ದಾವಣಗೆರೆ (Davanagere) ಎಂದರೆ ನೆನಪಿಗೆ ಬರುವುದು ಬೆಣ್ಣೆ ದೋಸೆ (Benne Dosa). ವಿಶ್ವ ಮಟ್ಟದಲ್ಲಿ ಹೆಸರು ಪಡೆದ ಬೆಣ್ಣೆ ದೋಸೆಗೆ ದಾವಣಗೆರೆಯೇ ಜನ್ಮಭೂಮಿ. ಮಧ್ಯ ಕರ್ನಾಟಕದ (Middle Karnataka) ಪ್ರಮುಖ ಪ್ರದೇಶವಾದ ದಾವಣಗೆರೆಯನ್ನು ‘ಕರ್ನಾಟಕದ ಮ್ಯಾಂಚೆಸ್ಟರ್’ (Manchester of Karnataka) ಅಂತ ಕರೆಯುತ್ತಾರೆ. ದಾವಣಗೆರೆ ಜವಳಿ (textile industry) ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ (Cotton Mills) ಬಹಳ ಜನಪ್ರಿಯವಾಗಿದ್ದ ಹೆಸರು. 1997 ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ (JH Patel), ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ (Chitradurga) ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಇದೀಗ ಇಲ್ಲಿಯೂ ಎಲೆಕ್ಷನ್ ಜ್ವರ ಜೋರಾಗಿದ್ದು, ಯಾರ ಪರ ಜನರ ಒಲವು ಇದೆ ಅಂತ ತಿಳಿದುಕೊಳ್ಳೋಣ…
1997ರಲ್ಲಿ ದಾವಣಗೆರೆ ಜಿಲ್ಲೆ ರಚನೆ
ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ 15, 1997 ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. 2019ರಲ್ಲಿ ಪುನಃ ಹರಪನಹಳ್ಳಿ ತಾಲೂಕನ್ನು, ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು.
ದಾವಣಗೆರೆ ದಕ್ಷಿಣ ಕ್ಷೇತ್ರದ ವಿಶೇಷತೆ
ಕ್ಷೇತ್ರ ಪುನರ್ ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರ 2008ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ವಿಂಗಡನೆ ಮಾಡಲಾಯ್ತು. ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾಗಿ ವಿಭಜನೆಗೊಂಡವು. ದಾವಣಗೆರೆ ದಕ್ಷಿಣ ಕ್ಷೇತ್ರ ಪ್ರತ್ಯೇಕ ಆದಾಗಿನಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಪಡೆದುಕೊಳ್ಳುತ್ತಾ ಬಂದಿದ್ದಾರೆ. 2008, 2013 ಎರಡೂ ಚುನಾವಣೆಗಳಲ್ಲಿ ಅವರೇ ಜಯಶಾಲಿಯಾಗಿದ್ದಾರೆ.
ಇದನ್ನೂ ಓದಿ: Karnataka Assembly Elections: ರಾಣೇಬೆನ್ನೂರಲ್ಲಿ ರಾಜ ಯಾರು? ಮಾಜಿ ಸ್ಪೀಕರ್, ಮಾಜಿ ಸಚಿವರ ತವರಲ್ಲಿ ಹೇಗಿದೆ ಮತ ಚಿತ್ರಣ?
ಇದುವರೆಗೂ ದಾವಣಗೆರೆಯಲ್ಲಿ 16 ಬಾರಿ ಚುನಾವಣೆ
ಕ್ಷೇತ್ರ ಪುನರ್ ವಿಂಗಡಣೆಯಾದಾಗ ದಾವಣಗೆರೆ ವಿಧಾನಸಭಾ ಕ್ಷೇತ್ರ ದಕ್ಷಿಣ, ಉತ್ತರ ಎಂದು ಎರಡು ಕ್ಷೇತ್ರಗಳಾಗಿ ಮಾರ್ಪಟ್ಟವು. ಇದಕ್ಕೂ ಮೊದಲು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ 2018ರವರೆಗೆ ಒಟ್ಟು 13 ಚುನಾವಣೆಗಳು ನಡೆದಿವೆ. ಇದರಲ್ಲಿ 11 ಬಾರಿ ಕಾಂಗ್ರೆಸ್, ಸಿಪಿಐ 3 ಸಲ ಹಾಗೂ ಪ್ರಜಾ ಸೋಷಲಿಸ್ಟ್ ಪಕ್ಷ (ಪಿಎಸ್ಪಿ) 1 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿವೆ.
ಈ ಬಾರಿ ಯಾರಿಗೆ ಟಿಕೆಟ್?
ಕಾಂಗ್ರೆಸ್ನಿಂದ ಮತ್ತೊಮ್ಮೆ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಬಯಸಿದ್ದಾರೆ. ಸದ್ಯ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ಗೆ ಪೈಪೋಟಿ ಇದ್ದಂತೆ ತೋರುತ್ತಿಲ್ಲ. ಅತ್ತ ಬಿಜೆಪಿಯಲ್ಲಿ ಕಳೆದ ಬಾರಿ ಸೋತಿದ್ದ ಯಶವಂತರಾವ್ ಜಾಧವ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಇದನ್ನೂ ಓದಿ: Karnataka Assembly Elections: 'ಬ್ಯಾಡಗಿ' ಮೆಣಸು ಈ ಬಾರಿ ಯಾರಿಗೆ ಖಾರ? ಕ್ಷೇತ್ರದಲ್ಲಿ ಹೇಗಿದೆ ಮತದಾರರ ಲೆಕ್ಕಾಚಾರ?
ಕ್ಷೇತ್ರದ ಮತದಾರರ ವಿವರ
ಕ್ಷೇತ್ರದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ ಇದೆ. ಸದ್ಯ ಲಿಂಗಾಯತರು 38,000, ಕುರುಬ – 20,000, ಮುಸ್ಲಿಂ – 59,000 ಮತದಾರರಿದ್ದಾರೆ. ಇನ್ನು ಎಸ್ಟಿ – 15,000, ಎಸ್ಸಿ – 21,000, ಮರಾಠ – 16,000, ಈಡಿಗ – 2,500 ಹಾಗೂ ಉಪ್ಪಾರ - 8,000 ಮತದಾರರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ