Karnataka Assembly Elections: ಹಾಲಿ ಸಚಿವರ ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ? ಗೋವಿಂದರಾಜನಗರದ ಚಿತ್ರಣ ಇಲ್ಲಿದೆ

ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಗೆಲುವಿನ ರುಚಿ ಉಣ್ಣಿಸಿರುವ ಗೋವಿಂದರಾಜನಗರದಲ್ಲಿ ಸದ್ಯ ವಿ. ಸೋಮಣ್ಣ (V. Somanna) ಅವರೇ ರಾಜ (King). ರಾಜ್ಯದ ಹಿರಿಯ ಶಾಸಕರಲ್ಲಿ (Senior MLA) ಒಬ್ಬರಾಗಿರುವ ವಿ ಸೋಮಣ್ಣ, ಪ್ರಸ್ತುತ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ (Basavaraj Bommai Cabinet) ವಸತಿ ಸಚಿವರೂ (Housing Minister) ಆಗಿದ್ದಾರೆ. ಇನ್ನು ಈ ಹಿಂದೆ ಗೆದ್ದು, ಕಳೆದ ಬಾರಿ ಸೋತಿದ್ದ ಪ್ರಿಯಕೃಷ್ಣ (Priyakrishna) ಕೂಡ ಕಾಂಗ್ರೆಸ್‌ನ (Congress) ಹುರಿಯಾಳು. ಜೊತೆಗೆ ಜೆಡಿಎಸ್‌ನಿಂದ ಆರ್. ಪ್ರಕಾಶ್ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಹೀಗಾಗಿ ಈ ಬಾರಿ ಗೋವಿಂದರಾಜನಗರ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗೋದ್ರಲ್ಲಿ ಡೌಟೇ ಇಲ್ಲ!

ವಿ, ಸೋಮಣ್ಣ ಮತ್ತು ಪ್ರಿಯಕೃಷ್ಣ

ವಿ, ಸೋಮಣ್ಣ ಮತ್ತು ಪ್ರಿಯಕೃಷ್ಣ

  • Share this:
ರಾಜ್ಯದಲ್ಲಿ ಈ ಭಾರೀ ವಿಧಾನಸಭಾ ಎಲೆಕ್ಷನ್ (Assembly Election) ಹಂಗಾಮ. ಮಳೆಗಾಲ (Rainy Season) ಮುಗಿಯುತ್ತಿದ್ದಂತೆ ಚಳಿಗಾಲದ (Winter) ಜೊತೆಗೆ ಎಲೆಕ್ಷನ್‌ನ ಬಿಸಿಯೂ ಹೆಚ್ಚುತ್ತಾ ಹೋಗುವುದರಲ್ಲಿ ಡೌಟೇ ಇಲ್ಲ. ಹೀಗಾಗಿ ರಾಜ್ಯದ ಒಂದೊಂದೇ ಕ್ಷೇತ್ರಗಳ ರಾಜಕೀಯ ದರ್ಶನ ಮಾಡುವುದು ಸೂಕ್ತ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿಲಲ್ಲಿ ಇರುವ ವಿಧಾನಸಭಾ ಕ್ಷೇತ್ರ (Assembly Constituencies) ಅಂದ್ರೆ ಅದು ಗೋವಿಂದರಾಜನಗರ (Govindarajanagar). ಸದ್ಯ ಬಿಜೆಪಿಯ (BJP) ಭದ್ರಕೋಟೆಯಾಗಿರುವ ಗೋವಿಂದರಾಜನಗರದಲ್ಲಿ ವಿ. ಸೋಮಣ್ಣ (V. Somanna) ಅವರೇ ರಾಜ (King). ರಾಜ್ಯದ ಹಿರಿಯ ಶಾಸಕರಲ್ಲಿ (Senior MLA) ಒಬ್ಬರಾಗಿರುವ ವಿ ಸೋಮಣ್ಣ, ಪ್ರಸ್ತುತ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ (Basavaraj Bommai Cabinet) ವಸತಿ ಸಚಿವರೂ (Housing Minister) ಆಗಿದ್ದಾರೆ. ಇನ್ನು ಈ ಹಿಂದೆ ಗೆದ್ದು, ಕಳೆದ ಬಾರಿ ಸೋತಿದ್ದ ಪ್ರಿಯಕೃಷ್ಣ (Priyakrishna) ಕೂಡ ಕಾಂಗ್ರೆಸ್‌ನ (Congress) ಹುರಿಯಾಳು. ಹೀಗಾಗಿ ಈ ಬಾರಿ ಗೋವಿಂದರಾಜನಗರ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗೋದ್ರಲ್ಲಿ ಡೌಟೇ ಇಲ್ಲ.

ಗೋವಿಂದರಾಜನಗರ ಕ್ಷೇತ್ರ ಪರಿಚಯ

ಬೆಂಗಳೂರು ನಗರದ ಹೃದಯಭಾಗದಲ್ಲೇ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವಿದೆ. ಈ ಕ್ಷೇತ್ರವು ಪ್ರಶಾಂತ್ ನಗರ, ಕಾರ್ಪೊರೇಷನ್ ಕಾಲೋನಿ, ಬಿಎಂಪಿ ಕಾಲೋನಿ, ಗೋವಿಂದರಾಜ ನಗರ, ಮಾಗಡಿ ಕಾರ್ಡ್ ರಸ್ತೆ ಲೇಔಟ್, ತಿಮ್ಮೇನಹಳ್ಳಿ, ಸಿಎಚ್‌ಬಿಎಸ್ ಲೇಔಟ್, ಬಿನ್ನಿ ಲೇಔಟ್, ವಿಜಯ ನಗರ 1 ನೇ ಹಂತ ಮತ್ತು ಇತರ ಕೆಲವು ಪ್ರದೇಶಗಳನ್ನು ಒಳಗೊಂಡಿದೆ.

ಸಚಿವ ವಿ. ಸೋಮಣ್ಣ


ಸಚಿವ ವಿ. ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರ

ಗೋವಿಂದರಾಜನಗರ ಕ್ಷೇತ್ರವು ವಸತಿ ಸಚಿವ ವಿ. ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರವಾಗಿದೆ. 2008ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು ನಂತರ ಪಕ್ಷ ಬದಲಾವಣೆ ಮಾಡಿ ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ವಿರುದ್ಧ ಸೋತಿದ್ದರು. ಪ್ರಿಯಕೃಷ್ಣ ಅವರು 2013ರ ಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಸೋಮಣ್ಣ ವಿರುದ್ಧ ಜಯಗಳಿಸಿದ್ದರು. ಅದಾದ ಬಳಿಕ 2018ರ ಚುನಾವಣೆಯಲ್ಲಿ ಮತ್ತೆ ವಿ ಸೋಮಣ್ಣ ವಿರುದ್ಧ ಸೋಲನ್ನು ಅನುಭವಿಸಿದ್ದರು.

ಕಾಂಗ್ರೆಸ್‌ನ ಪ್ರಿಯಕೃಷ್ಣ


ಇದನ್ನೂ ಓದಿ: Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ಯುವ ನಾಯಕ ಪ್ರಿಯಕೃಷ್ಣ

ಪ್ರಿಯ ಕೃಷ್ಣ ಶಾಸಕರಾಗಿ ಅನುಭವ ಇರುವ ಕಾಂಗ್ರೆಸ್‌ನ ಯುವ ನಾಯಕ. 2013ರಲ್ಲಿ ತಂದೆ ಎಂ, ಕೃಷ್ಣಪ್ಪ ಪಕ್ಕದ ವಿಜಯನಗರ ಕ್ಷೇತ್ರದ ಶಾಸಕರಾಗಿದ್ದರೆ, ಪುತ್ರ ಪ್ರಿಯಕೃಷ್ಣ ಗೋವಿಂದನಗರ ಕ್ಷೇತ್ರದ ಶಾಸಕರಾಗಿದ್ದರು.

ಅರುಣ್ ಸೋಮಣ್ಣ


ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆ

ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಪ್ರಿಯಾ ಕೃಷ್ಣ ಅವರು 2006 ರಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ತಂದೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಸಹಾಯ ಮಾಡಿದರು. ಗೋವಿಂದರಾಜನಗರದ ಕಾಂಗ್ರೆಸ್‌ನ ಹಾಲಿ ಶಾಸಕ ಪ್ರಿಯಾ ಕೃಷ್ಣ ಅವರು 1020 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿಕಾಂಗ್ರೆಸ್ಜೆಡಿಎಸ್


ವಿ. ಸೋಮಣ್ಣ

ಅರುಣ್ ಸೋಮಣ್ಣ

ಉಮೇಶ್ ಶೆಟ್ಟಿ
ಪ್ರಿಯಕೃಷ್ಣಆರ್. ಪ್ರಕಾಶ್

ಈ ಬಾರಿ ತ್ರಿಕೋನ ಪೈಪೋಟಿ ಸಾಧ್ಯತೆ?

ಈ ಬಾರಿ ಶತಾಯಗತಾಯ ಗೋವಿಂದರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು ಅಂತ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಪ್ರಿಯಕೃಷ್ಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ ಹಾಲಿ ಸಚಿವ ವಿ ಸೋಮಣ್ಣ ಕೂಡ ಮತ್ತೊಂದು ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವೆಲ್ಲದವರ ನಡುವೆ ಜೆಡಿಎಸ್‌ ಕೂಡ ಪ್ರಬಲ ಪೈಪೋಟಿ ನೀಡಲು ಸಜ್ದಾಗಿದೆ. ಜೆಡಿಎಸ್‌ನಿಂದ ಆರ್. ಪ್ರಕಾಶ್ ಸ್ಪರ್ಧೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆರ್. ಪ್ರಕಾಶ್


ಸೋಮಣ್ಣ ಸ್ಪರ್ಧಿಸದಿದ್ದರೆ ಬೇರೆ ಯಾರು?

ಒಂದು ವೇಳೆ ವಯಸ್ಸಿನ ಕಾರಣ ಅಥವಾ ಬೇರೆ ಕಾರಣಗಳಿಂದ ವಿ ಸೋಮಣ್ಣ ಸ್ಪರ್ಧೆಯಿಂದ ಹಿಂದೆ ಸರಿದರೆ ಅವರ ಪುತ್ರ ಅರುಣ್ ಸೋಮಣ್ಣ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

2018ರ ಮತದಾನದ ಲೆಕ್ಕಾಚಾರ

ಈ ಹಿಂದೆ 2018ರ ಚುನಾವಣೆಯಲ್ಲಿ ಸಚಿವ ವಿ ಸೋಮಣ್ಣ 79,135 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರು 67760 ಮತ ಪಡೆದಿದ್ದರೆ, ಜೆಡಿಎಸ್‌ನ ನಾಗೇಂದ್ರ ಪ್ರಸಾದ್ ಅವರು ಬರೀ 7090 ಮತಗಳನ್ನು ಪಡೆದಿದ್ದರು.


ಬಿಜೆಪಿಕಾಂಗ್ರೆಸ್ಜೆಡಿಎಸ್
  ವಿ. ಸೋಮಣ್ಣಪ್ರಿಯಕೃಷ್ಣನಾಗೇಂದ್ರ ಪ್ರಸಾದ್
79,13567,7607090ಗೋವಿಂದರಾಜನಗರ ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಒಟ್ಟು 2,34,550 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗರು-56,000, ಲಿಂಗಾಯತರು-18,000, ಬ್ರಾಹ್ಮಣರು-13,000 ಇದ್ದಾರೆ. ಇನ್ನುಳಿದಂತೆ ಒಬಿಸಿ- 58,500, ಎಸ್ಸಿ,ಎಸ್ಟಿ- 46,750 ಹಾಗೂ ಮುಸ್ಲಿಂ ಮತದಾರರು 24,000 ಮಂದಿ ಇದ್ದಾರೆ. ಜೊತೆಗೆ 15,600 ಮಂದಿ ಇತರೇ ವರ್ಗದ ಮತದಾರರು ಇದ್ದಾರೆ.ಒಟ್ಟು ಮತದಾರರು2,34,550
ಒಕ್ಕಲಿಗರು56,000
ಲಿಂಗಾಯತರು

18,000


ಬ್ರಾಹ್ಮಣರು13,000
ಒಬಿಸಿ58,500
ಎಸ್‌ಸಿ-ಎಸ್‌ಟಿ46,750
ಮುಸ್ಲಿಂ24,000
ಇತರೇ15,600ಹಲವು ವಿಶೇಷತೆ ಇರುವ ಕ್ಷೇತ್ರ

ಗೋವಿಂದರಾಜನಗರದಲ್ಲಿ ಐತಿಹಾಸಿಕ ಮಾರುತಿ ಮಂದಿರ ದೇವಸ್ಥಾನವಿದೆ. ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೆಟ್ರೊ ರೈಲು ಹಾದು ಹೋಗಿದ್ದು, ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಿಗೆ ಬಹುತೇಕ ಕಡೆ ಗಡಿರೇಖೆಯಂತಿದೆ. ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರ ಹೆಸರು ವಾರ್ಡ್‌ಗೆ ಇಟ್ಟಿರುವುದು ಕ್ಷೇತ್ರದ ಹಿರಿಮೆ ಹೆಚ್ಚಿಸಿದೆ.

ಇದನ್ನೂ ಓದಿ: Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ಕ್ಷೇತ್ರದಲ್ಲಿವೆ ಹಲವು ಸಮಸ್ಯೆ

ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಇವೆ. ಗೋವಿಂದರಾಜನಗರ, ಕಾವೇರಿಪುರ, ದಾಸರಹಳ್ಳಿ, ಗಂಗೊಂಡನಹಳ್ಳಿ ಇತರೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಸ ಸಮರ್ಪಕವಾಗಿ ವಿಲೇವಾರಿಯಾಗದ ಕಾರಣ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.  ಮಾಗಡಿ ರಸ್ತೆ ಹೌಸಿಂಗ್ ಬೋರ್ಡ್ ಸಮೀಪ ಗ್ರೇಡ್ ಸೆಪರೇಟರ್ ಕಾಮಗಾರಿ ವಿಳಂಬವಾಗಿ ಸಾಗಿರುವುದರಿಂದ ವಾಹನ ದಟ್ಟಣೆ ತೀವ್ರವಾಗಿದೆ. ರಾಜಾಜಿನಗರ ಕೈಗಾರಿಕೆ ಪ್ರದೇಶದಲ್ಲಿನ ಕಲ್ಯಾಣಮಂಟಪಗಳಿಂದ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆ ನೀಗಿಸುವ ಭರವಸೆಯೊಂದಿಗೆ ಯಾರು ಗೆದ್ದು ಬರುತ್ತಾರೆ ಎಂಬ ಕುತೂಹಲ ಇದ್ದೇ ಇದೆ.
Published by:Annappa Achari
First published: