Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

Karnataka Assembly Elections 2023: ಚುನಾವಣೆ ವಿಚಾರ ಬಂದಾಗ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬ ಮಾತು ಸಹಜವಾಗೇ ಕೇಳಿ ಬರುತ್ತದೆ. ಆದರೆ ಬಿಜೆಪಿ ಬಾಹುಳ್ಯವುಳ್ಳ ಈ ಕೋಟೆಯೊಳಗಿನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನದ್ದೇ ದರ್ಬಾರ್ ಕಾಣಬಹುದಾಗಿದೆ. ಹೌದು ಇಡೀ ಜಿಲ್ಲೆಯಲ್ಲಿ ಬಿಜೆಪಿ ಆವರಿಸಿದ್ದರೂ ಈ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ ಮಣಿಸಲು ಕಮಲ ಪಾಳಯಕ್ಕೆ ಸಾಧ್ಯವಾಗಿಲ್ಲ. ಇಲ್ಲಿ ಶಾಸಕ ಯು. ಟಿ ಖಾದರ್ ಸತತ ಗೆಲುವು ಸಾಧಿಸಿ ಬಿಜೆಪಿಯ ನಿದ್ದೆಗೆಡಿಸಿದ್ದಾರೆ.

ಯು.ಟಿ.ಖಾದರ್

ಯು.ಟಿ.ಖಾದರ್

  • Share this:
ಮಂಗಳೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ಯ ವಿಧಾನಸಭಾ ಚುನಾವಣೆಯ (Karnataka Assembly Elections 2023) ಭರಾಟೆ. 2023ರಲ್ಲಿ ನಡೆಯಲಿರುವ ಚುನಾವಣೆಗೆ ಸರ್ವ ಪಕ್ಷಗಳೂ ಸಿದ್ಧತೆ ನಡೆಸುತ್ತಿವೆ. ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಪಕ್ಷಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿವೆ. ಹೀಗಿರುವಾಗಲೇ ಪ್ರತಿ ಪಕ್ಷಗಳ ವಿರುದ್ಧ ಕೆಸರೆರಚಾಟವೂ ಮುಂದುವರೆದಿದೆ. ಇನ್ನು ಚುನಾವಣೆ ವಿಚಾರ ಬಂದಾಗ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ (BJP) ಭದ್ರಕೋಟೆ ಎಂಬ ಮಾತು ಸಹಜವಾಗೇ ಕೇಳಿ ಬರುತ್ತದೆ. ಆದರೆ ಬಿಜೆಪಿ ಬಾಹುಳ್ಯವುಳ್ಳ ಈ ಕೋಟೆಯೊಳಗಿನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ (Mangalore Assembly constituency) ಕಾಂಗ್ರೆಸ್​ನದ್ದೇ ದರ್ಬಾರ್ ಕಾಣಬಹುದಾಗಿದೆ.

ಹೌದು ಇಡೀ ಜಿಲ್ಲೆಯಲ್ಲಿ ಬಿಜೆಪಿ ಆವರಿಸಿದ್ದರೂ ಈ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ ಮಣಿಸಲು ಕಮಲ ಪಾಳಯಕ್ಕೆ ಸಾಧ್ಯವಾಗಿಲ್ಲ.  ಹಾಗಾದ್ರೆ ವಿವಿಧ ಪಕ್ಷಗಳಿಂದ ಈ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಮುಂದಿನ  ಅಭ್ಯರ್ಥಿಗಳು ಯಾರು ಎಂಬ ಪ್ರಶ್ನೆ ಸಾಮಾನ್ಯ. ಹಾಗಾದ್ರೆ ಇಲ್ಲಿನ ಒಟ್ಟು ಮತದಾರರೆಷ್ಟು? ಜಾತಿ ಲೆಕ್ಕಾಚಾರವೇನು? ಸಂಭಾವ್ಯ ಅಭ್ಯರ್ಥಿಗಳು ಯಾರು ಎಂಬಿತ್ಯಾದಿ ಇಲ್ಲಿದೆ ವಿವರ,

ಇದನ್ನೂ ಓದಿ: ಹಿಂದೂ, ಮುಸ್ಲಿಂ ಖೈದಿಗಳನ್ನ ಒಂದೇ ಸೆಲ್​ಗೆ ಹಾಕಿ, ಅಲ್ಲೇ ಬಡಿದಾಡಿ ಸಾಯಲಿ: ಯುಟಿ ಖಾದರ್

ಮಂಗಳೂರಿನಲ್ಲಿ ಖಾದರ್ ವರ್ಸಸ್ ಇತರರು

2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಯು.ಟಿ. ಖಾದರ್. ಅಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್​ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯು. ಟಿ. ಖಾದರ್ ಯಾವತ್ತೂ ಒಂದು ಹೆಜ್ಜೆ ಮುಂದಿರುತ್ತಾರೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಈ ಕಾಂಗ್ರೆಸ್​ ನಾಯಕ ಸರ್ಕಾರ ಎಡವಿದಾಗ ಚಾಟಿ ಬೀಸುವಲ್ಲಿ ಯಾವತ್ತೂ ಹಿಂದೆ ಸರಿದಿಲ್ಲ. ಹೀಗಿದ್ದರೂ ತಮ್ಮ ಸರಳ ವ್ಯಕ್ತಿತ್ವದಿಂದಾಗಿ ವಿರೋಧ ಪಕ್ಷದವರಿಂದಲೂ ಹೊಗಳಿಸಿಕೊಳ್ಳುವ ರಾಜಕಾರಣಿ ಖಾದರ್, ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ.

Mukhyamantri Chandru resignation from Congress mrq

ಈ ಬಾರಿಯೂ ಖಾದರ್ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ

ಇನ್ನು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್​ ಹೆಣಗಾಡುತ್ತಿರುವ ಸಂದರ್ಭದಲ್ಲಿ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಖಾದರ್​ಗೆ ಟಿಕೆಟ್​ ನೀಡುವುದು ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಆಯ್ಕೆಯಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಕೇವಲ ಮುಸ್ಲಿಂ ಮತಗಳಿದ್ದರೆ ಗೆಲುವು ಸಾಧಿಸಲು ಆಗುವುದಿಲ್ಲ. ಹಿಂದೂ ಹಾಗೂ ಕ್ರಿಶ್ಚಿಯನ್ನರ ಮತಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಯು. ಟಿ. ಖಾದರ್ ಜಾತಿ, ಧರ್ಮ ಮೀರಿ ಬೆಳೆದ ರಾಜಕಾರಣಿಯಾಗಿದ್ದು, ತಮ್ಮ ಸರಳತೆ ಮೂಲಕವೇ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ಯಾರು?

ಇನ್ನು ಕರಾವಳಿಯಲ್ಲಿ ಅತ್ಯಂತ ಪ್ರಬಲವಾಗಿದ್ದರೂ ಉಳ್ಳಾಲದಲ್ಲಿ ಕಾಂಗ್ರೆಸ್​ ಸೋಲಿಸುವಲ್ಲಿ ಬಿಜೆಪಿ ನಿರಂತರವಾಗಿ ವಿಫಲವಾಗಿದೆ. ಈ ಕ್ಷೇತ್ರದಲ್ಲಿ ಕೇಸರಿ ಪಾಳಯ ಹಿಂದುತ್ವವನ್ನಿಟ್ಟುಕೊಂಡು ಆಟವಾಡಲು ಯತ್ನಿಸಿದರೂ ಫಲ ನೀಡುತ್ತಿಲ್ಲ.  ಹೀಗಿರುವಾಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಈ ನಡುವೆ ಕಮಲ ಪಾಳಯದಿಂದ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸುತ್ತಿರುವ ಆಕಾಂಕ್ಷಿಗಳ ಲಿಸ್ಟ್​ ಬಹಳ ದೊಡ್ಡದಿದೆ. ಹಾಗಾದ್ರೆ ಈ ಕ್ಷೇತ್ರದ ಆಕಾಂಕ್ಷಿಗಳು ಯಾರು ಎಂದು ನೋಡುವುದಾದರೆ,

  • ಸಂತೋಷ್ ಶೆಟ್ಟಿ ಬೋಳಿಯಾರ್: ಮಂಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿರುವ ಸಂತೋಷ್ ಶೆಟ್ಟಿ ಬೋಳಿಯಾರ್ ಕಳೆದ ಬಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.

  • ಚಂದ್ರಹಾಸ ಪಂಡಿತ್ ಹೌಸ್: ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿರುವ ಚಂದ್ರಹಾಸ ಕೂಡಾ ಈ ಬಾರಿ ಮಂಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ,

  • ಶರಣ್ ಪಂಪ್​ವೆಲ್: ವಿಶ್ವ ಹಿಂದೂ ಪರಿಷತ್​ ಮುಖಂಡರಾಗಿರುವ ಶರಣ್ ಅದಕ್ಕೂ ಮುನ್ನ ಬಜರಂಗ ದಳದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಕೂಡಾ ಬಿಜೆಪಿಯ ಮಂಗಳೂರು ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

  • ಸತೀಶ್ ಕುಂಪಲ: ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಇವರು ಪ್ರಸ್ತುತ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದಾರೆ.


bjp won mysore mayor election mrq

ಇನ್ನು ಈ ಕ್ಷೇತ್ರದಲ್ಲಿ ಕಳೆದ ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್​ ಗೆಲ್ಲುತ್ತಿದೆಯಾದರೂ 1994ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತೆಂಬುವುದು ಉಲ್ಲೇಖನೀಯ. ಅಂದು ಜಯರಾಂ ಶೆಟ್ಟಿ ಬಿಜೆಪಿಯಿಂದ ಮಂಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಇಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನಲು ಸಾಧ್ಯವಿಲ್ಲವಾದರೂ, ಗೆಲ್ಲುತ್ತಿಲ್ಲ ಎನ್ನುವುದು ವಾಸ್ತವ.

ಜೆಡಿಎಸ್​ ಶಕ್ತಿಹೀನ

ಇನ್ನುಳಿದಂತೆ ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್​ಗೆ ಶಕ್ತಿಯೇ ಇಲ್ಲ. ಹೀಗಿದ್ದರೂ ಎಸ್​ಡಿಪಿಐ ಕೆಲವೆಡೆ ಬಹಳ ಶಕ್ತಿಯುತವಾಗಿದ್ದು, ಇದು ಇತರ ಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್​ಗೆ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

ಮಂಗಳೂರು ವಿಧಾನಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ

ಒಟ್ಟು 1,95,735 ಮಂದಿ ಮತದಾರರಿರುವ ಮಂಗಳೂರು ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಎಂಬ ಕುತೂಹಲ ಸಹಜವಾದದ್ದೇ. ಇಲ್ಲಿನ ಜಾತಿ ಅಂಕಿ ಅಂಶಗಳನ್ನು ನೋಡುವುದಾದರೆಜಾತಿಮತದಾರರ ಸಂಖ್ಯೆ
ಮುಸ್ಲಿಂ80,000
ಬಿಲ್ಲವ35,000
ಬಂಟರು25,000
ಕ್ರಿಶ್ಚಿಯನ್12,000
ಮೊಗವೀರರು10,000

ಇದನ್ನೂ ಓದಿ: ಶಬರಿಮಲೆ ಸಂಪ್ರದಾಯ ಉಳಿಯಬೇಕು ಎಂದ ಯುಟಿ ಖಾದರ್

2018ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರೂ, ಅತೀ ಹೆಚ್ಚು ಮತ ಗಳಿಸಿದವರಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳೇ ಮುಂಚೂಣಿಯಲ್ಲಿದ್ದಾರೆ, ಕಾಂಗ್ರೆಸ್​ನ ಯು. ಟಿ. ಖಾದರ್​ ಬರೋಬ್ಬರಿ 80,813 ಮತಗಳನ್ನು ಗಳಿಸುವ  ಮೂಲಕ ಸತತ ನಾಲ್ಕನೇ ಬಾರಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳುಶೇಕಡಾ
ಕಾಂಗ್ರೆಸ್ಯು. ಟಿ. ಖಾದರ್80,81354.11
ಬಿಜೆಪಿಸಂತೋಷ್ ಶೆಟ್ಟಿ ಬೋಳಿಯಾರ್61,07440.89
ಜೆಡಿಎಸ್​ಕೆ. ಅಶ್ರಫ್36922.47
ಸಿಪಿಐಎಂನಿತಿನ್ ಕುತ್ತಾರ್2372
ಎಐಎಂಇಪಿಉಸ್ಮಾನ್5860.39
ನೋಟಾ-8210.55

ಒಟ್ಟಾರೆಯಾಗಿ ಸದ್ಯ ಇಲ್ಲಿ ಶಾಸಕ ಯು. ಟಿ ಖಾದರ್ (UT Khader) ಸತತ ಗೆಲುವು ಸಾಧಿಸಿ ಬಿಜೆಪಿಯ ನಿದ್ದೆಗೆಡಿಸಿದ್ದಾರೆ. ಖಾದರ್ ವಿರುದ್ಧ ಕಣಕ್ಕಿಳಿಸಿ ಗೆಲುವು ಪಡೆಯುವಂತಹ ಸೂಕ್ತ ಹಾಗೂ ಪ್ರಭಾವೀ ನಾಯಕನ ಕೊರತೆ ವಿಪಕ್ಷಗಳಲ್ಲಿ ಎದ್ದುಕಾಣುತ್ತಿದೆ. ಈ ಸವಾಲು ಸವಾಲನ್ನು ಹೇಗೆ ಎದುರಿಸುತ್ತೆ ಪ್ರತಿಪಕ್ಷಗಳು ಕಾದು ನೋಡಬೇಕಷ್ಟೇ.
Published by:Precilla Olivia Dias
First published: