• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Assembly Elections: ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಅಂಗಡಿ ತೆರೆಯುತ್ತಾರಾ ಶೆಟ್ಟರ್? ಹೇಗಿದೆ ಅಲ್ಲಿನ ಚುನಾವಣಾ ಲೆಕ್ಕಾಚಾರ?

Karnataka Assembly Elections: ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಅಂಗಡಿ ತೆರೆಯುತ್ತಾರಾ ಶೆಟ್ಟರ್? ಹೇಗಿದೆ ಅಲ್ಲಿನ ಚುನಾವಣಾ ಲೆಕ್ಕಾಚಾರ?

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ

ಶತಾಯಗತಾಯ ಜಗದೀಶ್ ಶೆಟ್ಟರ್ಗೆ ಟಿಕೆಟ್ ತಪ್ಪಿಸಬೇಕೆಂದು ಕೆಲವರ ಛಲವಾಗಿದೆ. ಶೆಟ್ಟರ್ ಜೊತೆ ಅವರ ಕುಟುಂಬಕ್ಕೂ ಟಿಕೇಟ್ ನೀಡಬಾರದೆಂದು ತಂತ್ರ ರೂಪಿಸಲಾಗುತ್ತಿದೆ ಅಂತ ಹೇಳಲಾಗುತ್ತಿದೆ. ಹಾಗಾದ್ರೆ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ಜ್ವರ? ಹೇಗಿದೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರ? ಈ ಬಗ್ಗೆ ಏನು ಹೇಳ್ತಾನೆ ಮತದಾರ? ಸಂಪೂರ್ಣ ವಿವರ ಇಲ್ಲಿದೆ ಓದಿ…

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ–ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ (Hubli Dharwad Central Assembly Constituency) ಬಿಜೆಪಿಯಿಂದ (BJP) ಹೊಸ ಅಭ್ಯರ್ಥಿ!? ಹೀಗೊಂದು ಗುಸು ಗುಸು ಬಿಜೆಪಿ ವಲಯದಲ್ಲಿ ಶುರುವಾಗಿದೆ. ಮಾಜಿ ಸಿಎಂಗೆ ಕೊಕ್ ಕೊಡೋಕೆ ತೆರೆಮರೆಯ ತಯಾರಿ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ. ಘಟಾನುಘಟಿ ನಾಯಕರು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಶತಾಯಗತಾಯ ಜಗದೀಶ್ ಶೆಟ್ಟರ್‌ಗೆ (Jagadish Shettar) ಟಿಕೆಟ್ ತಪ್ಪಿಸಬೇಕೆಂದು ಕೆಲವರ ಛಲವಾಗಿದೆ. ಶೆಟ್ಟರ್ ಜೊತೆ ಅವರ ಕುಟುಂಬಕ್ಕೂ ಟಿಕೇಟ್ ನೀಡಬಾರದೆಂದು ತಂತ್ರ ರೂಪಿಸಲಾಗುತ್ತಿದೆ ಅಂತ ಹೇಳಲಾಗುತ್ತಿದೆ. ಹಾಗಾದ್ರೆ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ಜ್ವರ? ಹೇಗಿದೆ ಬಿಜೆಪಿ, ಕಾಂಗ್ರೆಸ್ (Congress), ಜೆಡಿಎಸ್ (JDS) ಲೆಕ್ಕಾಚಾರ? ಈ ಬಗ್ಗೆ ಏನು ಹೇಳ್ತಾನೆ ಮತದಾರ? ಸಂಪೂರ್ಣ ವಿವರ ಇಲ್ಲಿದೆ ಓದಿ…


ಜೋಶಿ-ಶೆಟ್ಟರ್ ದೂರಾ ದೂರ!


ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಶೆಟ್ಟರ್ ನಡುವೆ ಅಂತರ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಲವ – ಕುಶರಂತಿದ್ದ ನಾಯಕರ ನಡುವೆ ವೈಮನಸ್ಸು ಹೆಚ್ಚಿದೆ. ಬಿರುಕು ಹೆಚ್ಚಾದಂತೆ ಭಿನ್ನಾಭಿಪ್ರಾಯ ಹೆಚ್ಚಳವಾಗಿದೆ ಎನ್ನಲಾಗಿದೆ.
ಶೆಟ್ಟರ್‌ಗೆ ಸಿಗೋದಿಲ್ವಾ ಟಿಕೆಟ್?


ಗುಜರಾತ್ ಮಾದರಿ ಹೆಸರಲ್ಲಿ ಶೆಟ್ಟರ್‌ಗೆ ಟಿಕೆಟ್ ತಪ್ಪಿಸೋ ಹುನ್ನಾರ ನಡೆದಿದೆ. ಶೆಟ್ಟರ್ ಬದಲಿಗೆ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಅಖಾಡಕ್ಕಿಳಿಸೋ ಚಿಂತನೆಯೂ ನಡೆದಿದೆ. ಮಹೇಶ್ ಟೆಂಗಿನಕಾಯಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ವಯಸ್ಸು, ಕುಟುಂಬ ರಾಜಕಾರಣ ಹೆಸರಲ್ಲಿ ಟಿಕೆಟ್ ತಪ್ಪಿಸೋಕೆ ಯತ್ನಗಳು ಆರಂಭಗೊಂಡಿವೆ.


ಇದನ್ನೂ ಓದಿ: Karnataka Assembly Election 2023 Schedule Live: ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಕೌಂಟ್​ಡೌನ್


ಮಾಜಿ ಸಿಎಂ ಜಗದೀಶ್ ಶೆಟ್ಟರ್


ಪದೇ ಪದೇ ಶೆಟ್ಟರ್ ಕಡೆಗಣನೆ


ಇದರ ಜೊತೆಗೆ ಪದೇ ಪದೇ ಶೆಟ್ಟರ್ ಕಡೆಗಣನೆ ಮಾಡಲಾಗ್ತಿದೆ. ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಪರೋಕ್ಷವಾಗಿ ಶೆಟ್ಟರ್ ಈಗಾಗಲೇ ವಿರೋಧಿಗಳಿಗೆ ಟಾಂಕ್ ಕೊಟ್ಟಿದ್ದಾರೆ. ತಮ್ಮ ಹುಟ್ಟು ಹಬ್ಬದಲ್ಲಿ ಎಚ್ಚರಿಕೆ ನೀಡಿರೋ ಶೆಟ್ಟರ್, ನನ್ನ ತಂಟೆಗೆ ಬಂದ್ರೆ ಸುಮ್ಮನಿರೋಲ್ಲ ಹುಷಾರ್ ಎಂದಿದ್ದಾರೆ. ಇದರ ಬೆನ್ನ ಹಿಂದೆಯೇ ಬಿಜೆಪಿಯಲ್ಲಿ ಗುಸು ಗುಸು ಜೋರಾಗಿದೆ.


ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


ಇದೇ ಶೆಟ್ಟರ್ ಕೊನೆ ಚುನಾವಣೆಯಾಗುತ್ತಾ?


2023 ರಲ್ಲಿ ಶೆಟ್ಟರ್ ಯುಗಾಂತ್ಯಕ್ಕೆ ಬಿಜೆಪಿಯವರಿಂದ್ಲೇ ತಯಾರಿ ಜೋರಾಗಿದೆ ಅನ್ನೋ ಮಾತು ಕೇಳಿಬಂದಿದೆ. ಜೋಶಿ – ಶೆಟ್ಟರ್ ಆಂತರಿಕ ಕಚ್ಚಾಟ ಬಿಜೆಪಿ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿದೆ. ಜೋಶಿ – ಶೆಟ್ಟರ್ ನಡುವೆ ಅಂತಹ ಭಿನ್ನಾಭಿಪ್ರಾಯವಿಲ್ಲ. ಭಿನ್ನಾಭಿಪ್ರಾಯ, ಹೊಸ ಅಭ್ಯರ್ಥಿ ಕೇವಲ ಊಹಾಪೋಹ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು. ಗುಜರಾತ್ ಮಾದರಿ ಪ್ರಯೋಗಿಸಿದರೆ ಶೆಟ್ಟರ್ ಗೆ ಟಿಕೇಟ್ ತಪ್ಪಬಹುದು. ಆದ್ರೆ ಮುಂದಿನ ಚುನಾವಣೆಗೆ ಶೆಟ್ಟರ್ ಗೆ ಕೊನೆಯ ಅವಕಾಶ ನೀಡಬಹುದು ಎನ್ನುತ್ತಾರೆ ಬಿಜೆಪಿ ವಕ್ತಾರ ರವಿ ನಾಯಕ್.


ಮಹೇಶ್ ಟೆಂಗಿನಕಾಯಿ


ಈ ಬಾರಿ ಟಿಕೆಟ್‌ಗಾಗಿ ಪೈಪೋಟಿ


ಈ ಬಾರಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಧಾರವಾಡ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಆಕಾಂಕ್ಷಿಗಳ ದೊಡ್ಡ ಲೀಸ್ಟೇ ಇದೆ. ಸಿದ್ದರಾಮಯ್ಯ ಬೆಂಬಲಿಗ ಗಿರೀಶ್ ಗದಿಗೆಪ್ಪಗೌಡ, ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ, ಅನಿಲ್ ಕುಮಾರ್ ಪಾಟೀಲ್ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಅತ್ತ ಜೆಡಿಎಸ್‌ನಿಂದ ಉದ್ಯಮಿ ತಬ್ರೇಜ್ ಸಂಶಿ ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.


ರಜತ್ ಉಳ್ಳಾಗಡ್ಡಿಮಠ


ಕ್ಷೇತ್ರದ ಜಾತಿ ಲೆಕ್ಕಾಚಾರ

top videos


  ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,35,793 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತ 80000, ಕುರುಬರು - 10 ಸಾವಿರ, ಮುಸ್ಲಿಮರು 37000, ಬ್ರಾಹ್ಮಣ – 18000, ಕ್ರಿಶ್ಚಿಯನ್‌ – 13000, ಎಸ್‌ಸಿ-ಎಸ್‌ಟಿ – 28000 ಮತದಾರರಿದ್ದಾರೆ.

  First published: