Karnataka Assembly Elections: ಮಂಗಳೂರು ದಕ್ಷಿಣದಲ್ಲಿ ಬಿಜೆಪಿಗಿಲ್ಲ ಟೆನ್ಶನ್: ಕಾಂಗ್ರೆಸ್​ಗೆ ಬಿಸಿ ತುಪ್ಪವಾದ ಅಭ್ಯರ್ಥಿ ಆಯ್ಕೆ!

Karnataka Assembly Elections 2023: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ ಕ್ಷೇತ್ರವಾರು ರಾಜಕೀಯ ಚಟುವಟಿಕೆಗಳು ಹೇಗಿವೆ? ಟಿಕೆಟ್​ ಆಕಾಂಕ್ಷಿಗಳು ಯಾರು? ಅಂಕಿ ಅಂಶಗಳು ಹೇಗಿವೆ ಎಂಬಿತ್ಯಾದಿ ಸವಾಲುಗಳೂ ಉದ್ಭವಿಸುತ್ತವೆ. ಈ ಸಾಲಿನಲ್ಲಿ ದಕ್ಷಿಣ ಕನ್ನಡದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ (Mangalore City South Assembly Constituency)ಸಂಬಂಧಿಸಿದ ಕೆಲ ಮಾಹಿತಿ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ಯ ವಿಧಾನಸಭಾ ಚುನಾವಣೆಗಳ ತಯಾರಿ ಆರಂಭವಾಗಿದೆ. ಈವರೆಗೂ ವಿಭಿನ್ನ ವಿಚಾರಗಳಲ್ಲಿ ಬ್ಯುಸಿಯಾಗಿದ್ದ ಪಕ್ಷಗಳು, ನಾಯಕರು ಸದ್ಯ ತಮ್ಮ ಗಮನವನ್ನು 2023ರಲ್ಲಿ (Karnataka Assembly Elections 2023) ನಡೆಯಲಿರುವ ಚುನಾವಣೆಗಳ ಮೇಲೆ ಶಿಫ್ಟ್​ ಮಾಡಿವೆ. ಅತ್ತ ಆಡಳಿತ ಪಕ್ಷ ಅಭಿವೃದ್ಧಿ ವಿಚಾರಗಳತ್ತ ಗಮನ ನೀಡಲಾರಂಭಿಸಿದರೆ, ವಿಪಕ್ಷಗಳು ಸರ್ಕಾರದ ವೈಫಲ್ಯ ಜನರ ಎದುರಿಗಿಟ್ಟು ಮತದಾರನ ಓಲೈಕೆಗೆ ಮುಂದಾಗಿವೆ. ಹೀಗಿರುವಾಗ ಕ್ಷೇತ್ರವಾರು ರಾಜಕೀಯ ಚಟುವಟಿಕೆಗಳು ಹೇಗಿವೆ? ಟಿಕೆಟ್​ ಆಕಾಂಕ್ಷಿಗಳು ಯಾರು? ಅಂಕಿ ಅಂಶಗಳು ಹೇಗಿವೆ ಎಂಬಿತ್ಯಾದಿ ಸವಾಲುಗಳೂ ಉದ್ಭವಿಸುತ್ತವೆ. ಈ ಸಾಲಿನಲ್ಲಿ ದಕ್ಷಿಣ ಕನ್ನಡದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ (Mangalore City South Assembly Constituency)ಸಂಬಂಧಿಸಿದ ಕೆಲ ಮಾಹಿತಿ ಇಲ್ಲಿದೆ ನೋಡಿ.

ಬಿಜೆಪಿ ಇದು ತನ್ನ ಭದ್ರಕೋಟೆ ಎಂದು ನಿಟ್ಟುಸಿರು ಬಿಡುವಂತಿಲ್ಲ

ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಅದು ಹಿಂದುತ್ವದ ಗಟ್ಟಿ ನೆಲ, ಬಿಜೆಪಿ ಪ್ರಯೋಗ ಶಾಲೆ ಎಂದೂ ಕರೆಯಲಾಗುತ್ತದೆ. ಹೀಗಂತ ಕಮಲ ಪಾಳಯ ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ಅನೇಕ ಬಾರಿ ಬಿಜೆಪಿ ತಪ್ಪು ಮಾಡಿದಾಗ ಜನರು ಪಾಠ ಕಲಿಸಿದ್ದಿದೆ. ಇದಕ್ಕೆ ತಕ್ಕ ಉದಾಹರಣೆ 2013ರ ಚುನಾವಣೆ. ಅಂದು ಬಿಜೆಪಿ ತನ್ನ ಭದ್ರಕೋಟೆಯಾಗಿದ್ದ ಮಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಮುಗ್ಗರಿಸಿತ್ತು.

ಹೌದು 1994ರಿಂದ ಭದ್ರಕೋಟೆಯಾಗಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಕೈವಶ ಮಾಡಿಕೊಂಡಿತ್ತು. ಇದಾದ ಬಳಿಕ 2018ರ ಚುನಾವಣೆಯಲ್ಲಿ ವೇದವ್ಯಾಸ್​ ಕಾಮತ್ ಗೆಲುವಿನ ಮೂಲಕ ಕಮಲ ಪಾಳಯ ಮತ್ತೆ ಗೆದ್ದಿದೆಯಾದರೂ, ಈ ಬಾರಿಯ ಚುನಾವಣೆ ಅಷ್ಟು ಸುಲಭವಿಲ್ಲ. ಕಾಂಗ್ರೆಸ್​ ಹಾಗೂ ಬಿಜೆಪಿ ಮಧ್ಯೆ ಈ ಬಾರಿ ಟಫ್​ ಫೈಟ್​ ಇರೋದಂತೂ ಪಕ್ಕಾ.

ಇದನ್ನೂ ಓದಿ: Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಶಾಕ್ ಕೊಟ್ಟಿದ್ದ ಕಾಂಗ್ರೆಸ್​

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1994ರಿಂದ ಸತತ ನಾಲ್ಕು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಹಿರಿಯ ನಾಯಕ ಎನ್.ಯೋಗೀಶ್ ಭಟ್​ಗೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಆಘಾತ ನೀಡಿತ್ತು. ಕಾಂಗ್ರೆಸ್​ ಅಭ್ಯರ್ಥಿ ಜಾನ್ ರಿಚರ್ಡ್ ಲೋಬೋ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದು ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡಿತ್ತು. ಆದರೆ ಈ ಸೋಲಿನಿಂದ ಪಾಠ ಎಚ್ಚೆತ್ತ ಕಮಲಪಾಳಯ 2018ರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ಅದೃಷ್ಟ ಪರೀಕ್ಷೆಗಿಳಿದಿತ್ತು. ನೂತನ ಅಭ್ಯರ್ಥಿ ವೇದವ್ಯಾಸ್​ ಕಾಮತ್​ರನ್ನು ಕಣಕ್ಕಿಳಿಸಿದ್ದ ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮರಳಿ ಪಡೆದಿತ್ತು.

Vedavyas Kamat
ವೇದವ್ಯಾಸ್​ ಕಾಮತ್


ಈ ಬಾರಿಯೂ ಕಾಮತ್​ ಬಿಜೆಪಿ ಅಭ್ಯರ್ಥಿ?

ಬಿಜೆಪಿ ಈ ಬಾರಿ ತನ್ನ ಅಭ್ಯರ್ಥಿ ಬದಲಾಯಿಸುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಇಲ್ಲ. ಈ ಬಾರಿಯೂ ಮಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ವೇದವ್ಯಾಸ್​ ಕಾಮತ್ ಬಿಜೆಪಿ ಟಿಕೆಟ್​ ಪಡೆಯುವುದು ಬಹುತೇಕ ಖಚಿತ. ಅಲ್ಲದೇ ಬಿಜೆಪಿಯಿಂದಲೂ ಜಿಎಸ್​ಬಿ ಬ್ರಾಹ್ಮಣರು ಅಂದರೆ ಗೌಡ ಸಾರಸತ್ವ ಬ್ರಾಹ್ಮಣರಿಗೆ ಒಂದು ಕ್ಷೇತ್ರ ಮೀಸಲಿಡಲಾಗುತ್ತದೆ. ಇದು ಬಹುತೇಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿರುತ್ತದೆ. ವೇದವ್ಯಾಸ್ ಕಾಮತ್ ಕೂಡಾ ಅದೇ ಸಮುದಾಯದವರು. ಅಲ್ಲದೇ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾರೆ ಹೀಗಿರುವಾಗ ಬಿಜೆಪಿಗೆ ವೇದವ್ಯಾಸ್​ ಕಾಮತ್​ಗಿಂತ ಯತ್ತಮ ಆಯ್ಕೆ ಬೇರೊಂದಿಲ್ಲ.

ಇಬ್ಬರ ನಡುವೆ ಯಾರನ್ನು ಆಯ್ಕೆ ಮಾಡುತ್ತೆ ಕಾಂಗ್ರೆಸ್​?

ಇನ್ನು ದಕ್ಷಿಣ ಕನ್ನಡದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್​ನಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಇಬ್ಬರು ಆಕಾಂಕ್ಷಿಗಳಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಒಂದೇ ಸಮುದಾಯದವರು ಎಂಬುವುದು ಮತ್ತೊಂದು ವಿಶೇಷ. ಇನ್ನು ಕಾಂಗ್ರೆಸ್​ನಲ್ಲಿ ಎರಡು ಟಿಕೆಟ್​ಗಳನ್ನು ಕ್ರಿಶ್ಚಿಯನ್ ಸಮುದಾಯದ ನಾಯಕರಿಗೆಂದೇ ಮೀಸಲಿಡುತ್ತಾರೆ. ಅದರಲ್ಲಿ ಮಂಗಳೂರು ದಕ್ಷಿಣ ಕೂಡಾ ಒಂದು. ಈ ಕಾರಣಕ್ಕಾಗಿಯೇ ಕ್ರಿಶ್ಚಿಯನ್ ಸಮುದಾಯದವರಿಗೆ ಇಲ್ಲಿ ಟಿಕೆಟ್ ಸಿಗುತ್ತೆ. ಆದರೆ ಈ ಬಾರು ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್​ಗೆ ಕಗ್ಗಂಟಾಗಿದೆ. ಇವರೇ ನೋಡಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು

Ivan Dsouza
ಐವನ್ ಡಿಸೋಜಾ


  • ಐವನ್ ಡಿಸೋಜಾ: ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಅಕಾಂಕ್ಷಿಯಾಗಿದ್ದಾರೆ. ಈ ಹಿಂದೆ 2008ರಲ್ಲಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು ಎಂಬುವುದು ಉಲ್ಲೇಖನೀಯ..

  • ಜೆ. ಆರ್​ ಲೋಬೋ: 2013ರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಹಿರಿಯ ನಾಯಕ ಜಾನ್ ರಿಚರ್ಡ್ ಲೋಬೋ ಕೂಡಾ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ತಮ್ಮ ಮೌನ ಕಾರ್ಯಶೈಲಿಯಿಂದಲೇ ಗುರುತಿಸಿಕೊಂಡಿರುವ ಲೋಬೋ ಕಾಂಗ್ರೆಸ್​ ಟಿಕೆಟ್​ ಗಿಟ್ಟಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.


JR Lobo
ಜೆ. ಆರ್​. ಲೋಬೋ


ಇದನ್ನೂ ಓದಿ: Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ಜೆಡಿಎಸ್​ ಶಕ್ತಿಹೀನ, ಎಸ್​ಡಿಪಿಐ ಗೇಮ್​ ಚೇಂಜರ್​

ಇನ್ನುಳಿದಂತೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ಗೆ ಶಕ್ತಿಯೇ ಇಲ್ಲ. ಇನ್ನು ಎಸ್​ಡಿಪಿಐಗೆ ಇಲ್ಲಿ ಗೆಲ್ಲುವಂತಹ ಸಾಮರ್ಥ್ಯ ಇಲ್ಲ. ಆದರೆ ಸೋಲಿಸುವ ಹಾಗೂ ಫಲಿತಾಂಶ ಬದಲಾಯಿಸುವ ತಾಕತ್ತು ಹೊಂದಿದೆ ಎಂಬುವುದು ಉಲ್ಲೇಖನೀಯ. ಹೀಗಾಗಿ ಎಸ್​ಡಿಪಿಐ ಸ್ಪರ್ಧೆ ಇತರ ಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್​ಗೆ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ

ಒಟ್ಟು 2,40,057 ಮಂದಿ ಮತದಾರರಿರುವ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಎಂಬ ಕುತೂಹಲ ಸಹಜವಾದದ್ದೇ. ಇಲ್ಲಿನ ಜಾತಿ ಅಂಕಿ ಅಂಶಗಳನ್ನು ನೋಡುವುದಾದರೆ



































ಜಾತಿಮತದಾರರ ಸಂಖ್ಯೆ
ಜಿಎಸ್​ಬಿ40,000
ಕ್ರಿಶ್ಚಿಯನ್35,000
ಬಂಟ್ಸ್25,000
ಬಿಲ್ಲವ23,000
ಎಸ್​ಸಿ/ಎಸ್​ಟಿ12.000
ಮೊಗವೀರ10,000
ಮುಸ್ಲಿಂ22,000

2018ರಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಮೂವರು ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇಲ್ಲಿ ಕಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯ ವೇದವ್ಯಾಸ್​ ಕಾಮತ್ 86,545 ಮತಗಳನ್ನು ಗಳಿಸುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.



























ಪಕ್ಷಅಭ್ಯರ್ಥಿ ಹೆಸರುಮತಗಳುಶೇಕಡಾ
ಬಿಜೆಪಿವೇದವ್ಯಾಸ್​ ಕಾಮತ್8654552.96
ಕಾಂಗ್ರೆಸ್ಜಾನ್ ರಿಚರ್ಡ್​ ಲೋಬೊ7047043.13
ಸಿಪಿಐಎಂಸುನಿಲ್ ಕುಮಾರ್ ಬಜಾಲ್23291.42
Published by:Precilla Olivia Dias
First published: