• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Assembly Elections: ನೆಲಮಂಗಲದಲ್ಲಿ ಮತ್ತೆ ಚಿಗುರುತ್ತದೆಯೇ 'ತೆನೆ'? ಕೈ-ಕಮಲದ ಪ್ಲಾನ್ ಏನು ಗೊತ್ತಾ?

Karnataka Assembly Elections: ನೆಲಮಂಗಲದಲ್ಲಿ ಮತ್ತೆ ಚಿಗುರುತ್ತದೆಯೇ 'ತೆನೆ'? ಕೈ-ಕಮಲದ ಪ್ಲಾನ್ ಏನು ಗೊತ್ತಾ?

ನೆಲಮಂಗಲ ವಿಧಾನಸಭಾ ಕ್ಷೇತ್ರ

ನೆಲಮಂಗಲ ವಿಧಾನಸಭಾ ಕ್ಷೇತ್ರ

ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಭಾಗವಾಗಿರುವ ನೆಲಮಂಗಲ, ವಿಧಾನಸಭೆಯಲ್ಲಿ ತನ್ನದೇ ಆದ ಕ್ಷೇತ್ರವನ್ನು ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನೆಲಮಂಗಲ ಕೂಡ ಒಂದು. ಹೇಗಿದೆ ಅಲ್ಲಿ ಎಲೆಕ್ಷನ್ ಹವಾ? ಇಲ್ಲಿದೆ ಮಾಹಿತಿ...

 • News18 Kannada
 • 5-MIN READ
 • Last Updated :
 • Nelamangala, India
 • Share this:

ಬೆಂಗಳೂರು ಗ್ರಾಮಾಂತರ (Bengaluru Rural) ಭಾಗದಲ್ಲೂ ಎಲೆಕ್ಷನ್ (Election) ಕಾವು ಜೋರಾಗಿಯೇ ಇದೆ. ಬೆಂಗಳೂರಿನ ಹೆಬ್ಬಾಗಿಲು (Gateway of Bangalore) ಅಂತಾನೇ ಕರೆಸಿಕೊಳ್ಳುವ ನೆಲಮಂಗಲ ವಿಧಾನಸಭಾ ಕ್ಷೇತ್ರ (Nelamangala Assembly Constituency) ಕೂಡ ಇದರಿಂದ ಹೊರತಾಗಿಲ್ಲ. ಲೋಕಸಭೆಯಲ್ಲಿ (Lok Sabha) ಚಿಕ್ಕಬಳ್ಳಾಪುರ ಕ್ಷೇತ್ರದ (Chikkaballapur constituency) ಭಾಗವಾಗಿರುವ ನೆಲಮಂಗಲ, ವಿಧಾನಸಭೆಯಲ್ಲಿ ತನ್ನದೇ ಆದ ಕ್ಷೇತ್ರವನ್ನು ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನೆಲಮಂಗಲ ಕೂಡ ಒಂದು. ಸದ್ಯ ಜೆಡಿಎಸ್ (JDS) ಭದ್ರಕೋಟೆಯಾಗಿರುವ ನೆಲಮಂಗಲದಲ್ಲಿ ಡಾ. ಶ್ರೀನಿವಾಸಮೂರ್ತಿ (Dr. Srinivas Murthy) ಶಾಸಕರಾಗಿದ್ದಾರೆ. ಸದ್ಯ ಅಲ್ಲಿ ಎಲೆಕ್ಷನ್ ಹವಾ ಹೇಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ…


ನೆಲಮಂಗಲ ಕ್ಷೇತ್ರದ ಪರಿಚಯ


ನೆಲಮಂಗಲವನ್ನು ಬೆಂಗಳೂರಿನ ಹೆಬ್ಬಾಗಿಲು ಅಂತಾನೇ ಕರೆಯಲಾಗುತ್ತದೆ. ಪ್ರಮುಖ ಜಿಲ್ಲೆಗಳಿಗೆ ಬೆಂಗಳೂರು ಸೇರಲು ನೆಲಮಂಗಲವೇ ಮಾರ್ಗವಾಗಿದೆ. ಇದು ಎರಡು ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನ್ ಪಾಯಿಂಟ್ ಆಗಿದೆ. ಬೆಂಗಳೂರು –ಮಂಗಳೂರು ಸಂಪರ್ಕಿಸುವ NH-75 (48) ಮತ್ತು ಮುಂಬೈ-ಬೆಂಗಳೂರು-ಚೆನ್ನೈ ಸಂಪರ್ಕಿಸುವ NH-4 ಬೆಂಗಳೂರು ನಗರದ ಉತ್ತರಕ್ಕೆ ಇದೆ. ಕಿರ್ಲೋಸ್ಕರ್, ಜಿಂದಾಲ್ ಸೇರಿದಂತೆ ವಿವಿಧ ಕಂಪನಿ, 30ಕ್ಕೂ ಹೆಚ್ಚು ಬ್ಯಾಂಕುಗಳು, ಎರಡು ಕೈಗಾರಿಕಾ ಪ್ರದೇಶಗಳು, ನೀರು ಕಲುಷಿತಗೊಂಡಿರುವ ಬೃಹತ್ ಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಬೆಂಗಳೂರು ಗ್ರಾಮಾಂತರದ ನಾಲ್ಕು ಕ್ಷೇತ್ರಗಳ ಪೈಕಿ ನೆಲಮಂಗಲ ಪ್ರತಿಷ್ಠೆಯ ಕ್ಷೇತ್ರವಾಗಿದೆ.


ಹಾಲಿ ಶಾಸಕ ಶ್ರೀನಿವಾಸ ಮೂರ್ತಿ


 ಶಾಸಕ ಡಾ. ಶ್ರೀನಿವಾಸ ಮೂರ್ತಿ


ನೆಲಮಂಗಲ ವಿಧಾನಸಭಾ ಕ್ಷೇತ್ರ ಸದ್ಯ ಜೆಡಿಎಸ್ ಭದ್ರಕೋಟೆಯಾಗಿದೆ. ಜೆಡಿಎಸ್‌ನ ಡಾ. ಶ್ರೀನಿವಾಸಮೂರ್ತಿ ಸದ್ಯ ಇಲ್ಲಿನ ಶಾಸಕರಾಗಿದ್ದಾರೆ. ಪುರಸಭೆಯನ್ನು ನಗರಸಭೆ ಮಾಡಿಸಿ ಒಳ ಚರಂಡಿಗೆ ಅನುದಾನ ತಂದಿದ್ದು, ನಗರ ಮುಖ್ಯ ರಸ್ತೆ ಅಭಿವೃದ್ಧಿ ಮಾಡಿಸಿದ್ದೇನೆ ಅಂತ ಶಾಸಕರೇ ಹೇಳಿಕೊಂಡಿದ್ದಾರೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ಇದೀಗ ಹೈಟೆಕ್‌ ಬಸ್‌ ನಿಲ್ದಾಣ ಮಾಡಿಸಲಾಗುತ್ತಿರುವುದು ಸದ್ಯದ ಸಾಧನೆ.


ಮಾಜಿ ಶಾಸಕ ನಾಗರಾಜ್


ಇದನ್ನೂ ಓದಿ: Karnataka Assembly Elections: ಕರ್ನಾಟಕ-ತಮಿಳುನಾಡು ಕೊಂಡಿ ಆನೇಕಲ್; ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ!


ನೆಲಮಂಗಲದಲ್ಲಿ ಈ ಬಾರಿ ಟಿಕೆಟ್ ಯಾರಿಗೆ?


2 ಬಾರಿ ಶಾಸಕರಾಗಿರುವ ಡಾ. ಶ್ರೀನಿವಾಸಮೂರ್ತಿ ಈ ಬಾರಿಯೂ ಜೆಡಿಎಸ್‌ನಿಂದ ಟಿಕೆಟ್ ಬಯಸಿದ್ದಾರೆ. ಸದ್ಯಕ್ಕೆ ಜೆಡಿಎಸ್‌ ಟಿಕೆಟ್‌ಗೆ ಪೈಪೋಟಿ ಕಂಡು ಬರದೇ ಇರುವುದರಿಂದ ಹಾಲಿ ಶಾಸಕರಿಗೇ ಈ ಬಾರಿಯೂ ಟಿಕೆಟ್ ಪಕ್ಕಾ ಎನ್ನಲಾಗಿದೆ. ಅತ್ತ ಬಿಜೆಪಿಯಿಂದ ಮಾದಿ ಶಾಸಕ ಎಂ.ವಿ. ನಾಗರಾಜ್ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇನ್ನು ಈ ಹಿಂದೆ ನೆಲಮಂಗಲದಿಂದ ಶಾಸಕರಾಗಿ, ಕಾಂಗ್ರೆಸ್‌ನಿಂದ ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅಂಜನ್ ಮೂರ್ತಿ ಅವರು ಈ ಬಾರಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಉದ್ಯಮಿ ಶ್ರೀನಿವಾಸ್ ಎಂಬುವರೂ ಕೂಡ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಪ್ರಯತ್ನ ಮಾಡುತ್ತಿದ್ದಾರೆ.


ನೆಲಮಂಗಲದಲ್ಲಿರುವ ಟೋಲ್ ಗೇಟ್


ನೆಲಮಂಗಲ ಕ್ಷೇತ್ರದ ಮತದಾರರ ವಿವರ


ನೆಲಮಂಗಲ ಕ್ಷೇತ್ರದಲ್ಲಿ ಒಟ್ಟೂ 2,10,357 ಮತದಾರರು ಇದ್ದಾರೆ. ಈ ಪೈಕಿ ಲಿಂಗಾಯತ – 40,000, ಎಸ್‌ಸಿ-ಎಸ್‌ಟಿ – 68,000, ಒಕ್ಕಲಿಗ – 35,000 ಮತದಾರರಿದ್ದಾರೆ. ಇನ್ನು ವಿಶ್ವಕರ್ಮ – 20,000, ಬ್ರಾಹ್ಮಣ – 15,000, ಕುರುಬರು – 10,000, ಸವಿತಾ ಸಮಾಜದ ಮತದಾರರು  4,000 ಮಂದಿ ಇದ್ದಾರೆ. ಇನ್ನುಳಿದಂತೆ ಮುಸ್ಲಿಂ – 8,000 ಹಾಗೂ ಇತರೇ ಮತದಾರರು 34,000 ಮಂದಿ ಇದ್ದಾರೆ.


ರಾಷ್ಟ್ರೀಯ ಹೆದ್ದಾರಿಯ ನೋಟ


ಇದನ್ನೂ ಓದಿ: Karnataka Assembly Elections: ಬಹುರಾಷ್ಟ್ರೀಯ ಕಂಪನಿಗಳ ತಾಣ ಮಹದೇವಪುರ! ಹೇಗಿದೆ ಅಲ್ಲಿ ಚುನಾವಣಾ ಕಣ?


ನೆಲಮಂಗಲದ ಪ್ರಮುಖ ಸಮಸ್ಯೆಗಳು ಏನು?


ನೆಲಮಂಗಲ ಗ್ರಾಮಾಂತರ ಹಾಗೂ ನಗರ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಒಡಲಲ್ಲಿ ಹೊಂದಿರುವ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಸಹಜವಾಗೇ ಇದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಇರುವ ಕಾರಣಕ್ಕೆ ರಸ್ತೆ ಅಕ್ಕ-ಪಕ್ಕದ ಭೂಮಿಗೆ ಬಂಗಾರದ ಬೆಲೆ ಇದೆ. ಹಲವಾರು ಕೆರೆಗಳನ್ನು ಕ್ಷೇತ್ರ ಹೊಂದಿದೆ. ಕೆರೆಗೆ ನೀರನ್ನು ಆರಸಿ ಬರುವ ಆನೆಗಳು ರೈತರ ಬೆಳೆಗೆ ಸಂಕಷ್ಟ ತರುತ್ತವೆ. ಇದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.

Published by:Annappa Achari
First published: