• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kalghatagi: ಈ ಬಾರಿ ಯಾರಿಗೆ 'ಸಂತೋಷ', ಯಾರಿಗೆ ಸಿಹಿ 'ಲಾಡ್'? ಕುತೂಲಹದ ಕಣಜವಾದ ಕಲಘಟಗಿ

Kalghatagi: ಈ ಬಾರಿ ಯಾರಿಗೆ 'ಸಂತೋಷ', ಯಾರಿಗೆ ಸಿಹಿ 'ಲಾಡ್'? ಕುತೂಲಹದ ಕಣಜವಾದ ಕಲಘಟಗಿ

ಕಲಘಟಗಿ ವಿಧಾನಸಭಾ ಕ್ಷೇತ್ರ

ಕಲಘಟಗಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ನಾಯಕನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಮತ್ತೊಂದೆಡೆ ಉದ್ಯಮಿ, ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ಈ ಬಾರಿ ಕಣದಲ್ಲಿದ್ದಾರೆ. ಹೀಗಾಗಿ ಕಲಘಟಗಿ ವಿಧಾನಸಭಾ ಕ್ಷೇತ್ರ ಈ ಬಾರಿ ಭಾರೀ ಕುತೂಹಲ ಕೆರಳಿಸಿದೆ.

  • News18 Kannada
  • 2-MIN READ
  • Last Updated :
  • Hubli-Dharwad (Hubli), India
  • Share this:

ಧಾರವಾಡ (Dharwad) ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರವು (Kalaghatagi assembly constituency) ಲಿಂಗಾಯತರು (Lingayat) ಮತ್ತು ಮರಾಠಿಗ (Maratha) ಮತದಾರರನ್ನು ಹೆಚ್ಚಾಗಿ ಹೊಂದಿದ್ದು, ಈ ಎರಡು ಸಮುದಾಯಗಳ ಮತಗಳೇ ಇಲ್ಲಿ ನಿರ್ಣಾಯಕ. ಸದ್ಯ ಬಿಜೆಪಿ (BJP) ಪಾರುಪತ್ಯವಿರುವ ಈ ಕ್ಷೇತ್ರದಲ್ಲಿ ಸಿ.ಎಂ. ನಿಂಬಣ್ಣನವರ್ (CM. Nimbannavar) ಅವರು ಇಲ್ಲಿನ ಶಾಸಕರಾಗಿದ್ದಾರೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಕಾಂಗ್ರೆಸ್‌ನಿಂದ (Congress) ವಲಸೆ ಬಂದಿದ್ದ ನಾಯಕನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಮತ್ತೊಂದೆಡೆ ಉದ್ಯಮಿ, ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ (Santosh Lad) ಈ ಬಾರಿ ಕಣದಲ್ಲಿದ್ದಾರೆ. ಹೀಗಾಗಿ ಕಲಘಟಗಿ ವಿಧಾನಸಭಾ ಕ್ಷೇತ್ರ ಈ ಬಾರಿ ಭಾರೀ ಕುತೂಹಲ ಕೆರಳಿಸಿದೆ.


ಕಲಘಟಗಿ ವಿಧಾನಸಭಾ ಕ್ಷೇತ್ರದ ಹಿನ್ನೆಲೆ


ಕಲಘಟಗಿಯು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಐದು ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ಅತ್ಯಂತ ಚೀನವಾದದ್ದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನಿಗೆ ಸೇರಿದ್ದು. ಮರಾಠರ ಕಾಲದಲ್ಲಿ ಇದು ಸಾಮಂತರ ಕೇಂದ್ರವಾಗಿತ್ತು. ಕಲಘಟಗಿಯಲ್ಲಿ 18ನೆ ಶತಮಾನದ ಮುಸ್ಲಿಂ ಸಂತ ರುಸ್ತುಂ ಶಹೀದನ ಗೋರಿಯಿದೆ. ಪ್ರತಿವರ್ಷ ಯುಗಾದಿಯ ಅನಂತರ ಇಲ್ಲಿ ಉರುಸು ನಡೆಯುತ್ತದೆ. ಕಲಘಟಗಿಯ ಅಕ್ಕಿ ರುಚಿಗೆ ಬಲು ಹೆಸರುವಾಸಿ. ಆದ್ದರಿಂದ ಅದಕ್ಕೆ ಬಹಳ ಬೇಡಿಕೆ ಇದೆ. ಅಕ್ಕಿಯನ್ನು ಬಹಳ ದೂರದ ಪ್ರದೇಶಗಳಿಗೆ ರವಾನಿಸುತ್ತಾರೆ.


ಶಾಸಕ ನಿಂಬಣ್ಣನವರ್


ಕಲಘಟಗಿ ವಿಧಾನಸಭಾ ಕ್ಷೇತ್ರ ರಚನೆ


ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹುಬ್ಬಳ್ಳಿ ತಾಲೂಕಿನ ಹಳ್ಳಿಗಳನ್ನು ಕುಂದಗೋಳಕ್ಕೆ ಸೇರಿಸಿ, ಧಾರವಾಡ ಕ್ಷೇತ್ರದಲ್ಲಿದ್ದ ಅಳ್ನಾವರ ಸೀಮೆಯನ್ನು ಜೋಡಿಸಲಾಗಿತ್ತು. 2007ರ ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಷನ್‌ನಲ್ಲಿ ಕಲಘಟಗಿ ಕ್ಷೇತ್ರದ ಜಾತಿ ಸಮೀಕರಣ ಬದಲಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಳೆಯ ತಾಲೂಕು ಕಲಘಟಗಿ ಮತ್ತು ಐದು ವರ್ಷದ ಹಿಂದೆ ಹೊಸದಾಗಿ ಸೇರ್ಪಡೆಯಾದ ಅಳ್ನಾವರ ತಾಲೂಕು ಸೇರಿವೆ.


ಸಂತೋಷ್ ಲಾಡ್


ಇದನ್ನೂ ಓದಿ: Navalgund: ರೈತ ಬಂಡಾಯದ ನೆಲದಲ್ಲಿ ಹೇಗಿದೆ ಚುನಾವಣಾ ಕಾವು? ನವಲಗುಂದ ಕ್ಷೇತ್ರದ ಚಿತ್ರಣ ಇಲ್ಲಿದೆ


2018ರ ವಿಧಾನಸಭಾ ಚುನಾವಣಾ ಫಲಿತಾಂಶ


2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಸಿ.ಎಂ. ನಿಂಬಣ್ಣವರ್ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಯ ಸಂತೋಷ್ ಎಸ್ ಲಾಡ್ 25997 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.


ನಾಗರಾಜ್ ಛಬ್ಬಿ


ಈ ಬಾರಿ ಕುತೂಹಲ ಮೂಡಿಸಿದ ಕ್ಷೇತ್ರ


ಈ ಬಾರಿ ಕ್ಷೇತ್ರದಲ್ಲಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ಬಾಲಿ ಶಾಸಕ ನಿಂಬಣ್ಣನವರ್‌ಗೆ ಟಿಕೆಟ್ ತಪ್ಪಿಸಲಾಗಿದೆ. ಅವರ ಬದಲಾಗಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದ ನಾಗರಾಜ್ ಛಬ್ಬಿ ಬಿಜೆಪಿ ಸೇರಿದ್ದಾರೆ. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಅತ್ತ ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಉದ್ಯಮಿ, ರಾಜಕಾರಣಿ, ಮಾಜಿ ಸಚಿವ ಸಂತೋಷ್‌ ಲಾಡ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್‌ನಿಂದ ವೀರಪ್ಪ ಬಸಪ್ಪ ಶೀಗೆಹಟ್ಟಿ ಸ್ಪರ್ಧೆಗೆ ಸಜ್ಜಾಗಿದ್ದಾರೆ.


ಇದನ್ನೂ ಓದಿ: Hubli-Dharwad East: ಹು-ಧಾ ಪೂರ್ವದಲ್ಲಿ ನಡೆಯುತ್ತಾ ತ್ರಿಕೋನ ಸ್ಪರ್ಧೆ? ಮತ್ತೆ ಗೆದ್ದು ಬೀಗುತ್ತಾರಾ ಪ್ರಸಾದ್ ಅಬ್ಬಯ್ಯ?


ಕ್ಷೇತ್ರದ ಮತದಾರರ ವಿವರ


ಕ್ಷೇತ್ರದಲ್ಲಿರುವ ಒಟ್ಟು 1,89,693 ಮತದಾರರಲ್ಲಿ ಲಿಂಗಾಯತರು 60 ಸಾವಿರ, ಮರಾಠರು 30 ಸಾವಿರ, ಮುಸ್ಲಿಮರು 35 ಸಾವಿರ, ಎಸ್ಸಿ-ಎಸ್ಟಿ 50 ಸಾವಿರ ಇದ್ದಾರೆ. ಇನ್ನು 1,89,693 ಮತದಾರರಲ್ಲಿ ಪುರುಷ 97,998, ಮಹಿಳೆ 91,388, ಇತರೆ 8 ಇದ್ದಾರೆ. ಜಾತಿವಾರು ನೋಡಿದಾಗ, ಲಿಂಗಾಯತ ಸಮುದಾಯದವರು 60,000, ಮರಾಠಾ 40,000, ವಾಲ್ಮೀಕಿ 30,500, ಮುಸ್ಲಿಂ 22,500, ಎಸ್ಸಿ-ಎಸ್ಟಿ 50 ಸಾವಿರ ಹಾಗೂ ಇತರೆ 16,000 ಮಂದಿ ಮತದಾರರಿದ್ದಾರೆ.

First published: