Karnataka Assembly Elections: ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!

Karnataka Assembly Elections 2023: ದಕ್ಷಿಣ ಕನ್ನಡ ಕ್ಷೇತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ (Puttur Assembly Constituency) ರಾಜಕೀಯ ಹೇಗಿದೆ? ಇಲ್ಲಿನ ಟಿಕೆಟ್​ ಆಕಾಂಕ್ಷಿಗಳು ಯಾರು? ಕೈ ಹಾಗೂ ಕಮಲ ಪಡೆಯ ಟಿಕೆಟ್​ ಯಾರಿಗೆ ಸಿಗಬಹುದು? ಜಾತಿ ಲೆಕ್ಕಾಚಾರವೇನು? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ.

ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್

ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್

  • Share this:
ಪುತ್ತೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ರಾಜ್ಯಾದ್ಯಂತ ತಯಾರಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ನಿಧಾನವಾಗಿ ಎಲ್ಲಾ ತಯಾರಿ ಆರಂಭಿಸಿದ್ದಾರೆ. ಮತದಾರರನ್ನು ಒಲಿಸುವ ತಂತ್ರ ಒಂದೆಡೆಯಾದರೆ ಟಿಕೆಟ್​ ಯಾರಿಗೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಹೀಗಿರುವಾಗ ದಕ್ಷಿಣ ಕನ್ನಡ ಕ್ಷೇತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ (Puttur Assembly Constituency) ರಾಜಕೀಯ ಹೇಗಿದೆ? ಇಲ್ಲಿನ ಟಿಕೆಟ್​ ಆಕಾಂಕ್ಷಿಗಳು ಯಾರು? ಕೈ ಹಾಗೂ ಕಮಲ ಪಡೆಯ ಟಿಕೆಟ್​ ಯಾರಿಗೆ ಸಿಗಬಹುದು? ಜಾತಿ ಲೆಕ್ಕಾಚಾರವೇನು? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ.

ಹಸಿರಿನ ಗಣಿ ಪುತ್ತೂರು

ಪಶ್ಚಿಮಘಟ್ಟದ ಸಮೃದ್ಧ ಕಾಡುಗಳಿಂದ ಆವೃತ್ತವಾಗಿರುವ ಪುತ್ತೂರು ತಾಲೂಕು, ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಂದ ಆವೃತವಾಗಿದೆ. ತೋಟಗಾರಿಕೆ ಮೂಲಕ ಇಲ್ಲಿನ ಜನರು ಬದುಕು ಕಟ್ಟಿಕೊಳ್ಳುತ್ತಿರುವ ಪುತ್ತೂರು ಹಚ್ಚ ಹರಿಸಿರಿನ ಗಣಿಯಂತಿದೆ. ಆದರೆ ದಕ್ಷಿಣ ಕನ್ನಡದ ಎರಡನೆ ದೊಡ್ಡವಾಣಿಜ್ಯ ನಗರ ಎನಿಸಿರುವ ಪುತ್ತೂರು ಕೋಮು ಸೂಕ್ಷ್ಮ ಪ್ರದೇಶವೂ ಹೌದು. ಪುತ್ತೂರು ಹಿಂದುತ್ವ ಹಾಗೂ ಬಿಜೆಪಿಯ ಭದ್ರಕೋಟೆಯಾಗಿದ್ದು, ಅತ್ಯಂತ ಸುಲಭವಾಗಿ ಗೆಲುವು ಸಾಧಿಸುವ ಕ್ಷೇತ್ರ ಎಂಬುವುದರಲ್ಲಿ ಅನುಮಾನವಿಲ್ಲ.

ಸಂಸ್ಕೃತಿ ಜನರ ಜೀವಾಳ, ತುಳು ಭಾಷೆಯಲ್ಲೇ ವ್ಯವಹಾರ

ಭೂತ, ಕೋಲ, ನೇಮ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ವಿಶಿಷ್ಟ ಕಂಬಳ ಕ್ರೀಡೆಯ ಸಂಪ್ರದಾಯ ಹಾಸುಹೊಕ್ಕಾಗಿರುವ ಪುತ್ತೂರಿನಲ್ಲಿ ಶುದ್ಧ ತುಳುವ ಸಂಸ್ಕೃತಿಯನ್ನು ಜನರು ಆಚರಿಸುತ್ತಾರೆ. ತುಳು ಇಲ್ಲಿನ ಶೇ.60ರಷ್ಟು ಜನರ ಮಾತೃಭಾಷೆಯಾಗಿದೆ. ಕನ್ನಡ, ಕೊಂಕಣಿ, ಹವ್ಯಕ, ಬ್ಯಾರಿ, ಮಲಯಾಳಂ, ಮರಾಠಿ ಭಾಷೆ ಮಾತನಾಡುವ ಜನರಿದ್ದಾರಾದರೂ ವ್ಯವಹಾರ-ಸಂವಹನ ನಡೆಯುವುದು ಬಹುತೇಕ ತುಳು ಭಾಷೆಯಲ್ಲೇ ಎಂಬುವುದು ಇಲ್ಲಿನ ಮತ್ತೊಂದು ವಿಶೇಷ. ಇನ್ನು ಗೋಡಂಬಿ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಪುತ್ತೂರಿನಲ್ಲಿ ಗೋಡಂಬಿ ಸಂಶೋಧನಾ ಕೇಂದ್ರವಿದೆ ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?

ಕೇಸರಿ ಪಾಳಯದ ಕೋಟೆ

ಇನ್ನು ಕೋಮು ಸೂಕ್ಷ್ಮ ಪ್ರದೇಶ ಎನಿಸಿಕೊಂಡಿರುವ ಪುತ್ತೂರಿನಲಗಲಿ ಆರ್​ಎಸ್​ಎಸ್​ ಪ್ರಭಾವವೂ ಬಹಳಷ್ಟಿದೆ. ಇನ್ನು ಪ್ರಸ್ತುತ ಸಚಿವ ಹಾಗೂ ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಇಲ್ಲಿಂದ ಸ್ಪರ್ಧಿಸಲು ಆರಂಭಿಸಿದಾಗಿನಿಂದ ಇಲ್ಲಿ ಜಾತಿರಾಜಕಾರಣ ಮತ್ತಷ್ಟು ಬಲಶಾಲಿಯಾಯಿತು ಎಂಬ ಮಾತಿದೆ. 1994 ಹಾಗೂ 1999 ಹೀಗೆ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಡಿವಿಎಸ್​ 2004ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬದಲಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ ತಲುಪಿದರು. ಹೀಗಿರುವಾಗ ಬಂಟ್ವಾಳದಲ್ಲಿ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ವಿಫಲರಾಗಿದ್ದ ಶಕುಂತಲಾ ಶೆಟ್ಟಿಯನ್ನು ಕಮಲ ಪಾಳಯ ಪುತ್ತೂರಲ್ಲಿ ಕಣಕ್ಕಿಳಿಸಿತು. ಹಿಂದುತ್ವದ ಹಾಗೂ ಕಾಂಗ್ರೆಸ್​ ಭಿನ್ನಮತದಿಂದಾಗಿ ಅವರು ಗೆಲುವು ಸಾಧಿಸಿದರು.

ಶಕುಂತಲಾ ಶೆಟ್ಟಿ ನಡೆಯಿಂದ ಬಿಜೆಪಿಗೆ ಸೋಲು

ಇದಾದ ಬಳಿಕ ಪಕ್ಷದಲ್ಲುಂಟಾದ ಭಿನ್ನಮತಗಳಿಂದ 2008ರ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಗೆ ಬಿಜೆಒಇ ಟಿಕೆಟ್​ ನೀಡದೇ ಮಲ್ಲಿಕಾ ಪ್ರಸಾದ್​ರನ್ನು ಕಣಕ್ಕಿಳಿಸಿತು. ಈ ಚುನಾವಣೆಯಲ್ಲಿ ಮಲ್ಲಿಕಾ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿಯಿಂದ ದೂರ ಸರಿದ ಶಕುಂತಲಾ ಶೆಟ್ಟಿ 2013ರ ವೇಳೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾದ ಶಕುಂತಲಾ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧಿಸಿ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜೀವ ಮಠಂದೂರು ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದರು. ಆದರೆ 2018ರ ಚುನಾವಣೆಯಲ್ಲಿ ಎಲ್ಲಾ ಸಮೀಕರಣಗಳು ಬದಲಾದವು. ಕರಾವಳಿಯಲ್ಲಾದ ಮತೀಯ ಧ್ರುವೀಕರಣದ ಪರಿಣಾಮವಾಗಿ ಈ ಹಿಂದೆ ಸೋತಿದ್ದ ಸಂಜೀವ ಮಠಂದೂರು ಶಕುಂತಲಾ ಶೆಟ್ಟಿ ವಿರುದ್ಧ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದರು.

ಈ ಬಾರಿ ಕಣಕ್ಕಿಳಿಯುವವರು ಯಾರು?

ಹೀಗೆ ರಾಜಕೀಯವಾಗಿ ಅನೇಕ ಏಳು ಬೀಳುಗಳನ್ನು ಕಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಯಾರು ಅಭ್ಯರ್ಥಿಗಳಾಗುತ್ತಾರೆ? ಆಕಾಂಕ್ಷಿಗಳು ಯಾರೆಲ್ಲ? ಎಂಬಿತ್ಯಾದಿ ಪ್ರಶ್ನಗಳಿಗೆ ಇಲ್ಲಿದೆ ಉತ್ತರ.

ಬಿಜೆಪಿಯಿಂದ ಯಾರೆಲ್ಲ ಆಕಾಂಕ್ಷಿಗಳು?

  • ಸಂಜೀವ ಮಠಂದೂರು: ಬಿಜೆಪಿ ನಾಯಕ ಮಠಂದೂರು ಮೂಲತಃ ಓರ್ವ ಕೃಷಿಕ. ಹಾಲಿ ಶಾಸಕರಾಗಿರುವ ಮಠಂದೂರು ಬಗ್ಗೆ ಇಲ್ಲಿ ಎರಡು ಅಭಿಪ್ರಾಯಗಳಿವೆ. ಒಂದು ಗುಂಪು ಪರ್ವಾಗಿಲ್ಲ ಕೆಲಸ ಮಾಡುತ್ತಾರೆ ಎಂದರೆ ಇನ್ನೊಂದು ಬಣ ಪ್ರಯೋಜನವೇ ಇಲ್ಲ ಎನ್ನುತ್ತದೆ. ಹೀಗಿದ್ದರೂ ಜಾತಿ ವಿಚಾರಕ್ಕಾಗಿ ಅವರಿಗೆ ಮತ್ತೆ ಟಿಕೆಟ್​ ಸಿಗುವ ಸಾಧ್ಯತೆಗಳಿವೆ.

  • ಅಶೋಕ್ ರೈ: ಉದ್ಯಮಿ ಆಗಿರುವ ಅಶೋಕ್ ರೈ ಸಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಡಿ. ವಿ. ಸದಾನಂದ ಗೌಡ ಅವರ ಆಪ್ತರೂ ಆಗಿದ್ದಾರೆ. ಅಶೋಕ್​ ರೈ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

  • ಅರುಣ್ ಕುಮಾರ್ ಪುತ್ತಿಲ: ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್​ ಕೂಡಾ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2018ರಲ್ಲಿ ಇವರಿಗೆ ಟಿಕೆಟ್​ ಸಿಗಬಹುದೆಂಬ ನಿರೀಕ್ಷೆ ಇತ್ತಾದರೂ, ಬಿಜೆಪಿ ಮಠಂದೂರಿಗೆ ಮಣೆ ಹಾಕಿತ್ತು.


ಬಿಜೆಪಿ ಹಾಲಿ ಶಾಸಕ ಸಂಜೀವ್ ಮಠಂದೂರು


ಇನ್ನು ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಎಂದು ನೋಡುವುದಾದರೆ

  • ಶಕುಂತಲಾ ಶೆಟ್ಟಿ: ಮಾಜಿ ಶಾಸಕಿಯಾಗಿರುವ ಶಕುಂತಲಾ ಶೆಟ್ಟಿ ಬಿಜೆಪಿ ಹಾಗೂ ಕಾಂಗ್ರೆಸ್​ ಎರಡೂ ಪಕ್ಷದಿಂದ ಸ್ಪರ್ಧಿಸಿ ಗೆದ್ದವರು. ಇವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದೆ ಹೀಗಾಗೇ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

  • ಕಾವು ಹೇಮನಾಥ್ ಶೆಟ್ಟಿ: ಬ್ಲಾಕ್​​ ಕಾಂಗ್ರೆಸ್ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದವರು. ಪ್ರತಿ ಬಾರಿ ಟಿಕೆಟ್​ ಸಿಗುವ ನಿರೀಕ್ಷೆ ಇದ್ದರೂ ಕೊನೆಯ ಕ್ಷಣದಲ್ಲಿ ಕೈತಪ್ಪುತ್ತಿತ್ತು. ಈ ಬಾರಿಯೂ ಅವರು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

  • ದಿವ್ಯಪ್ರಭಾ ಚಿಲ್ತಡ್ಕ: ಕಾಂಗ್ರೆಸ್​ ನಾಯಕಿಯಾಗಿರುವ ದಿವ್ಯಪ್ರಭಾ ಚಿಲ್ತಡ್ಕ ಹೆಸರು ಕೂಡಾ ಪುತ್ತೂರಿನಲ್ಲಿ ಕೇಳಿ ಬರುತ್ತಿದೆ.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ


ಜಾತಿ ಲೆಕ್ಕಾಚಾರಒಟ್ಟು ಮತದಾರರು2,01884
ಒಕ್ಕಲಿಗ60,000
ಬಂಟ್ಸ್35,000
ಮುಸ್ಲಿಂ25,000
ಬ್ರಾಹ್ಮಣ15,000
ವಿಶ್ವಕರ್ಮ10,000
ಜಿಎಸ್​ಬಿ8,000
ಎಸ್​ಸಿ/ಎಸ್​ಟಿ7,000
ಕುಲಾಲ್4,000

ಇದನ್ನೂ ಓದಿ: Karnataka Assembly Elections: ಬಂಟ್ವಾಳದಲ್ಲಿ ರೈ ವಿರುದ್ಧ ಯಾರು ಕಣಕ್ಕೆ? ಹಾಲಿ ಶಾಸಕನಿಗೆ ಕೈ ತಪ್ಪುತ್ತಾ ಬಿಜೆಪಿ ಟಿಕೆಟ್?

2018ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯ ಸಂಜೀವ ಮಠಂದೂರು 90,073 ಮತಗಳನ್ನು ಗಳಿಸಿದ್ದರು.


ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಸಂಜೀವ ಮಠಂದೂರು90,073
ಕಾಂಗ್ರೆಸ್ಶಕುಂತಲಾ ಶೆಟ್ಟಿ70,596
Published by:Precilla Olivia Dias
First published: