• Home
  • »
  • News
  • »
  • state
  • »
  • Karnataka Assembly Elections: ಗಣೇಶನ ಗದ್ದಲ, ಈದ್ಗಾ ಕೋಲಾಹಲ! ಹೇಗಿದೆ ಚಾಮರಾಜಪೇಟೆಯಲ್ಲಿ ಚುನಾವಣಾ ಕಾವು?

Karnataka Assembly Elections: ಗಣೇಶನ ಗದ್ದಲ, ಈದ್ಗಾ ಕೋಲಾಹಲ! ಹೇಗಿದೆ ಚಾಮರಾಜಪೇಟೆಯಲ್ಲಿ ಚುನಾವಣಾ ಕಾವು?

ಶಾಸಕ ಜಮೀರ್ ಅಹ್ಮದ್ ಖಾನ್

ಶಾಸಕ ಜಮೀರ್ ಅಹ್ಮದ್ ಖಾನ್

ಬೆಂಗಳೂರಿನ ಪ್ರತಿಷ್ಠಿತ ಹಾಗೂ ಹಳೆಯ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಜಮೀರ್ ಅಹ್ಮದ್ ಖಾನ್. ವಿವಾದವೋ, ಹಾಸ್ಯವೋ, ಜನಸೇವೆಯೋ, ಉದ್ಘಾಟನೆಯೋ, ರ್ಯಾಲಿಯೋ, ಪ್ರತಿಭಟನೆಯೋ, ಎಸಿಬಿ ರೇಡೋ, ಇಡಿ ಪರಿಶೀಲನೆಯೋ.. ಒಟ್ಟಿನಲ್ಲಿ ಯಾವುದೋ ಒಂದರಲ್ಲಾದರೂ ನಿತ್ಯ ಸದ್ದು ಮತ್ತು ಸುದ್ದಿ ಮಾಡುವವರು ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್!

ಮುಂದೆ ಓದಿ ...
  • Share this:

ವಿವಾದವೋ (Controversy), ಹಾಸ್ಯವೋ (Comedy), ಜನಸೇವೆಯೋ (Public Service), ಉದ್ಘಾಟನೆಯೋ, ರ್ಯಾಲಿಯೋ, ಪ್ರತಿಭಟನೆಯೋ, ಎಸಿಬಿ ರೇಡೋ (ACB Raid), ಇಡಿ ಪರಿಶೀಲನೆಯೋ.. ಒಟ್ಟಿನಲ್ಲಿ ಯಾವುದೋ ಒಂದರಲ್ಲಾದರೂ ನಿತ್ಯ ಸದ್ದು ಮತ್ತು ಸುದ್ದಿ ಮಾಡುವವರು ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್! ಬೆಂಗಳೂರಿನ (Bengaluru) ಪ್ರತಿಷ್ಠಿತ ಹಾಗೂ ಹಳೆಯ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜಪೇಟೆ (Chamarajapet) ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಜಮೀರ್ ಅಹ್ಮದ್ ಖಾನ್ (Zameer Ahmed Khan). ಪಕ್ಷದ ಅಧ್ಯಕ್ಷರೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಜಮೀರ್ ಅಹ್ಮದ್, ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನೇ ಬಿಟ್ಟು ಕೊಡುತ್ತೇನೆ ಎನ್ನುವಷ್ಟು ಸಿದ್ದರಾಮಯ್ಯ (Siddaramaiah) ಅವರ ಅನುಯಾಯಿ! ಸದ್ಯ  ಈದ್ಗಾ ಮೈದಾನ (Idga Maidan controversy) ವಿವಾದ, ಗಣೇಶೋತ್ಸವ, ಎಸಿಬಿ ರೇಡ್‌ ಇತ್ಯಾದಿಗಳಿಂದ ಶಾಸಕ ಜಮೀರ್ ಅಹ್ಮದ್ ಜೊತೆಗೆ ಅವರ ಚಾಮರಾಜಪೇಟೆ ಕ್ಷೇತ್ರ ಕೂಡ ಸುದ್ದಿಯಲ್ಲಿದೆ. ಸದ್ಯ ಅಲ್ಲೂ ಕೂಡ ಚುನಾವಣಾ (Election) ಕಾವು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ.


ಚಾಮರಾಜಪೇಟೆ ಕ್ಷೇತ್ರ ಪರಿಚಯ


ಚಾಮರಾಜಪೇಟೆ, ಬೆಂಗಳೂರಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ವಿಧಾನಸಭಾ ಕ್ಷೇತ್ರ. 2.16 ಲಕ್ಷ ಮತದಾರರನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬಡವರು, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿದ್ದಾರೆ.


ಶಾಸಕ ಜಮೀರ್ ನಿವಾಸ


7 ವಾರ್ಡ್‌ಗಳಿರುವ ವಿಧಾನಸಭಾ ಕ್ಷೇತ್ರ


ಕ್ಷೇತ್ರದಲ್ಲಿ ಬಿಬಿಎಂಪಿಯ 7 ವಾರ್ಡ್‌ಗಳಿವೆ. ಪಾದರಾಯನಪುರ, ಕೆ.ಆರ್. ಮಾರುಕಟ್ಟೆ, ಜಗಜೀವನ್ ರಾಮನಗರ, ಚಾಮರಾಜಪೇಟೆ, ಆಜಾದ್ ನಗರ, ರಾಯಪುರ ವಾರ್ಡ್ ಹಾಗೂ ಛಲವಾದಿಪಾಳ್ಯ ವಾರ್ಡ್‌ಗಳಿವೆ.


ಜಮೀರ್ ನಿವಾಸದ ಮೇಲೆ ನಡೆದಿದ್ದ ರೇಡ್


ಇದನ್ನೂ ಓದಿ:  Karnataka Assembly Elections: ಬೊಮ್ಮನಹಳ್ಳಿಯಲ್ಲಿ ಗೆಲುವಿನ ಕಿಂದರಿ ಬಾರಿಸುವ ಜೋಗಿ ಯಾರು? ಹಾಲಿ ಶಾಸಕರಿಗೆ ಹೇಗಿದೆ ಜನಬೆಂಬಲ?


ದೇವೇಗೌಡರ ಗರಡಿಯಲ್ಲಿ ಪಳಗಿ ಬಂದ ಜಮೀರ್


ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಳಗಿ ಬಂದವರು. 2005ರಲ್ಲಿ ಎದುರಾದ ಉಪಚುನಾವಣೆ ವೇಳೆ ದೇವೇಗೌಡರು ಎಬ್ಬಿಸಿದ ಹವಾ ಹಾಗೂ ಹೊಸ ಮುಖ ಬಿ.ಝಡ್. ಜಮೀರ್ ಖಾನ್ ಅವರ ಉತ್ಸಾಹದ ಫಲವಾಗಿ ಚಾಮರಾಜ ಪೇಟೆ ಎಂಬ ಕಾಂಗ್ರೆಸ್ ಭದ್ರಕೋಟೆ ಕ್ರಮೇಣ ಜೆಡಿಎಸ್‌’ನ ಭದ್ರಕೋಟೆಯಾಗಿತ್ತು. ಇದರ ಲಾಭ ಪಡೆದ ಜಮೀರ್ ಒಂದು ಉಪ ಚುನಾವಣೆ ಹಾಗೂ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿ, ಒಂದು ಬಾರಿ ಸಚಿವರೂ ಆಗಿ ಮೆರೆದರು.


ಉದ್ಯಮಿ ಲಹರಿ ವೇಲು


5ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಜಮೀರ್


ಸತತ 3 ಬಾರಿ ಶಾಸಕರಾಗಿದ್ದ ಜಮೀರ್ ಖಾನ್, ಜೆಡಿಎಸ್‌ನಿಂದ ಬಂಡಾಯವೆದ್ದು, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಇನ್ನು ಕಾಂಗ್ರೆಸ್​ನಲ್ಲಿದ್ದ ಸ್ಥಳೀಯ ನಾಯಕ ಜಮೀರ್ ವಿರೋಧಿ ಎಂದೇ ಬಿಂಬಿತನಾಗಿರೋ ಅಲ್ತಾಫ್ ಖಾನ್ ಜೆಡಿಎಸ್​ಗೆ ಬಂದ ಬಳಿಕ ಇಲ್ಲಿನ ಚುನಾವಣಾ ಸಮೀಕರಣವೇ ಬದಲಾಗತೊಡಗಿತ್ತು. 2018ರಲ್ಲಿ ಜಮೀರ್ ಖಾನ್‌ಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಗೆಲವು ಸುಲಭದ ಹಾದಿಯಲ್ಲ ಎನ್ನಲಾಗಿತ್ತು. ಆದರೆ ಮತ್ತೊಮ್ಮೆ ಬಾರಿ ಗೆದ್ದು, ಇದೀಗ 5ನೇ ಬಾರಿ ಜಮೀರ್ ಸ್ಪರ್ಧೆಗೆ ಸಜ್ಜಾಗಿದ್ದಾರೆ.


ಬಿಜೆಪಿ ಟಿಕೆಟ್ ಆಕಾಂಕ್ಷಿ ಲಕ್ಷ್ಮೀ ನಾರಾಯಣ


ಜಮೀರ್‌ ಅಹ್ಮದ್ ಖಾನ್ ಪ್ಲಸ್ ಪಾಯಿಂಟ್ಸ್


ಹಿಂದೂ, ಮುಸ್ಲಿಂ ಎನ್ನುವ ಬೇಧಭಾವ ಮಾಡುವುದಿಲ್ಲ ಎನ್ನುವುದು ಶಾಸಕ ಜಮೀರ್ ಅಹ್ಮದ್ ಹೆಚ್ಚುಗಾರಿಕೆ. ಕೊರೋನಾ ಸಂದರ್ಭದಲ್ಲಿ ಎಲ್ಲಾ ಜಾತಿ, ಧರ್ಮದವರಿಗೂ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಿದ್ದರು, ಲಾಕ್‌ ಡೌನ್‌ ವೇಳೆಯಲ್ಲಿ ತಮ್ಮ ಕ್ಷೇತ್ರದ ಜನತೆಗೆ ಅಗತ್ಯ ಸಾಮಗ್ರಿ ಪೂರೈಸಿದ್ದರು ಎನ್ನುವುದರಿಂದ ಮತದಾರರಿಗೆ ಅವರ ಮೇಲಿನ ಅಭಿಮಾನ ಹೆಚ್ಚಾಗಿದೆ.


ಜೆಡಿಎಸ್‌ ನಾಯಕ ಇಮ್ರಾನ್ ಪಾಷಾ


ಶಾಸಕರ ಮೇಲಿನ ಆರೋಪಗಳೇನು?


ಕ್ಷೇತ್ರದ ಅಭಿವೃದ್ಧಿಗಿಂತ ವೈಯುಕ್ತಿಕವಾಗಿ ಸಹಾಯ ಮಾಡುತ್ತ ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸುವುದೇ ಜಮೀರ್‌ ಸ್ಟೈಲ್‌ ಎನ್ನುವ ಆರೋಪ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. 42 ಕೊಳಗೇರಿಗಳನ್ನು ಹೊಂದಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಎಲ್ಲಾ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸೂಕ್ತ ರೀತಿ ಸ್ಲಂ ಅಭಿವೃದ್ಧಿಪಡಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿದೆ. ಕ್ಷೇತ್ರದಲ್ಲಿ ಶಾಸಕ ಜಮೀರ್ ಅಹ್ಮದ್ ಕೈಗೆ ಸಿಗಲ್ಲ ಅಂತಾರೆ ಮತದಾರರು. ಮತ್ತೊಂದೆಡೆ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಎಸಿಬಿ ದಾಳಿ ಎದುರಿಸಿರುವುದು ಅವರಿಗೆ ಅತಿದೊಡ್ಡ ಹಿನ್ನೆಡೆಯಾಗಿದೆ.


ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು


ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಅಂತ ಜಮೀರ್ ಅಹ್ಮದ್ ಘೋಷಿಸಿದ್ದಾರೆ. ಅದು ಬಿಟ್ಟರೆ ಅಲ್ಲಿ ಅವರಿಗೆ ಕಾಂಗ್ರೆಸ್‌ನಿಂದ ಪೈಪೋಟಿ ಕೊಡೋಕೆ ಯಾರೂ ಇಲ್ಲ. ಅತ್ತ ಬಿಜೆಪಿಯಿಂದ ಉದ್ಯಮಿ ಲಹರಿ ವೇಲು, ಕಳೆದ ಬಾರಿ ಸೋತಿದ್ದ ಎಂ. ಲಕ್ಷ್ಮೀ ನಾರಾಯಣ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷಾ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಕಾಂಗ್ರೆಸ್ಬಿಜೆಪಿಜೆಡಿಎಸ್
ಜಮೀರ್ ಅಹ್ಮದ್ ಖಾನ್ಲಹರಿ ವೇಲುಇಮ್ರಾನ್ ಪಾಷಾ
ಎಂ. ಲಕ್ಷ್ಮೀನಾರಾಯಣ

ಚಾಮರಾಜಪೇಟೆ ಜಾತಿ ಲೆಕ್ಕಾಚಾರ


ಮುಸ್ಲಿಂ ಸಮುದಾಯ ಹಾಗೂ ಪರಿಶಿಷ್ಠರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ. ಇವರ ವೋಟ್‌ ನಿರ್ಣಾಯಕ. ಇನ್ನು ಕಾಂಗ್ರೆಸ್- ಜೆಡಿಎಸ್ ಎರಡಲ್ಲೂ ಮುಸ್ತಿಂ ಅಭ್ಯರ್ಥಿಗಳು ಇರುವುದರಿಂದ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರೋ ಮುಸ್ಲಿಂ ಸಮುದಾಯ ಹಾಗೂ ಪರಿಶಿಷ್ಟರ ಮತಗಳು ವಿಭಜನೆಯ ಸುಳಿವನ್ನು ನೀಡುತ್ತಿವೆ.

ಒಟ್ಟು ಮತದಾರರು2,17,499
ಮುಸ್ಲಿಂ62,000
ಎಸ್‌ಸಿ-ಎಸ್‌ಟಿ42,000
ಲಿಂಗಾಯತ26,000
ಒಕ್ಕಲಿಗ25,000
ಇತರೇ4,000

ಕ್ಷೇತ್ರದಲ್ಲಿ ಒಟ್ಟು 2,17,499 ಮತದಾರರು  ಇದ್ದಾರೆ. ಈ ಪೈಕಿ ಮುಸ್ಲಿಂ 62,000, ಎಸ್‌ಸಿ ಎಸ್‌ಟಿ – 42,000, ಲಿಂಗಾಯತ 26,000, ಒಕ್ಕಲಿಗ 25,000, ಕುರುಬ 2000 ಹಾಗೂ ಯಾದವ 2000 ಮತದಾರರಿದ್ದಾರೆ.


ಇದನ್ನೂ ಓದಿ:  Karnataka Assembly Elections: ಬಿಟಿಎಂ ಲೇಔಟ್‌ನಲ್ಲಿ ಹೇಗಿದೆ ಚುನಾವಣಾ ರಣಕಣ? ಕಾಂಗ್ರೆಸ್‌ಗೆ ಏಟು ಕೊಡುತ್ತಾ ಬಿಜೆಪಿ?


ಚಾಮರಾಜಪೇಟೆಯಲ್ಲಿ ಸಮಸ್ಯೆಗಳು ನೂರಾರು


ಮಧ್ಯಮವರ್ಗ, ಮೇಲ್‌ಮಧ್ಯಮ ವರ್ಗ ಮತ್ತು ಬಡವರು, ಅತಿ ಬಡವರು ಹೆಚ್ಚಾಗಿರುವ ಕ್ಷೇತ್ರಇದಾಗಿದೆ. ಎಂಟು ಸ್ಲಂಗಳಿವೆ. ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ಪ್ರದೇಶವಾದ್ದರಿಂದ ಕಿಷ್ಕಿಂದೆಯಂತಹ ಪ್ರದೇಶಗಳೂ ಇವೆ. ಮುಖ್ಯ ರಸ್ತೆಗಳಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ಕಾಣುವುದು ಬಿಟ್ಟರೆ, ಒಳಗೆ ಹೋದರೆ ಅದೇ ಹಳೆಯ ಪೇಟೆ. ಇನ್ನೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ.

Published by:Annappa Achari
First published: