• Home
  • »
  • News
  • »
  • state
  • »
  • Karnataka Assembly Elections: ಬಿಜೆಪಿ ಪಾಲಾದ ತನ್ನ ಕೋಟೆ ಮೂಡಬಿದಿರೆಯನ್ನು ಮತ್ತೆ ಹಿಂಪಡೆಯುತ್ತಾ ಕಾಂಗ್ರೆಸ್?

Karnataka Assembly Elections: ಬಿಜೆಪಿ ಪಾಲಾದ ತನ್ನ ಕೋಟೆ ಮೂಡಬಿದಿರೆಯನ್ನು ಮತ್ತೆ ಹಿಂಪಡೆಯುತ್ತಾ ಕಾಂಗ್ರೆಸ್?

ಮೂಡಬಿದಿರೆ ಕ್ಷೇತ್ರದ ಪ್ರಭಾವಿ ನಾಯಕರು

ಮೂಡಬಿದಿರೆ ಕ್ಷೇತ್ರದ ಪ್ರಭಾವಿ ನಾಯಕರು

Karnataka Assembly Elections 2023: ವಿಧಾನಸಭಾ ಚುನಾವಣಾ ಅಖಾಡವನ್ನು ಗೆಲ್ಲಲು ಎಲ್ಲಾ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಇಂತಹುದೇ ರಾಜಕೀಯ ಚಟುವಟಿಕೆಗಳು ದಕ್ಷಿಣ ಕನ್ನಡದಲ್ಲೂ ಜಿಲ್ಲೆಯಲ್ಲೂ ನಡೆಯುತ್ತಿವೆ. ಒಟ್ಟು 8 ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಜಾತಿ ಲೆಕ್ಕಾಚಾರವೇನು? ಪ್ರಬಲ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ

ಮುಂದೆ ಓದಿ ...
  • Share this:

ಮೂಡಬಿದಿರೆ ವಿಧಾನಸಭಾ ಕ್ಷೇತ್ರ: ಇನ್ನೇನು ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections 2023) ನಡೆಯಲಿದೆ. ಇಡೀ ದೇಶದ ಚಿತ್ತ ಕರುನಾಡಿನ ರಾಜಕೀಯದತ್ತ ಹೊರಳಿದೆ. ಹೀಗಿರುವಾಗ ರಾಜಕೀಯ ನಾಯಕರು ಮತ್ತೆ ಮತದಾರನನ್ನು ನೆನಪಿಸಿಕೊಂಡಿದ್ದಾರೆ. ಗೆಲುವಿನ ದಡ ಸೇರಲು ಸದ್ಯ ಜನ ಸಾಮಾನ್ಯರ ಓಲೈಕೆಯೊಂದೇ ರಾಜಕೀಯ ನಾಯಕರಿಗಿರುವ ಹಾದಿ. ಈ ನಿಟ್ಟಿನಲ್ಲಿ ಹತ್ತು ಹಲವಾರು ಕಸರತ್ತುಗಳನ್ನು ನಡೆಸುತ್ತಿರುವ ಪಕ್ಷಗಳು ತಮ್ಮ ವಿರೋಧಿ ಬಣದ ತಪ್ಪುಗಳನ್ನು ತೋರಿಸಿಕೊಡುಯ್ತಾ, ಪರಸ್ಪರ ವಾಗ್ದಾಳಿ ನಡೆಸಲಾರಂಭಿಸಿದ್ದಾರೆ. ಇಂತಹುದೇ ರಾಜಕೀಯ ಚಟುವಟಿಕೆಗಳು ದಕ್ಷಿಣ ಕನ್ನಡದಲ್ಲೂ (Dakshina Kannada) ಜಿಲ್ಲೆಯಲ್ಲೂ ನಡೆಯುತ್ತಿವೆ. ಒಟ್ಟು 8 ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ (Moodabidri Assembly Constituency) ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಜಾತಿ ಲೆಕ್ಕಾಚಾರವೇನು? ಪ್ರಬಲ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ


ಬಹುಭಾಷಾ ಸಾಂಸ್ಕೃತಿಕ ಸೀಮೆ


ಸಹ್ಯಾದ್ರಿ ತಪ್ಪಲು ಮತ್ತು ಅರಬ್ಬೀ ಕಡಲ ತೀರದ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ತುಳುನಾಡಿನ ಬಹುಭಾಷಾ ಸಾಂಸ್ಕೃತಿಕ ಸೀಮೆಯಾಗಿದೆ. ಸಾವಿರ ಕಂಬದ ಬಸದಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ಇನ್ನೂ ಹಲವಾರು ಕಾಲೇಜುಗಳನ್ನು ಹೊಂದಿರುವ ಆಧುನಿಕ ಶಿಕ್ಷಣ ಕಾಶಿ ಮೂಡಬಿದಿರೆ. ಮಂಗಳೂರು ತಾಲ್ಲೂಕಿನ ಹೋಬಳಿಗಳಾಗಿದ್ದ ಮೂಡಬಿದಿರೆ ಮತ್ತು ಮೂಲ್ಕಿಯನ್ನು ಇತ್ತೀಚೆಗಷ್ಟೇ ಎರಡು ಪ್ರತ್ಯೇಕ ತಾಲೂಕುಗಳನ್ನಾಗಿ ಘೋಷಿಸಲಾಗಿದೆ. 2008ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಮಾಡಲಾದ ಕ್ಷೇತ್ರಗಳ ಭೌಗೋಳಿಕ ಪುನರ್ ರಚನೆ ಪ್ರಕ್ರಿಯೆಯಲ್ಲಿ ಪರಿಧಿ ಮಾರ್ಪಾಡಾಗಿದ್ದಲ್ಲದೇ, ಈ ಕ್ಷೇತ್ರದ ರಾಜಕೀಯವಾಗಿಯೂ ಬದಲಾವಣೆ ಕಂಡಿದೆ. ಸದ್ಯ ಇಲ್ಲಿ ಕೇಸರಿ ಅಧಿಪತ್ಯವಿದೆ.


ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?


ಜೆಡಿಎಸ್​ಗೆ ಅಭಯಚಂದ್ರ ಜೈನ್ ಠಕ್ಕರ್


ಇಲ್ಲಿ 1983, 85ರಲ್ಲಿ ಜನತಾ ಪಕ್ಷ ಮತ್ತು 94ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದು ಅಮರನಾಥ ಶೆಟ್ಟಿ ಸಚಿವರೂ ಆಗಿದ್ದರು. ಬೆಳ್ತಂಗಡಿ ಬಿಟ್ಟರೆ ದಕ್ಷಿಣ ಕನ್ನಡದಲ್ಲಿ ಜನತಾ ದಳದ ಧ್ವಜ ಹಾರಾಡಿದ ಮತ್ತೊಂದು ಮೂಡಬಿದಿರೆ ಆಗಿದೆ. ಸದ್ಯ ಅಮರನಾಥ ಶೆಟ್ಟಿ ಜಾತ್ಯಾತೀತ ಜನತಾ ದಳದಲ್ಲಿದ್ದಾರೆ. ಆದರೆ ಹಿಂದಿನ ವರ್ಚಸ್ಸು ಇವತ್ತಿಲ್ಲ. ಹೀಗಿರುವಾಗ ಜೆಡಿಎಸ್ ಮತಗಳಿಕೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದೇ ಕಾಲಕ್ಕೆ ಬಿಜೆಪಿ ತನ್ನ ಮತಗಳಿಕೆ ಹೆಚ್ಚಿಸಿಕೊಂಡು ಸಾಗಿದೆ. ಇನ್ನು 1999ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಅಭಯಚಂದ್ರ ಜೈನ್ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. ಮೊದಲ ಯತ್ನದಲ್ಲೇ ಅವರು ಮೂರು ಬಾರಿ ಶಾಸಕರಾಗಿದ್ದ ಅಮರನಾಥ ಶೆಟ್ಟರಿಗೆ ಸೋಲುಣಿಸಿದ್ದರು. ಅಲ್ಲಿಂದ 2018ರವರೆಗೆ ಅಭಯಚಂದ್ರ ಜೈನ್ ನಾಗಾಲೋಟಕ್ಕೆ ತಡೆಯೊಡ್ಡಲು ಯಾರಿಗೂ ಸಾಧ್ಯವಾಗಿರಲಿಲ್ಲ.


ಅಭಯಚಂದ್ರ ಜೈನ್


ಜೈನ್​ಗೆ ಸೋಲುಣಿಸಿ ಕೋಟ್ಯಾನ್, ಮೊದಲ ಬಾರಿ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ


ಆದರೆ 2018ರಲ್ಲಿ ಹಿಂದೇಟು ಹಾಕುತ್ತಲೇ ಕಣಕ್ಕಿಳಿದಿದ್ದ ಅಭಯಚಂದ್ರ ಜೈನ್ ಅವರನ್ನು ಹಾಲಿ ಶಾಸಕ, ಬಿಜೆಪಿಯ ಉಮಾನಾಥ್ ಕೋಟ್ಯಾನ್ 29 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಈ ಮೂಲಕ ತನಗೆ ಎಂದೂ ಒಲಿಯದ ಮೂಡಬಿದಿರೆ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು.


ಉಮಾನಾಥ್ ಕೋಟ್ಯಾನ್


ಈ ಬಾರಿ ಕಮಲ-ಕೈ ಅಭ್ಯರ್ಥಿಗಳಾರು?


ಮೂಡಬಿದಿರೆ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿರುವ ಬಿಜೆಪಿ, ಈ ಕ್ಷೇತ್ರ ತನ್ನಿಂದ ಕಸಿದುಕೊಳ್ಳದಂತೆ ಎಚ್ಚರವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳನ್ನೂ ಆರಂಭಿಸಿದೆ. ಆದರೆ ಕಮಲ ಪಾಳಯಕ್ಕೆ ಟಕ್ಕರ್ ನೀಡಿರುವ ಕಾಂಗ್ರೆಸ್​ ಕೂಡಾ ಈ ತಯಾರಿಯಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಕೇಸರಿ ಕಪಿಮುಷ್ಠಿಯಿಂದ ಕಸಿದುಕೊಳ್ಳಲು ಸಜ್ಜಾಗಿದೆ.


ಹಾಗಾದ್ರೆ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


* ಉಮಾನಾಥ್ ಕೋಟ್ಯಾನ್: ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದ ಹಾಲಿ ಶಾಸಕ ಉಮಾನಾಥ್ ಕೋಟ್ಯಾನ್ ಇಲ್ಲಿನ ಬಿಜೆಪಿಯ ಟಿಕೆಟ್​ ಆಕಾಂಕ್ಷಿ. ಇವರು ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುವುದು ಪ್ಲಸ್​ ಪಾಂಯಿಟ್​. ಹೀಗಿದ್ದರೂ ಇಲ್ಲಿ ಟಿಕೆಟ್​ಗಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಕೋಟ್ಯಾನ್​ಗೆ ಸ್ಪರ್ಧೆಯೊಡ್ಡಲು ಕಮಲ ಪಾಳಯದ ಇನ್ನಿಬ್ಬರು ನಾಯಕರು ಸಜ್ಜಾಗಿದ್ದು, ಮೂಡಬಿದಿರೆ ಬಿಜೆಪಿಯಲ್ಲಿ ಮೂರು ಬಣಗಳಾಗಿವೆ.


* ಸುದರ್ಶನ್ ಮೂಡಬಿದಿರೆ: ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಸುದರ್ಶನ್ ಮೂಡಬಿದಿರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಲ್ಲವ ಜಾತಿಗೆ ಸೇರಿದ ಕೋಟ್ಯಾನ್ ಮತ್ತು ಸುದರ್ಶನ್ ಮಧ್ಯೆ ಈ ಬಾರಿ ಟಿಕೆಟ್ ಕದನ ಜೋರಾಗಿದೆ ಎನ್ನಲಾಗಿದೆ.


* ಜಗದೀಶ್ ಅಧಿಕಾರಿ: ಬಿಜೆಪಿ ನಾಯಕ ಜಗದೀಶ್ ಅಧಿಕಾರಿಯೂ ಈ ಬಾರಿ ಮೂಡಬಿದಿರೆ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. 2008ರಲ್ಲಿ ಸೋತ ಜಗದೀಶ್ ಅಧಿಕಾರಿ ಈ ಬಾರಿ ಮತ್ತೆ ಕಣಕ್ಕಿಳಿಯುವ ಮನಸ್ಸು ಮಾಡಿದ್ದಾರೆ.


ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಗಳು ಯಾರು?


* ಮಿಥುನ್ ರೈ: ಕಳೆದ ಚುನಾವಣೆಯಲ್ಲೇ ಕಣಕ್ಕಿಳಿಯದಿರಲು ನಿರ್ಧರಿಸಿದ್ದ ಅಭಯಚಂದ್ರ ಜೈನ್, ಮೂಡಬಿದಿರೆ ಕ್ಷೇತ್ರದಿಂದ ಮಿಥುನ್​ರೈ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಾದ ರಾಜಕೀಯ ಗೊಂದಲಗಳಿಂದ ಬೇರೆ ವಿಧಿ ಇಲ್ಲದೇ ಕಾಂಗ್ರೆಸ್​ ಮತ್ತೆ ಅಭಯ​ ಅವರನ್ನೇ ಅಭ್ಯರ್ಥಿಯನ್ನಾಗಿಸಿತ್ತು. ಆದರೆ ಈ ಬಾರಿ ಮಿಥುನ್ ರೈ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಹೌದು ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಮಿಥುನ್ ರೈ, ಯೂಥ್ ಕಾಂಗ್ರೆಸ್​ನ ಮುಖಂಡರೂ ಆಗಿದ್ದರು. ಅಲ್ಲದೇ ಮಿಥುನ್​ ರೈ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತರೂ ಹೌದು. ಹೀಗಿರುವಾಗ ಮಿಥುನ್ ಮಾಜಿ ಮಂತ್ರಿ ಅಭಯರನ್ನು ಬೆನ್ನಿಗಿಟ್ಟುಕೊಂಡು ಚುನಾವಣಾ ತಯಾರಿ ಶುರು ಮಾಡಿದ್ದಾರೆ.


ಇದನ್ನೂ ಓದಿKarnataka Assembly Elections: ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!


* ರಾಜಶೇಖರ್ ಕೋಟ್ಯಾನ್: ಬಿಲ್ಲವ ಮಹಾ ಮಂಡಲದ ಅಧ್ಯಕ್ಷರಾಗಿರುವ ರಾಜಶೇಖರ್​ ಕೋಟ್ಯಾನ್ ಕೂಡಾ ಕಾಂಗ್ರೆಸ್​ ಪಕ್ಷದ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


ಮಿಥುನ್ ರೈ


ಹೇಗಿದೆ ಜಾತಿ ಸಮೀಕರಣ?


ಇನ್ನು ಮೂಡಬಿದಿರೆ ಕ್ಷೇತ್ರದ ಒಟ್ಟು ಮತದರಾರರೆಷ್ಟು? ಯಾವ ಜಾತಿಯ ಪ್ರಾಬಲ್ಯ ಹೆಚ್ಚು ಇದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒಟ್ಟು ಮತದಾರರು2,00,045
ಬಿಲ್ಲವ50,000
ಮುಸ್ಲಿಂ30,000
ಬಂಟ್ಸ್25,000
ಜೈನ್18,000
ಎಸ್​ಸಿ/ಎಸ್​ಟಿ12,000
ಕ್ರಿಶ್ಚಿಯನ್8,000
ವಿಶ್ವಕರ್ಮ5,000

2018ರಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ನಾಲ್ಕು ಬಾರಿ ಶಾಸಕರಾಗಿದ್ದ, ಮಾಜಿ ಸಚಿರಾಗಿದ್ದ ಕಾಂಗ್ರೆಸ್​ ಅಭ್ಯರ್ಥಿ ಅಭಯಚಂದ್ರ ಜೈನ್​ರನ್ನು ಸೋಲಿಸಿದ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಗೆಲುವು ಸಾಧಿಸಿದ್ದರು. ಈ ಮೂಲಕ ಮೊದಲ ಬಾರಿ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಹೀಗಿತ್ತು 2018ರ ಫಲಿತಾಂಶ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಉಮಾನಾಥ್ ಕೋಟ್ಯಾನ್87,444
ಕಾಂಗ್ರೆಸ್ಅಭಯಚಂದ್ರ ಜೈನ್57,645

Published by:Precilla Olivia Dias
First published: