• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hanur Elections: ಹ್ಯಾಟ್ರಿಕ್ ಬಾರಿಸಿರುವ ಕೈ ಅಭ್ಯರ್ಥಿಗೆ ಮತ್ತೆ ಗೆಲ್ಲುವ ತವಕ: ಬಿಜೆಪಿ, ಜೆಡಿಎಸ್​ನಿಂದ ಕಠಿಣ ಸ್ಪರ್ಧೆ!

Hanur Elections: ಹ್ಯಾಟ್ರಿಕ್ ಬಾರಿಸಿರುವ ಕೈ ಅಭ್ಯರ್ಥಿಗೆ ಮತ್ತೆ ಗೆಲ್ಲುವ ತವಕ: ಬಿಜೆಪಿ, ಜೆಡಿಎಸ್​ನಿಂದ ಕಠಿಣ ಸ್ಪರ್ಧೆ!

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹನೂರು ವಿಧಾನಸಭಾ ಕ್ಷೇತ್ರದ  ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Hanur, India
  • Share this:

ಹನೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ (Hanur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.

ಕ್ಷೇತ್ರದ ವಿಶೇಷತೆ

ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಹನೂರು ಕೂಡಾ ಒಂದು. ತಾಲೂಕು ಕೇಂದ್ರ ಕೂಡಾ ಆಗರುವ ಹನೂರನ್ನು ವಿಸ್ತಾರವಾಗಿದ್ದ ಕೊಳ್ಳೇಗಾಲ ತಾಲೂಕನ್ನು ವಿಭಜಿಸಿ ಸೃಷ್ಟಿ ಮಾಡಲಾಗಿದೆ. ಇನ್ನು ಪ್ರಸಿದ್ಧ ಮಹದೇಶ್ವರಬೆಟ್ಟ, ಹೊಗೇನಕಲ್ ಜಲಪಾತ, ಮುತ್ತತ್ತಿ ಹೀಗೆ ಇಲ್ಲಿನ ಪ್ರಸಿದ್ಧ ಸ್ಥಳಗಳನ್ನು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇನ್ನು ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ, ಕೊಯಮತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದು ಹೋಗಬಹುದು ಎಂಬುವುದು ಗಮನರ್ಹ. ವೀರಪ್ಪನ್ ನಿಂದ ಹತ್ಯಗೀಡಾದ ನಾಗಪ್ಪನವರು ಹನೂರಿನ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು. ಹನೂರು ಸುತ್ತಮುತ್ತಲಿನ ಊರುಗಳಾದ ಬಂಡಳ್ಳಿ, ಲೊಕ್ಕನಹಳ್ಳಿ, ಅಜ್ಜೀಪುರ,ರಾಮಾಪುರ, ಗೋಪಿಶೆಟ್ಟಿಯೂರು,ಕೌದಳ್ಳಿ, ಕುರಟ್ಟಿ ಹೊಸೂರು ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಸ್ಥಳವಾಗಿದೆ.

ರಾಜಕೀಯ ಹಿನ್ನೋಟ

ಹನೂರು ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್​ನ ಭದ್ರಕೋಟೆ. 1967ರಿಂದ 2018ರವರೆಗೆ ನಡೆದ ಚುನಾವಣೆಗಳಲ್ಲಿ ಬರೋಬ್ಬರಿ ಎಂಟು ಬಾರಿ ಕಾಂಗ್ರೆಸ್​ ಜಯ ಸಾಧಿಸಿದೆ. ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶ ಗಮನಿಸುವುದಾದರೆ 2004ರ ಚುನಾವಣೆಯಲ್ಲಿ ಜೆಡಿಎಸ್​ನ ಪರಿಮಳಾ ನಾಗಪ್ಪ ಕಾಂಗ್ರೆಸ್​ನ ಆರ್ ನರೇಂದ್ರ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದರು. ಇದಾದ ಬಳಿಕ 2008ರಲ್ಲಿ ನಡೆದ ಹಿಂದಿನ ಲೆಕ್ಕಾಚಾರ ಉಲ್ಟಾ ಹೊಡೆದು, ಕಾಂಗ್ರೆಸ್​ನ ಆರ್ ನರೇಂದ್ರ ಗೆದ್ದರು. ಇದಾದ ಬಳಿಕ 2013ರ ಚುನಾವಣೆಯಲ್ಲಿ ಕಣಕ್ಕಿಳಿದ ಜೆಡಿಎಸ್​ನ ಪರಿಮಳಾ ನಾಗಪ್ಪಗೆ ಸೋಲಾದರೆ, ಕೈ ಅಭ್ಯರ್ಥಿಯಾಗಿದ್ದ ಆರ್. ನಾಗೇಂದ್ರ ಗೆಲುವಿನ ನಗೆ ಬೀರಿದ್ದರು. ಇನ್ನು ಕಳೆದ ಚುನಾವಣೆಯನ್ನು ಗಮನಿಸುವುದಾದರೆ, ಮತ್ತೆ ಕಾಂಗ್ರೆಸ್​ನ ಆರ್​. ನಾಗೇಂದ್ರ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ.

ಈ ಬಾರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿವರು

ಕಾಂಗ್ರೆಸ್​: ಆರ್​. ನಾಗೇಂದ್ರ
ಜೆಡಿಎಸ್​: ಮಂಜುನಾಥ್
ಬಿಜೆಪಿ: ಪ್ರೀತಮ್ ನಾಗಪ್ಪ
ಎಎಪಿ: ಹರೀಶ್

2018ರಲ್ಲಿ ಫಲಿತಾಂಶವೇನಾಗಿತ್ತು?

top videos

    2018 ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್​ನ ಆರ್. ನಾಗೇಂದ್ರ, ಬಿಜೆಪಿಯ ಪ್ರೀತಮ್ ನಾಗಪ್ಪ ಅವರನ್ನು 3,513 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

    ಪಕ್ಷಅಭ್ಯರ್ಥಿ ಹೆಸರುಮತಗಳು
    ​ಬಿಜೆಪಿಪ್ರೀತಮ್ ನಾಗಪ್ಪ56,931
    ಕಾಂಗ್ರೆಸ್​ಆರ್. ನಾಗೇಂದ್ರ60,444

    First published: