• Home
  • »
  • News
  • »
  • state
  • »
  • Karnataka Assembly Elections: ಹಳೆ ಸಂಪ್ರದಾಯದ ಬೇರು, ಹೊಸ ಅಭಿವೃದ್ಧಿಯ ಚಿಗುರು; ಮಲ್ಲೇಶ್ವರಂನಲ್ಲಿ ಈ ಬಾರಿ ಗೆಲ್ಲೋರ್ಯಾರು?

Karnataka Assembly Elections: ಹಳೆ ಸಂಪ್ರದಾಯದ ಬೇರು, ಹೊಸ ಅಭಿವೃದ್ಧಿಯ ಚಿಗುರು; ಮಲ್ಲೇಶ್ವರಂನಲ್ಲಿ ಈ ಬಾರಿ ಗೆಲ್ಲೋರ್ಯಾರು?

ಸಚಿವ ಅಶ್ವತ್ಥ್ ನಾರಾಯಣ್

ಸಚಿವ ಅಶ್ವತ್ಥ್ ನಾರಾಯಣ್

19657ರಿಂದ 2018ರವರೆಗೆ ಅನೇಕ ಪಕ್ಷದ ನಾಯಕರು ಇಲ್ಲಿ ಸೋಲು-ಗೆಲುವು ಕಂಡಿದ್ದಾರೆ. ಜೀವರಾಜ ಆಳ್ವಾ, ಖ್ಯಾತ ನಟ ಅನಂತ್ ನಾಗ್, ಮಾಜಿ ಸಚಿವ ಎಂಆರ್‌ ಸೀತಾರಾಂ ಹಿಂದೆ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಗೆದ್ದ ಈ ಮೂವರೂ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು ಎನ್ನುವುದು ವಿಶೇಷ. ಪ್ರಸ್ತುತ ಶಾಸಕ ಅಶ್ವತ್ಥ್ ನಾರಾಯಣ್ ಕೂಡ ಹಾಲಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರಿನ (Bengaluru) ಅತ್ಯಂತ ಹಳೆಯ ಬಡಾವಣೆಗಳಲ್ಲಿ (Old Layout) ಒಂದಾದ ಮಲ್ಲೇಶ್ವರ ಅಥವಾ ಮಲ್ಲೇಶ್ವರಂ (Malleshwaram) ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವೂ ಒಂದು. ಸದ್ಯ ಉನ್ನತ ಶಿಕ್ಷಣ ಸಚಿವರಾಗಿರುವ (Higher Education Minister), ಹಿಂದೆ ಡಿಸಿಎಂ (DCM) ಕೂಡ ಆಗಿದ್ದ ಡಾ. ಸಿಎನ್‌ ಅಶ್ವತ್ಥ್ ನಾರಾಯಣ್ (CN Ashwath Narayan) ಅವರು ಪ್ರತಿನಿಧಿಸುವ ಕ್ಷೇತ್ರ. ಇಲ್ಲಿನ ಕಾಡು ಮಲ್ಲೇಶ್ವರ ದೇಗುಲದಿಂದ (Kadu Malleshwara Temple) ತನ್ನ ಹೆಸರು ಪಡೆದ ಮಲ್ಲೇಶ್ವರ, ಒಂದು ಕಾಲದಲ್ಲಿ ಬೆಂಗಳೂರಿನ ಉಪನಗರ (suburb of Bangalore) ಎಂಬ ಹೆಸರು ಪಡೆದಿತ್ತು. ಆದರೆ 1898ರಲ್ಲಿ ಕಾಣಿಸಿಕೊಂಡ ಭೀಕರ ಪ್ಲೇಗ್ (plague) ಮಾರಿಯಿಂದ ತನ್ನ ವೈಭವ ಕಳೆದುಕೊಂಡಿತು. ಅತ್ಯಂತ ಸಾಂಪ್ರದಾಯಿಕ ಬೆಂಗಳೂರನ್ನು (traditional Bangalore) ನೆನಪಿಸುವ ಮಲ್ಲೇಶ್ವರಂ ಪ್ರತಿಷ್ಠಿತ ವಾಣಿಜ್ಯ ಕೇಂದ್ರ, ಇಲ್ಲಿನ ಪುರಾತನ ದೇಗುಲದ ಜೊತೆಗೆ ತನ್ನ ವಿಶಿಷ್ಟ ಹೆಸರಿನ ರಸ್ತೆಗಳಿಂದಲೂ ಪ್ರಸಿದ್ಧ. ಮೆಜೆಸ್ಟಿಕ್ ಬಸ್ ನಿಲ್ದಾಣ (Majestic Bus Stand), ಮುಖ್ಯ ರೈಲು ನಿಲ್ದಾಣದಿಂದ ಹತ್ತಿರದಲ್ಲಿರುವ ಮಲ್ಲೇಶ್ವರದಲ್ಲಿ ಇದೀಗ ಮೆಟ್ರೋ ರೈಲು (Metro Railway) ನಿಲ್ದಾಣದೊಂದಿಗೆ ಉತ್ತಮ ಸಾರಿಗೆ ಸಂಪರ್ಕವಿದೆ. ಅತ್ಯಂತ ಸುಶಿಕ್ಷಿತರಿರುವ ಕ್ಷೇತ್ರ ಎಂಬ ಹಣೆಪಟ್ಟಿಯೂ ಮಲ್ಲೇಶ್ವರಕ್ಕಿದೆ. ಮಲ್ಲೇಶ್ವರ (Malleshwara) ಅಂತ ಮೂಲ ಹೆಸರು ಪಡೆದಿದ್ದ ಕ್ಷೇತ್ರ, ಪರಭಾಷಿಕರ ಪ್ರಾಬಲ್ಯದಿಂದ ಮಲ್ಲೇಶ್ವರಂ ಆಗಿದೆ ಎಂಬ ಅಪಖ್ಯಾತಿಯೂ ಇದೆ.


ಮಲ್ಲೇಶ್ವರಂ ಕ್ಷೇತ್ರದ ಇತಿಹಾಸ


ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮೈಸೂರು ಸಂಸ್ಥಾನದಲ್ಲಿ ಹಂಗಾಮಿ ದಿವಾನರಾಗಿದ್ದ ಎಚ್.‌ವಿ. ನಂಜುಂಡಯ್ಯ ಅವರಿಗೆ ಮಲ್ಲೇಶ್ವರ ಸ್ಥಾಪನೆಯ ಕೀರ್ತಿ ಸಲ್ಲುತ್ತದೆ. ಅವರ ಗೌರವಾರ್ಥ ಇಲ್ಲಿನ 6ನೇ ಮುಖ್ಯರಸ್ತೆಗೆ ಅವರ ಹೆಸರಿಡಲಾಗಿದೆ. ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಮಲ್ಲೇಶ್ವರಂ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಮತ್ತು ಗಣ್ಯ ವಸತಿ ಪ್ರದೇಶಗಳನ್ನು ಹೊಂದಿದೆ. ಪಶ್ಚಿಮದಲ್ಲಿ ಗಣ್ಯ ವಸತಿ ಪ್ರದೇಶ, ಸಂಪಿಗೆ ರಸ್ತೆ, ಮಲ್ಲಿಗೆ ರಸ್ತೆ ಹಾಗೂ ಮಾರ್ಗೋಸ ರಸ್ತೆ ಎಂಬ ವಿಶಿಷ್ಟ ಹೆಸರಿನ ರಸ್ತೆಗಳಿವೆ. ದಕ್ಷಿಣದಲ್ಲಿ ಬಸವನಗುಡಿ ಇದ್ದಂತೆ ಉತ್ತರದಲ್ಲಿ ಮಲ್ಲೇಶ್ವರಂ ಇದ್ದು, ಪ್ರಮುಖ ಐತಿಹಾಸಿಕ, ವಾಣಿಜ್ಯಾತ್ಮಕ ಹೆಗ್ಗುರುತಾಗಿದೆ. ಬಸವನಗುಡಿ ಕಡಲೆಕಾಯಿ ಪರಿಷೆಯಷ್ಟು ವಿಶ್ವವಿಖ್ಯಾತಿ ಅಲ್ಲದಿದ್ದರೂ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಕೂಡ ಖ್ಯಾತಿ ಪಡೆದಿದೆ.


karnataka vidhana sabha general election constituency profile malleshwaram bengaluru city
ಎಚ್‌.ವಿ. ನಂಜುಂಡಯ್ಯ


ಪ್ರತಿಷ್ಠಿತ ವ್ಯಕ್ತಿಗಳ ವಾಸಸ್ಥಾನ


ಮಲ್ಲೇಶ್ವರಂನಲ್ಲಿ ನಾಡಿನ ಹಲವು ಪ್ರತಿಷ್ಠಿತ ವ್ಯಕ್ತಿಗಳು ವಾಸಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ CV ರಾಮನ್, ಪ್ರಖ್ಯಾತ ವಿಜ್ಞಾನಿ  ಕೆ. ಕಸ್ತೂರಿ ರಂಗನ್, ವಿಶ್ವ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಸಂಗೀತಗಾರ ದೊರೈಸ್ವಾಮಿ ಅಯ್ಯಂಗಾರ್, ಖ್ಯಾತ ಕನ್ನಡ ಸಾಹಿತಿ ಜಿ.ಪಿ. ರಾಜರತ್ನಂ, ಸಿನಿ ರಂಗದ ಖ್ಯಾತನಾಮರಾದ ಬಿ. ಸರೋಜಾದೇವಿ, ಕೆ. ಕಲ್ಯಾಣ್ ಮತ್ತಿತರರು ಇಲ್ಲಿನ ನಿವಾಸಿಗಳು.


ಇದನ್ನೂ ಓದಿ: Karnataka Assembly Elections: ಸಚಿವರಿಗೆ ಪಕ್ಷಾಂತರದ ಕಳಂಕ, ಕೆಆರ್‌ ಪುರದಲ್ಲಿ ಯಾರಿಗೆ ಮಣೆ? ಅತಿ ದೊಡ್ಡ ಕ್ಷೇತ್ರದಲ್ಲಿ ಹೇಗಿದೆ ಎಲೆಕ್ಷನ್ ಫೀವರ್?


karnataka vidhana sabha general election constituency profile malleshwaram bengaluru city
ಖ್ಯಾತ ನಟ ಅನಂತನಾಗ್


6 ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರ


ಮಲ್ಲೇಶ್ವರ ವಿಧಾನಸಭಾ ಕ್ಷೇತ್ರವು ವಿಸ್ತಾರವಾಗಿದ್ದು, ಬಿಬಿಎಂಪಿಯ 6 ವಾರ್ಡ್‌ಗಳನ್ನು ಹೊಂದಿದೆ. ಮಲ್ಲೇಶ್ವರಂ, ಮತ್ತಿಕೆರೆ, ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ, ಸುಬ್ರಹ್ಮಣ್ಯನಗರ, ಗಾಯತ್ರಿನಗರ ಎಂಬ ವಾರ್ಡ್‌ಗಳನ್ನು ಗೊಂದಿದೆ. ಸಾಂಪ್ರದಾಯಿಕತೆ ಜೊತೆಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡ ಕ್ಷೇತ್ರವಾಗಿದ್ದು, ಸದ್ಯ ಮತ್ತಷ್ಟು ಅಭಿವೃದ್ಧಿ ಹೊಂದುತ್ತಿದೆ.


karnataka vidhana sabha general election constituency profile malleshwaram bengaluru city
ಎಂ.ಆರ್.ಸೀತಾರಾಂ


ಘಟಾನುಘಟಿಗಳು ಸ್ಪರ್ಧಿಸಿದ ಕ್ಷೇತ್ರ


19657ರಿಂದ 2018ರವರೆಗೆ ಅನೇಕ ಪಕ್ಷದ ನಾಯಕರು ಇಲ್ಲಿ ಸೋಲು-ಗೆಲುವು ಕಂಡಿದ್ದಾರೆ. ಜೀವರಾಜ ಆಳ್ವಾ, ಖ್ಯಾತ ನಟ ಅನಂತ್ ನಾಗ್, ಮಾಜಿ ಸಚಿವ ಎಂಆರ್‌ ಸೀತಾರಾಂ ಹಿಂದೆ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಗೆದ್ದ ಈ ಮೂವರೂ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು ಎನ್ನುವುದು ವಿಶೇಷ. ಪ್ರಸ್ತುತ ಶಾಸಕ ಅಶ್ವತ್ಥ್ ನಾರಾಯಣ್ ಕೂಡ ಹಾಲಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.


ಬಿಜೆಪಿಯ ಭದ್ರಕೋಟೆಯಾದ ಮಲ್ಲೇಶ್ವರಂ


2004ರಲ್ಲಿ ಬಿಜೆಪಿಯಿಂದ ಸ್ಪರ್ಸಿದ್ದ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಎಂ.ಆರ್‌. ಸೀತಾರಾಂ ವಿರುದ್ಧ ಪರಾಭವಗೊಂಡಿದ್ದರು. ಆದರೆ, ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ನಡೆದ 2008, 2013 ಹಾಗೂ 2018ರಲ್ಲಿ ಗೆಲುವು ಸಾಧಿಸಿ, ಹ್ಯಾಟ್ರಿಕ್ ಬಾರಿಸಿದ್ದಾರೆ. ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಕಾಂಗ್ರೆಸ್ಜೆಡಿಎಸ್
ಅಶ್ವತ್ಥ್ ನಾರಾಯಣ್ರಕ್ಷಾ ರಾಮಯ್ಯಗೊತ್ತಿಲ್ಲ
ಅನೂಪ್ ಅಯ್ಯಂಗಾರ್

ಈ ಬಾರಿ ಯಾರಿಗೆ ಟಿಕೆಟ್?


ಹಾಲಿ ಸಚಿವ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ನಿರ್ವಹಿಸುತ್ತಿರುವ ಸಿಎನ್ ಅಶ್ವತ್ಥ್ ನಾರಾಯಣ್ ಅವರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಕಾಂಗ್ರೆಸ್‌ನಿಂದ ಉದ್ಯಮಿ, ಮಾಜಿ ಸಚಿವ ಎಂಆರ್ ಸೀತಾರಾಂ ಪುತ್ರ, ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯ ಟಿಕೆಟ್ ಬಯಸಿದ್ದರೆ, ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಆಪ್ತ ಅನೂಪ್ ಅಯ್ಯಂಗಾರ್ ಕೂಡ ಸ್ಪರ್ಧೆಗೆ ಒಲವು ತೋರಿದ್ದಾರೆ. ಇನ್ನು ಒಂದು ಕಾಲದಲ್ಲಿ ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಮಲ್ಲೇಶ್ವರಂನಲ್ಲಿ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಜೆಡಿಎಸ್ ತೊಡಗಿದೆ.


karnataka vidhana sabha general election constituency profile malleshwaram bengaluru city
ರಕ್ಷಾ ರಾಮಯ್ಯ


ಅಶ್ವತ್ಥ್ ನಾರಾಯಣ್ ಬಗ್ಗೆ ಮತದಾರರು ಏನಂತಾರೆ?


ಇನ್ನು, ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲ ಅಶ್ವತ್ಥನಾರಾಯಣ ಅವರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂಬ ಮಾತು ಪ್ರಚಲಿತದಲ್ಲಿದೆ. ‘ಮಲ್ಲೇಶ್ವರ ಸಹಾಯ’ ಎಂಬ ಆ್ಯಪ್‌ ಮೂಲಕ ಸ್ಥಳೀಯರ ಅಹವಾಲುಗಳನ್ನು ಆಲಿಸಿದರೆ, ನಿರುದ್ಯೋಗಿಗಳಿಗೆ ಮಾಹಿತಿ ಒದಗಿಸುವ ‘ಯೂತ್‌ ಎಡ್ಜ್‌’ ಕಾರ್ಯಕ್ರಮದ ಮೂಲಕ ಯುವಜನರ ಮನ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ.


karnataka vidhana sabha general election constituency profile malleshwaram bengaluru city
ಮಲ್ಲೇಶ್ವರಂ


ಇದನ್ನೂ ಓದಿ: Karnataka Assembly Elections: ರಾಜಾಜಿನಗರದಲ್ಲಿ ಮಾಜಿ ಸಚಿವ, ಮಾಜಿ ಮೇಯರ್ ಫೈಟ್! ಕಣಕ್ಕಿಳಿಯುತ್ತಾರಾ ಸಿನಿಮಾ ಮಂದಿ?


ಒಕ್ಕಲಿಗ, ಬ್ರಾಹ್ಮಣರ ಮತಗಳೇ ನಿರ್ಣಾಯಕ


ಒಕ್ಕಲಿಗರು ಹಾಗೂ ಬ್ರಾಹ್ಮಣರ ಮತಗಳೇ ಇಲ್ಲಿ ನಿರ್ಣಾಯಕ. ಸದ್ಯ ಒಟ್ಟು ಮತದಾರರು – 2,22,500 ಮಂದಿ ಇದ್ದಾರೆ. ಈ ಪೈಕಿ ಒಕ್ಕಲಿಗ 41,000, ಲಿಂಗಾಯತ 5,000, ಎಸ್‌ಸಿ-ಎಸ್‌ಟಿ – 33,500, ಬ್ರಾಹ್ಮಣ 55,000, ಮುಸ್ಲಿಂ 8000 ಮತದಾರರಿದ್ದಾರೆ. ಇನ್ನು ಕುರುಬ 5000, ಯಾದವ 4500, ದೇವಾಂಗ 1500, ತಿಗಳ 1500 ಮತದಾರರಿದ್ದರೆ, ತಮಿಳು ಭಾಷಿಕರು 15000, ತೆಲುಗು ಭಾಷಿಕರು 13000 ಇದ್ದಾರೆ. ಇನ್ನುಳಿದಂತೆ ಒಬಿಸಿ 15000 ಹಾಗೂ ಇತರೇ ಜನಾಂಗದ ಮತದಾರರು 18500 ಮಂದಿ ಇದ್ದಾರೆ.

ಒಟ್ಟು ಮತದಾರರು2,22,500
ಒಕ್ಕಲಿಗ41,000
ಲಿಂಗಾಯತ5,000
ಎಸ್‌ಸಿ-ಎಸ್‌ಟಿ33,500
ಬ್ರಾಹ್ಮಣ55,000
ಮುಸ್ಲಿಂ8000
ತಮಿಳು15000
ತೆಲುಗು13000
ಒಬಿಸಿ15000
ಇತರೇ18500

ಹಳೆಯ ಕ್ಷೇತ್ರದಲ್ಲಿ ಹಳೆ ಮತ್ತು ಹೊಸ ಸಮಸ್ಯೆಗಳು


ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವು ರಾಜಧಾನಿಯ ಹೃದಯ ಭಾಗದಲ್ಲಿರುವುದರಿಂದ ಮೊದಲಿನಿಂದಲೂ ಅಭಿವೃದ್ಗೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ರಸ್ತೆ ಸಮಸ್ಯೆ, ವಿದ್ಯುತ್‌, ಕ್ರೀಡಾಂಗಣದಂತಹ ಮೂಲಭೂತ ಸೌಕರ‍್ಯಗಳಿಗೆ ಕೊರತೆಯಿಲ್ಲ. ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿಯೂ ಕ್ಷೇತ್ರವು ಮುಂಚೂಣಿಯಲ್ಲಿದೆ. ಆದರೆ ರಸ್ತೆ ಸಮಸ್ಯೆ, ಟ್ರಾಫಿಕ್ ಜಾಮ್ ಕಿರಿಕಿರಿ, ಮಳೆ ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಇದೆ.

Published by:Annappa Achari
First published: