• Home
  • »
  • News
  • »
  • state
  • »
  • Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?

Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ನಕಾಶೆ (ಕೃಪೆ: Internet)

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ನಕಾಶೆ (ಕೃಪೆ: Internet)

ರಾಜಧಾನಿ ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಅತ್ಯಂತ ಹೆಚ್ಚು ಜನನಬಿಡ ಪ್ರದೇಶ ಎಂಬ ಖ್ಯಾತಿ ಮತ್ತು ಅಪಖ್ಯಾತಿ ಚಿಕ್ಕಪೇಟೆಗಿದೆ. ಸದ್ಯ ಬಿಜೆಪಿಯ ಉದಯ್ ಗರುಡಾಚಾರ್ (Uday Garudachar) ಶಾಸಕರಾಗಿದ್ದು, ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕೋದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ.

ಮುಂದೆ ಓದಿ ...
  • Share this:

ಇದರ ಹೆಸರೇನೋ ಚಿಕ್ಕಪೇಟೆ (Chickpet, Chikkapete). ಆದರೆ ರಾಜಧಾನಿ ಬೆಂಗಳೂರಿನ (Bengaluru) ದೊಡ್ಡ ಪೇಟೆಯನ್ನು (Market) ಹೊಂದಿದ್ದು, ದೊಡ್ಡ ದೊಡ್ಡ ವ್ಯಾಪಾರ –ವ್ಯವಹಾರಗಳು ನಡೆಯುವುದು ಇಲ್ಲಿಯೇ. ‘ಚಿಕ್ ಪೇಟ್’ ಅಂದರೆ ಕನ್ನಡ ಭಾಷೆಯಲ್ಲಿ ‘ಚಿಕ್ಕ ವ್ಯಾಪಾರ ಸ್ಥಳ’ವೆಂಬ ಅರ್ಥದ, ಹಳೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಶಾಪಿಂಗ್ ವಲಯ (Shoping Area) ಇದಾಗಿದೆ. ಹೆಚ್ಚಾಗಿ ಮದುವೆಯ ಜವಳಿ ಹಾಗೂ ಮನೆಯಲ್ಲಿ ವರ್ಷವಿಡೀ ಬರುವ ಹಬ್ಬ-ಹರಿದಿನಗಳು, ಪಾರ್ಟಿಗಳಿಗೆ, ವಿಶೇಷ ಪೂಜೆಗಳಿಗೆ ಬೇಕಾದ ರೇಷ್ಮೆ ಸೀರೆಗಳ ಎಂಪೋರಿಯಮ್‌ಗಳು, ಪುಸ್ತಕದ ಅಂಗಡಿಗಳು, ದಿನ ಬಳಕೆಯ ಸಮಸ್ತ ವಸ್ತುಗಳೂ ಚಿಕ್ಕಪೇಟೆಯಲ್ಲಿ ದೊರೆಯುತ್ತವೆ. ನಗರದ ಅತ್ಯಂತ ಜನನಿಭಿಡ ಪ್ರದೇಶಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ಸಮಸ್ಯೆಗಳು ಸಾವಿರಾರಿವೆ. ಸದ್ಯ ಬಿಜೆಪಿಯ (BJP) ಉದಯ್ ಗರುಡಾಚಾರ್ (Uday Garudachar) ಶಾಸಕರಾಗಿದ್ದು, ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕೋದಕ್ಕೆ ಕಾಂಗ್ರೆಸ್ (Congress) ಪ್ಲಾನ್ ಮಾಡುತ್ತಿದೆ.


ಚಿಕ್ಕಪೇಟೆ ಕ್ಷೇತ್ರದ ವಿಶೇಷ


ಈಗಾಗಲೇ ಹೇಳಿದಂತೆ ರಾಜಧಾನಿ ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಅತ್ಯಂತ ಹೆಚ್ಚು ಜನನಬಿಡ ಪ್ರದೇಶ ಎಂಬ ಖ್ಯಾತಿ ಮತ್ತು ಅಪಖ್ಯಾತಿ ಚಿಕ್ಕಪೇಟೆಗಿದೆ. ಇಲ್ಲಿನ ಎಲ್ಲಾ ಜವಳಿ ಅಂಗಡಿಗಳೂ, ಅಪ್ಪಟ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿವೆ. ಚಿಕ್ಕ ಬಳಕೆದಾರರಿಗೆ ಮತ್ತು ಅತಿ ಶ್ರೀಮಂತರಿಗೆ ಬೇಕಾದಂತಹ ವಸ್ತ್ರಗಳನ್ನು ಮಾರುವ ಸೀರೆ ಮಳಿಗೆಗಳಿವೆ.


ಚಿಕ್ಕಪೇಟೆಯ ಮಾರುಕಟ್ಟೆ ನೋಟ


ಅತ್ಯಂತ ಜನದಟ್ಟಣೆಯ ಪ್ರದೇಶ


ಓಲ್ಡ್ ಸಿಟಿ ಮಾರ್ಕೆಟ್‌ ಹತ್ತಿರವಿರುವ ಚಿಕ್ಕಪೇಟೆ ಒಂದು ಅಂಕು-ಡೊಂಕಾಗಿ, ಸಾಗುವ ಗಲ್ಲಿಯೆನ್ನಬಹುದು. ಅದು ಸಿಟಿ ಮಾರ್ಕೆಟ್‌ನಿಂದ ಆರಂಭವಾಗಿ ಪಕ್ಕದ ಅವೆನ್ಯೂ ರಸ್ತೆಗೆ ಸೇರಿಕೊಳ್ಳುತ್ತದೆ. ಇಲ್ಲಿ ಉದ್ದಕ್ಕೂ ನಡೆದೇ ಹೋಗಬೇಕು, ವಾಹನಗಳ ಪಾರ್ಕಿಂಗ್ ಸಾಧ್ಯವಿಲ್ಲ. ಮುಂದೆ ಸಾಗಿದಂತೆ, ರಸ್ತೆಯ ಎರಡೂ ಬದಿಯಲ್ಲಿ ಒಂದು ದೊಡ್ಡ ಅಂಗಡಿಗಳ ಸಾಲೇ ಇದೆ. ಇಲ್ಲಿ ಕಣ್ಣಿಗೆ ಬೇಕಾದ ಎಲ್ಲ ವೈವಿದ್ಯಮಯ ರೇಷ್ಮೆ ಸೀರೆಗಳು, ಅಂಗವಸ್ತ್ರಗಳು ಮಕ್ಕಳ ಉಡುಪುಗಳು ಸಿಕ್ಕುತ್ತವೆ.


ಶಾಸಕ ಉದಯ್ ಗರುಡಾಚಾರ್


ಇದನ್ನೂ ಓದಿ: Karnataka Assembly Elections: ಬಸವನಗುಡಿಯಲ್ಲಿ ಈ ಬಾರಿ ಗೆಲುವಿನ ಪರಿಷೆ ಯಾರದ್ದು? ರವಿಸುಬ್ರಹ್ಮಣ್ಯಗೆ ಸಿಗುತ್ತಾ ದೊಡ್ಡಗಣಪತಿ ಆಶೀರ್ವಾದ?


ವೈವಿಧ್ಯಮಯ ಪ್ರದೇಶಗಳ ತಾಣ


ಚಿಕ್ಕಪೇಟೆ ಹಲವು ವೈವಿಧ್ಯತೆಯ ತಾಣವಾಗಿದೆ. ಸಸ್ಯಕಾಶಿ ಲಾಲ್‌ಬಾಗ್ ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಣ್ಣು, ತರಕಾರಿಗೆ ಪ್ರಸಿದ್ಧಿ ಪಡೆದಿರುವ ಕೆ.ಆರ್. ಮಾರುಕಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸಿಗುವ ಎಸ್‌.ಪಿ.ರಸ್ತೆ, ಕರಗಕ್ಕೆ ಪ್ರಸಿದ್ಧಿ ಪಡೆದಿರುವ ಧರ್ಮರಾಯಸ್ವಾಮಿ ದೇವಾಲಯ ಹೀಗೆ ವೈವಿದ್ಯಮಯ ಪ್ರದೇಶಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಗಾಂಧಿ ಬಜಾರ್ ವೃತ್ತ, ಡಿವಿಜಿ ರಸ್ತೆ, ಲಾಲ್‌ಬಾಗ್ ರಸ್ತೆ  ಜೆ.ಸಿ. ರಸ್ತೆ ಹೀಗೆ ಬೆಂಗಳೂರಿನ ಪ್ರಮುಖ ರಸ್ತೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.


ಮಾಜಿ ಶಾಸಕ ಆರ್‌.ವಿ.ದೇವರಾಜ್


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಲ್ಲಿನ ಮಾರುಕಟ್ಟೆಯಂತೆ ರಾಜಕೀಯವಾಗಿಯೂ ವೈವಿಧ್ಯತೆಯ ತಾಣ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಪಕ್ಷೇತರ, ಎನ್‌ಸಿಓ, ಜೆಎನ್‌ಪಿ, ಐಎನ್‌ಸಿ(ಐ) ಸೇರಿದಂತೆ ಹಲವು ಪಕ್ಷದವರು ಗೆದ್ದಿದ್ದಾರೆ, ಸೋತಿದ್ದಾರೆ ಕೂಡ. ಕಳೆದ 3 ಚುನಾವಣೆಗಳಲ್ಲಿ 2 ಬಾರಿ ಬಿಜೆಪಿ ಗೆದ್ದಿದ್ದರೆ, 1 ಬಾರಿ ಕಾಂಗ್ರೆಸ್ ಗೆದ್ದಿದೆ. ಸದ್ಯ ಬಿಜೆಪಿಯ ಉದಯ್ ಗರುಡಾಚಾರ್ ಶಾಸಕರಾಗಿದ್ದು, ಆರ್‌ವಿ ದೇವರಾಜ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಬಿಜೆಪಿಕಾಂಗ್ರೆಸ್ಜೆಡಿಎಸ್
ಉದಯ್ ಗರುಡಾಚಾರ್ಆರ್‌.ವಿ. ದೇವರಾಜ್
ಎನ್.ಆರ್. ರಮೇಶ್ಕೆಜಿಎಫ್‌ ಬಾಬು
ಗಂಗಾಂಬಿಕೆ ಮಲ್ಲಿಕಾರ್ಜುನ್

ಈ ಬಾರಿ ಚಿಕ್ಕಪೇಟೆಯಲ್ಲಿ ಟಿಕೆಟ್‌ಗೆ ಪೈಪೋಟಿ


ಈ ಬಾರಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಎಲ್ಲಾ ಪಕ್ಷಗಳಲ್ಲೂ ಭಾರೀ ಪೈಪೋಟಿ ಎದುರಾಗಿದೆ. ಎಂದಿನಂತೆ ಹಾಲಿ ಶಾಸಕ ಉದಯ್ ಗರುಡಾಚಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಬಿಜೆಪಿ ಮುಖಂಡ, ಬಿಬಿಎಂಪಿ ಮಾಜಿ ಸದಸ್ಯ ಎನ್‌ಆರ್‌ ರಮೇಶ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಆರ್‌ವಿ ದೇವರಾಜ್ ಆಕಾಂಕ್ಷಿಯಾಗಿದ್ದರೆ, ಶತಕೋಟಿ ಉದ್ಯಮಿ ಕೆಜಿಎಫ್‌ ಬಾಬು ಕೂಡ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕೂಡ ಟಿಕೆಟ್ ಬಯಸಿದ್ದಾರೆ ಎನ್ನಲಾಗುತ್ತಿದೆ.


ಉದ್ಯಮಿ ಕೆಜಿಎಫ್‌ ಬಾಬು


ಚಿಕ್ಕಪೇಟೆ ಕ್ಷೇತ್ರದ ಜಾತಿ ಲೆಕ್ಕಾಚಾರ


ಚಿಕ್ಕಪೇಟೆಯಲ್ಲಿ ಒಟ್ಟು 2,28,200 ಮತದಾರರಿದ್ದಾರೆ. ಈ ಪೈಕಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಿದೆ. ಇನ್ನು ಒಕ್ಕಲಿಗ- 25,000, ಬ್ರಾಹ್ಮಣ- 32,000, ಲಿಂಗಾಯತ- 2,000, ಎಸ್ಸಿ-ಎಸ್​​ಟಿ- 35,000, ಮುಸ್ಲಿಂ- 59,700, ದೇವಾಂಗ- 25,000, ತಿಗಳ- 15,000, ಕುರುಬ-2,000 ಹಾಗೂ ತಮಿಳು ಮೂಲದವರು 12,000 ಮಂದಿಯಿದ್ದಾರೆ.

ಒಟ್ಟು ಮತದಾರರು2,28,200
ಒಕ್ಕಲಿಗ25,000
ಬ್ರಾಹ್ಮಣ32,000
ಲಿಂಗಾಯತ2,000
ಎಸ್‌ಸಿ-ಎಸ್‌ಟಿ35,000
ಮುಸ್ಲಿಂ59,700
ದೇವಾಂಗ25,000
ತಿಗಳ15,000
ಕುರುಬ2,000
ತಮಿಳು12,000


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಚಿಕ್ಕಪೇಟೆಯಲ್ಲಿ 7 ವಾರ್ಡ್‌ಗಳಿಗೆ. ಸುಧಾಮ ನಗರ, ಧರ್ಮರಾಯ ಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೋಂಬೇಗೌಡನಗರ ಹಾಗೂ ಜಯನಗರ ವಾರ್ಡ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ.


ಮಾಜಿ ಮೇಯರ್ ಗಂಗಾಂಬಿಕೆ


ಇದನ್ನೂ ಓದಿ: Karnataka Assembly Elections: ಜಯನಗರದಲ್ಲಿ ಈ ಬಾರಿ ಯಾರಿಗೆ ಜಯ? ಮತ್ತೆ 'ಕೈ'ಗೆ ಸಿಗುತ್ತಾ ಅಧಿಕಾರ?


ಸಮಸ್ಯೆಗಳು ನೂರಾರು


ಅತೀ ದೊಡ್ಡ ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಹೆಚ್ಚು ಜನದಟ್ಟಣೆ ಇರುತ್ತದೆ. ಹೀಗಾಗಿ ಈ ಪ್ರದೇಶದ ಸುತ್ತಮುತ್ತ ಟ್ರಾಫಿಕ್ ಜಾಮ್ ಕಾಮನ್ ಎನ್ನುವಂತಾಗಿದೆ. ಮಾರುಕಟ್ಟೆ ಜೊತೆಗೆ ಹಲವು ಕೋಮು ಸೂಕ್ಷ್ಮ ಪ್ರದೇಶಗಳಿದ್ದು ಕ್ರೈಮ್ ಎಗ್ಗಿಲ್ಲದೇ ನಡೆಯುತ್ತಿರುತ್ತದೆ. ಇದರೊಂದಿಗೆ ಅತ್ಯಂತ ಹಳೆಯ ಕಟ್ಟಡಗಳು, ಹಳೆ ರಸ್ತೆಗಳಿದ್ದು, ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದೆ. ಇದರ ಜೊತೆಗೆ ಕುಡಿಯುವ ನೀರು, ಮೂಲಭೂತ ಸೌಕರ್ಯ, ಮಳೆ ನೀರಿನ ಸಮಸ್ಯೆ ಇದ್ದೇ ಇದೆ.

Published by:Annappa Achari
First published: