• Home
  • »
  • News
  • »
  • state
  • »
  • Karnataka Assembly Elections: ಈ ಬಾರಿ ಯಾರಾಗ್ತಾರೆ ದಾಸರಹಳ್ಳಿ ದೊರೆ? ಕ್ಷೇತ್ರ ಉಳಿಸಿಕೊಳ್ಳುತ್ತಾಳಾ ತೆನೆ ಹೊತ್ತ ಮಹಿಳೆ?

Karnataka Assembly Elections: ಈ ಬಾರಿ ಯಾರಾಗ್ತಾರೆ ದಾಸರಹಳ್ಳಿ ದೊರೆ? ಕ್ಷೇತ್ರ ಉಳಿಸಿಕೊಳ್ಳುತ್ತಾಳಾ ತೆನೆ ಹೊತ್ತ ಮಹಿಳೆ?

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ (ಚಿತ್ರಕೃಪೆ: Internet)

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ (ಚಿತ್ರಕೃಪೆ: Internet)

ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಕ್ಷೇತ್ರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ. ಜೆಡಿಎಸ್‌ನ ಮಂಜುನಾಥ್ ಇಲ್ಲಿನ ಶಾಸಕರು. ಅಸಂಖ್ಯಾತ ಜನರಿಗೆ ಉದ್ಯೋಗ ಕೊಟ್ಟಿರುವ ಕೈಗಾರಿಕಾ ಪ್ರದೇಶ, ಅನೇಕ ಸಮಸ್ಯೆಗಳನ್ನು ಹೊದ್ದು ಮಲಗಿದೆ!

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರಿನಲ್ಲಿ (Bengaluru) ವಿಧಾನಸಭಾ ಎಲೆಕ್ಷನ್ (Assembly Election) ಕಾವು ನಿಧಾನಕ್ಕೆ ಏರುತ್ತಿದೆ. ಪ್ರಧಾನಿ ಮೋದಿ (PM Modi) ಬಂದು ಹೋದ ಮೇಲಂತೂ ಬಿಜೆಪಿ (BJP) ಅಷ್ಟೇ ಅಲ್ಲ, ಜೆಡಿಎಸ್ (JDS), ಕಾಂಗ್ರೆಸ್ (Congress) ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಮೈಕೊಡವಿ ಎದ್ದಿದ್ದಾರೆ. ಹೀಗಾಗಿ ಎಲ್ಲೆಡೆ ಎಲೆಕ್ಷನ್ ಜ್ವರ ಶುರುವಾಗಿದೆ. ಇನ್ನು ರಾಜಧಾನಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ದಾಸರಹಳ್ಳಿಯಲ್ಲೂ (Dasarahalli) ಚುನಾವಣಾ ಪರಿಸ್ಥಿತಿ ಹೇಗಿದೆ ನೋಡೋಣ. ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ (largest industrial area in South Asia) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಕ್ಷೇತ್ರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ. ಜೆಡಿಎಸ್‌ನ ಮಂಜುನಾಥ್ (Manjunath) ಇಲ್ಲಿನ ಶಾಸಕರು. ಅಸಂಖ್ಯಾತ ಜನರಿಗೆ ಉದ್ಯೋಗ ಕೊಟ್ಟಿರುವ ಕೈಗಾರಿಕಾ ಪ್ರದೇಶ, ಹತ್ತು ಹಲವು ಸಮಸ್ಯೆಗಳನ್ನು ಹೊದ್ದು ಮಲಗಿದೆ.


ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಪರಿಚಯ


ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ, ರಾಜಧಾನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟಿ ದಾಸರಹಳ್ಳಿ (ತುಮಕೂರು ರಸ್ತೆ ದಾಸರಹಳ್ಳಿ) ಅಥವಾ ಪೀಣ್ಯ ದಾಸರಹಳ್ಳಿ ಸಿಟಿ ಮುನ್ಸಿಪಲ್ ಕೌನ್ಸಿಲ್ ಆಗಿತ್ತು. ಆದರೆ, ಈಗ ಅಧಿಕೃತವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಲೀನಗೊಂಡಿದೆ. ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ನಂತರ ಟಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರವೂ ಆಗಿದೆ. ಜೆಡಿಎಸ್ ನಿಂದ ಮಂಜುನಾಥ್ ಈಗ ದಾಸರಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.


karnataka vidhana sabha general election constituency profile dasarahalli bengaluru city
ಹಾಲಿ ಶಾಸಕ ಮಂಜುನಾಥ್


ಶಾಸಕ ಮಂಜುನಾಥ್ ಆಡಳಿತಕ್ಕೆ ಜನ ಏನಂತಾರೆ?


ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಗನ್‌ ಮ್ಯಾನ್‌ ಆಗಿದ್ದ ಮಂಜುನಾಥ್‌ 2018ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು, ಗೆದ್ದು ಬೀಗಿದ್ದರು. ಈ ಹಿಂದೆ 2 ಬಾರಿ ಬಿಜೆಪಿಯಿಂದ ಗೆದ್ದಿದ್ದ ಮುನಿರಾಜು ಅವರ ಹ್ಯಾಟ್ರಿಕ್ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದರು. ಸರಳ ವ್ಯಕ್ತಿತ್ವ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಅವರ ಹೆಚ್ಚುಗಾರಿಕೆ. ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಹೇಳಿಕೊಳ್ಳುತ್ತಾರೆ ಎನ್ನುವುದು ಅವರ ಪರವಾದ ಅಂಶಗಳು.


karnataka vidhana sabha general election constituency profile dasarahalli bengaluru city
ಮಾಜಿ ಶಾಸಕ ಮುನಿರಾಜು


ಮಾಜಿ ಶಾಸಕ ಮೇಲಿನ ಆರೋಪವೇನು?


ಮಾಜಿ ಶಾಸಕ ಮುನಿರಾಜು ಅವರು ಸೋತ ಮೇಲೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಸೋತ ಮೇಲೆ ಕ್ಷೇತ್ರವನ್ನೇ ಮರೆತಂತಿದ್ದಾರೆ ಅಂತ ವಿರೋಧಿಗಳ ಆರೋಪ.


karnataka vidhana sabha general election constituency profile dasarahalli bengaluru city
ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ


ಈ ಬಾರಿ ದಾಸರಹಳ್ಳಿಯಲ್ಲಿ ಯಾರಿಗೆ ಟಿಕೆಟ್?


ಈ ಬಾರಿ ಜೆಡಿಎಸ್‌ನಿಂದ ಹಾಲಿ ಶಾಸಕ ಮಂಜುನಾಥ್ ಅವರೇ ಟಿಕೆಟ್ ಬಯಸಿದ್ದಾರೆ. ಈಗಾಗಲೇ 2 ಬಾರಿ ಗೆದ್ದು, 1 ಬಾರಿ ಸೋತಿರುವ ಮುನಿರಾಜು ಮತ್ತೊಮ್ಮೆ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲಿ ಪೈಪೋಟಿ ಜೋರಾಗಿದೆ. ಈ ಹಿಂದೆ ಪರಾಭವಗೊಂಡಿದ್ದ ಕಾಂಗ್ರೆಸ್ ಮುಖಂಡ ಪಿಎನ್‌ ಕೃಷ್ಣಮೂರ್ತಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ. ಮತ್ತೊಂದೆಡೆ ಗೀತಾ ಶಿವರಾಮ್ ಎಂಬುವರು ಟಿಕೆಟ್ ಬಯಸಿದ್ದು, ಈಗಾಗಲೇ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.


karnataka vidhana sabha general election constituency profile dasarahalli bengaluru city
ಕೈ ಟಿಕೆಟ್ ಆಕಾಂಕ್ಷಿ ಗೀತಾ


ಕ್ಷೇತ್ರದ ಮತದಾರರ ವಿವರ


ದಾಸರಹಳ್ಳಿ ಕ್ಷೇತ್ರದಲ್ಲಿ ಒಟ್ಟು ಮತದಾರರು – 4,37,077 ಇದ್ದಾರೆ. ಈ ಪೈಕಿ ಒಕ್ಕಲಿಗರು – 1,70,000, ಲಿಂಗಾಯತ – 43,000, ಎಸ್‌ಸಿ-ಎಸ್‌ಟಿ – 90,000, ಬ್ರಾಹ್ಮಣ – 25,000, ಒಬಿಸಿ – 80,000, ಇತರೇ – 29,000 ಮತದಾರರಿದ್ದಾರೆ.


ಇದನ್ನೂ ಓದಿ: Karnataka Assembly Elections: ಸರ್ವಜನಾಂಗದ ತೋಟ ಸರ್ವಜ್ಞನಗರ! ಕಾಂಗ್ರೆಸ್ ಕೋಟೆಯಲ್ಲಿ ಈ ಬಾರಿ ಗೆಲ್ಲೋದ್ಯಾರು?


ಕೈಗಾರಿಕಾ ಪ್ರದೇಶದಲ್ಲಿ ಸಮಸ್ಯೆಗಳು ನೂರಾರು


ಉದ್ಯೋಗವನ್ನರಸಿ ಪರ ಊರುಗಳಿಂದ ಬಂದಂತಹ ಬಡ ಮತ್ತು ಮಧ್ಯಮ ವರ್ಗದ ವಲಸಿಗರಿಂದಲೇ ತುಂಬಿ ತುಳುಕುವ ಕ್ಷೇತ್ರವಿದು. ಬಿಬಿಎಂಪಿಗೆ ಸೇರ್ಪಡೆಗೊಂಡ ನಂತರ ಕ್ಷೇತ್ರದ ಚಿತ್ರಣ ಬದಲಾದರೂ ಜನರ ನಿರೀಕ್ಷೆಗಳು ಮಾತ್ರ ಇನ್ನೂ ಬೆಟ್ಟದಷ್ಟಿವೆ. ಹೆಚ್ಚಿನ ಜನರಿಗೆ ಉದ್ಯೋಗ ನೀಡಿ, ರಾಜಧಾನಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ದಾಸರಹಳ್ಳಿಯಲ್ಲಿ ಅನೇಕ ಸಮಸ್ಯೆಗಳು ಇವೆ.

Published by:Annappa Achari
First published: