• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gangavati Constituency: ಭತ್ತದ ನಗರಿಯಲ್ಲಿ ಅಸೆಂಬ್ಲಿ ಎಲೆಕ್ಷನ್‌ ಭರಾಟೆ- ಗೆಲ್ತಾರಾ ಗಣಿಧಣಿ ಜನಾರ್ಧನ್‌ ರೆಡ್ಡಿ?

Gangavati Constituency: ಭತ್ತದ ನಗರಿಯಲ್ಲಿ ಅಸೆಂಬ್ಲಿ ಎಲೆಕ್ಷನ್‌ ಭರಾಟೆ- ಗೆಲ್ತಾರಾ ಗಣಿಧಣಿ ಜನಾರ್ಧನ್‌ ರೆಡ್ಡಿ?

ಜನಾರ್ಧನ ರೆಡ್ಡಿ

ಜನಾರ್ಧನ ರೆಡ್ಡಿ

ಗಂಗಾವತಿ ಕ್ಷೇತ್ರ ತನ್ನ 19 ಅಭ್ಯರ್ಥಿಗಳಿಂದ ದಿನ ದಿನಕ್ಕೂ ರೋಚಕವಾಗುತ್ತಿದ್ದು, ಜನಾರ್ಧನ್‌ ರೆಡ್ಡಿಯವರ ­ಸ್ಪರ್ಧೆ ಮತ್ತಷ್ಟು ಕುತೂಹಲ ಕೆರಳಿಸಿದೆ.

  • Trending Desk
  • 2-MIN READ
  • Last Updated :
  • Karnataka, India
  • Share this:

ಚುನಾವಣೆಗೆ(Election) ಇನ್ನೆರೆಡೇ ದಿನ ಬಾಕಿ ಇದೆ. ಮಹಾ ಸಂಗ್ರಾಮದಲ್ಲಿ ಗೆಲ್ಲುವ ಆಶೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳು ಕೊನೇ ಕ್ಷಣದ ಸಿದ್ಧತೆಯನ್ನು ಮಾಡುತ್ತಿವೆ. ವಿಧಾನಸಭಾ ಕ್ಷೇತ್ರಗಳಲ್ಲಿ ಎಲೆಕ್ಷನ್ (Assembly Elections 2023)‌ ಕಾವೇರುತ್ತಿದೆ. ಹೇಗಿದೆ ಪ್ರತಿ ಕ್ಷೇತ್ರದಲ್ಲಿ ಎಲೆಕ್ಷನ್‌ ಬಿಸಿ, ಆ ಕ್ಷೇತ್ರದ ಭೌಗೋಳಿಕ, ರಾಜಕೀಯ ಹಿನ್ನೆಲೆ ಏನು? ರಣಕಣದಲ್ಲಿರುವ ಅಭ್ಯರ್ಥಿಗಳು ಯಾರು? ಯಾರದ್ದು ಮೇಲುಗೈ? ಹೀಗೆ ಪ್ರತಿ ಕ್ಷೇತ್ರದ ಸಂಕ್ಷಿಪ್ತ ಮಾಹಿತಿಯನ್ನು ನಿಮ್ಮ ನ್ಯೂಸ್‌ 18 ಕನ್ನಡ (News 18 Kannada) ಒದಗಿಸುತ್ತಿದೆ. ಈ ವಿಶೇಷ ಲೇಖನದಲ್ಲಿ ಇಲ್ಲಿ ಭತ್ತದ ನಗರಿ ಗಂಗಾವತಿ (Gangavati) ಬಗ್ಗೆ ತಿಳಿಯೋಣ.


ಗಂಗಾವತಿ ಕ್ಷೇತ್ರ ತನ್ನ 19 ಅಭ್ಯರ್ಥಿಗಳಿಂದ ದಿನ ದಿನಕ್ಕೂ ರೋಚಕವಾಗುತ್ತಿದ್ದುಜನಾರ್ಧನ್‌ ರೆಡ್ಡಿಯವರ ­ಸ್ಪರ್ಧೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಬಿಸಿ ಏರುತ್ತಿರುವ ರಾಜಕೀಯ ಬೆಳವಣಿಗೆ ಮುನ್ನ ಮೊದಲಿಗೆ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ತಿಳಿಯೋಣ.


ಭತ್ತದ ನಗರಿ ಗಂಗಾವತಿ


ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಜಿಲ್ಲೆಯ ಒಂದು ದೊಡ್ಡ ವಾಣಿಜ್ಯ ನಗರ, ಅಕ್ಕಿ ಬೆಳೆಗಾರಿಕೆಗೆ ಬಹಳ ಪ್ರಸಿದ್ಧವಾದ ಸ್ಥಳ. ಕೊಪ್ಪಳ ಜಿಲ್ಲೆಯ ಯಾವುದೇ ಪಟ್ಟಣಗಳಿಗೆ ಹೋಲಿಸಿದರೆ ಇದು ವಿಸ್ತೀರ್ಣ ಮತ್ತು ಜನಸಂಖ್ಯೆ ದೃಷ್ಟಿಯಿಂದಲೂ ದೊಡ್ಡ ನಗರವಾಗಿದೆ.


ಇದನ್ನೂ ಓದಿ: Dhruva Sarja Election Campaign: ಪಕ್ಷೇತರ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಧ್ರುವ ಸರ್ಜಾ ಪ್ರಚಾರ! ಈ ಬಗ್ಗೆ 'ಪೊಗರು' ನಟ ಹೇಳಿದ್ದೇನು?


ಗಂಗಾವತಿ ಒಂದು ವಾಣಿಜ್ಯ ಕೇಂದ್ರವಾಗಿ ಮತ್ತು ಸಾಮಾನ್ಯವಾಗಿ ಕರ್ನಾಟಕ ಅನ್ನದ ಪಾತ್ರೆ ನಗರವೆಂದು ಪರಿಚಿತವಾಗಿದೆ. ಗಂಗಾವತಿಯು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಬೆಳೆ ಪ್ರಮುಖವಾಗಿದೆ ಹಾಗೂ ಅಕ್ಕಿ ಉದ್ಯಮ ಸಕ್ಕರೆ ಉತ್ಪಾದನೆಗೂ ಪ್ರಸಿದ್ಧವಾಗಿದೆ.


ಅಖಾಡದಲ್ಲಿ ಗಣಿಧಣಿ ಜನಾರ್ಧನ ರೆಡ್ಡಿ


ಭತ್ತದ ನಗರಿ ಎಂದೇ ಖ್ಯಾತಿ ಪಡೆದಿರುವ ಗಂಗಾವತಿಯ ವಿಧಾನಸಭಾ ಕ್ಷೇತ್ರ ಈ ಭಾರಿ ರಾಜ್ಯದ ಆಕರ್ಷಣೆಯ ಬಿಂದುವಾಗಿದೆ. ಕಾರಣ ಇಷ್ಟೇ ಕಳೆದೆರಡು ಚುನಾವಣೆಗಳಿಂದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮಧ್ಯೆ ಮಾತ್ರ ಇದ್ದ ಜಿದ್ದಾಜಿದ್ದಿ ಅಖಾಡಕ್ಕೆ ಗಣಿಧಣಿ ಜನಾರ್ಧನ ರೆಡ್ಡಿಯ ಎಂಟ್ರಿ ಕೂಡ ಆಗಿದೆ. ಈ ಮೂಲಕ ಕ್ಷೇತ್ರದಲ್ಲಿ ಭಾರಿ ಸ್ಪರ್ಧೆ ಕೂಡ ಏರ್ಪಟ್ಟಿದೆ.




ಗಂಗಾವತಿಯಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣಕ್ಕೆ


ಕ್ಷೇತ್ರದಲ್ಲಿ ಬರೋಬ್ಬರಿ 19 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಯಾರದ್ದು ಮೇಲುಗೈ ಎಂಬ ಕುತೂಹಲ ಹೆಚ್ಚಿದೆ. ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ, ಜೆಡಿಎಸ್‌ನಿಂದ ಎಚ್‌ಆರ್‌ ಚನ್ನಕೇಶವ, ಕೆಆರ್‌ಪಿಪಿಯಿಂದ ಜನಾರ್ದನ ರೆಡ್ಡಿ, ಪಬ್ಲಿಕ್‌ ಪಾರ್ಟಿಯಿಂದ ಸರಸ್ವತಿ, ಬಹುಜನ ಸಮಾಜ ಪಾರ್ಟಿಯಿಂದ ಶಂಕರ ಸಿದ್ದಾಪುರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕನಕಪ್ಪ ಸೇರಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಯಿಂದ ಪರಣ್ಣ ಮುನವಳ್ಳಿ , ಇಕ್ಬಾಲ್‌ ಅನ್ಸಾರಿಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.


ಕಳೆದ ಬಾರಿ ಗೆದ್ದವರು ಯಾರು?


ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಸೇರಿದ ಪರಣ್ಣ ಮುನವಳ್ಳಿ 7,973 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅನ್ನು ಸೋಲಿಸಿದ್ದರು.


ಕ್ಷೇತ್ರದಲ್ಲಿ ಇರುವ ಮತದಾರರು ಎಷ್ಟು?
ಪುರುಷರು : 100295
ಮಹಿಳೆಯರು : 101899
ಇತರೆ : 12
ಒಟ್ಟು : 202206


ಜಾತಿಬಲ


ಕ್ಷೇತ್ರವು ಅಂದಾಜು 60,000 ಲಿಂಗಾಯತ ಜನಸಂಖ್ಯೆಯನ್ನು ಹೊಂದಿದೆ, ನಂತರ ಮುಸ್ಲಿಮರು ಸುಮಾರು 40,000 ಮತ್ತು ಕುರುಬರು 20,000 ಇದ್ದಾರೆ. ಇವರದ್ದು ಹೆಚ್ಚಿನ ಬಲವಾಗಿದ್ದು, ಇನ್ನುಳಿದಂತೆ ಬೇರೆ ಬೇರೆ ಜಾತಿ ಬಲ ಕ್ಷೇತ್ರದಲ್ಲಿದೆ.


ಇದನ್ನೂ ಓದಿ: Karnataka Elections: ‘ಕರ್ನಾಟಕ ಚುನಾವಣೆಯಲ್ಲಿ ಸಿದ್ದು ಸೋಲಿಗೆ ಕಾಂಗ್ರೆಸ್​ನಲ್ಲೇ ಹುನ್ನಾರ!’ ನ್ಯೂಸ್​​18ಗೆ ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ


ಬಿಜೆಪಿ ಅಭ್ಯರ್ಥಿ ಮುನವಳ್ಳಿ ಅವರು ಲಿಂಗಾಯತರನ್ನು ಹೆಚ್ಚು ಅವಲಂಬಿಸಿದ್ದರೆ, ಅನ್ಸಾರಿ ಅವರು ಮುಸ್ಲಿಮರು ಮತ್ತು ಕುರುಬರ ಬೆಂಬಲ ಹೊಂದಿದ್ದಾರೆ..


ನಿರ್ಣಾಯಕ ಮತಗಳೆಂದು ಗುರುತಿಸಿಕೊಂಡಿರುವ ಲಿಂಗಾಯತ, ಮುಸ್ಲಿಂ, ಕುರುಬ, ಎಸ್ಸಿ ಸಮುದಾಯಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್‌, ಬಿಜೆಪಿ, ಕೆಆರ್‌ಪಿಪಿ ನಾಯಕರು ತಮ್ಮದೇ ನೆಲೆಯಲ್ಲಿ ಭಾರೀ ಕಸರತ್ತು ನಡೆಸಿದ್ದಾರೆ. ಬಿಜೆಪಿ, ಕಾಂಗ್ರೆಸ್‌ಗೆ ತಮ್ಮದೇ ವೋಟ್‌ ಬ್ಯಾಂಕ್‌ ಇರುವುದು ಆ ಪಕ್ಷಗಳ ಅಭ್ಯರ್ಥಿಗಳ ವಿಶ್ವಾಸ ಹೆಚ್ಚಿಸಿದೆ.


ಒಟ್ಟಾರೆ ಇಲ್ಲಿನ ಒಟ್ಟು 202206 ಮತದಾರರು ಯಾರು ಶಾಸಕರು ಆಗಬೇಕು ಎಂಬುದನ್ನು ಮೇ 10ಕ್ಕೆ ನಿರ್ಧರಿಸಲಿದ್ದಾರೆ.

top videos
    First published: