ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಗೌಡರ ಕುಟುಂಬದ ಗಟ್ಟಿ ನೆಲೆ, ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ (Holenarasipur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಹೊಳೆನರಸೀಪುರದ ವಿಶೇಷತೆ ಏನು?
ಹೇಮಾವತಿ ಹೊಳೆ ನದಿ ದಂಡೆಯ ಊರು ಹಾಗೂ ಶ್ರೀಲಕ್ಷ್ಮಿನರಸಿಂಹಸ್ವಾಮಿಯ ನೆಲೆಬೀಡು ನರಸೀಪುಟರ, ಆದರೀಗ ಇದು ಹೊಳೆ ನರಸೀಪುರವಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಭತ್ತ, ಕಬ್ಬು ಬೆಳೆಯುವ ಇಲ್ಲಿನ ರೈತರಿಗೆ ಯಾವುದೇ ಕೊರತೆ ಇಲ್ಲ. ಅಕ್ಕಿ ಗಿರಣಿಗಳು, ಕೈಗಾರಿಕೆಗಳು, ಶಾಲೆ, ಕಾಲೇಜುಗಳು, ಉತ್ತಮ ರಸ್ತೆ ಸೌಲಭ್ಯಗಳಿವೆ. ರೈಲು ಸಂಪರ್ಕವೂ ಇದೆ. ಆದರೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ, ಪದವಿ ಕಾಲೇಜುಗಳ ಕೊರತೆ ಬಿಟ್ಟರೆ ಒಕ್ಕಲಿಗರೇ ಅಧಿಕವಾಗಿರುವ ಈ ಕ್ಷೇತ್ರ ಸದ್ಯಕ್ಕೆ ಸುಭಿಕ್ಷವಾಗಿದೆ ಎನ್ನಬಹುದು. ಕಳೆದ ವಿಧಾನಸಭೆಯಲ್ಲಿ ಅರಕಲಗೂಡು ಹಾಗೂ ಬೇಲೂರು ಬಿಟ್ಟು ಮಿಕ್ಕ ಐದು ಕ್ಷೇತ್ರಗಳು ಜೆಡಿಎಸ್ ವಶವಾಗಿತ್ತು. ಈ ಬಾರಿ ಅಷ್ಟು ಸುಲಭವಲ್ಲ. ಒಕ್ಕಲಿಗರ ಉಪಜಾತಿಯಾದ ದಾಸ ಒಕ್ಕಲಿಗರು ತಿರುಗಿಬಿದ್ದರೆ ಹೊಳೆ ನರಸೀಪುರವೂ ದಕ್ಕುವುದಿಲ್ಲ ಎಂಬ ಪ್ರಜ್ಞೆ ಜೆಡಿಎಸ್ ವರಿಷ್ಠರಿಗಿದೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರದ ಹರದನಹಳ್ಳಿಯ ಹಳೇಕೋಟೆ ಹೋಬಳಿಯಲ್ಲಿದೆ. ಇದು ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಹಾಗೂ ಇಬ್ಬರು ಮುಖ್ಯಮಂತ್ರಿಗಳ ರಾಜಕೀಯ ಬೆಳವಣಿಗೆಗೆ ಬೇರುಮಟ್ಟದ ಬಲ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ ನೀಡಿದರೆ ಮತ್ತು ಪದವಿ ಕಾಲೇಜುಗಳ ಕೊರತೆ ಬಿಟ್ಟರೆ ಒಕ್ಕಲಿಗರೇ ಅಧಿಕವಾಗಿರುವ ಈ ಕ್ಷೇತ್ರ ಬಹಳ ಸುಭಿಕ್ಷವಾಗಿದೆ.
ಗೌಡರ ರಾಜಕೀಯ ಪ್ರವೇಶ ಇದೇ ಕ್ಷೇತ್ರದಿಂದ
ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ 1962ರಲ್ಲಿ ಕಣಕ್ಕಿಳಿದು ರಾಜಕೀಯ ಪ್ರವೇಶ ಪಡೆದ ಎಚ್. ಡಿ ದೇವೇಗೌಡ ಅವರು ಇಂದಿಗೂ ಸಕ್ರಿಯ ರಾಜಕಾರಣಿಯಾಗಿ ಉಳಿದಿದ್ದಾರೆ. ಹೊಳೆನರಸೀಪುರದಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ದೇವೇಗೌಡರ ಜತೆಗೂಡಿದ್ದ ಪುಟ್ಟಸ್ವಾಮಿ ಗೌಡ ಅವರು ಈಗ ದೇವೇಗೌಡರ ಜತೆಗಿಲ್ಲ. 1984ರ ನಂತರ ದೇವೇಗೌಡರ ಪುತ್ರ ಎಚ್ ಡಿ ರೇವಣ್ಣ ಅವರು ಶಾಸಕರಾದರು. ಅಪ್ಪ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕುಳಿತು ಹಾಸನ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು. ಕಳೆದ ವಿಧಾನಸಭೆಯಲ್ಲಿ ಅರಕಲಗೂಡು ಹಾಗೂ ಬೇಲೂರು ಬಿಟ್ಟು ಮಿಕ್ಕ ಐದು ಕ್ಷೇತ್ರಗಳು ಜೆಡಿಎಸ್ ವಶವಾಗಿತ್ತು. ಈ ಬಾರಿ ಅಷ್ಟು ಸುಲಭವಲ್ಲ. ಒಕ್ಕಲಿಗರ ಉಪಜಾತಿಯಾದ ದಾಸ ಒಕ್ಕಲಿಗರು ತಿರುಗಿಬಿದ್ದರೆ ಹೊಳೆ ನರಸೀಪುರವೂ ದಕ್ಕುವುದಿಲ್ಲ ಎಂಬ ಪ್ರಜ್ಞೆ ಜೆಡಿಎಸ್ ವರಿಷ್ಠರಿಗಿದೆ.
ರಾಜಕೀಯ ಇತಿಹಾಸ:
ಜೆಡಿಎಸ್ನ ಭದ್ರಕೋಟೆ, ಅದರಲ್ಲೂ ಗೌಡರ ಕೋಟೆ ಎಂದು ಗುರುತಿಸಿಕೊಂಡ ಹೊಳೆನರಸೀಪುರದಲ್ಲಿ ಬಿಜೆಪಿ ಈವರೆಗೆ ಒಂದು ಬಾರಿಯೂ ಗೆದ್ದಿಲ್ಲ. 1957ರಿಂದ ಈವರೆಗೆ ಇಲ್ಲಿ ಗೆಲುವು ಸಾಧಿಸಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ಮಾತ್ರ. ಅದರಲ್ಲೂ ಸಿಂಹಪಾಲು ಜೆಡಿಎಸ್ನದ್ದೇ. ಕೇವಲ ಮೂರು ಬಾರಿಯಷ್ಟೇ ಕಾಂಗ್ರೆಸ್ ಇಲ್ಲಿ ಗೆದ್ದಿದ್ದು. ಎಚ್.ಡಿ. ದೇವೇಗೌಡರು 6 ಬಾರಿ, ಜಿ. ಪುಟ್ಟಸ್ವಾಮಿಗೌಡರು 1 ಬಾರಿ, ದೊಡ್ಡೇಗೌಡರು 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ 1999ರಲ್ಲಿ ಒಮ್ಮೆ ಸೋತಿದ್ದು ಹೊರತುಪಡಿಸಿದರೆ, 5 ಬಾರಿ ಗೆಲುವು ಕಂಡಿದ್ದಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಜೆಡಿಎಸ್: ಎಚ್.ಡಿ. ರೇವಣ್ಣ
ಕಾಂಗ್ರೆಸ್: ಶ್ರೇಯಸ್ ಪಟೇಲ್,ಅನುಪಮ, ಬಾಗೂರು ಮಂಜೇಗೌಡ
ಬಿಜೆಪಿ: ಮಾಯಣ್ಣ, ಮಳಲಿ ನಾರಾಯಣ್
ಜಾತಿ ಲೆಕ್ಕಾಚಾರ:
ಒಟ್ಟು 2,18,968 ಮತದಾರರಿರುವ ಅರಕಲಗೂಡು ಕ್ಷೇತ್ರದಲ್ಲಿ 1,10,945 ಪುರುಷ ಮತದಾರರಿದ್ದು, 1,08,045 ಮಹಿಳಾ ಮತದಾರರಿದ್ದಾರೆ. ಅಲ್ಲದೇ 8 ಇತರೆ ಮತದಾರರಿದ್ದಾರೆ. ಹಾಗಾದ್ರೆ ಇಲ್ಲಿನ ಜಾತಿ ಲೆಕ್ಕಾಚಾರವೇನು?
ಲಿಂಗಾಯತ | 17,000 |
ಮುಸ್ಲಿಂ | 13,000 |
ಎಸ್ಸಿ | 24,000 |
ಎಸ್ಟಿ | 21,000 |
ಒಕ್ಕಲಿಗ | 13,000 |
ಮರಾಠ | 93,000 |
ಬ್ರಾಹ್ಮಣ | 2,000 |
ವಿಶ್ವಕರ್ಮ | 8,000 |
ಇತರೆ | 3,000 |
ಕುರುಬ | 26,000 |
2018 ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಎಚ್ ಡಿ ರೇವಣ್ಣ, ಕಾಂಗ್ರೆಸ್ನ ಮಂಜೇಗೌಡಡರನ್ನು 43,832 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಎಚ್ ಡಿ ರೇವಣ್ಣ | 108,541 |
ಕಾಂಗ್ರೆಸ್ | ಮಂಜೇಗೌಡ | 64,709 |
ಬಿಜೆಪಿ | ಎಚ್ ರಾಜು ಗೌಡ | 3,667 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ