• Home
  • »
  • News
  • »
  • state
  • »
  • Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?

Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?

ಗಾಂಧಿನಗರ ವಿಧಾನಸಭಾ ಕ್ಷೇತ್ರ

ಗಾಂಧಿನಗರ ವಿಧಾನಸಭಾ ಕ್ಷೇತ್ರ

ಸಿನಿರಂಗದ ಹಲವು ನಿರ್ಮಾಪಕರ, ನಿರ್ದೇಶಕರ ಕಚೇರಿಗಳು ಇರುವುದು ಇದೇ ಗಾಂಧಿನಗರದಲ್ಲಿ. ಹೀಗಾಗಿ ಇದನ್ನು ಚಿತ್ರನಗರಿ ಅಂತಾನೂ ಕರೆಯುತ್ತಾರೆ. ಹಲವು ಭಾಷಿಕರು, ಹಲವು ಧರ್ಮ, ಜನಾಂಗದ ಜನರು ಇಲ್ಲಿನ ಕ್ಷೇತ್ರದ ಮತದಾರರು. ಹಲವು ಸಮಸ್ಯೆಗಳ ಜೊತೆಗೆ ಅಪರಾಧ ಪ್ರಕರಣಗಳೂ ಈ ಕ್ಷೇತ್ರದಲ್ಲಿ ಜಾಸ್ತಿಯಾಗಿವೆ. ಸದ್ಯ ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಇಲ್ಲಿನ ಶಾಸಕರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಗಾಂಧಿನಗರ ಅಂದ ತಕ್ಷಣ ನೆನಪಿಗೆ ಬರುವುದು ಕನ್ನಡ ಚಿತ್ರರಂಗ. ಹೌದು, ಇದು ಚಂದನವನದ ಹೆಡ್ ಆಫೀಸ್ ಅಂತಾನೇ ಫೇಮಸ್. ಬೆಂಗಳೂರಿನ ಹೃದಯಭಾಗ ಅಂತಾನೇ ಕರೆಯಲ್ಪಡುವ ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣ ಇರುವುದು ಇದೇ ವಿಧಾನಸಭಾ ವ್ಯಾಪ್ತಿಯಲ್ಲಿ. ಸಿನಿರಂಗದ ಹಲವು ನಿರ್ಮಾಪಕರ, ನಿರ್ದೇಶಕರ ಕಚೇರಿಗಳು ಇರುವುದು ಇದೇ ಗಾಂಧಿನಗರದಲ್ಲಿ. ಹೀಗಾಗಿ ಇದನ್ನು ಚಿತ್ರನಗರಿ ಅಂತಾನೂ ಕರೆಯುತ್ತಾರೆ. ಹಲವು ಭಾಷಿಕರು, ಹಲವು ಧರ್ಮ, ಜನಾಂಗದ ಜನರು ಇಲ್ಲಿನ ಕ್ಷೇತ್ರದ ಮತದಾರರು. ಹಲವು ಸಮಸ್ಯೆಗಳ ಜೊತೆಗೆ ಅಪರಾಧ ಪ್ರಕರಣಗಳೂ ಈ ಕ್ಷೇತ್ರದಲ್ಲಿ ಜಾಸ್ತಿಯಾಗಿವೆ. ಸದ್ಯ ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಇಲ್ಲಿನ ಶಾಸಕರು.


ಕನ್ನಡ ಚಿತ್ರರಂಗದ ಹೆಡ್ ಆಫೀಸ್ ಗಾಂಧಿನಗರ


ಗಾಂಧಿನಗರವನ್ನು ಕನ್ನಡ ಚಿತ್ರರಂಗದ ಹೆಡ್ ಆಫೀಸ್ ಅಂತಾ ಕರೆಯಲಾಗುತ್ತದೆ. ಈ ಹಿಂದೆ ಹಲವು ನಿರ್ಮಾಪಕರು, ಹಲವು ನಿರ್ದೇಶಕರ ಕಚೇರಿಗಳು ಇಲ್ಲಿದ್ದವು. ಇಲ್ಲಿನ ಹೋಟೆಲ್ ಕನಿಷ್ಕ ಸಿನಿಮಾ ಸುದ್ದಿಗೋಷ್ಠಿಗಳ ಖಾಯಂ ತಾಣವಾಗಿತ್ತು. ಜೊತೆಗೆ ಇಲ್ಲಿನ ಹಲವು ಹೋಟೆಲ್‌ಗಳಲ್ಲಿ ಸಿನಿ ರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಖಾಯಂ ಆಗಿ ಟೆಂಟ್ ಹಾಕುತ್ತಿದ್ದರರು. ಇದರ ಜೊತೆಗೆ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಆಗುವ ಮೇನ್ ಥಿಯೇಟರ್‌ಗಳೂ ಕೂಡ ಇಲ್ಲಿಯೇ ಇರುವುದು.


ಶಾಸಕ ದಿನೇಶ್ ಗುಂಡೂರಾವ್


ಹಲವು ಭಾಷಿಕರು ಇರುವ ಕ್ಷೇತ್ರ


ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು ಸೇರಿದಂತೆ ಹಲವು ಭಾಷೆ ಮಾತನಾಡುವ ಜನಗಳಿದ್ದಾರೆ. ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳೀಪುರಂ, ಚಿಕ್ಕಪೇಟೆ, ಕಾಟನ್ ಪೇಟೆ, ಬಿನ್ನಿಪೇಟೆ ಎಂಬ ಬಿಬಿಎಂಪಿ ವಾರ್ಡ್‌ಗಳು ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.


ಇದನ್ನೂ ಓದಿ: Karnataka Assembly Elections: ಹಳೆ ಸಂಪ್ರದಾಯದ ಬೇರು, ಹೊಸ ಅಭಿವೃದ್ಧಿಯ ಚಿಗುರು; ಮಲ್ಲೇಶ್ವರಂನಲ್ಲಿ ಈ ಬಾರಿ ಗೆಲ್ಲೋರ್ಯಾರು?


ಹಾಲಿ ಶಾಸಕ ದಿನೇಶ್ ಗುಂಡೂರಾವ್


ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರರೇ ದಿನೇಶ್ ಗುಂಡೂರಾವ್. ಮಾಜಿ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ಜೊತೆಗೆ ಹಾಲಿ ಗಾಂಧಿನಗರ ಕ್ಷೇತ್ರದ ಶಾಸಕ ಅವರು. 4 ಬಾರಿ ಇದೇ ಕ್ಷೇತ್ರದಿಂದ ಗೆದ್ದು ಬಂದಿರುವ ದಿನೇಶ್ ಗುಂಡೂರಾವ್ ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ.


ಮಾಜಿ ಮುಖ್ಯಮಂತ್ರಿಗಳ ಪುತ್ರ


ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಮೂವರು ಪುತ್ರರಲ್ಲಿ ದಿನೇಶ್ ಗುಂಡೂರಾವ್ ಒಬ್ಬರು. ಮಾಜಿ ಸಿಎಂ ಮಗ ಎನ್ನುವ ಹಿರಿಮೆ ಜೊತೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎನ್ನುವುದು ಪ್ಲಸ್ ಪಾಯಿಂಟ್. ಅಂಬೇಡ್ಕರ್ ಭವನ, ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು ಇವರ ಸಾಧನೆ. ರಸ್ತೆಗಳ ಡಾಂಬರೀಕರಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮಣೆ ಹಾಕಿದ್ದು ಮತದಾರರ ಗಮನ ಸೆಳೆದಿದೆ.


2018ರ ಫಲಿತಾಂಶ

ದಿನೇಶ್ ಗುಂಡೂರಾವ್ಕಾಂಗ್ರೆಸ್ಗೆಲುವು47,354 ಮತ
ಸಪ್ತಗಿರಿ ಗೌಡಬಿಜೆಪಿಸೋಲು37,284 ಮತ
ನಾರಾಯಣ ಸ್ವಾಮಿಜೆಡಿಎಸ್‌ಸೋಲು36,635 ಮತ


ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ಟಿಕೆಟ್?


ಸದ್ಯ ಕಾಂಗ್ರೆಸ್‌ನಿಂದ ದಿನೇಶ್ ಗುಂಡೂರಾವ್‌ ಅವರೇ ಟಿಕೆಟ್ ಬಯಸಿದ್ದಾರೆ. ಹೀಗಾಗಿ ಅವರಿಗೆ ಪೈಪೋಟಿ ನೀಡುವವರು ಕಾಂಗ್ರೆಸ್‌ನಲ್ಲಿ ಇಲ್ಲ. ಇನ್ನು ಬಿಜೆಪಿಯಿಂದ ಯುವ ನಾಯಕ ಸಪ್ತಗಿರಿ ಗೌಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಬಾರಿ ಸೋತಿದ್ದ ಸಪ್ತಗಿರಿ ಗೌಡ ಈ ಬಾರಿ ಮತ್ತೊಮ್ಮೆ ಸ್ಪರ್ಧೆಗೆ ಬಯಸಿದ್ದಾರೆ. ಅತ್ತ ಜೆಡಿಎಸ್‌ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ವಿ. ನಾರಾಯಣ ಸ್ವಾಮಿ ಈ ಬಾರಿಯೂ ಸ್ಪರ್ಧಿಸುವುದು ಬಹುತೇಕ ಪಕ್ಕಾ ಆಗಿದೆ.


ಸಪ್ತಗಿರಿ ಗೌಡ


ಗಾಂಧಿನಗರ ಕ್ಷೇತ್ರದ ಮತದಾರರು


ಗಾಂಧಿನಗರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,75,600 ಇದೆೇ. ಈ ಪೈಕಿ ಎಸ್‌ಸಿ-ಎಸ್‌ಟಿ – 60,000, ತಮಿಳು ಮತ್ತು ತೆಲುಗು ಭಾಷಿಕರು 60,000, ಒಕ್ಕಲಿಗರು - 33,000 ಮತದಾರರು ಇದ್ದಾರೆ. ಇನ್ನು ಬ್ರಾಹ್ಮಣ 18,000, ದೇವಾಂಗ – 15,000, ಮುಸ್ಲಿಂ – 12,000, ಲಿಂಗಾಯತ – 6,000- ಇದ್ದಾರೆ. ಇನ್ನುಳಿದಂತೆ ಕ್ಷೇತ್ರದಲ್ಲಿ ಕುರುಬ – 4000ದಷ್ಟು ಮತದಾರರಿದ್ದಾರೆ.


ನಾರಾಯಣ ಸ್ವಾಮಿ


ಇದನ್ನೂ ಓದಿ: Karnataka Assembly Elections: ಸಚಿವರಿಗೆ ಪಕ್ಷಾಂತರದ ಕಳಂಕ, ಕೆಆರ್‌ ಪುರದಲ್ಲಿ ಯಾರಿಗೆ ಮಣೆ? ಅತಿ ದೊಡ್ಡ ಕ್ಷೇತ್ರದಲ್ಲಿ ಹೇಗಿದೆ ಎಲೆಕ್ಷನ್ ಫೀವರ್?


ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು


ಗಾಂಧಿನಗರ ಕ್ಷೇತ್ರ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. 5 ವರ್ಷಗಳ ಹಿಂದೆ ಕ್ಷೇತ್ರ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ ಎನ್ನುವುದು ಬಿಜೆಪಿ ಆರೋಪ. ಹೊಸ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರಾಜಧಾನಿಯ ಹೃದಯ ಭಾಗವಾದರೂ ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರತಿಪಕ್ಷದ ಶಾಸಕ ಆಗಿರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ನೆರವು ಸಿಕ್ಕಿಲ್ಲ ಎನ್ನಲಾಗುತ್ತಿದೆ.

Published by:Annappa Achari
First published: