• Home
 • »
 • News
 • »
 • state
 • »
 • Karnataka Assembly Elections: ಕಾರವಾರ ಈ ಬಾರಿ ಯಾರಿಗೆ ಗೆಲುವಿನ ಹಾರ? ರೂಪಾಲಿ, ಆನಂದ್, ಸತೀಶ್ ಸೈಲ್ ನಡುವೆ ಫೈಟ್ ಫಿಕ್ಸ್?

Karnataka Assembly Elections: ಕಾರವಾರ ಈ ಬಾರಿ ಯಾರಿಗೆ ಗೆಲುವಿನ ಹಾರ? ರೂಪಾಲಿ, ಆನಂದ್, ಸತೀಶ್ ಸೈಲ್ ನಡುವೆ ಫೈಟ್ ಫಿಕ್ಸ್?

ಕಾರವಾರ ವಿಧಾನಸಭಾ ಕ್ಷೇತ್ರ

ಕಾರವಾರ ವಿಧಾನಸಭಾ ಕ್ಷೇತ್ರ

2018ರ ಗೆಲುವಿನ ಮೂಲಕ ಮೊದಲ ಪ್ರಯತ್ನದಲ್ಲೇ ವಿನ್ ಆದವರು ಶಾಸಕಿ ರೂಪಾಯಿ ನಾಯ್ಕ್. ವಿಧಾನಸಭೆಯಲ್ಲಿ ಬರೀ ಕ್ಷೇತ್ರದ ಸಮಸ್ಯೆ ಅಷ್ಟೇ ಅಲ್ಲ, ಜಿಲ್ಲೆಯ ಸಮಸ್ಯೆಯನ್ನೂ ಮಾತನಾಡುತ್ತಾರೆ ಎಂಬ ಹೆಗ್ಗಳಿಕೆ ಇವರದ್ದು. ಕಳೆದ ಬಾರಿ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಜಿಲ್ಲೆಯ ಶಾಸಕರ ಪೈಕಿ ವಿಧಾನಸಭೆಯಲ್ಲಿ ಮಾತನಾಡುವವರು ಇರರೊಬ್ಬರೇ ಎನ್ನುವುದು ಜಿಲ್ಲೆ ಜನರ ಪಾಲಿಗೆ ವಿಪರ್ಯಾಸವೂ ಹೌದು!

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Karwar, India
 • Share this:

ಉತ್ತರ ಕನ್ನಡ (Uttara Kannada) ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರ ವಿಧಾನಸಭಾ ಕ್ಷೇತ್ರವೂ (Karwar Assembly Constituency) ಹೌದು. ಕಾರವಾರ (Karwar) ಹಾಗೂ ಅಂಕೋಲಾ (Ankola) ತಾಲೂಕನ್ನು ಒಳಗೊಂಡ ಕಾರವಾರ ವಿಧಾನಸಭಾ ಕ್ಷೇತ್ರ ಈ ಬಾರಿಯೂ ಕುತೂಹಲದ ಕಣವಾಗಿ ಮಾರ್ಪಡಲಿದೆ. ಕಾರವಾರ-ಅಂಕೋಲಾ ಕ್ಷೇತ್ರವು ಹಲವು ವೈವಿಧ್ಯತೆಗಳನ್ನು ಹೊಂದಿದೆ. ಗೋವಾದಿಂದ (Goa) ಹತ್ತಿರದಲ್ಲೇ ಇರುವ ಕಾರವಾರ ಗೋವಾದಂತೆ ಕಡಲ ಕಿನಾರೆಯ ಸೌಂದರ್ಯದಿಂದಾಗಿ ಪ್ರವಾಸಿಗರನ್ನು (Tourists) ಸೆಳೆಯುತ್ತಿದೆ. ಸದ್ಯ ಬಿಜೆಪಿ (BJP) ಭದ್ರಕೋಟೆಯಾಗಿರುವ ಕಾರವಾರದಲ್ಲಿ ಶಾಸಕಿ ರೂಪಾಯಿ ನಾಯ್ಕ್ (Roopali Naik) ಗೆದ್ದು ಆಡಳಿತ ನಡೆಸುತ್ತಿದ್ದಾರೆ. ಇದೀಗ ಇಲ್ಲಿಯೂ ಚುನಾವಣಾ (Election) ರಣಕಣ ರಂಗೇರುತ್ತಿದ್ದು, ಈ ಬಾರಿ ಯಾರು ಸ್ಪರ್ಧಿಸುತ್ತಾರೆ, ಯಾರು ಗೆಲ್ಲುತ್ತಾರೆ ಅಂತ ಮತದಾರರು ಈಗಲೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.  


ಕಾರವಾರ –ಅಂಕೋಲಾ ವಿಧಾನಸಭಾ ಕ್ಷೇತ್ರ ಪರಿಚಯ


ಗೋವಾದಿಂದ ಹತ್ತಿರದಲ್ಲೇ ಇರುವ ಕಾರವಾರ ಉತ್ತರ ಕನ್ನಡದ ಜಿಲ್ಲಾ ಕೇಂದ್ರವೂ ಹೌದು. ಕೈಗಾ ಅಣುವಿದ್ಯುತ್ ಸ್ಥಾವರ, ಕದಂಬ ನೌಕೌನೆಲೆಯಂತರ ಮಹತ್ವದ ಮತ್ತು ಸೂಕ್ಷ್ಮ ಸ್ಥಳಗಳನ್ನು ಇದು ಹೊಂದಿದೆ. ಬೇಲೆಕೇರೆ ಬಂದರು ಈ ಹಿಂದೆ ಅಕ್ರಮ ಅದಿರು ಸಾಗಾಟಕ್ಕೆ ಸುದ್ದಿಯಾಗಿತ್ತು. ಅತ್ತ ರವೀಂದ್ರನಾಥ ಠಾಗೋರ್ ಬೀಚ್ ಪ್ರವಾಸಿಗರ ಸ್ವರ್ಗದಂತಿದೆ. ಇದರ ಜೊತೆ ಪದ್ಮಶ್ರೀ ಪುರಸ್ಕೃತರಾದ ಹಾಡುಹಕ್ಕಿ ಸುಕ್ರಿ ಬೊಮ್ಮಗೌಡ, ವೃಕ್ಷಮಾತೆ ತುಳಿಸಿಗೌಡ ಕೂಡ ಇದೇ ಕ್ಷೇತ್ರದ ಮತದಾರರು ಎನ್ನುವುದು ಹೆಚ್ಚುಗಾರಿಕೆ.


ಕಾರವಾರ ಬೀಚ್


ಹಾಲಿ ಶಾಸಕಿ ರೂಪಾಲಿ ನಾಯ್ಕ್


2018ರ ಗೆಲುವಿನ ಮೂಲಕ ಮೊದಲ ಪ್ರಯತ್ನದಲ್ಲೇ ವಿನ್ ಆದವರು ಶಾಸಕಿ ರೂಪಾಯಿ ನಾಯ್ಕ್. ವಿಧಾನಸಭೆಯಲ್ಲಿ ಬರೀ ಕ್ಷೇತ್ರದ ಸಮಸ್ಯೆ ಅಷ್ಟೇ ಅಲ್ಲ, ಜಿಲ್ಲೆಯ ಸಮಸ್ಯೆಯನ್ನೂ ಮಾತನಾಡುತ್ತಾರೆ ಎಂಬ ಹೆಗ್ಗಳಿಕೆ ಇವರದ್ದು. ಕಳೆದ ಬಾರಿ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಜಿಲ್ಲೆಯ ಶಾಸಕರ ಪೈಕಿ ವಿಧಾನಸಭೆಯಲ್ಲಿ ಮಾತನಾಡುವವರು ಇರರೊಬ್ಬರೇ ಎನ್ನುವುದು ಜಿಲ್ಲೆ ಜನರ ಪಾಲಿಗೆ ವಿಪರ್ಯಾಸವೂ ಹೌದು! ನೆರೆ ಸಮಸ್ಯೆ, ಅರಣ್ಯ ಭೂಮಿ ಒತ್ತುವರಿ ಇತ್ಯಾದಿ ಸಮಸ್ಯೆಗಳಲ್ಲಿ ಜನರಿಗೆ ಸ್ಪಂದಿಸುತ್ತಾರೆ ಎನ್ನುವ ಮಾತೂ ಇದೆ.


ಶಾಸಕಿ ರೂಪಾಲಿ ನಾಯ್ಕ್


ಇದನ್ನೂ ಓದಿ: Karnataka Assembly Elections: 'ಮಿನಿ ದುಬೈ'ನಲ್ಲಿ ಹೇಗಿದೆ ಎಲೆಕ್ಷನ್ ಜ್ವರ? ಭಟ್ಕಳದಲ್ಲಿ ಈ ಬಾರಿಯೂ ಫಲ ಕೊಡುತ್ತಾ ಹಿಂದುತ್ವದ ಅಲೆ?


ಅನಂತ ಕುಮಾರ್ ಹೆಗಡೆ ಬೆಂಬಲಿಗರು


ಇದೇ ಮೊದಲ ಬಾರಿ ಶಾಸಕರಾಗಿರುವ ರೂಪಾಲಿ ನಾಯ್ಕ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬೆಂಬಲಿಗರು. ಇವರ ಗೆಲುವಿನಲ್ಲಿ ಹೆಗಡೆ ಪಾತ್ರ ಮಹತ್ವದ್ದಾಗಿದೆ. ಮಾಜಿ ಶಾಸಕರಾದ ಆನಂದ ಅಸ್ನೋಟಿಕರ್ ಹಾಗೂ ಸತೀಶ ಸೈಲ್ ಇಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿಯಾಗಿದ್ದಾರೆ.


ಮಾಜಿ ಸಚಿವ ಆನಂದ್ ಅಸ್ನೋಟಿಕರ್


ಕ್ಷೇತ್ರದಲ್ಲಿ ಘಟಾನುಘಟಿಗಳ ಸ್ಪರ್ಧೆ


ಕಾರವಾರ ಕ್ಷೇತ್ರದಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕಿ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಇಧೇ ಕ್ಷೇತ್ರದವರು. ಸದ್ಯ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ್, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದರು. ಇನ್ನು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಂಪುಟ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ ಬಿಜೆಪಿಯಿಂದ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನ ಕಂಡಿದ್ದರು. ನಂತರ 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. ಇನ್ನು ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದ ಸತೀಶ್ ಸೈಲ್ ಕಳೆದ ಬಾರಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು ಪರಾಭವಗೊಂಡಿದ್ದರು.


ಮಾಜಿ ಶಾಸಕ ಸತೀಶ್ ಸೈಲ್


ಈ ಬಾರಿ ಯಾರಿಗೆ ಟಿಕೆಟ್?


ಕಾರವಾರ ಅಂಕೋಲಾ ಕ್ಷೇತ್ರದಿಂದ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಸ್ಪರ್ಧೆ ಬಯಸಿದ್ದರೆ, ಮಾಜಿ ಶಾಸಕ ಗಂಗಾಧರ್ ಭಟ್ ಹಾಗೂ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ನಾಯಕ್ ಪೈಪೋಟಿ ನೀಡಲಿದ್ದಾರೆ. ಅತ್ತ 2013ರಲ್ಲಿ ಪಕ್ಷೇತರರಾಗಿ ಗೆದ್ದು, 2018ರಲ್ಲಿ ಸೋತು, ಬಳಿಕ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ, ಉದ್ಯಮಿ ಸತೀಶ್ ಸೈಲ್ ಕಾಂಗ್ರೆಸ್ ಟಿಕೆಟ್ ಬಯಸಿದ್ದರೆ, ಅವರಿಗೆ ಉದ್ಯಮಿ ಗೋಪಾಲಕೃಷ್ಣ ನಾಯಕ್ ಪೈಪೋಟಿ ಕೊಡುತ್ತಿದ್ದಾರೆ. ಅತ್ತ ಮಾಜಿ ಸಚಿವ ಆನಂದ್ ಅಸ್ನೋಟಿಕರ್  ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ ಎಂಬ ಬಗ್ಗೆ ಗೊಂದಲರಿದೆ. ಇದರ ಜೊತೆ ಉದ್ಯಮಿ ಮೋಹಿನಿ ನಾಯ್ಕ್ ಕೂಡ ಜೆಡಿಎಸ್ ಟಿಕೆಟ್ ಬಯಸಿದ್ದಾರೆ.


ಹಿರಿಯ ಕಾಂಗ್ರೆಸ್ ನಾಯಕಿ ರಶ್ಮಿಕಾ ಮಂದಣ್ಣ


ಕ್ಷೇತ್ರದ ಮತದಾರರ ವಿವರ


ಈ ಕ್ಷೇತ್ರದಲ್ಲಿ ನಾಮಧಾರಿಗಳು, ಹಾಲಕ್ಕಿ, ಕೊಮಾರಪಂತ, ಮೊಗೇರರು, ಮರಾಠರು, ಅಲ್ಪಸಂಖ್ಯಾತರು, ಪರಿಶಿಷ್ಟರು, ಈಡಿಗರು, ಬ್ರಾಹ್ಮಣರು ಇಲ್ಲಿ ಬಹುಸಂಖ್ಯಾತ ಮತದಾರರಾಗಿದ್ದಾರೆ. ಒಟ್ಟೂ ಮತದಾರರು – 2,14,500ರಷ್ಟಿದ್ದಾರೆ. ಈ ಪೈಕಿ ಕೋಮಾರ ಸಮುದಾಯ – 28,000, ಹಾಲಕ್ಕಿ ಗೌಡ – 26,000, ಮೀನುಗಾರರು -  20,000, ಅಲ್ಪಸಂಖ್ಯಾತ – 14,000, ಭಂಡಾರಿ – 18,000, ಕೊಂಕಣ ಮರಾಠ – 11,000 ಇದ್ದಾರೆ. ಅಂಕೋಲಾ ಭಾಗದಲ್ಲಿ ನಾಡವರು – 9,000 ಮತದಾರರಿದ್ದರೆ, ಕ್ಷೇತ್ರದಾದ್ಯಂತ ಬ್ರಾಹ್ಮಣ ಮತದಾರರು 5,000ದಷ್ಟಿದ್ದಾರೆ.


ಪದ್ಮಶ್ರಿ ಸುಕ್ರಿಗೌಡ


ಇದನ್ನೂ ಓದಿ: Karnataka Assembly Elections: ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು, ನಡುವೆ ಆಸ್ಪತ್ರೆ ಇಲ್ಲದ ಊರು! ಕುಮಟಾದಲ್ಲಿ ಈ ಬಾರಿ ಗೆಲ್ಲೋರು ಯಾರು?


ಕ್ಷೇತ್ರದಲ್ಲಿ ಸಾವಿರಾರು ಸಮಸ್ಯೆ


ಉಷ್ಣವಿದ್ಯುತ್ ಸ್ಥಾವರದಿಂದಾಗಿ ಪರಿಸರಕ್ಕೆ ಹಾನಿ, ಅಡಿಕೆದರ, ಶಿಥಿಲಗೊಂಡ ರಸ್ತೆ, ಈಗೀಗ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ ಇವೇ ಈ ಕ್ಷೇತ್ರದ ಬಹುಮುಖ್ಯ ಸಮಸ್ಯೆಗಳು. ರಾಸಾಯನಿಕ ಮಸ್ಲಿನ್ ಬಟ್ಟೆ, ಆಭರಣವಿನ್ಯಾಸ, ಏಲಕ್ಕಿ, ಗೋಡಂಬಿ, ಮೆಣಸು ಸೇರಿದಂತೆ ಸಾಂಬಾರು ಪದಾರ್ಥಗಳ ಮಾರುಕಟ್ಟೆಗೆ ರಾಜ್ಯದ ಇತರೆಡೆಯಿಂದ ಸರಿಯಾದ ಸಂಪರ್ಕವಿಲ್ಲ.


ಪದ್ಮಶ್ರೀ ತುಳಸಿಗೌಡ


ಹುಬ್ಬಳ್ಳಿ –ಅಂಕೋಲಾ ರೈಲು ಮಾರ್ಗಕ್ಕೆ ಪರ-ವಿರೋಧ ಅಭಿಪ್ರಾಯವಿದ್ದು, ಸದ್ಯ ನೆನೆಗುದಿಗೆ ಬಿದ್ದಿದೆ. ಜಿಲ್ಲೆಗೊಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬುದು ಇಲ್ಲಿನ ಜನರ ಕೂಗೂ ಆಗಿದ್ದು, ಈ ಬಾರಿ ಈ ವಿಚಾರ ಕೂಡ ನಿರ್ಣಾಯಕವಾಗಲಿದೆ.

Published by:Annappa Achari
First published: