Bhalki Elections: ಯಾರಿಗೆ ಒಲಿಯುತ್ತೆ ಬಾಲ್ಕಿ, ಹೀಗಿದೆ ನೋಡಿ ಚುನಾವಣಾ ಸಮೀಕ್ಷೆ!

ಭಾಲ್ಕಿ ಭಾರತದ ಕರ್ನಾಟಕ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರವು ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ತಾಲೂಕುಗಳನ್ನು ಒಳಗೊಂಡಿದೆ.

ಭಾಲ್ಕಿ ಭಾರತದ ಕರ್ನಾಟಕ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರವು ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ತಾಲೂಕುಗಳನ್ನು ಒಳಗೊಂಡಿದೆ.

ಭಾಲ್ಕಿ ಭಾರತದ ಕರ್ನಾಟಕ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರವು ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ತಾಲೂಕುಗಳನ್ನು ಒಳಗೊಂಡಿದೆ.

  • Share this:

ಮೇ 10 ರ ಕರ್ನಾಟಕ ವಿಧಾನಸಭೆಯ ಕಾವು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ವ್ಯಾಪಿಸಿದೆ. ಪಕ್ಷಗಳ ಪ್ರಮುಖ ನೇತಾರರು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಬಿಸಿಲು ಮಳೆಯನ್ನು ಲೆಕ್ಕಿಸದೇ ಮತಪ್ರಚಾರ ನಡೆಸುತ್ತಿದ್ದಾರೆ.


ಅಭ್ಯರ್ಥಿಗಳ ಬಿರುಸಿನ ಮತದಾನ


ಬಿಜೆಪಿಯಿಂದ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಕಾಂಗ್ರೆಸ್‌ನಿಂದ ರಾಹುಲ್, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಚಾರದಲ್ಲಿ ಭಾಗಿಯಾಗಿ ಮತದಾರರನ್ನು ಓಲೈಸುತ್ತಿದ್ದಾರೆ ಅಂತೆಯೇ ಬಿರುಸಿನ ಭಾಷಣಗಳನ್ನು ಮಾಡುವ ಮೂಲಕ ಯಾರನ್ನು ಗೆಲ್ಲಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.


ಕ್ಷೇತ್ರಕ್ಕಿರುವ ಮಹತ್ವ


ಚುನಾವಣೆಯ ಚದುರಂಗದಾಟದಲ್ಲಿ ಅಭ್ಯರ್ಥಿ ಹಾಗೂ ಪಕ್ಷ ಎಷ್ಟು ನಿರ್ಣಾಯಕವೋ ಅಂತೆಯೇ ಕ್ಷೇತ್ರ ಕೂಡ ಅಷ್ಟೇ ಮಹತ್ವದ್ದಾಗಿದೆ. ಗೆದ್ದ ಅಭ್ಯರ್ಥಿ ಈ ಹಿಂದೆ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಹಾಗೂ ಇನ್ನು ಮುಂದೆ ಯಾವ ರೀತಿಯ ಕೆಲಸಗಳನ್ನು ಮಾಡಲಿದ್ದಾರೆ ಎಂಬುದನ್ನು ನಿರ್ಧರಿಸಿಕೊಂಡೇ ಮತದಾರ ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ.


ಹಾಗಾಗಿ ಚುನಾವಣೆಯಲ್ಲಿ ಆಯಾಯ ಕ್ಷೇತ್ರಗಳು ಹಾಗೂ ನಿಂತಿರುವ ಪಕ್ಷಗಳ ಅಭ್ಯರ್ಥಿಗಳು, ಮತದಾರರ ಪ್ರಮಾಣ, ಹಿಂದಿನ ಚುನಾವಣಾ ಪ್ರಗತಿ ಮೊದಲಾದ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.


ಭಾಲ್ಕಿ ವಿಧಾನಸಭಾ ಕ್ಷೇತ್ರದ ಪರಿಚಯ


ಇಂದಿನ ಲೇಖನದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಭಾಲ್ಕಿ ಕ್ಷೇತ್ರದ ಬಗ್ಗೆ ಒಂದಿಷ್ಟು ಮಾಹಿತಿ ಪಡೆದುಕೊಳ್ಳೋಣ. ಭಾಲ್ಕಿ ಭಾರತದ ಕರ್ನಾಟಕ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರವು ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ತಾಲೂಕುಗಳನ್ನು ಒಳಗೊಂಡಿದೆ.


ಭರ್ಜರಿ ಪೈಪೋಟಿ


ಭಾಲ್ಕಿ ಕ್ಷೇತ್ರ ತನ್ನ ಶ್ರೀಮಂತ ಪರಂಪರೆ ಹಾಗೂ ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಹಲವಾರು ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿವೆ.


ಭಾಲ್ಕಿಯಲ್ಲಿ ಕೂಡ ಮೇ 10 ರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷಗಳ ಪರಿಚಯವನ್ನು ಜೋರಾಗಿಯೇ ಮಾಡುತ್ತಿದ್ದು ಪೈಪೋಟಿ ಏರ್ಪಟ್ಟಿದೆ.


ಜೆಡಿಎಸ್‌ನಿಂದ ರೌಫ್ ಪಟೇಲ್ ಭಾಲ್ಕಿಯಲ್ಲಿ ಕಣಕ್ಕಿಳಿದಿದ್ದು ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಈಶ್ವರ್ ಖಂಡ್ರೆ, ಬಿಜೆಪಿಯಿಂದ ಪ್ರಕಾಶ್ ಖಂಡ್ರೆ ಸ್ಪರ್ಧಿಸಲಿದ್ದಾರೆ.


ಈಶ್ವರ ಖಂಡ್ರೆ ಜಯ


2018 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಅವರು 21438 ಮತಗಳ ಅಂತರದಿಂದ ಬಿಜೆಪಿಯ ಡಿ ಕೆ ಸಿದ್ರಾಮ್ ಅವರನ್ನು ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದರು.


2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯ ಭಗವಂತ ಖೂಬಾ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಈಶ್ವರ್ ಅವರನ್ನು ಸೋಲಿಸುವ ಮೂಲಕ ಬೀದರ್ ಲೋಕಸಭೆ (MP) ಸ್ಥಾನದಿಂದ 116834 ಮತಗಳ ಅಂತರದಿಂದ ಗೆದ್ದರು.


2013 ರಲ್ಲಿ ಬಿಜೆಪಿಯ ಡಿ.ಕೆ ಸಿದ್ರಾಮ್ ಅವರನ್ನು 9,669 ಮತಗಳಿಂದ ಸೋಲಿಸುವ ಮೂಲಕ ಈಶ್ವರ ಖಂಡ್ರೆ ಜಯಗಳಿಸಿದ್ದಾರೆ. ಒಟ್ಟಿನಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರವು 1962 ರಿಂದ ಖಂಡ್ರೆ ಕುಟುಂಬದ ಭದ್ರ ಕೋಟೆಯಾಗಿಯೇ ಉಳಿದಿದ್ದು ಇದಕ್ಕೆ ಕಾರಣ ಈಶ್ವರ ಖಂಡ್ರೆಯವರ ತಂದೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. 15 ವಿಧಾನಸಭಾ ಚುನಾವಣೆಗಳಲ್ಲಿ ಖಂಡ್ರೆ ಕುಟುಂಬದ ಸದಸ್ಯರು 11 ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಪರವಾಗಿ ಗೆದ್ದಿದ್ದಾರೆ.


ಮತದಾರರ ಸಂಖ್ಯೆ


ಭಾಲ್ಕಿಯಲ್ಲಿರುವ ಒಟ್ಟು ಮತದಾರರ ಸಂಖ್ಯೆ 222,472 ಆಗಿದ್ದು ಪುರುಷ ಮತದಾರರು 1,16,904 ಅಂತೆಯೇ ಮಹಿಳಾ ಮತದಾರರು 1,05,560. ಕ್ಷೇತ್ರವು ಅಂದಾಜು 21.56% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 8.74% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ. 2011 ರ ಭಾರತದ ಜನಗಣತಿಯ ಪ್ರಕಾರ ಅಂದಾಜು ಸಾಕ್ಷರತೆಯ ಮಟ್ಟವು 70.51% ಆಗಿದೆ.

First published: