• Home
  • »
  • News
  • »
  • state
  • »
  • Karnataka Assembly Elections: ಹೆಬ್ಬಾಳದಲ್ಲಿ ಹೇಗಿದೆ ಚುನಾವಣಾ ಕಾವು? ಸಂಚಾರ ಸಮಸ್ಯೆಗೆ ಮುಕ್ತಿ ಕೊಡುವವರು ಯಾರು?

Karnataka Assembly Elections: ಹೆಬ್ಬಾಳದಲ್ಲಿ ಹೇಗಿದೆ ಚುನಾವಣಾ ಕಾವು? ಸಂಚಾರ ಸಮಸ್ಯೆಗೆ ಮುಕ್ತಿ ಕೊಡುವವರು ಯಾರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷಿಕರು, ಸರ್ವ ಧರ್ಮದವರೂ ಇದ್ದಾರೆ. ಬಿಜೆಪಿ (BJP) ಭದ್ರಕೋಟೆಯಾಗಿದ್ದ ಈ ಕ್ಷೇತ್ರ, ಇದೀಗ ಕಾಂಗ್ರೆಸ್‌ (Congress) ತೆಕ್ಕೆಗೆ ಸೇರಿದೆ. ಸದ್ಯ ಬೈರತಿ ಸುರೇಶ್ (Byrathi suresh) ಈ ಕ್ಷೇತ್ರದ ಶಾಸಕರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರಿನ (Bengaluru) ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ (Hebbala assembly constituency) ಚುನಾವಣಾ ಕಾವು ಏರುತ್ತಿದೆ. ಟೆಕ್ ಪಾರ್ಕ್‌ಗಳು (Tech Park), ಉದ್ಯಾನವನಗಳು (Park), ಗಗನಚುಂಬಿ ಕಟ್ಟಡಗಳು (Building), ಫ್ಲೈ ಓವರ್ (Flyover), ಕೆರೆಗಳು (Lake) ಇತ್ಯಾದಿಗಳಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತವೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷಿಕರು, ಸರ್ವ ಧರ್ಮದವರೂ ಇದ್ದಾರೆ. ಬಿಜೆಪಿ (BJP) ಭದ್ರಕೋಟೆಯಾಗಿದ್ದ ಈ ಕ್ಷೇತ್ರ, ಇದೀಗ ಕಾಂಗ್ರೆಸ್‌ (Congress) ತೆಕ್ಕೆಗೆ ಸೇರಿದೆ. ಸದ್ಯ ಬೈರತಿ ಸುರೇಶ್ (Byrathi suresh) ಈ ಕ್ಷೇತ್ರದ ಶಾಸಕರು. ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆಯು ನಿತ್ಯದ ಗೋಳಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ ವಿಸ್ತರಣೆ ಮಾಡಬೇಕೆಂಬ ಕೂಗು ಬಲವಾಗಿದೆ. ಈ ನಡುವೆಯೇ ಅಲ್ಲಿ ನಿಧಾನಕ್ಕೆ ವಿಧಾನಸಭಾ ಚುನಾವಣಾ ಜ್ವರ ಏರುತ್ತಿದೆ.


ಹೆಬ್ಬಾಳ ಕ್ಷೇತ್ರ ಪರಿಚಯ


ಹೆಬ್ಬಾಳವು ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಮೂಲತಃ ಹೆಬ್ಬಾಳ ಸರೋವರಕ್ಕೆ ಹೆಸರುವಾಸಿಯಾಗಿದ್ದರೂ, ಇದು ಈಗ NH 44ರ ಹೊರ ವರ್ತುಲ ರಸ್ತೆ ಮತ್ತು ಏರ್‌ಪೋರ್ಟ್ ರಸ್ತೆಯನ್ನು ಸಂಪರ್ಕಿಸುವ ಫ್ಲೈಓವರ್‌ಗಳಿಗೆ ಹೆಸರುವಾಸಿಯಾಗಿದೆ. ಹೆಬ್ಬಾಳದಲ್ಲಿರುವ ಕೆರೆ ಪ್ರದೇಶವು ಪಿಕ್ನಿಕ್ ತಾಣಗಳು, ಸುಸಜ್ಜಿತ ಉದ್ಯಾನವನ, ದೋಣಿ ವಿಹಾರ ಸೌಲಭ್ಯಗಳು ಮತ್ತು ಪಕ್ಷಿ ವೀಕ್ಷಣೆಗೆ ಹೆಸರುವಾಸಿಯಾಗಿದೆ.


ಶಾಸಕ ಬೈರತಿ ಸುರೇಶ್


ಹೂಡಿಕೆದಾರರ ನೆಚ್ಚಿನ ತಾಣ


ಹೆಬ್ಬಾಳ ಮಹಾನಗರ ಪಾಲಿಕೆ ವ್ಯಾಪ್ತಿಯ ಕೊನೆಯ ಪ್ರದೇಶವಾಗಿತ್ತು. ಬ್ಯಾಪ್ಟಿಸ್ಟ್ ಆಸ್ಪತ್ರೆ ಮತ್ತು ಚೆಕ್‌ಪೋಸ್ಟ್ ನಡುವಿನ ಮೈಲಿಗಲ್ಲನ್ನು ಈಗಲೂ ನೋಡಬಹುದು. ಬೆಂಗಳೂರು ಈಗ ಉತ್ತರದ ಕಡೆಗೆ ಸ್ವಲ್ಪ ಬೆಳೆದಿದೆ. 1970ರ ದಶಕದಲ್ಲಿ ಸ್ಥಾಪನೆಯಾದ ಎಲ್ ಆ್ಯಂಡ್ ಟಿ ಕಾರ್ಖಾನೆಯೂ ಹೆಬ್ಬಾಳಕ್ಕೆ ಸಮೀಪದಲ್ಲಿದೆ. GKVK ವಿಶ್ವವಿದ್ಯಾನಿಲಯ ಮತ್ತು ಮಾನ್ಯತಾ ಟೆಕ್ ಪಾರ್ಕ್ ಹಲವಾರು ಕಚೇರಿ ಕಟ್ಟಡಗಳು ಮತ್ತು ವಾಣಿಜ್ಯ ಉದ್ಯಮಗಳೊಂದಿಗೆ ಹೆಬ್ಬಾಳವನ್ನು ಆಕರ್ಷಕ ಹೂಡಿಕೆ ತಾಣವನ್ನಾಗಿ ಮಾಡುತ್ತದೆ.


ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು


ಇದನ್ನೂ ಓದಿ: Karnataka Assembly Elections: ‘ಕಮಲ‘ ಹಿಡಿದ ಮಹಾಲಕ್ಷ್ಮೀ ಈ ಬಾರಿ ಅಭಯ'ಹಸ್ತ' ತೋರುವಳೇ? ಸಚಿವರ ಕ್ಷೇತ್ರದಲ್ಲಿ ಜೋರಾಯ್ತು ಚುನಾವಣಾ ಸಮರ


 ಹೆಬ್ಬಾಳ ಶಾಸಕ ಬೈರತಿ ಸುರೇಶ್


ಪ್ರಸ್ತುತ ಕಾಂಗ್ರೆಸ್‌ನ ಬೈರತಿ ಸುರೇಶ್ ಹೆಬ್ಬಾಳದ ಶಾಸಕರಾಗಿದ್ದಾರೆ. ಅವರು 2012 ರಲ್ಲಿ MLC ಆಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿ. 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಮ್ಮ MLC ಹುದ್ದೆಯನ್ನು ತೊರೆದರು ಮತ್ತು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.


ವೈ.ಎ. ನಾರಾಯಣ ಸ್ವಾಮಿ


2018ರ ಫಲಿತಾಂಶ


2018ರಲ್ಲಿ ಕಾಂಗ್ರೆಸ್‌ನ ಭೈರತಿ ಸುರೇಶ್ 74,453 ಮತಗಳಿಂದ ಗೆದ್ದಿದ್ದರು. ಇನ್ನು ಬಿಜೆಪಿಯ ಡಾ. ವೈ.ಎ. ನಾರಾಯಣಸ್ವಾಮಿ ಬಿಜೆಪಿಯಿಂದ 53,313 ಮತಗಳನ್ನು ಪಡೆದು ಸೋತಿದ್ದರು. ಇನ್ನು ಮೂರನೇ ಸ್ಥಾನಕ್ಕೆ ಕುಸಿದಿದ್ದ ಜೆಡಿಎಸ್‌ನ ಹನುಮಂತೇಗೌಡ 14,092 ಮತಗಳನ್ನಷ್ಟೇ ಪಡೆದಿದ್ದರು.

ಭೈರತಿ ಸುರೇಶ್ಕಾಂಗ್ರೆಸ್ಗೆಲುವು74,453 ಮತಗಳು
ಡಾ. ವೈ.ಎ. ನಾರಾಯಣಸ್ವಾಮಿಬಿಜೆಪಿಸೋಲು53,313 ಮತಗಳು
ಹನುಮಂತೇಗೌಡಜೆಡಿಎಸ್ಸೋಲು14,092 ಮತಗಳು

ಈ ಬಾರಿ ಟಿಕೆಟ್‌ಗೆ ಪೈಪೋಟಿ!


ಎಲ್ಲಾ ಕ್ಷೇತ್ರಗಳಂತೆ ಹೆಬ್ಬಾಳದಲ್ಲೂ ಈ ಬಾರಿ ಟಿಕೆಟ್‌ಗೆ ಭಾರೀ ಪೈಪೋಟಿ ಎದುರಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಭೈರತಿ ಸುರೇಶ್‌ಗೆ ಟಿಕೆಟ್‌ ಸಿಗುವುದು ಪಕ್ಕಾ ಆಗಿದೆ. ಇನ್ನು ಕಾಂಗ್ರೆಸ್‌ನಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಇಚ್ಛಿಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ಕೂಡ ಮತ್ತೊಮ್ಮೆ ಸ್ಪರ್ಧೆಗೆ ಟಿಕೆಟ್ ಬಯಸಿದ್ದಾರೆ. ಮುಯಿದ್ ಅಲ್ತಾಫ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್ಬಿಜೆಪಿಜೆಡಿಎಸ್
ಬೈರತಿ ಸುರೇಶ್ಕಟ್ಟಾ ಸುಬ್ರಹ್ಮಣ್ಯ ನಾಯ್ಡುಮುಯಿದ್ ಅಲ್ತಾಫ್
ಡಾ. ವೈ.ಎ. ನಾರಾಯಣ ಸ್ವಾಮಿ

ಕ್ಷೇತ್ರದ ಮತದಾರರ ವಿವರ


ಹೆಬ್ಬಾಳ ಕ್ಷೇತ್ರದಲ್ಲಿ ಒಟ್ಟು ಮತದಾರರು -- 2,47,500 ಇದ್ದಾರೆ. ಈ ಪೈಕಿ ಒಕ್ಕಲಿಗರು – 38,000, ಲಿಂಗಾಯತ – 7,500, ಎಸ್‌ಸಿ-ಎಸ್‌ಟಿ – 34,000, ಬ್ರಾಹ್ಮಣ – 25,000, ಮುಸ್ಲಿಂ - -55,000 ಮತದಾರರು ಇದ್ದರೆ, ಕುರುಬರು – 5,000, ಯಾದವ – 7,000 ಹಾಗೂ ದೇವಾಂಗ ಸಮಾದಯದವರು 2,000 ಮಂದಿ ಇದ್ದಾರೆ.


ಕ್ಷೇತ್ರದಲ್ಲಿದೆ ಸಾವಿರಾರು ಸಮಸ್ಯೆ


ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆಯು ನಿತ್ಯದ ಗೋಳಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ ವಿಸ್ತರಣೆ ಮಾಡಬೇಕೆಂಬ ಕೂಗು ಬಲವಾಗಿದೆ. ಟ್ರಾಫಿಕ್‌ ಸಮಸ್ಯೆ ಗಂಭೀರವಾಗಿದೆ. ದುಡಿಯುವ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಹುಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಶ್ರೀಮಂತರ ಬಂಗಲೆಗಳಿಗಳೂ ಕಡಿಮೆ ಇಲ್ಲ. ಹೊರ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬಂದು ನೆಲೆಸಿರುವ ಉತ್ತರ ಭಾರತ ಮೂಲದ ಜನರು ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಫ್ಟ್‌ವೇರ್‌ ಕಂಪನಿಗಳಿಗೆ ನೇರ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯ ಕಾರಣದಿಂದಾಗಿ ಈ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಸಾಫ್ಟ್‌ವೇರ್‌ ಉದ್ಯೋಗಿಗಳ ಸಂಖ್ಯೆ ದೊಡ್ಡದಿದೆ.


ಇದನ್ನೂ ಓದಿ: Karnataka Assembly Elections: ಈ ಬಾರಿ ಯಾರಾಗ್ತಾರೆ ದಾಸರಹಳ್ಳಿ ದೊರೆ? ಕ್ಷೇತ್ರ ಉಳಿಸಿಕೊಳ್ಳುತ್ತಾಳಾ ತೆನೆ ಹೊತ್ತ ಮಹಿಳೆ?


ಸಂಚಾರ ದಟ್ಟಣೆಯದ್ದೇ ದೊಡ್ಡ ಸಮಸ್ಯೆ
ಸಂಚಾರ ದಟ್ಟಣೆ, ಕಸದ ಸಮಸ್ಯೆ, ರಸ್ತೆಗಳ ಉನ್ನತೀಕರಣ ಸೇರಿದಂತೆ ಜೆ.ಸಿ ನಗರ, ಗಂಗೇನಹಳ್ಳಿ, ಮನೋರಾಯನಪಾಳ್ಯ, ವಿಶ್ವನಾಥ ನಾಗೇನಹಳ್ಳಿಯ ಹಲವು ಪ್ರದೇಶಗಳು ಕಿರಿದಾದ ರಸ್ತೆ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಕೊರತೆ ಕ್ಷೇತ್ರದಲ್ಲಿವೆ.

Published by:Annappa Achari
First published: