• Home
  • »
  • News
  • »
  • state
  • »
  • Karnataka Assembly Elections: ಈ ಬಾರಿಯೂ ‘ಪ್ರವೀಣನ ಜೊತೆ ನವೀನ’ನ ಗುದ್ದಾಟ! ಹೊಸಕೋಟೆಯಲ್ಲಿ ಕೋಟೆ ಕಟ್ಟುವವರಾರು?

Karnataka Assembly Elections: ಈ ಬಾರಿಯೂ ‘ಪ್ರವೀಣನ ಜೊತೆ ನವೀನ’ನ ಗುದ್ದಾಟ! ಹೊಸಕೋಟೆಯಲ್ಲಿ ಕೋಟೆ ಕಟ್ಟುವವರಾರು?

ಹೊಸಕೋಟೆ ವಿಧಾನಸಭಾ ಕ್ಷೇತ್ರ

ಹೊಸಕೋಟೆ ವಿಧಾನಸಭಾ ಕ್ಷೇತ್ರ

2018ರಲ್ಲಿ ಚುನಾವಣೆ ಎದುರಿಸಿದ್ದ ಹೊಸಕೋಟೆ, ಬಳಿಕ 2019 ಮೇನಲ್ಲಿ ಉಪ ಚುನಾವಣೆ ಎದುರಿಸಿತ್ತು. ಈ ಬಾರಿ ಮತ್ತೊಮ್ಮೆ ಮಹಾ ಚುನಾವಣೆಗೆ ಕ್ಷೇತ್ರ ಸಜ್ಜಾಗಿದೆ. ಕಳೆದ ಬಾರಿ ‘ಪ್ರವೀಣ ನಾಯಕನ ಜೊತೆ ನವೀನ ನಾಯಕ’ ಫೈಟ್ ಮಾಡಿದ್ದರು. ಈ ಬಾರಿಯೂ ಅದೇ ಫೈಟ್ ಮುಂದುವರೆಯುವ ಸಾಧ್ಯತೆಯೇ ದಟ್ಟವಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕಳೆದ ಬಾರಿಯೂ ರಾಜ್ಯದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರದ (Bengaluru Rural) ಹೊಸಕೋಟೆ ವಿಧಾನಸಭಾ ಕ್ಷೇತ್ರ (Hoskote assembly constituency) ಈ ಬಾರಿಯೂ ಸದ್ದು ಮಾಡೋದ್ರಲ್ಲಿ ಡೌಟೇ ಇಲ್ಲ. 2018ರಲ್ಲಿ ಚುನಾವಣೆ (Election) ಎದುರಿಸಿದ್ದ ಹೊಸಕೋಟೆ, ಬಳಿಕ 2019 ಮೇನಲ್ಲಿ ಉಪ ಚುನಾವಣೆ (bye-elections) ಎದುರಿಸಿತ್ತು. ಈ ಬಾರಿ ಮತ್ತೊಮ್ಮೆ ಮಹಾ ಚುನಾವಣೆಗೆ ಕ್ಷೇತ್ರ ಸಜ್ಜಾಗಿದೆ. ಕಳೆದ ಬಾರಿ ‘ಪ್ರವೀಣ ನಾಯಕನ ಜೊತೆ ನವೀನ ನಾಯಕ’ ಫೈಟ್ ಮಾಡಿದ್ದರು. ಈ ಬಾರಿಯೂ ಅದೇ ಫೈಟ್ ಮುಂದುವರೆಯುವ ಸಾಧ್ಯತೆಯೇ ದಟ್ಟವಾಗಿದೆ. ಕಾಂಗ್ರೆಸ್ (Congress) ಕೋಟೆಯಾಗಿದ್ದ ಹೊಸಕೋಟೆಯನ್ನು ಬಿಜೆಪಿ (BJP) ತೆಕ್ಕೆಗೆ ತರುವ ಪ್ರಯತ್ನ ಮಾಡಿದವರು ಎಂಟಿಬಿ ನಾಗರಾಜ್ (MTB Nagaraj). ಆದಕೆ ಕಳೆದ ಉಪ ಚುನಾವಣೆಯಲ್ಲಿ ಎಂಟಿಬಿ ಹೀನಾಯವಾಗಿ ಸೋತು ಹೋಗಿದ್ದರು. ಆದರೂ ವಿಧಾನಪರಿಷತ್‌ನಿಂದ (Legislative Council) ಸಚಿವ ಸಂಪುಟ (Cabinet) ಪ್ರವೇಶಿಸುವಲ್ಲಿ ಎಂಟಿಬಿ ಯಶಸ್ವಿಯಾದರು. ಅತ್ತ ಬಿಜೆಪಿ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದ ಸಂಸದ ಬಿ.ಎನ್. ಬಚ್ಚೇಗೌಡ (BN Bachegowda) ಅವರ ಪುತ್ರ ಶರತ್ ಬಚ್ಚೇಗೌಡ (Sharath Bachegowda) ಪಕ್ಷೇತರರಾಗಿ ಸ್ಪರ್ಧಿಸಿ, ಗೆದ್ದಿದ್ದರು. ಸದ್ಯ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಶರತ್, ಈ ಬಾರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ.


ಹೊಸಕೋಟೆ ಕ್ಷೇತ್ರ ಪರಿಚಯ


ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು. ಹೊಸಕೋಟೆ ತಾಲೂಕು 548 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಹೊಸಕೋಟೆಯ ಕೋಟೆ 1422-1464 ರ ಮದ್ಯ ಕಟ್ಟಿಸಲಾಗಿದ್ದು , ಬೆಂಗಳೂರಿನಲ್ಲಿ ಯಲಹಂಕ ನಾಡ ಪ್ರಭುಗಳ ವಂಶಕ್ಕೆ ಸೇರಿದ ಒಂದನೆಯ ಕೆಂಪೇಗೌಡರು ಬೆಂಗಳೂರು ಕೋಟೆಯನ್ನು 1535 ರಲ್ಲಿ ಕಟ್ಟಿಸಿದ್ದು ಅದಕ್ಕೂ ಮುಂಚೆ ಅಂದರೆ 75 ವರ್ಷಗಳ ಮುಂಚೆಯೇ ಹೊಸಕೋಟೆಯ ಕೋಟೆಯನ್ನು ತಮ್ಮೆಗೌಡ ಎಂಬುವರು ಕಟ್ಟಿಸಿರುತ್ತಾರೆ.


ಎಂಟಿಬಿ ನಾಗರಾಜ್


ಹೊಸಕೋಟೆಯ ವಿಶೇಷತೆ


ಹೊಸಕೋಟೆಯು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇದ್ದು, ಬೆಂಗಳೂರು ನಗರದಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ರಾಜಕೀಯಕ್ಕೆ ಬಂದು ಕ್ಷೇತ್ರಕ್ಕೆ ಹೊಸ ಖದರ್ ಬಂದಿದೆ, ಇಲ್ಲಿಯೂ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿಗೆ ಬೆಂಗಳೂರಿನಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಇದೆ. ಬೆಂಗಳೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ರಾಷ್ಟ್ರೀಯ ಹೆದ್ದಾರಿ 4 (ಹಳೆ ಮದ್ರಾಸ್ ರಸ್ತೆ) ಸಂಪರ್ಕವನ್ನು ಕಲ್ಪಿಸುತ್ತದೆ. ಹಾಗೆಯೇ ಬೆಂಗಳೂರಿನಿಂದ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಗೆ ಮುಖ್ಯ ಸಂಪರ್ಕವನ್ನು ಕಲ್ಪಿಸುತ್ತದೆ. ಇಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST) ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆ ಜೊತೆಗೆ ವೋಲ್ವೊ ವಾಹನ ತಯಾರಿಕಾ ಘಟಕವನ್ನು ಕ್ಷೇತ್ರ ಹೊಂದಿದೆ.


ಶರತ್ ಬಚ್ಚೇಗೌಡ


ಇದನ್ನೂ ಓದಿ: Karnataka Assembly Elections: ನೆಲಮಂಗಲದಲ್ಲಿ ಮತ್ತೆ ಚಿಗುರುತ್ತದೆಯೇ 'ತೆನೆ'? ಕೈ-ಕಮಲದ ಪ್ಲಾನ್ ಏನು ಗೊತ್ತಾ?


2018ರಲ್ಲಿ ಚುನಾವಣೆ, 2019ರಲ್ಲಿ ಉಪ ಚುನಾವಣೆ


2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್, ಗೆಲುವು ಸಾಧಿಸಿದ್ದರು. ಆದರೆ ಕಾಂಗ್ರೆಸ್ ತೊರೆದು, ಬಿಜೆಪಿಗೆ ಜಂಪ್ ಆಗಿದ್ದರು. ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್, ಮೈತ್ರಿ ಸರ್ಕಾರದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ನಾಯಕರಿಗೆ ಬಿಗ್ ಶಾಕ್ ನೀಡಿದ್ದರು. ಎಂಟಿಬಿ ನಾಗರಾಜ್ ಅವರ ರಾಜೀನಾಮೆಯಿಂದ ಹೊಸಕೋಟೆ ಕ್ಷೇತ್ರ ತೆರವಾಗಿತ್ತು. ಹೀಗಾಗಿ 2019ರಲ್ಲಿ ಮತ್ತೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು.


ಎಟಿಬಿ ನಾಗರಾಜ್ ನಿವಾಸ


ಬಿಜೆಪಿಯಿಂದ ಬಂಡಾಯ ಬಾವುಟ ಹಾರಿಸಿದ್ದ ಶರತ್ ಬಚ್ಚೇಗೌಡ


ಮತ್ತೊಂದೆಡೆ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ತಮಗೆ ಟಿಕೆಟ್ ಲಭ್ಯವಾಗದ ಕಾರಣ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ವಿಶೇಷ ಅಂದ್ರೆ ಹಿರಿಯ ರಾಜಕಾರಣಿ, ಪ್ರಭಾವಿಯೂ ಆಗಿದ್ದ ಎಂಟಿಬಿಯವರನ್ನು ಸೋಲಿಸಿ, ಶರತ್ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದರು.


ದುಬಾರಿ ಕಾರಿನೊಂದಿಗೆ ಎಟಂಬಿ


ಅನರ್ಹಗೊಂಡಿದ್ದ ಎಂಟಿಬಿ ನಾಗರಾಜ್


2019ರ ಉಪ ಚುನಾವಣೆಯಲ್ಲಿ ಘೋಷಿಸಿಕೊಂಡಂತೆ ಎಂಟಿಬಿ ನಾಗರಾಜ್ 1200 ಕೋಟಿ ರೂಪಾಯಿ ಆಸ್ತಿಗಳ ಒಡೆಯ. ಎಂಟಿಬಿ ನಾಗರಾಜ್ ಸದ್ಯ ವಿಧಾನ ಪರಿಷತ್ ಸದಸ್ಯರಾಗಿದ್ದು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದಾರೆ. ಅವರು 2004, 2013 ಮತ್ತು 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುಲು ಸಾಧಿಸಿದ್ದರು. ಕರ್ನಾಟಕ ವಿಧಾನಸಭೆಯ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅನರ್ಹಗೊಳಿಸಿದ ಹದಿನೇಳು ಬಂಡಾಯ ಶಾಸಕರಲ್ಲಿ ಎಂಟಿಬಿ ನಾಗರಾಜ್ ಒಬ್ಬರು. ಅವರು 2019 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು, ಬಿಜೆಪಿಗೆ ಸೇರಿ, ಮತ್ತೆ ಹೊಸಕೋಟೆಯಿಂದ ಸ್ಪರ್ಧಿಸಿ ಸೋತರು.


ಎಂಟಿಬಿ ಪುತ್ರ


ಶರತ್ ಬಚ್ಚೇಗೌಡ


38ರ ಯುವ ರಾಜಕಾರಣಿ ಶರತ್ ಬಚ್ಚೇಗೌಡ ಬಿಜೆಪಿ ಹಿನ್ನೆಲೆಯವರು. ತಂದೆ ಬಿಎನ್ ಬಚ್ಚೇಗೌಡ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವೀಧರರು ಮತ್ತು ಯುಎಸ್‌ನ ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಸೈನ್ಸ್ ಪದವಿ ಪಡೆದ ಶರತ್ ಅವರು ಕರ್ನಾಟಕ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದರು. 2018 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಅವರನ್ನು ಹೊಸಕೋಟೆಯಿಂದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು ಆದರೆ ಅವರು ಎಂಟಿಬಿ ನಾಗರಾಜ್ ವಿರುದ್ಧ ಸೋತರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಶರತ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ 11,486 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಸದ್ಯ ಕಾಂಗ್ರೆಸ್‌ ಸೇರುವುದು ಪಕ್ಕಾ ಆಗಿದ್ದು, ಈ ಬಾರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲಿದ್ದಾರೆ.


ಈ ಬಾರಿ ಟಿಕೆಟ್‌ಗಾಗಿ ಭಾರೀ ಸ್ಪರ್ಧೆ


ಹಾಲಿ ಪಕ್ಷೇತರ ಶಾಸಕರಾಗಿರುವ ಶರತ್ ಬಚ್ಚೇಗೌಡ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಫಿಕ್ಸ್ ಆಗಿದೆ. ಅತ್ತ ಬಿಜೆಪಿಯಿಂದ ಸಚಿವ ಎಂಟಿಬಿ ನಾಗರಾಜ್ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಅವರು ಸ್ಪರ್ಧಿಸದೇ ಇದ್ದರೆ, ಅವರ ಪುತ್ರ ಎಂಟಿಬಿ ದರ್ಶನ್‌ ಸ್ಪರ್ಧಿಸೋ ಸಾಧ್ಯತೆ ಇದೆ. ಇನ್ನು ಸಮಾಜ ಸೇವಕ ದೊಡ್ಡಹುಲ್ಲೂರು ಕಿರಣ್ ಗೌಡ ಎಂಬುವರೂ ಕೂಡ ಈ ಬಾರಿ ಟಿಕೆಟ್ ಬಯಸಿದ್ದಾರೆ.


ಇದನ್ನೂ ಓದಿ: Karnataka Assembly Elections: ಕರ್ನಾಟಕ-ತಮಿಳುನಾಡು ಕೊಂಡಿ ಆನೇಕಲ್; ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ!


ಕ್ಷೇತ್ರದ ಮತದಾರರ ವಿವರ


ಇಲ್ಲಿ ಒಟ್ಟು ಮತದಾರರು - 2,21,770 ಮಂದಿ ಇದ್ದಾರೆ. ಈ ಪೈಕಿ ಎಸ್‌ಸಿ-ಎಸ್‌ಟಿ – 58,883, ಒಕ್ಕಲಿಗರು – 45,826, ಮುಸ್ಲಿಂ – 45,642 ಇದ್ದಾರೆ. ಇನ್ನುಳಿದಂತೆ ಕುರುಬರು – 30,132 ಹಾಗೂ ಲಿಂಗಾಯತ – 18,442 ಮತದಾರರಿದ್ದಾರೆ.

Published by:Annappa Achari
First published: