್ಮಾಪಕ ಮುನಿರತ್ನ ಸದ್ಯ ರಾಜರಾಜೇಶ್ವರಿನಗರದ ಹಾಲಿ ಶಾಸಕ. ಆಂಟಿ ಪ್ರೀತ್ಸೆ , ರಕ್ತ ಕಣ್ಣೀರು , ಅನಾಥರು , ಕಟಾರಿ ವೀರ ಸುರಸುಂದರಾಂಗಿ ಮತ್ತು ಕುರುಕ್ಷೇತ್ರ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದ ಮುನಿರತ್ನ, ಬಳಿಕ ಶಾಸಕರಾಗಿ, ಸದ್ಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ ಮುನಿರತ್ನ, ಬಳಿಕ 2018ರಲ್ಲೂ ಕಾಂಗ್ರೆಸ್‌ನಿಂದಲೇ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ 58 ಸಾವಿರ ಮತಗಳ ಅಂತರದಿಂದ ಪ್ರಚಂಡ ಬಹುಮತ ಪಡೆದು, ಬಳಿಕ ಸಚಿವ ಸಂಪುಟವನ್ನೂ  ಸೇರಿದ್ರು.


ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ


ಈ ಬಾರಿ ಕ್ಷೇತ್ರದಲ್ಲಿ ಭಾರೀ ಪೈಪೋಟಿ


ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಮುನಿರತ್ನ, ಈ ಬಾರಿ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸಿಡಿದೆದ್ದಿದ್ದ ತುಳಸಿ ಮುನಿರಾಜು ಗೌಡ ಈ ಬಾರಿ ಮತ್ತೆ ಟಿಕೆಟ್ ಬಯಸಿದ್ದರೂ ಆಶ್ಚರ್ಯವಿಲ್ಲ. ಅತ್ತ ಒಕ್ಕಲಿಗರ ಸಂಖ್ಯೆ ಹೆಚ್ಚಿರುವ ಕಾರಣ ಜೆಡಿಎಸ್ ಕೂಡ ಇದನ್ನು ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಗಣಿಸಿದೆ. ಹೀಗಾಗಿ ಜೆಡಿಎಸ್‌ನಿಂದ ತಿಮ್ಮನಂಜಯ್ಯ ಹಾಗೂ ವಿ. ಕಷ್ಣಮೂರ್ತಿ ಎನ್ನುವವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಈ ಬಾರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸ್ತಾರೆ ಎನ್ನಲಾಗಿದೆ.


ಕ್ಷೇತ್ರದ ಮತದಾರರು


ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,78,300 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗ – 1,25,000, ಲಿಂಗಾಯತ – 49,000, ಬ್ರಾಹ್ಮಣ – 32,000, ಎಸ್‌ಸಿ-ಎಸ್‌ಟಿ – 82,000, ಮುಸ್ಲಿಂ – 15,000, ಕುರುಬ - 6,000, ದೇವಾಂಗ – 5,000, ತಮಿಳು – 45,000 ಹಾಗೂ ತೆಲುಗು – 43,000 ಮತದಾರರಿದ್ದಾರೆ.


ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆ ಸಮಸ್ಯೆಯೂ ಇದೆ!


ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತನಕ ಹರಡಿಕೊಂಡಿರುವ ಕ್ಷೇತ್ರದಲ್ಲಿ ನೈಸ್ ರಸ್ತೆ, ವಿಶ್ವದರ್ಜೆ ಆಸ್ಪತ್ರೆ, ಮಾಲ್‌ಗಳಿವೆ. ರಿಯಲ್ ಎಸ್ಟೇಟ್ ಪ್ರಭಾವದಿಂದ ಇಲ್ಲಿ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಒಮ್ಮೆ ಸುತ್ತಾಡಿದರೆ ಉತ್ತಮ ರಸ್ತೆ, ಉದ್ಯಾನವನ ಕಣ್ಣಿಗೆ ಕಾಣಿಸುತ್ತದೆ. ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳುವಂತಿಲ್ಲ. ಕೊಳಗೇರಿಗಳೂ ಕ್ಷೇತ್ರದಲ್ಲಿವೆ. ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು ಇನ್ನೂ ಸುಧಾರಿಸಬೇಕಿದೆ.

Published by:Annappa Achari
First published: