• Home
  • »
  • News
  • »
  • state
  • »
  • Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!

Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!

ಕಾರ್ಕಳ ಕ್ಷೇತ್ರದ ರಾಜಕೀಯ ಚಿತ್ರಣ

ಕಾರ್ಕಳ ಕ್ಷೇತ್ರದ ರಾಜಕೀಯ ಚಿತ್ರಣ

Karnataka Assembly Elections 2023: ದಕ್ಷಿಣ ಕನ್ನಡದ ಭಾಗವಾಗಿದ್ದ ಉಡುಪಿ ಕಳೆದ 25 ವರ್ಷಗಳ ಹಿಂದೆ ಹೊಸ ಜಿಲ್ಲೆಯಾಗಿ ರೂಪುಗೊಂಡಿತ್ತು. ಹೀಗಿದ್ದರೂ ದಕ್ಷಿಣ ಕನ್ನಡದ ಪ್ರಭಾವ ಉಳಿಸಿಕೊಂಡಿದೆ. ಇದೇ ಕಾರಣದಿಂದ ಉಡುಪಿ ಇಂದಿಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದೇ ಗುರುತಿಸಿಕೊಳ್ಳುತ್ತದೆ. ಹೀಗಿರುವಾಗ ಐದು ವಿಧಾನಸಭಾ ಸ್ಥಾನಗಳಿರುವ ಉಡುಪಿಯಲ್ಲಿ ಕಾರ್ಕಳ ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಎಂಬಿತ್ಯಾದಿಗಳ ವಿವರ ಇಲ್ಲಿದೆ ನೋಡಿ

ಮುಂದೆ ಓದಿ ...
  • Share this:

ಕಾರ್ಕಳ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ಸಮಯ ಬಾಕಿ ಇದೆ. ಹೀಗಿರುವಾಗ ಪಕ್ಷಗಳು ಮತಗಳಿಗಾಗಿ ತಮ್ಮ ದಾಳ ಬೀಸಲಾರಂಭಿಸಿದ್ದಾರೆ. ಬಿಜೆಪಿಯು ತಮ್ಮ ಅಧಿಕಾರವಿರುವ ಕ್ಷೇತ್ರಗಳನ್ನು ಉಳಿಸಿಕೊಂಡು ಹೊಸ ಕ್ಷೇತ್ರಗಳನ್ನು ಕಸಿದುಕೊಳ್ಳುವ ಸಿದ್ಧತೆಯಲ್ಲಿದ್ದರೆ, ಕಾಂಗ್ರೆಸ್​ ತನ್ನ ಕ್ಷೇತ್ರಗಳನ್ನು ಮರಳಿ ಪಡೆಯುವ ಯತ್ನದಲ್ಲಿದೆ. ಈ ಜಿದ್ದಾಜಿದ್ದಿ ಉಡುಪಿ ಜಿಲ್ಲೆಯಲ್ಲೂ ಕಾಣ ಸಿಗುತ್ತದೆ. ದಕ್ಷಿಣ ಕನ್ನಡದ ಭಾಗವಾಗಿದ್ದ ಉಡುಪಿ ಕಳೆದ 25 ವರ್ಷಗಳ ಹಿಂದೆ ಹೊಸ ಜಿಲ್ಲೆಯಾಗಿ ರೂಪುಗೊಂಡಿತ್ತು. ಹೀಗಿದ್ದರೂ ದಕ್ಷಿಣ ಕನ್ನಡದ ಪ್ರಭಾವ ಉಳಿಸಿಕೊಂಡಿದೆ. ಇದೇ ಕಾರಣದಿಂದ ಉಡುಪಿ ಇಂದಿಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದೇ ಗುರುತಿಸಿಕೊಳ್ಳುತ್ತದೆ. ಹೀಗಿರುವಾಗ ಐದು ವಿಧಾನಸಭಾ ಸ್ಥಾನಗಳಿರುವ ಉಡುಪಿಯಲ್ಲಿ ಕಾರ್ಕಳ ಕ್ಷೇತ್ರದ (Karkala Assembly Constituency) ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಎಂಬಿತ್ಯಾದಿಗಳ ವಿವರ ಇಲ್ಲಿದೆ ನೋಡಿ


ತುಳುನಾಡಿನ ಉತ್ತರ ಗಡಿ


ಪಶ್ಚಿಮ ಘಟ್ಟದ ಸಹ್ಯಾದ್ರಿಯ ತಪ್ಪಲಲ್ಲಿರುವ ಕಾರ್ಕಳ ಮತ್ತು ಹೆಬ್ರಿ ತಾಲೂಕು ಒಳಗೊಂಡಿರುವ ವಿಧಾನಸಭಾ ಕ್ಷೇತ್ರ ತುಳುನಾಡಿನ ಉತ್ತರ ಗಡಿ. ಕಾಡು, ಕಣಿವೆ, ಜಲಪಾತ, ವೈವಿಧ್ಯಮಯ ಜೀವಸಂಕುಲ, ಬಸದಿಗಳಿರುವ ಈ ಕ್ಷೇತ್ರ ಮಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. 13 ಮೀಟರ್ ಎತ್ತರದ ಏಕಶಿಲೆಯ ಗೊಮ್ಮಟೇಶ್ವರ ಮೂರ್ತಿ ಮತ್ತು ಬಸದಿಗಳಿಂದ ಕೂಡಿರುವ ಕಾರ್ಕಳ ಜೈನ ತೀರ್ಥ ಅಥವಾ ಕಾಶಿಯೆಂದೇ ಪ್ರಸಿದ್ಧಿ ಪಡೆದಿದೆ. ಕಾರ್ಕಳವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತುಳುವರು ಕಾರ್ಲ ಎಂದು ಕರೆದರೆ ಕೊಂಕಣಿ ಸಮುದಾಯ ಕಾರ್ಕೊಳ್ ಎನ್ನುತ್ತಾರೆ. ಇನ್ನು ಕಾಂಗ್ರೆಸ್ ಹಿರಿಯ ರಾಜಕಾರಣಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದೇ ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?


ರಾಜಕೀಯ ಸ್ಥಿತಿಗತಿ


ಉಡುಪಿ ಜಿಲ್ಲೆಯ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರದ ಈ ಹಿಂದಿನ ರಾಜಕೀಯದಾಟ ಗಮನಿಸುವುದಾದರೆ, 1967ರಲ್ಲಿ ಇಲ್ಲಿ ಬಿಜೆಪಿ (ಹಿಂದಿನ ಭಾರತೀಯ ಜನ ಸಂಘ) ಗೆಲುವು ಸಾಧಿಸಿತ್ತು ಎಂದರೆ ಇವತ್ತಿಗೂ ಅಚ್ಚರಿಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅಂದರೆ 1972ರಲ್ಲಿ ಇಲ್ಲಿ ಕಾಂಗ್ರೆಸ್ ನ ವೀರಪ್ಪ ಮೋಯ್ಲಿ ಗೆಲುವು ಸಾಧಿಸಿದ್ದರು. ನಂತರ ಅವರನ್ನು ಸೋಲಿಸುವವರೇ ಇಲ್ಲಿ ಹುಟ್ಟಲಿಲ್ಲ. 1978, 83, 85, 89, 94 ರಲ್ಲಿ ಇಲ್ಲಿ ಮೋಯ್ಲಿ ಗೆದ್ದರು. ಹೀಗೆ ಸತತ ಆರು ಚುನಾವಣೆಗಳಲ್ಲಿ ಗೆದ್ದಿದ್ದಲ್ಲದೆ 1992-94ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. 1999ರಲ್ಲಿ ಮೋಯ್ಲಿ ಇಲ್ಲಿ ಕಣಕ್ಕಿಳಿಯಲಿಲ್ಲ. ಮುಂದೆ ಅವರು ಕೇಂದ್ರ ರಾಜಕಾರಣದತ್ತ ತಮ್ಮ ಚಿತ್ತ ಹರಿಸಿದರು. ಇಲ್ಲಿ 1999ರಲ್ಲಿ ಕಾಂಗ್ರೆಸ್ ನ ಎಚ್. ಗೋಪಾಲ ಭಂಡಾರಿ ಕಣಕ್ಕಿಳಿದು ಗೆಲುವು ಸಾಧಿಸಿದರು.


ಆದರೆ 2004ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಭದ್ರಕೋಟೆ ಮೊದಲ ಬಾರಿಗೆ ಇಲ್ಲಿ ಬಿರುಕು ಬಿಟ್ಟಿತು. ದತ್ತಪೀಠ ವಿವಾದದಿಂದ ಗುರುತಿಸಿಕೊಂಡ ಯುವ ರಾಜಕಾರಣಿ ವಿ. ಸುನಿಲ್ ಕುಮಾರ್ ಕಾಂಗ್ರೆಸ್​ನ ಗೋಪಾಲ್ ಭಂಡಾರಿಗೆ ಸೋಲುಣಿಸಿದರು. ಈ ಮೂಲಕ ಬಹು ದೀರ್ಘಕಾಲದ ನಂತರ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ಎಳೆದು ತಂದರು.


ಮತ್ತೆ ಎದ್ದು ನಿಂತ ಕಾಂಗ್ರೆಸ್​


ಆದರೆ 2008ರಲ್ಲಿ ಮತ್ತೆ ಗೋಪಾಲ್ ಭಂಡಾರಿ ಎದ್ದು ನಿಂತರು. ಸುಮಾರು ಒಂದು ಸಾವಿರ ಮತಗಳಿಂದ ಸುನಿಲ್ ಕುಮಾರ್ ರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ಪ್ರವೇಶ ಗಿಟ್ಟಿಸಿದರು. 2013ರ ಚುನಾವಣೆಯಲ್ಲಿ ಫಲಿತಾಂಶ ಪುನಃ ಅದಲು ಬದಲಾಯಿತು. ಈ ಚುನಾವಣೆಯಲ್ಲಿ ಇಡೀ ಉಡುಪಿಯಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಶಾಸಕರೆಂದರೆ ಸುನಿಲ್ ಕುಮಾರ್ ಮಾತ್ರ. ಸದ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸುನಿಲ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.


2013ರ ಚುನಾವಣೆಯಲ್ಲಿ ಫಲಿತಾಂಶ ಪುನಃ ಅದಲು ಬದಲಾಯಿತು. ಈ ಚುನಾವಣೆಯಲ್ಲಿ ಇಡೀ ಉಡುಪಿಯಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಶಾಸಕರೆಂದರೆ ಸುನಿಲ್ ಕುಮಾರ್ ಮಾತ್ರ. ಇದಾದ ಬಳಿಕದ 2018ರ ಭರ್ಜರಿ ಗೆಲುವ ಸಾಧಿಸಿದ್ದ ಸುನಿಲ್ ಕುಮಾರ್ 42 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್​ನ ಗೋಪಾಲ್ ಭಂಡಾರಿಯನ್ನು ಸೋಲಿಸಿದ್ದರು. ಈ ಚುನಾವಣೆಯಲ್ಲಿ ಹೊನ್ನಾವರದ ಹುಡುಗ ಪರೇಶ್ ಮೇಸ್ತನ ಆಕಸ್ಮಿಕ ಸಾವು ಮತ್ತು ಸುರತ್ಕಲ್‌ನ ಮರಾಠ ಯುವಕ ದೀಪಕ್ ರಾವ್‌ ಕೊಲೆ ವಿವಾದಗಳೇ ಬಿಜೆಪಿಗೆ ಈ ಅಂತರ ಸಾಧಿಸಲು ಸಹಾಯ ಮಾಡಿವೆ ಎನ್ನಲಾಗಿದೆ.


2023ರ ಅಸೆಂಬ್ಲಿ ಚುನಾವಣೆಯ ಅಭ್ಯರ್ಥಿಗಳಾರು?


ಧರ್ಮಕಾರಣ ಮತ್ತು ಜಾತಿಕಾರಣ ಹೆಚ್ಚಾಗಿ ಕಂಡು ಬರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರುಣ ಕಣಕ್ಕಿಳಿಯುತ್ತಾರೆ? ಬಿಜೆಪಿ ಹಾಗೂ ಕಾಂಗ್ರೆಸ್​ ಯಾರಿಗೆ ಟಿಕೆಟ್​ ನೀಡುತ್ತೆ ಎಂಬುವುದೇ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿಯಲ್ಲಿ ಹೆಚವ್ಚಿನ ಪೈಪೋಟಿ ಇಲ್ಲವಾದರೂ. ಇಲ್ಲಿನ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದ ಗೋಪಾಲ್ ಶೆಟ್ಟಿ ಕಳೆದ ಬಾರಿ ಮೃತಪಟ್ಟ ಕಾರಣ ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದು ಕಾಂಗ್ರೆಸ್​ಗೆ ತಲೆನೋವಾಗುವ ಎಲ್ಲಾ ಸಾಧ್ಯತೆಗಳಿವೆ.


ಬಿಜೆಪಿ ಆಕಾಂಕ್ಷಿಗಳು ಯಾರು?


 * ವಿ. ಸುನಿಲ್ ಕುಮಾರ್: ಇಲ್ಲಿ ಬಿಜೆಪಿ ಆಕಾಂಕ್ಷಿ ಹಾಲಿ ಶಾಸಕ ವಿ. ಸುನಿಲ್ ಕುಮಾರ್. ಇವರನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿ ಪಾಳಯದ ಬೇರೆ ಆಕಾಂಕ್ಷಿಗಳಿಲ್ಲ. ಆದರೆ ಇವರ ಬಗ್ಗೆ ಬಿಜೆಪಿಯ ಒಂದು ವರ್ಗಕ್ಕೆ ತೀವ್ರ ಅಸಮಾಧಾನವಿದೆ ಎನ್ನಲಾಗುತ್ತಿದೆ. ಭಜರಂಗದಳ ಮೂಲದ ಈ ಶಾಸಕ ಹಿಂದು ಜಾಗರಣಾ ವೇದಿಕೆಯನ್ನು ಎದುರು ಹಾಕಿಕೊಂಡಿದ್ದಾರೆನ್ನಲಾಗಿದೆ. ಅಲ್ಲದೇ ಭದ್ರಷ್ಟಾಚಾರದ ಆರೋಪವೂ ಇವರ ವಿರುದ್ಧ ಕೇಳಿ ಬಂದಿದ್ದು, ಹೊಸ ಮುಖವನ್ನು ಆಖಾಡಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂಬ ವದಂತಿಗಳೂ ಸದ್ದು ಮಾಡಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಮಲ ಪಾಳಯ ಇಂತಹ ಅಪಾಯ ಎದುರು ಹಾಕಿಕೊಳ್ಳುತ್ತಾ ಎಂಬ ಪ್ರಶ್ನೆಯೂ ಮತ್ತೊಂದೆಡೆ ಎದ್ದು ನಿಲ್ಲುತ್ತದೆ.


ಸಚಿವ ಸುನಿಲ್ ಕುಮಾರ್


ಇದನ್ನೂ ಓದಿKarnataka Assembly Elections: ಪುತ್ತೂರು ಕ್ಷೇತ್ರದಲ್ಲಿ ಟಫ್​ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!


ಕಾಂಗ್ರೆಸ್​ ಆಕಾಂಕ್ಷಿಗಳು ಯಾರು?


ಜನಮನ್ನಣೆಗೆ ಪಾತ್ರರಾಗಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನದ ಬಳಿಕ ಕೈ ಪಾಳಯದಲ್ಲಿ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿದೆ. ಒಂದೆಡೆ ಬಂಟ ಸಮುದಾಯದ ಮುನಿಯಾಲ ಉದಯಕುಮಾರ್ ಶೆಟ್ಟಿ ಟಿಕೆಟ್​ ಗಟ್ಟಿಸಿಕೊಳ್ಳಲು ತಯಾರಿ ನಡೆಸುತ್ತಿದ್ದರೆ, ಇತ್ತ ಮಾಜಿ ಸಿಎಂ ವೀರಪ್ಪ ಮೊಯ್ಲಿಯೂ ತನ್ನ ಮಗ ಹರ್ಷನನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿದ್ದಾರೆ.


* ಮುನಿಯಾಲ ಉದಯಕುಮಾರ್ ಶೆಟ್ಟಿ: ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಉದಯಕುಮಾರ್ ಶೆಟ್ಟಿ ತನ್ನ ಮೇಲಾದ ಐಟಿ ದಾಳಿ ಹಾಗೂ ಕಳೆದ ಚುನಾವಣೆಯಲ್ಲಿ ತನಗೆ ಟಿಕೆಟ್ ತಪ್ಪಿದ ಬೇಸರದಿಂದ ರಾಜಕಾರಣದಿಂದ ದೂರಾಗಿದ್ದರು. ಆದರೀಗ ಅವರು ಮತ್ತೆ ಸಕ್ರಿಯರಾಗಿದ್ದು, ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


ಮುನಿಯಾಲ ಉದಯಕುಮಾರ್ ಶೆಟ್ಟಿ


ಹರ್ಷ ಮೊಯ್ಲಿ: ವೀರಪ್ಪ ಮೊಯ್ಲಿ ಪುತ್ರ. ತಂದೆ ವೀರಪ್ಪ ಮೊಯ್ಲಿ ಇದೇ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಗೆದ್ದವರು, ಇಲ್ಲಿನ ಶಾಸಕರಾಗಿದ್ದಾಗಲೇ ಅವರು ಮುಖ್ಯಮಂತ್ರಿಯೂ ಆಗಿದ್ದರು.


Moily
ತಂದೆ ವೀರಪ್ಪ ಮೊಯ್ಲಿ ಜೊತೆ ಹರ್ಷ ಮೊಯ್ಲಿ


* ಶುಭದ್ ರಾವ್: ಕಾರ್ಕಳ ಪುರಸಭೆ ಸದಸ್ಯರಾಗಿರುವ ಇವರೂ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ


ಸುರೇಂದ್ರ ಶೆಟ್ಟಿ: ಕುಂದಾಪುರದಲ್ಲಿ ಸಹನಾ ಕನ್‌ವೆನ್‌ಷನ್ ನಡೆಸುತ್ತಿರುವ ಉದ್ಯಮಿ ಸುರೇಂದ್ರ ಶೆಟ್ಟಿ ಕಾಂಗ್ರೆಸ್​ ಟಿಕೆಟ್​ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಮೊಯ್ಲಿ ಆಪ್ತರಾಗಿರುವ ಅವರು ಡಿಕೆಶಿ ಜತೆಗೂ ವ್ಯಾವಹಾರಿಕ ನಂಟು ಹೊಂದಿದ್ದಾರೆನ್ನಲಾಗಿದೆ.


* ಮಂಜುನಾಥ್ ಪೂಜಾರಿ: ಮಾಜಿ ಜಿಪಂ ಸದಸ್ಯ ಹಾಗೂ ಕಾಂಗ್ರೆಸ್​ ನಾಯಕ


* ದೀಪಕ್ ಕೋಟ್ಯಾನ್ : ಕಾಂಗ್ರೆಸ್​ ಯುವ ಮುಖಂಡ


ಜಾತಿ ಸಮೀಕರಣ


ಒಟ್ಟು 1,67,650 ಮತದಾರರಿರುವ ಕಾರ್ಕಳ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಜಾತಿ ಯಾವುದು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಬಿಲ್ಲವ40,000
ಬಂಟ್ಸ್​30,000
ಕ್ರಿಶ್ಚಿಯನ್18,000
ಮುಸ್ಲಿಂ15,000
ಜೈನ್9,000
ಜಿಎಸ್​ಬಿ10,000
ಪರಿಶಿಷ್ಟ ಜಾತಿ11,000
ದೇವಾಡಿಗ9,000
ಬ್ರಾಹ್ಮಣ7,000
ಕುಂಬಾರ8,000

2018ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಗೋಪಾಲ ಭಂಡಾರಿಯನ್ನು 42,566 ಮತಗಳ ಅಂತರದಲ್ಲಿ ಸೋಲಿಸಿದ್ದರು. ಹೀಗಿತ್ತು 2018ರ ಫಲಿತಾಂಶ.

ಪಕ್ಷಅಭ್ಯರ್ಥಿಮತಗಳು   
ಬಿಜೆಪಿವಿ. ಸುನಿಲ್ ಕುಮಾರ್91,245
ಕಾಂಗ್ರೆಸ್​ಗೋಪಾಲ ಭಂಡಾರಿ48679
AIMEPಮಕ್ಸೂದ್​ ಅಹ್ಮದ್ 1817
NOTANone of the Above1340

Published by:ಪ್ರೆಸಿಲ್ಲಾ ಒಲಿವಿಯಾ ಡಾಯಸ್
First published: