• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Navalgund: ರೈತ ಬಂಡಾಯದ ನೆಲದಲ್ಲಿ ಹೇಗಿದೆ ಚುನಾವಣಾ ಕಾವು? ನವಲಗುಂದ ಕ್ಷೇತ್ರದ ಚಿತ್ರಣ ಇಲ್ಲಿದೆ

Navalgund: ರೈತ ಬಂಡಾಯದ ನೆಲದಲ್ಲಿ ಹೇಗಿದೆ ಚುನಾವಣಾ ಕಾವು? ನವಲಗುಂದ ಕ್ಷೇತ್ರದ ಚಿತ್ರಣ ಇಲ್ಲಿದೆ

ನವಲಗುಂದ ವಿಧಾನಸಭಾ ಕ್ಷೇತ್ರ

ನವಲಗುಂದ ವಿಧಾನಸಭಾ ಕ್ಷೇತ್ರ

2 ಬಾರಿ ಗೆದ್ದು, ಸಚಿವರೂ ಆಗಿರುವ ಶಂಕರ ಪಾಟೀಲ್ ಮುನೇನಕೊಪ್ಪ ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅತ್ತ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಈ ಬಾರಿಯೂ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

ರೈತ ಬಂಡಾಯದ ನೆಲ ನರಗುಂದ-ನವಲಗುಂದ (Naragunda-Navalagunda). ನರಗುಂದ ಗದಗ (Gadag) ಜಿಲ್ಲೆಯಲ್ಲಿದ್ದರೆ, ನವಲಗುಂದ ಧಾರವಾಡ (Dharwad) ಜಿಲ್ಲೆಯಲ್ಲಿದೆ. ಸದ್ಯ ಎಲ್ಲಾ ಕ್ಷೇತ್ರಗಳಂತೆ ನವಲಗುಂದ ಕ್ಷೇತ್ರದಲ್ಲೂ ಚುನಾವಣಾ ಕಾವು ಜೋರಾಗಿದೆ. ಹಾಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ (Shankar Patil Munenakoppa) ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಧಾರವಾಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಇದೂ ಕೂಡ ಒಂದು. ಈಗಾಗಲೇ 2 ಬಾರಿ ಗೆದ್ದು, ಸಚಿವರೂ ಆಗಿರುವ ಶಂಕರ ಪಾಟೀಲ್ ಮುನೇನಕೊಪ್ಪ ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅತ್ತ ಜೆಡಿಎಸ್‌ನಿಂದ (JDS) ಕಾಂಗ್ರೆಸ್ (Congress) ಸೇರಿರುವ ಮಾಜಿ ಶಾಸಕ ಎನ್‌ಎಚ್‌ ಕೋನರೆಡ್ಡಿ (NH Konareddy) ಈ ಬಾರಿಯೂ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.


ನವಿಲಿನ ನಾಡು ನವಲಗುಂದ!


ಮೊದಲು ಸಾಕಷ್ಟು ನವಿಲುಗಳು ಇಲ್ಲಿಯ ಗುಡ್ಡದ ಮೇಲೆ ವಾಸಿಸುತಿದ್ದವೆಂದು ಹಿರಿಯರು ಹೇಳುತ್ತಾರೆ. ಅಲ್ಲದೇ ಈಗಲೂ ಸಹ ಕಣ್ಣಿಗೆ ಬೀಳುತ್ತವೆಂದು ಹೇಳುತ್ತಾರೆ. ಅದರಿಂದಾಗಿ ಈ ತಾಲೂಕಿಗೆ ಮೊದಲು ನವಿಲುಗಳಗುಡ್ಡ ಅಂತ ಹೆಸರು ಬಂತು. ಬಳಿಕ ನವಿಲುಗುಂದ, ತದನಂತರ ನವಲಗುಂದ ಎಂಬ ಹೆಸರು ಕೂಡಾ ಬಂತು ಎಂಬುದು ಒಂದು ಪ್ರತೀತಿ. ವಿವಿಧ ರೀತಿಯ ಜಮುಖಾನೆ ತಯಾರಿಕೆಗೆ ಈ ಊರು ಹೆಸರುವಾಸಿಯಾಗಿದೆ.


ಶಂಕರ ಪಾಟೀಲ ಮುನೇನಕೊಪ್ಪ


ರೈತ ಬಂಡಾಯದ ನೆಲ ನವಲಗುಂದ


ನವಲಗುಂದದ 1980ರ ರೈತ ದಂಗೆ ರಾಜ್ಯದ ಇತಿಹಾಸದಲ್ಲಿ ದಾಖಲಾದ ಒಂದು ಮಹತ್ವದ ಘಟನೆ. ನವಲಗುಂದ ರೈತ ಬಂಡಾಯ ರಾಜ್ಯಾದ್ಯಂತ ರೈತ ಚಳವಳಿಗೆ ಪ್ರೇರಣೆಯಾಯಿತು. 1979-80ರಲ್ಲಿ ಬರಗಾಲದಿಂದ ತತ್ತರಿಸಿದ್ದ ನವಲಗುಂದ-ನರಗುಂದ-ಸವದತ್ತಿ ಭಾಗದ ರೈತರು ಸರ್ಕಾರದ ಬೆಟರ್‌ಮೆಂಟ್ ಸುಂಕ, ನೀರಿನ ಕರ ನಿರಾಕರಣೆ ಮತ್ತು ತಮ್ಮ ಕೃಷಿ ಉತ್ಪನ್ನಕ್ಕೆ ಯೋಗ್ಯ ಬೆಲೆ ನೀಡುವಂತೆ ಬೇಡಿಕೆಯಿಟ್ಟು ಬೀದಿಗೆ ಇಳಿದಿದ್ದರು.


ಇದನ್ನೂ ಓದಿ: Hubli-Dharwad East: ಹು-ಧಾ ಪೂರ್ವದಲ್ಲಿ ನಡೆಯುತ್ತಾ ತ್ರಿಕೋನ ಸ್ಪರ್ಧೆ? ಮತ್ತೆ ಗೆದ್ದು ಬೀಗುತ್ತಾರಾ ಪ್ರಸಾದ್ ಅಬ್ಬಯ್ಯ?


ಗೋಲಿಬಾರ್‌ನಲ್ಲಿ ರೈತರ ಹತ್ಯೆ


1980ರ ಜುಲೈನಲ್ಲಿ ಸರ್ಕಾರ ರೈತರ ಪ್ರತಿಭಟನೆಯನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ಪ್ರಯತ್ನಿಸಿತು. ಸಾಧ್ಯವಾಗದೇ ಇದ್ದಾಗ ಗೋಲಿಬಾರ್ ಮಾಡಿ ಅಮಾಯಕ ರೈತರ ಹತ್ಯೆಗೈಯ್ಯಲಾಯ್ತು. ಆಗ ಕೆರಳಿದ ಹೋರಾಟಗಾರರು ಗೋಲಿಬಾರ್ ನಡೆಸಿದ ಸಬ್ ಇನ್ಸ್‌ಪೆಕ್ಟರ್‌ನನ್ನು ಕೊಂದರು. ಬಳಿಕ 1983ರಲ್ಲಿ ಗುಂಡೂರಾವ್ ಸರ್ಕಾರದ ಪತನಕ್ಕೂ ಈ ಘಟನೆ ಕಾರಣವಾಯಿತು.


ಎನ್.ಎಚ್. ಕೋನರೆಡ್ಡಿ


ಸಚಿವ ಮುನೇನಕೊಪ್ಪ ಪ್ರತಿನಿಧಿಸುವ ಕ್ಷೇತ್ರ


ಹುಬ್ಬಳ್ಳಿ ಧಾರವಾಡ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಎರಡು ಹೋಬಳಿಗಳನ್ನು ನವಲಗುಂದಕ್ಕೆ ಸೇರಿಸಲಾಗಿದೆ. ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಶಂಕರಗೌಡ ಪಾಟೀಲ ಮುನೇನಕೊಪ್ಪ ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಎನ್ಎಚ್ ಕೋನರೆಡ್ಡಿ 20521 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.




ಈ ಬಾರಿ ಯಾರ್ಯಾರು ಕಣದಲ್ಲಿದ್ದಾರೆ?


ಹಾಲಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. 2 ಬಾರಿ ಶಾಸಕರಾಗಿರುವ ಮುನೇನಕೊಪ್ಪ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಈ ಹಿಂದೆ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಎನ್ಎಚ್ ಕೋನರೆಡ್ಡಿ ಈಗ ಕಾಂಗ್ರೆಸ್‌ ಸೇರಿ, ಅಲ್ಲಿಂದ ಅಭ್ಯರ್ಥಿಯಾಗಿದ್ದಾರೆ. ಅತ್ತ ಜೆಡಿಎಸ್‌ನಿಂದ ಕಲ್ಲಪ್ಪ ನಾಗಪ್ಪ ರೆಡ್ಡಿ ಕಣದಲ್ಲಿದ್ದಾರೆ.


ಇದನ್ನೂ ಓದಿ: Assembly Elections: ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ ಹಾಲಿ ಶಾಸಕರಿಗೆ ಸಿಗುತ್ತಾ ಗೆಲುವಿನ 'ಬೆಲ್ಲ'?


ಕ್ಷೇತ್ರದ ಮತದಾರರ ವಿವರ


ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 98,068 ಕ್ಕೂ ಹೆಚ್ಚು ಮಹಿಳೆಯರು. ಇದು ಹಿಂದೂ ಪ್ರಾಬಲ್ಯವಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಶೇಕಡಾ 84 ಕ್ಕಿಂತ ಹೆಚ್ಚು ಮತದಾರರು ಹಿಂದೂಗಳು, ಶೇಕಡಾ 15 ರಷ್ಟು ಮುಸ್ಲಿಮರು ಮತ್ತು ಶೇಕಡಾ ಒಂದಕ್ಕಿಂತ ಕಡಿಮೆ ಕ್ರಿಶ್ಚಿಯನ್ನರಾಗಿದ್ದಾರೆ.

First published: