• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kollegal Elections: ಸೋಲು, ಗೆಲುವಿನ ಆಟದಲ್ಲಿ ಕೊಳ್ಳೇಗಾಲ ಯಾರ ಪಾಲಾಗುತ್ತೆ? ಇಲ್ಲಿದೆ ಕ್ಷೇತ್ರ ಸಮೀಕ್ಷೆ

Kollegal Elections: ಸೋಲು, ಗೆಲುವಿನ ಆಟದಲ್ಲಿ ಕೊಳ್ಳೇಗಾಲ ಯಾರ ಪಾಲಾಗುತ್ತೆ? ಇಲ್ಲಿದೆ ಕ್ಷೇತ್ರ ಸಮೀಕ್ಷೆ

ಕೊಳ್ಳೇಗಾಲ ಫೈಟ್

ಕೊಳ್ಳೇಗಾಲ ಫೈಟ್

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
  • Share this:

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಚಾಮರಾಜನಗರ (Chamarajnagar) ಜಿಲ್ಲೆಯ ಮೀಸಲು ಕ್ಷೇತ್ರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ (Hanur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.


ಕ್ಷೇತ್ರದ ವಿಶೇಷತೆ


ಕೊಳ್ಳೇಗಾಲ ದಕ್ಷಿಣ ಭಾರತದಲ್ಲಿರುವ ಕರ್ನಾಟಕ ರಾಜ್ಯದ ಚಾಮರಾಜನಗರದ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿದೆ. ಕೊಳ್ಳೇಗಾಲವು ಇಲ್ಲಿಯ ರೇಷ್ಮೆಉದ್ಯಮಕ್ಕೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಉದ್ಯಮವು ರಾಜ್ಯಾದ್ಯಂತ ರೇಷ್ಮೆ ವ್ಯಾಪಾರಿಗಳನ್ನು ಆಕರ್ಷಿಸುತ್ತದೆ. ಮದ್ರಾಸ್​ ಪ್ರೆಸಿಡೆನ್ಸಿಯ ಆಡಳಿತದಲ್ಲಿದ್ದ ಕೊಳ್ಳೇಗಾಲವನ್ನು ಸ್ವಾತಂತ್ರ್ಯದ ಬಳಿಕ ಭಾಷಾವಾರು ಪ್ರಾಂತ್ಯದ ಆಧಾರದ ಮೇರೆಗೆ ತಮಿಳುನಾಡು ರಾಜ್ಯದಿಂದ ಕರ್ನಾಟಕಕ್ಕೆ ಸೇರಿಸಲಾಯಿತು. 'ಕೊಳ್ಳೇಗಾಲ'ಕ್ಕೆ ಈ ಹೆಸರು ಬರಲು "ಕೌಹಳ" ಮತ್ತು "ಗಾಳವ" ಎಂಬ ಹೆಸರಿನ ಇಬ್ಬರು ಋಷಿಗಳು. ಇವರಿಬ್ಬರು ಈ ಪ್ರದೇಶವನ್ನು ಆಭಿವೃದ್ಧಿ ಮಾಡಿದರು ನಂಬಲಾಗಿದೆ. ಈ ಕ್ಷೇತ್ರದ ಹಲವಾರು ಗ್ರಾಮಗಳು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವುದರಿಂದ ಭಾಷಾ ಸಾಮರಸ್ಯವನ್ನು ಕಾಣಬಹುದಾಗಿದೆ. ಇಲ್ಲಿನ ಹಲವಾರು ಗ್ರಾಮಸ್ಥರು ಕನ್ನಡ ಮತ್ತು ತಮಿಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಬಲ್ಲರು.


ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?


ರಾಜಕೀಯ ಹಿನ್ನೋಟ


ಕೊಳ್ಳೇಗಾಲದ ರಾಜಕೀಯ ಇತಿಹಾಸವನ್ನು ಗಮನಿಸುವುದಾದರೆ ಈ ಕ್ಷೇತ್ರದಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ಕಾಂಗ್ರೆಸ್​ ಪ್ರಭಾವ ಅಧಿಕವಿದೆ. ಬಿಜೆಪಿ ಇಲ್ಲಿ ಒಂದು ಬಾರಿಯೂ ಗೆದ್ದಿಲ್ಲ ಎಂಬುವುದು ಉಲ್ಲೇಖನೀಯ. ಇನ್ನು ಕಳೆದ ಕೆಲ ಚುನಾವಣೆಗಳ ಬಗ್ಗೆ ಗಮನ ಹರಿಸುವುದಾದರೆ 2004ರ ವಿಧಾನಸಭಾ ಚುನಾವಣೆಯನ್ನು ಗಮನಿಸುವುದಾದರೆ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲರಾಜ್ ಎಸ್ ಅವರು ಜೆಡಿಎಸ್​ನ ಎಸ್ ಜಯಣ್ಣ ಅವರನ್ನು ಸೋಲಿಸಿದ್ದರು. ತದ ನಂತರ 2008ರ ಚುನಾವಣೆಯಲ್ಲಿ ಬಿಜೆಪಿಯ ಎಸ್​ ಮಹೇಂದರ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್​ನ ಆರ್ ಧ್ರುವನಾರಾಯಣ ಗೆಲುವಿನ ನಗೆ ಬೀರಿದ್ದರು. ಇನ್ನು 2013 ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಸ್ ಜಯಣ್ಣ ಅವರು ಬಿಎಸ್​ಪಿಯ ಎನ್. ಮಹೇಶ್ ಅವರನ್ನು ಸೋಲಿಸಿದ್ದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಮತ್ತೆ ಈ ಆಟ ಬದಲಾಗಿದ್ದು, ಬಿಎಸ್​ಪಿಯ ಎನ್. ಮಹೇಶ್ ಕಾಂಗ್ರೆಸ್​ನ ಎ ಆರ್ ಕೃಷ್ಣಮೂರ್ತಿ ಅವರನ್ನು ಸೋಲಿಸಿದ್ದರೆಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Karnataka Assembly Elections: ಅರಸೀಕೆರೆ ‘ಅರಸ’ ಆಗೋದ್ಯಾರು?: ಕಲ್ಪತರು ನಾಡಿನಲ್ಲಿ ಹಳೇ ಹುಲಿ ಜೊತೆ ಮಾಜಿ ಸಿಎಂ ಆಪ್ತನ ಕಾದಾಟ!


ಈ ಬಾರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿವರು


ಕಾಂಗ್ರೆಸ್​: ಎ.ಆರ್.ಕೃಷ್ಣಮೂರ್ತಿ
ಜೆಡಿಎಸ್​: ಪುಟ್ಟಸ್ವಾಮಿ
ಬಿಜೆಪಿ: ಎಂ.ಮಹೇಶ್‌


2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿಯ ಎನ್. ಮಹೇಶ್, ಕಾಂಗ್ರೆಸ್​ನ ಎ ಆರ್ ಕೃಷ್ಣಮೂರ್ತಿ ಅವರನ್ನು 19,454 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಎಸ್‌ಪಿಎನ್. ಮಹೇಶ್71,792
ಕಾಂಗ್ರೆಸ್ಎ ಆರ್ ಕೃಷ್ಣಮೂರ್ತಿ52,338

First published: