• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Gokak Election: ಸಾಹುಕಾರ್ ಕೋಟೆಯನ್ನ ತೆಕ್ಕೆಗೆ ತೆಗೆದುಕೊಳುತ್ತಾ ಕಾಂಗ್ರೆಸ್? ಗೋಕಾಕ್ ಕ್ಷೇತ್ರದ ಪರಿಚಯ ಹೀಗಿದೆ

Gokak Election: ಸಾಹುಕಾರ್ ಕೋಟೆಯನ್ನ ತೆಕ್ಕೆಗೆ ತೆಗೆದುಕೊಳುತ್ತಾ ಕಾಂಗ್ರೆಸ್? ಗೋಕಾಕ್ ಕ್ಷೇತ್ರದ ಪರಿಚಯ ಹೀಗಿದೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ, 1,20,085 ಮಹಿಳಾ ಮತದಾರರಿದ್ದಾರೆ.

 • Trending Desk
 • 3-MIN READ
 • Last Updated :
 • Belgaum, India
 • Share this:

ಬೆಳಗಾವಿ: ಮೇ 10 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಪ್ರತಿಯೊಬ್ಬ ಅಭ್ಯರ್ಥಿ (Election Candidate) ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ಚುನಾವಣಾ ಪ್ರಚಾರಗಳನ್ನು (Election Campaign) ಕೈಗೊಂಡಿದ್ದು, ಯಾರು ಗೆಲ್ಲುತ್ತಾರೆ ಎಂಬುದು ಚುನಾವಣಾ ಫಲಿತಾಂಶದಂದು ಹೊರಬೀಳಲಿದೆ. ಚುನಾವಣೆಯೆಂಬ ಪಗಡೆಯಾಟದಲ್ಲಿ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರ ಹಾಗೂ ಅಲ್ಲಿನ ಜನರೇ ಆಟದಲ್ಲಿ ಗೆಲ್ಲುವ ಮುಖ್ಯ ಮೂಲಾಧಾರ ಎಂದೆನಿಸಿದೆ.


ಗೋಕಾಕ್ ಕ್ಷೇತ್ರದ ಪರಿಚಯ ಹೀಗಿದೆ


ಇಂದಿನ ಲೇಖನದಲ್ಲಿ ಕಠಿಣ ಸ್ಪರ್ಧೆಗೆ ಸಜ್ಜಾಗಿರುವ ಗೋಕಾಕ್ ಕ್ಷೇತ್ರದ (Gokak Constituency) ಬಗ್ಗೆ ಪರಿಚಯ ಮಾಡಿಕೊಳ್ಳೋಣ. ಜೆಡಿಎಸ್‌ನಿಂದ ಚಂದನ್ ಕುಮಾರ್, ಕಾಂಗ್ರೆಸ್‌ನಿಂದ ಮಹಾಂತೇಶ್ ಕಡಾಡಿ (Mahantesh Kadadi) ಹಾಗೂ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ (Ramesh Jarkiholi) ಚುನಾವಣೆಗೆ ಸಜ್ಜಾಗಿದ್ದಾರೆ.


ಗೆಲ್ಲುವ ಪಕ್ಷವು 224 ಸ್ಥಾನಗಳಲ್ಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಲು 113 ಸ್ಥಾನಗಳನ್ನು ಹೊಂದಿರಬೇಕು. ಗೋಕಾಕ್ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯೊಳಗೆ ಬರುತ್ತದೆ.


ಮತದಾರರ ಸಂಖ್ಯೆ ಎಷ್ಟಿದೆ?


ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ, 1,20,085 ಮಹಿಳಾ ಮತದಾರರಿದ್ದಾರೆ.


2019 ರ ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಕಾಂಗ್ರೆಸ್‌ನ ಲಖನ್ ಲಕ್ಷ್ಮಣರಾವ್ ಜಾರಕಿಹೊಳಿ ಮತ್ತು ಜನತಾ ದಳ (ಜಾತ್ಯತೀತ) ನಾಯಕ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರನ್ನು ಸೋಲಿಸಿದರು.


big movement in ramesh jarakiholi constituency jds candidate has withdrawn his nomination mrq
ರಮೇಶ್ ಜಾರಕಿಹೊಳಿ, ಮಾಜಿ ಸಚಿವ


ಗೋಕಾಕ್ ಚುನಾವಣಾ ಇತಿಹಾಸ


2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಬಿಜೆಪಿ ಅಭ್ಯರ್ಥಿ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಮತ್ತು ಜೆಡಿಎಸ್‌ನ ಕರೆಪ್ಪ ಲಕ್ಕಪ್ಪ ತಳವಾರ ವಿರುದ್ಧ ಗೆದ್ದರು.


1999 ರಿಂದ 2018 ರವರೆಗೆ ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ರಮೇಶ್ ಜಾರಕಿಹೊಳಿ ಗೋಕಾಕ್ ಅನ್ನು ಗೆದ್ದಿದ್ದಾರೆ. ಅದಾಗ್ಯೂ ಪಕ್ಷಾಂತರ ವಿರೋಧಿ ಕಾನೂನು ಅಡಿಯಲ್ಲಿ ಅನರ್ಹರಾಗಿದ್ದರೂ 2019 ರ ಚುನಾವಣೆಯಲ್ಲಿ ಪುನಃ ಅವರು ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ತೊರೆದು 2019 ರಲ್ಲಿ ಬಿಜೆಪಿ ಸೇರಿದ ಜಾರಕಿಹೊಳಿ ಬಿಜೆಪಿಯಿಂದಲೇ ನಿಂತು ಜಯ ಸಾಧಿಸಿದ್ದಾರೆ.


ಗೆಲುವಿನ ರೂವಾರಿ ರಮೇಶ್ ಜಾರಕಿಹೊಳಿ


2018 ರ ಕರ್ನಾಟಕ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಟಿಕೆಟ್‌ನಲ್ಲಿಯೇ ಗೋಕಾಕ್ ಕ್ಷೇತ್ರವನ್ನು ಗೆದ್ದಿದ್ದು 15,000 ಕ್ಕಿಂತಲೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಅಶೋಕ್ ನಿಂಗಯ್ಯಸ್ವಾಮಿಯನ್ನು ಸೋಲಿಸಿದರು.


big movement in ramesh jarakiholi constituency jds candidate has withdrawn his nomination mrq
ರಮೇಶ್ ಜಾರಕಿಹೊಳಿ, ಮಾಜಿ ಸಚಿವ


ಜಾರಕಿಹೊಳಿ 90,000 ಮತಗಳನ್ನು ಪಡೆದುಕೊಂಡರೆ ಅವರ ಮುಖ್ಯ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅಶೋಕ್ ನಿಂಗಯ್ಯಸ್ವಾಮಿ 75,000 ಮತಗಳನ್ನು ಮಾತ್ರವೇ ಗಳಿಸಿದ್ದರು.


2019 ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಲಕ್ಷ್ಮಣರಾವ್ ಜಾರಕಿಹೊಳಿ ಅವರನ್ನು 29,000 ಮತಗಳ ಅಂತರದಿಂದ ಸೋಲಿಸಿದರು. ರಮೇಶ್ 87,450 ಮತಗಳನ್ನು ಪಡೆದುಕೊಂಡು ವಿಜಯದ ನಗು ಬೀರಿದರೆ, ಲಖನ್ ಜಾರಕಿಹೊಳಿ 58,444 ಮತಗಳನ್ನು ಗಳಿಸಿ ಸೋತರು.
2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರು ತಮ್ಮ ಪ್ರತಿಸ್ಪರ್ಧಿ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರನ್ನು ಸೋಲಿಸಿದರು.


2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಸುರೇಶ ಚನ್ನಬಸಪ್ಪ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಡಾ.ಸಾಧುನವರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.


ಇದನ್ನೂ ಓದಿ: DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?
ಕಾವೇರಿರುವ ವಿಧಾನಸಭಾ ಚುನಾವಣೆ


ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಮೇ 10, 2023 ರಂದು ಚುನಾವಣೆ ನಡೆಯಲಿದೆ.

top videos


  224 ಸ್ಥಾನಗಳ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕರ್ನಾಟಕ ಚುನಾವಣೆ 2023 ರ ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾತ್ತದೆ.

  First published: