Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?

Karnataka Assembly Elections 2023:ದಕ್ಷಿಣ ಕನ್ನಡದಲ್ಲೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಾರ್ಯಗಳನ್ನು ಜಾರಿಗೊಳಿಸಲಾಗಿದೆ. ಒಂದೆಡೆ ಕಮಲ ಪಾಳಯ ಇಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಲು ಕಸರತ್ತು ನಡೆಸುತ್ತಿದ್ದರೆ, ಕಾಂಗ್ರೆಸ್​ ತನ್ನ ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಇನ್ನು ಈ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದಲ್ಲಿ (Mangalore City North Assembly Constituency) ರಾಜಕೀಯ ಸ್ಥಿತಿಗತಿ ಹೇಗಿದೆ? ವಿವಿಧ ಪಕ್ಷಗಳ ಟಿಕೆಟ್​ ಆಕಾಂಕ್ಷಿಗಳು ಯಾರ್ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ.

Mohiuddin Bava

Mohiuddin Bava

  • Share this:
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲಲು ಈಗಾಗಲೇ ಪಕ್ಷಗಳು ಸಿದ್ಧತೆ ನಡೆಸಿವೆ. ರಣತಂತ್ರ ಹೆಣೆದಿರುವ ರಾಜಕೀಯ ನಾಯಕರು ಮತದಾರನನ್ನು ಒಲಿಸಲು ಎಲ್ಲಾ ಯತ್ನಗಳನ್ನು ನಡೆಸುತ್ತಿದ್ದಾರೆ. ಇನ್ನು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾದ ದಕ್ಷಿಣ ಕನ್ನಡದಲ್ಲೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಾರ್ಯಗಳನ್ನು ಜಾರಿಗೊಳಿಸಲಾಗಿದೆ. ಒಂದೆಡೆ ಕಮಲ ಪಾಳಯ ಇಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಲು ಕಸರತ್ತು ನಡೆಸುತ್ತಿದ್ದರೆ, ಕಾಂಗ್ರೆಸ್​ ತನ್ನ ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಇನ್ನು ಈ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದಲ್ಲಿ (Mangalore City North Assembly Constituency) ರಾಜಕೀಯ ಸ್ಥಿತಿಗತಿ ಹೇಗಿದೆ? ವಿವಿಧ ಪಕ್ಷಗಳ ಟಿಕೆಟ್​ ಆಕಾಂಕ್ಷಿಗಳು ಯಾರ್ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ.

ಕರಾವಳಿಯ ನಿರ್ಣಾಯಕ ಸ್ಥಳ ಸುರತ್ಕಲ್

ದಕ್ಷಿಣ ಕನ್ನಡದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಮಂಗಳೂರು ಉತ್ತರ ಭಾರತೀಯ ಜನತಾ ಪಕ್ಷದ ಗಟ್ಟಿನೆಲೆ ಎಂದೇ ಹೇಳಬಹುದು. ಪಾವಂಜೆ ನದಿಗಳ ನಡುವೆ ಇರುವ ಸುರತ್ಕಲ್ ಕರಾವಳಿಯ ನಿರ್ಣಾಯಕ ಸ್ಥಳವೆಂದೇ ಪರಿಗಣಿತವಾಗಿದೆ. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮಿತಿಯ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸುರತ್ಕಲ್ ಕ್ಷೇತ್ರಕ್ಕೆ ಮೂಡಬಿದಿರೆಯ ಕೆಲವು ಗ್ರಾಮಗಳನ್ನು ಸೇರಿಸಿ ಮಂಗಳೂರು ನಗರ ಉತ್ತರ ಕ್ಷೇತ್ರ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ಕೋಮುಸೂಕ್ಷ್ಮ ಪ್ರದೇಶ

ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಪಡೆ ಪ್ರಬಲವಾಗಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೋಮುಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಫೈಲ್‌ನಲ್ಲಿ ದಾಖಲಾಗಿದೆ. ಮತೀಯ ಧ್ರುವೀಕರಣ ವಿಪರೀತವಾಗಿರುವ ಸುರತ್ಕಲ್ ಹಾಗೂ ಸುತ್ತಲಿನಲ್ಲಿ ನೈತಿಕ ಪೊಲೀಸ್​ಗಿರಿ ಮತ್ತು ಗೋರಕ್ಷಕ ದಳಗಳ ಒಂದಿಲ್ಲೊಂದು ಹಲ್ಲೆ-ಸುಲಿಗೆ ಪ್ರಕರಣಗಳು ಮೇಲಿಂದ ಮೇಲೆ ಸುದ್ದಿಯಾತ್ತಿರುತ್ತವೆ. ಅದರಲ್ಲೂ ಇಂತಹ ಪ್ರಕರಣಗಳು ಚುನಾವಣೆಯ ಸಮಯದಲ್ಲಿ ಮತ್ತಷ್ಟು ತಾರಕಕ್ಕೇರುತ್ತವೆ. ಸದ್ಯ ಇಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ ಶಾಸಕರಾಗಿದ್ದಾರೆ.

2023ರ ಚುನಾವಣೆಯಲ್ಲಿ ಬಿಜೆಪಿ ಆಕಾಂಕ್ಷಿ ಯಾರು?

ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯೂ ಭರತ್ ಶೆಟ್ಟಿಯೇ ಕಮಲ ಪಾಳಯದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹಾಗಾದ್ರೆ ಬಿಜೆಪಿ ಇಷ್ಒಟಮದು ನಂಬಿಕೆ ಇಟ್ಟಿರುವ ಭರತ್ ಶೆಟ್ಟಿ ಯಾರು? ಹಿನ್ನೆಲೆ ಏನು ಎಂದು ನೋಡುವುದಾದರೆ, ಡಾ. ಭರತ್ ಶೆಟ್ಟಿ ಯುವ ಜನತಾ ದಳದ ಕಾರ್ಯದರ್ಶಿ ಆಗಿದ್ದರು. ಆದರೆ ಜನತಾ ದಳದಲ್ಲಿ ಭವಿಷ್ಯವಿಲ್ಲವೆಂಬುದು ಖಾತ್ರಿಯಾದಾಗ ಸಂಸದ ನಳಿನ್ ಕುಮಾರ್ ಮೂಲಕ ಬಿಜೆಪಿ ಸೇರಿದ್ದರೆಂಬುದು ಜಿಲ್ಲೆಯ ರಾಜಕಾರಣದಲ್ಲಿ ಜನಜನಿತ ಸಂಗತಿ. ಮಂಗಳೂರಿನ ಎ. ಜೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಭರತ್ ಶೆಟ್ಟಿ 2018ರಲ್ಲಿ ಮೊದಲ ಬಾರಿ ಮಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿದು, ಜಯ ಗಳಿಸಿ ವಿಧಾನಸಭೆಗೆ ತೆರಳಿದ್ದರು. ಇದಕ್ಕೂ ಮುನ್ನ ಇಲ್ಲಿ ಎರಡು ಅವಧಿಗೆ(2004-2012) ಬಿಜೆಪಿಯ ಕೃಷ್ಣ ಪಾಲೇಮಾರ್ ಶಾಸಕರಾಗಿದ್ದರು ಹೀಗಾಗಿ ಬಿಜೆಪಿ ಬೇರು ಇಲ್ಲಿ ಗಟ್ಟಿಯಾಗಿದೆ.

ಕಾಂಗ್ರೆಸ್​ ಆಕಾಂಕ್ಷಿಗಳು ಯಾರು? 

  • ಮೊಯ್ದೀನ್ ಬಾವಾ: ಕಾಂಗ್ರೆಸ್​ನಿಂದ ಮಾಜಿ ಶಾಸಕ ಮೊಯ್ದೀನ್ ಬಾವಾ ಕಣಕ್ಕಿಳಿಯುವ ಸಾಧ್ಯತೆ ಇದೆ. 2013ರ ಚುನಾವಣೆಯಲ್ಲಿ ಗೆದ್ದಿದ್ದ ಬಾವಾ ಈ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ತಮ್ಮ ಸಿದ್ಧಾಂತದಿಂದಾಗಿ ಅವರು 2018ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

  • ಇನಾಯತ್ ಅಲಿ: ಇನ್ನು ಈ ಕ್ಷೇತ್ರದಲ್ಲಿ ಮೊಯ್ದೀನ್ ಬಾವಾಗೆ ಹೊಸ ಸ್ಪರ್ಧಿ ಹುಟ್ಟಿಕೊಂಡಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇನಾಯತ್ ಅಲಿ ಕೂಡಾ ಈ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


ಇದನ್ನೂ ಓದಿ: Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ಜಾತಿ ಲೆಕ್ಕಾಚಾರ

ಮಂಗಳೂರು ದಕ್ಷಿಣ-ಬಂಟ್ವಾಳ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳೊಂದಿಗೆ ಗಡಿ ಹಂಚಿಕೊಂಡಿರುವ ಮಂಗಳೂರು ಉತ್ತರ ಕ್ಷೇತ್ರದ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ.ಒಟ್ಟು ಮತದಾರರು2,34,826
ಬಿಲ್ಲವ45,000
ಮುಸ್ಲಿಂ35,000
ಬಂಟ್ಸ್25,000
ಮೊಗವೀರರು15,000
ಎಸ್​ಸಿ/ಎಸ್​ಟಿ10,000
ಕುಲಾಲ್4,000
ಬ್ರಾಹ್ಮಣ3,0002018ರಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಮೂವರು ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇಲ್ಲಿ ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಿಜೆಪಿ ಕೋಟೆಯಾದ ಈ ಕ್ಷೇತ್ರದಲ್ಲಿ ಡಾ.ಭರತ್ ಶೆಟ್ಟಿ 98,648 ಮತಗಳನ್ನು ಗಳಿಸುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.ಪಕ್ಷಅಭ್ಯರ್ಥಿ ಹೆಸರುಮತಗಳುಶೇಕಡಾ
ಬಿಜೆಪಿಡಾ. ಭರತ್ ಶೆಟ್ಟಿ. ವೈ98,64856.02
ಕಾಂಗ್ರೆಸ್ಮೊಯ್ದೀನ್ ಬಾವಾ72,00040.88
ಸಿಪಿಐಎಂಮುನೀರ್ ಕಾಟಿಪಳ್ಳ24721.40
Published by:Precilla Olivia Dias
First published: