Karnataka Assembly Elections: ಜಯನಗರದಲ್ಲಿ ಈ ಬಾರಿ ಯಾರಿಗೆ ಜಯ? ಮತ್ತೆ 'ಕೈ'ಗೆ ಸಿಗುತ್ತಾ ಅಧಿಕಾರ?

ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಮಾತಿದೆ. ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಸದ್ಯ ಹೇಗಿದೆ ಕ್ಷೇತ್ರದಲ್ಲಿ ರಾಜಕೀಯ ಪರಿಸ್ಥಿತಿ?

ಜಯನಗರ ಶಾಸಕಿ ಸೌಮ್ಯಾ ರೆಡ್ಡಿ

ಜಯನಗರ ಶಾಸಕಿ ಸೌಮ್ಯಾ ರೆಡ್ಡಿ

  • Share this:
ರಾಜ್ಯದಲ್ಲಿ ಈ ಭಾರೀ ವಿಧಾನಸಭಾ ಎಲೆಕ್ಷನ್ (Assembly Election) ಹಂಗಾಮ. ಮಳೆಗಾಲ (Rainy Season) ಮುಗಿಯುತ್ತಿದ್ದಂತೆ ಚಳಿಗಾಲದ (Winter) ಜೊತೆಗೆ ಎಲೆಕ್ಷನ್‌ನ ಬಿಸಿಯೂ ಹೆಚ್ಚುತ್ತಾ ಹೋಗುವುದರಲ್ಲಿ ಡೌಟೇ ಇಲ್ಲ. ಹೀಗಾಗಿ ರಾಜ್ಯದ ಒಂದೊಂದೇ ಕ್ಷೇತ್ರಗಳ ರಾಜಕೀಯ ದರ್ಶನ ಮಾಡುವುದು ಸೂಕ್ತ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿಲಲ್ಲಿ ಇರುವ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ (Assembly constituency) ಪೈಕಿ ಜಯನಗರ (Jayanagar) ಕ್ಷೇತ್ರವೂ ಒಂದು. ಬೆಂಗಳೂರಿನ ಶ್ರೀಮಂತ ಬಡಾವಣೆಗಳಲ್ಲಿ ಒಂದು ಎಂಬ ಖ್ಯಾತೆ ಜೊತೆಗೆ ಏಷ್ಯಾದ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದು ಎಂಬ ಹಿರಿಮೆ ಜಯನಗರಕ್ಕಿದೆ. ಈ ಹಿಂದೆ ‘ಕೇಸರಿ ಕೋಟೆ’ಯಾಗಿದ್ದ ಜಯನಗರದಲ್ಲಿ ಈಗ ‘ಕೈ’ಗೆ ಅಧಿಕಾರ ಸಿಕ್ಕಿದೆ. ಮತ್ತೆ ಕೈ ಅಧಿಕಾರ ಮುಂದುವರಿಸೋ ಇರಾದೆ ಕಾಂಗ್ರೆಸ್‌ಗೆ ಇದ್ದರೆ, ಬಿಜೆಪಿ ಮತ್ತೆ ಮರಳಿ ಜಯನಗರದಲ್ಲಿ ಕಮಲ ಕಹಳೆ ಊದೋಕೆ ಪ್ಲಾನ್ ಮಾಡಿದೆ. ಇನ್ನು ಈ ಎರಡರ ನಡುವೆ ಜಯನಗರದ ಬಗ್ಗೆ ಜೆಡಿಎಸ್‌ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ!

ಜಯನಗರ ಕ್ಷೇತ್ರ ಹಿರಿಮೆ

ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಮಾತಿದೆ. ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಜಯನಗರವು ಬಸವನಗುಡಿ, ಜೆಪಿ ನಗರ, ಬನಶಂಕರಿ ಹಾಗೂ ಬಿಟಿಎಂ ಬಡಾವಣೆಗಳಿಂದ ಸುತ್ತುವರಿದಿದೆ. ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ ಎನ್ನುವುದು ಬೆಂಗಳೂರಿನ ಮಟ್ಟಿಗೆ ಹೆಮ್ಮೆಯ ವಿಚಾರ.

ಮಾಜಿ ಶಾಸಕ, ದಿ. ವಿಜಯಕುಮಾರ್


ಹಲವು ಆಸ್ಪತ್ರೆ, ವಿದ್ಯಾಸಂಸ್ಥೆಗಳ ನೆಲೆವೀಡು

ಜಯನಗರ ಹಲವು ವಿದ್ಯಾಸಂಸ್ಥೆಗಳು, ಹಲವು ಪ್ರತಿಷ್ಠಿತ ಆಸ್ಪತ್ರೆಗಳು ಜೊತೆಗೆ ಜಯನಗರ ಕಾಂಪ್ಲೆಕ್ಸ್ ಎಂಬ ಹಳೆಯ ಶಾಪಿಂಗ್ ಕಟ್ಟಡವನ್ನು ಒಳಗೊಂಡಿದೆ. ನ್ಯಾಷನಲ್ ಕಾಲೇಜು, ಆರ್‌ವಿ  ಪೂರ್ವ ವಿಶ್ವವಿದ್ಯಾಲಯ, ವಿಜಯಾ ಕಾಲೇಜು ಸೇರಿದಂತೆ ಹಲವು ವಿದ್ಯಾಸಂಸ್ಥೆಗಳಿವೆ. ಜಯನಗರ ಜನರಲ್ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ಅಪೊಲೊ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ಅತ್ಯುತ್ತಮ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಇಲ್ಲಿವೆ.

ಇದನ್ನೂ ಓದಿ: Karnataka Assembly Elections: ಪದ್ಮನಾಭನಗರದಲ್ಲಿ ಮತ್ತೆ ಕಮಲ ಅರಳುವುದೇ? ಸಾಮ್ರಾಟ್ ಅಶೋಕನ ವಿರುದ್ಧ ಕೈ-ದಳ ಕಹಳೆ!

ಹಲವು ಖ್ಯಾತನಾಮರ ಮನೆ ಇರುವುದು ಇಲ್ಲೇ!

ಇನ್ನು ಚಿತ್ರರಂಗ, ನಾಟಕ, ಸಾಹಿತ್ಯ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಮನೆಗಳು ಇಲ್ಲೇ ಇವೆ. ನಟ, ಸಾಹಸಸಿಂಹ ವಿಷ್ಣುವರ್ಧನ್, ಅನಿಲ್ ಕುಂಬ್ಳೆ, ನಾರಾಯಣ ಮೂರ್ತಿ, ಸುಧಾಮೂರ್ತಿ ದಂಪತಿ ಸೇರಿದಂತೆ ಹಲವು ಖ್ಯಾತನಾಮರ ಮನೆಗಳು ಇಲ್ಲೇ ಇವೆ. ಇನ್ನು ವಿಶೇಷ ಅಂದ್ರೆ ಭಾರತದ ರಾಷ್ಟ್ರಪತಿ ವಿವಿ ಗಿರಿಯವರು ಇದೇ ಏರಿಯಾದಲ್ಲಿ ನೆಲೆಸಿದ್ದರು.

ವಿಜಯಕುಮಾರ್ ಸಹೋದರ ಪ್ರಹ್ಲಾದ್


ಬಿಜೆಪಿ ಭದ್ರಕೋಟೆಯಾಗಿದ್ದ ಜಯನಗರ

ಪಟ್ಟಾಭಿರಾಮನಗರ, ಬೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆ.ಪಿ. ನಗರ, ಸಾರಕ್ಕಿ ಹಾಗೂ ಶಾಕಾಂಬರಿನಗರ ಎಂಬ 6 ಬಿಬಿಎಂಪಿ ವಾರ್ಡ್‌ಗಳು ಜಯನಗರ ವ್ಯಾಪ್ತಿಗೆ ಬರುತ್ತವೆ. ಈ ಪೈಕಿಯ ಬಿಜೆಪಿಯದ್ದೇ ಪಾರುಪತ್ಯವಿದೆ. ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜಯನಗರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು ಮಾಜಿ ಶಾಸಕ, ದಿ. ವಿಜಯಕುಮಾರ್.

ಬಿಬಿಎಂಪಿ ಮಾಜಿ ಸದಸ್ಯ ಎನ್‌.ಆರ್. ರಮೇಶ್


ಪ್ರಚಾರದಲ್ಲಿದ್ದಾಗಲೇ ಅನಾರೋಗ್ಯದಿಂದ ನಿಧನ

ವಿಜಯಕುಮಾರ್ 2 ಬಾರಿ ಶಾಸಕರಾಗಿದ್ದರು. ಮೂರನೇ ಬಾರಿ ನಾಮಪತ್ರ ಸಲ್ಲಿಸಿ, ಪ್ರಚಾರದಲ್ಲೂ ತೊಡಗಿದ್ದರು. ಜನನುರಾಗಿಯಾಗಿದ್ದ ವಿಜಯಕುಮಾರ್ ತಮ್ಮ ಸಾದಾಸೀದಾ, ನೇರ ನಡೆ ನುಡಿ, ಸರಳ ವ್ಯಕ್ತಿತ್ವದಿಂದ ಜನರ ಮನಗೆದ್ದಿದ್ದರು. ಜೊತೆಗೆ ಕ್ಲೀನ್ ಹ್ಯಾಂಡ್ ಎಂಬ ಇಮೇಜ್ ಕೂಡ ಇತ್ತು. ಆದರೆ 2018ರಲ್ಲಿ ಚುನಾವಣೆ ಪ್ರಚಾರದ ವೇಳೆ ಹೃದಯಾಘಾತಕ್ಕೆ ಬಲಿಯಾದರು.

ತಂದೆ ಜೊತೆ ಶಾಸಕಿ ಸೌಮ್ಯಾ ರೆಡ್ಡಿ


ಮಗಳ ಮೂಲಕ ಕೈವಶ ಮಾಡಿಕೊಂಡ ರಾಮಲಿಂಗಾರೆಡ್ಡಿ

ಅದೇ ವರ್ಷ ಕಾಂಗ್ರೆಸ್‌ನಿಂದ ಅಂದು ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿಯನ್ನು ಅಖಾಡಕ್ಕಿಳಿಸಲಾಗಿತ್ತು. 1989ರಿಂದ 2008ರವರೆಗೆ 20 ವರ್ಷ ಜಯನಗರದಲ್ಲಿ ಪಾರುಪತ್ಯ ಸ್ಥಾಪಿಸಿದ್ದ ರಾಮಲಿಂಗಾರೆಡ್ಡಿಗೆ ಇದು ಹಳೆಯ ಕ್ಷೇತ್ರ. ಅವರು ಪಕ್ಕದ ಬಿಟಿಎಂ ಲೇಔಟ್‌ಗೆ ಹೋದ ಬಳಿಕ ಇತ್ತ ಬಿಜೆಪಿ ಕೈವಶವಾಗಿತ್ತು. ಅದಾದ ಬಳಿಕ ವಿಜಯಕುಮಾರ್ ನಿಧನರಾದಾಗ ಪುತ್ರಿ ಸೌಮ್ಯಾರೆಡ್ಡಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದರು.

ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ಆಡಳಿತ ಹೇಗಿದೆ?

ಕಾಂಗ್ರೆಸ್‌ನ ಯುವ ನಾಯಕಿ ಎಂಬ ಹಣೆಪಟ್ಟಿಯೊಂದಿಗೆ ಬಂದ ಸೌಮ್ಯಾ ರೆಡ್ಡಿ, ರಾಜಕೀಯದಲ್ಲೂ ಹೊಸ ಮುಖವೇ. ಎಜುಕೇಟೆಡ್‌, ಯಂಗ್ ಆ್ಯಂಡ್ ಎನರ್ಜೆಟಿಕ್ ಎಂಬ ಪ್ಲಸ್ ಪಾಯಿಂಟ್ಸ್ ಜೊತೆಗೆ ರಾಜಕೀಯಕ್ಕೆ ಬರುವ ಮುನ್ನವೇ ಸೋಶಿಯಲ್ ಸರ್ವಿಸ್‌ಗಳ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮಹಿಳೆಯರ ಪರ ದನಿಯೆತ್ತುತ್ತಾರೆ, ಯುವಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬುದೂ ಮತ್ತಷ್ಟು ಹೆಚ್ಚುಗಾರಿಕೆ. ಹೀಗಾಗಿ ಈ ಬಾರಿಯೂ ಅವರೇ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವುದು ಪಕ್ಕಾ.

ಇದನ್ನೂ ಓದಿ:  Karnataka Assembly Elections: ಹಾಲಿ ಸಚಿವರ ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ? ಗೋವಿಂದರಾಜನಗರದ ಚಿತ್ರಣ ಇಲ್ಲಿದೆ

ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು!

ಅತ್ತ ಜಯನಗರ ಕ್ಷೇತ್ರವನ್ನು ಮರಳಿ ಪಡೆಯಬೇಕು ಎಂಬ ಹಂಬಲದಲ್ಲಿರುವ ಬಿಜೆಪಿ ಈಗಾಗಲೇ ರಣತಂತ್ರ ರೂಪಿಸಿದೆ. ಆದರೆ ಟಿಕೆಟ್ ಆಕಾಂಕ್ಷಿಗಳ ದಂಡೂ ಬೆಳೆಯುತ್ತಿದೆ. ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್, ಮಾಜಿ ಉಪಮೇಯರ್ ರಾಮಮೂರ್ತಿ ಜೊತೆಗೆ ಈ ಹಿಂದೆ ಪರಾಜಿತರಾಗಿದ್ದ ಬಿ.ಎನ್​ ಪ್ರಹ್ಲಾದ್ ಕೂಡ ಸ್ಪರ್ಧೆಗೆ ಉತ್ಸಾಹ ತೋರುತ್ತಿದ್ದಾರೆ. ಮಾಜಿ ಶಾಸಕ ವಿಜಯ್‌ ಕುಮಾರ್‌ ಇವರ ಸಹೋದರರಾಗಿರುವುದರಿಂದ ಮತದಾರರ ಅನುಕಂಪನೂ ಇವರ ಮೇಲಿದೆ. ಅತ್ತ ಜೆಡಿಎಸ್‌ಗೆ ಈ ಕ್ಷೇತ್ರದ ಮೇಲೆ ಯಾವುದೇ ಉತ್ಸಾಹ ಇದ್ದಂತೆ ತೋರುತ್ತಿಲ್ಲ.























ಕಾಂಗ್ರೆಸ್ಬಿಜೆಪಿಜೆಡಿಎಸ್
ಸೌಮ್ಯಾ ರೆಡ್ಡಿಎನ್.ಆರ್. ರಮೇಶ್ಗೊತ್ತಿಲ್ಲ
ರಾಮಮೂರ್ತಿ
ಬಿ.ಎನ್. ಪ್ರಹ್ಲಾದ್



ಜಯನಗರ ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಒಟ್ಟು 2,07,298 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗರು-46,500, ಲಿಂಗಾಯತರು-2,000, ಬ್ರಾಹ್ಮಣರು-37,000, ಒಬಿಸಿ-12,000, ಎಸ್ಸಿ,ಎಸ್ಟಿ-34,500, ಮುಸ್ಲಿಂ-59,799 ಹಾಗೂ ಇತರೆ ಸಮುದಾಯದ ಮತದಾರರ ಸಂಖ್ಯೆ 15,500 ದಷ್ಟಿದೆ. ಹಾಗಾಗಿ ಇಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಲಿದೆ.



































ಒಟ್ಟು ಮತದಾರರ2,07,298
ಒಕ್ಕಲಿಗರು46,500
ಲಿಂಗಾಯತರು2,000
ಬ್ರಾಹ್ಮಣರು37,000
ಒಬಿಸಿ12,000
ಎಸ್‌ಸಿ-ಎಸ್‌ಟಿ34,500
ಮುಸ್ಲಿಂ59,799
ಇತರೇ15,500



ಜಯನಗರ ಕ್ಷೇತ್ರದಲ್ಲಿ ಸಮಸ್ಯೆ

ಇಷ್ಟೆಲ್ಲಾ ಹಿರಿಮೆ ಗರಿಮೆ ಇರುವ ಜಯನಗರ ಕ್ಷೇತ್ರದಲ್ಲೂ ಹತ್ತಾರು ಸಮಸ್ಯೆಗಳಿವೆ. ಕಿರಿದಾದ ರಸ್ತೆಗಳು, ಒಳಚರಂಡಿ ಸಮಸ್ಯೆ, ಸಂಚಾರ ದಟ್ಟಣೆ, ಮಕ್ಕಳ ಆಟದ ಮೈದಾನದ ಕೊರತೆ, ಉದ್ಯಾನ ಒತ್ತುವರಿ ಇನ್ನಿತರ ಸಮಸ್ಯೆಗಳಿವೆ. ಸಾರಕ್ಕಿಯಲ್ಲಿ ಯಾವಾಗಲೂ ಮಳೆ ನೀರಿನಿಂದ ಸಮಸ್ಯೆ ಆಗುತ್ತದೆ ಎನ್ನುವುದು ಜನರ ಆರೋಪ. ಹೀಗಾಗಿ ಶಾಸಕಿ ಸೌಮ್ಯಾರೆಡ್ಡಿ ಈ ಬಾರಿಯಾದರೂ ಇದನ್ನೆಲ್ಲ ಪರಿಹರಿಸಿ, ಮತ್ತೆ ಗೆಲುವು ಸಾಧಿಸ್ತಾರಾ ನೋಡಬೇಕು.
Published by:Annappa Achari
First published: