• Home
  • »
  • News
  • »
  • state
  • »
  • Karnataka Assembly Elections: ಬೈಂದೂರು ಕ್ಷೇತ್ರದಲ್ಲಿ ಪೂಜಾರಿ VS ಶೆಟ್ಟಿ, ಮತ್ತೆ ಕಾಂಗ್ರೆಸ್​ ಹಿಮ್ಮೆಟ್ಟಿಸುತ್ತಾ ಬಿಜೆಪಿ?

Karnataka Assembly Elections: ಬೈಂದೂರು ಕ್ಷೇತ್ರದಲ್ಲಿ ಪೂಜಾರಿ VS ಶೆಟ್ಟಿ, ಮತ್ತೆ ಕಾಂಗ್ರೆಸ್​ ಹಿಮ್ಮೆಟ್ಟಿಸುತ್ತಾ ಬಿಜೆಪಿ?

ಬೈಂದೂರು ಕ್ಷೇತ್ರದಲ್ಲಿ ಪೂಜಾರಿ VS ಶೆಟ್ಟಿ

ಬೈಂದೂರು ಕ್ಷೇತ್ರದಲ್ಲಿ ಪೂಜಾರಿ VS ಶೆಟ್ಟಿ

Karnataka Assembly Elections 2023: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರತಿಯೊಬ್ಬ ನಾಯಕರೂ ತಮ್ಮದೇ ಶೈಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಇನ್ನು ಕೆಲ ನಾಯಕರು ಮೌನವಾಗಿ ಮುನ್ನಡೆಯುತ್ತಿದ್ದಾರೆ. ಹೀಗಿರುವಾಗ ಉಡುಪಿಯ ಐದು ವಿಧಾನಸಭಾ ಸ್ಥಾನಗಳಲ್ಲೊಂದಾದ, ಪ್ರಕೃತಿ ಮಾತೆಯ ಮಡಿಲಲ್ಲಿ ನಳ ನಳಿಸುವ ಬೈಂದೂರು ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಈ ಹಿಂದಿನ ಚುನಾವಣಾ ಫಲಿತಾಂಶ ಹೇಗಿದೆ? ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುವ ಸಾಧ್ಯತೆ ಹೆಚ್ಚಿದೆ? ಆಕಾಂಕ್ಷಿಗಳು ಯಾರು? ಎಂಬಿತ್ಯಾದಿ ವಿವರ ಇಲ್ಲಿದೆ ನೋಡಿ.

ಮುಂದೆ ಓದಿ ...
  • Share this:

ಬೈಂದೂರು ವಿಧಾನಸಭಾ ಕ್ಷೇತ್ರ: 2013 ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023)ಣೆ ಸಮೀಪಿಸುತ್ತಿದ್ದು, ರಾಜಕೀಯ ನಾಯಕರೆಲ್ಲಾ ಎಚ್ಚೆತ್ತುಕೊಂಡಿದ್ದಾರೆ. ಜನರ ಮತಗಳನ್ನು ತಮ್ಮತ್ತ ಸೆಳೆಯುವ ಕಸರತ್ತೂ ಆರಂಭವಾಗಿದ್ದು, ಅಧಿಕಾರ ಹಿಡಿಯುವ ಮಹದಾಸೆಯಿಂದ ಪ್ರಚಾರ ಕಾರ್ಯವೂ ಆರಂಭವಾಗಿದೆ. ಪ್ರತಿಯೊಬ್ಬ ನಾಯಕರೂ ತಮ್ಮದೇ ಶೈಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಇನ್ನು ಕೆಲ ನಾಯಕರು ಮೌನವಾಗಿ ಮುನ್ನಡೆಯುತ್ತಿದ್ದಾರೆ. ಹೀಗಿರುವಾಗ ಉಡುಪಿಯ ಐದು ವಿಧಾನಸಭಾ ಸ್ಥಾನಗಳಲ್ಲೊಂದಾದ, ಪ್ರಕೃತಿ ಮಾತೆಯ ಮಡಿಲಲ್ಲಿ ನಳ ನಳಿಸುವ ಬೈಂದೂರು ಕ್ಷೇತ್ರದ (Byndoor Assembly Constituency) ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿನ ಈ ಹಿಂದಿನ ಚುನಾವಣಾ ಫಲಿತಾಂಶ ಹೇಗಿದೆ? ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುವ ಸಾಧ್ಯತೆ ಹೆಚ್ಚಿದೆ? ಆಕಾಂಕ್ಷಿಗಳು ಯಾರು? ಎಂಬಿತ್ಯಾದಿ ವಿವರ ಇಲ್ಲಿದೆ ನೋಡಿ.


ಕಡಲ ತಡಿ ಮತ್ತು ಸಹ್ಯಾದ್ರಿ ಶಿಖರಶ್ರೇಣಿಯ ನಡುವೆ ಹಬ್ಬಿರುವ ಹಚ್ಚ ಹಸುರನ್ನು ಹೊದ್ದು ಮಲಗಿರುವ ಬೈಂದೂರು ಕರಾವಳಿಯಲ್ಲಿ ತೀರಾ ಹಿಂದುಳಿದಿರುವ ಗುಡ್ಡಗಾಡು ವಿಧಾನಸಭಾ ಕ್ಷೇತ್ರ. ಉಡುಪಿ ಜಿಲ್ಲೆಯ ಬೈಂದೂರು ಐತಿಹಾಸಿಕ ಬಂದರು ನಗರವೂ ಹೌದು. ಬೈಂದೂರು ಕುಂದಾಪುರದಿಂದ 30 ಕಿಲೋಮೀಟರ್ ದೂರದಲ್ಲಿದೆ. ಮತ್ತು ಉಡುಪಿಯಿಂದ 70 ಕಿಲೋಮೀಟರ್ ಅಂತರ ಕಾಯ್ದುಕೊಂಡಿದೆ. ಬೈಂದೂರು 2018ರ ತನಕ ಕುಂದಾಪುರ ತಾಲೂಕಲ್ಲಿತ್ತು. ಸ್ವತಂತ್ರ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷ ಕಳೆದಿದೆ. ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಡುಪಿಯ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ.ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಮೀನುಗಾರಿಕೆ ಮತ್ತು ಕೃಷಿಯೇ ಜನರ ಜೀವನ


ಬೈಂದೂರಿನದು ಅಪ್ಪಟ ಕುಂದ ಕನ್ನಡ ಸಂಸ್ಕೃತಿ. ದೈನಂದಿನ ಮಾತು-ಕತೆ, ವ್ಯಾಪಾರ-ವಹಿವಾಟು ಕುಂದಪ್ರ ಕನ್ನಡದಲ್ಲಿ ನಡೆಯುವ ಇಲ್ಲಿ ದೈವಾರಾಧನೆ, ಯಕ್ಷಗಾನ, ನಾಗಾರಾಧನೆಯಂತಹ ಸಂಪ್ರದಾಯಗಳು ಅಚ್ಚುಕಟ್ಟಾಗಿ ಮುಂದುವರೆದುಕೊಂಡು ಬಂದಿವೆ. ಇಲ್ಲಿನ ಜನರ ಬದುಕು ಮೀನುಗಾರಿಕೆ ಮತ್ತು ಕೃಷಿಯನ್ನು ಅವಲಂಭಿಸಿದೆ. ಇದರೊಂದಿಗೆ ಗೋಡಂಬಿ ಹಾಗೂ ಹೊಟೇಲ್ ಉದ್ಯಮ ಇಲ್ಲಿನ ಆರ್ಥಿಕತೆಗೆ ಬಲ ತುಂಬಿದೆ.


ಇಲ್ಲಿನ ರಾಜಕೀಯ ಇತಿಹಾಸ ಹೇಗಿದೆ?


ಬೈಂದೂರಿನಲ್ಲಿ 1985 ಮತ್ತು 1989ರಲ್ಲಿ ಕಾಂಗ್ರೆಸಿನ ಜಿಎಸ್ ಆಚಾರ್ ಗೆಲುವು ಸಾಧಿಸಿದ್ದರು. 1994ರಲ್ಲಿ ಇಲ್ಲಿ ಬಿಜೆಪಿಯ ಐಎಂ ಜಯರಾಮ್ ಶೆಟ್ಟಿ ಗೆಲುವು ಸಾಧಿಸಿದ್ದರು. ಆದರೆ 1998ರಲ್ಲಿ ಅವರು ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರಿಂದ ಅದೇ ವರ್ಷ ನಡೆದ ಚುನಾವಣೆಯಲ್ಲಿ 'ಎಜಿಪಿ'ಯಿಂದ ಕಣಕ್ಕಿಳಿದಿದ್ದ ಕೆ. ಗೋಪಾಲ ಪೂಜಾರಿ ಇಲ್ಲಿ ಜಯಗಳಿಸಿದರು. 1999 ಮತ್ತು 2004ರಲ್ಲಿಯೂ ಇಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದು ಗೋಪಾಲ ಪೂಜಾರಿ ಗೆಲುವು ಸಾಧಿಸಿದ್ದರು. 2008 ರಲ್ಲಿ ಮಾತ್ರ ಇಲ್ಲಿ ಗೋಪಾಲ ಪೂಜಾರಿ ಸೋಲನುಭವಿಸಿದ್ದಾರೆ. ಆ ಚುನಾವಣೆಯಲ್ಲಿ ಬಿಜೆಪಿಯ ಕೆ. ಲಕ್ಷ್ಮೀನಾರಾಯಣ ವಿರುದ್ಧ ಅವರು ಸೋಲು ಕಂಡಿದ್ದರು.


ಆದರೆ, 2013ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಂತು. ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು 51,128 ಮತಗಳನ್ನು ಪಡೆದ ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ 30ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಹಿಂದಿನ ಚುನಾವಣೆಯ ಅಂತರವವನ್ನು ಮೆಟ್ಟಿ ನಿಲ್ಲಲು ಯಶಸ್ವಿಯಾದ ಬಿಜೆಪಿ ಅಭ್ಯರ್ಥಿ, ಶಾಸಕ ಗೋಪಾಲ ಪೂಜಾರಿಯಂತ ಅನುಭವಿ ರಾಜಕಾರಣಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿತು. ಪರೇಶ್​ ಮೇಸ್ತ ಸಾವು ಹಾಗೂ ಸುರತ್ಕಲ್‌ನ ದೀಪಕ್ ರಾವ್ ಕೊಲೆ ಪ್ರಕರಣದಿಂದಾದ ಹಿಂದು ಮತ ಧ್ರುವೀಕರಣವೂ ಬಿಜೆಪಿ ಗೆಲುವುಗೆ ಪ್ರಮುಖ ಕಾರಣ ಎಂಬ ಮಾತುಗಳೂ ಕೇಳಿ ಬಂದಿದ್ದವು.


2023ರ ಚುನಾವಣೆಯಲ್ಲಿ ಟಿಕೆಟ್​ ಆಕಾಂಕ್ಷಿಗಳು ಯಾರು?


ದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಯಾವುದೇ ನೆಲೆಯಿಲ್ಲ. ಹಾಗಾಗಿ ಹೋರಾಟವೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ.


ಬಿಜೆಪಿ ಆಕಾಂಕ್ಷಿಗಳು ಯಾರು?


ಸುಕುಮಾರ ಶೆಟ್ಟಿ


* ಸುಕುಮಾರ್​ ಶೆಟ್ಟಿ: ಹಾಲಿ ಶಾಸಕರಾಗಿರುವ ಸುಕುಮಾರ್​ ಶೆಟ್ಟಿ ಈ ಬಾರಿಯೂ ಕೇಸರಿ ಬಣದ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ. ಜನರ ನೋವಿಗೆ ಮಿಡಿಯುವ ಸುಕುಮಾರ್​ ಶೆಟ್ಟಿಗೆ ಮಾನವೀಯ ಕಳಕಳಿ ಇದೆ ಎಂಬುವುದು ಉಲ್ಲಿನ ಜನರ ಮಾತಾಗಿದೆ. ಹೀಗಿದ್ದರೂ ಗುತ್ತಿಗೆದಾರರ ಲಾಬಿ ಬೆಳೆಸಿ ಕಳಪೆಕಾಮಗಾರಿಗೆ ಕಾರಣರಾಗಿದ್ದಾರೆಂಬ ಆರೋಪವೂ ಅವರ ಮೇಲಿರುವುದರಿಂದ ಇವರನ್ನು ಬದಲಾಯಿಸಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಸಂಸದ ರಾಘವೇಂದ್ರರಿಗೆ ಆಪ್ತರಾಗಿರುವ ಸುಕುಮಾರ್​ ಶೆಟ್ಟಿಗೆ ಟಿಕೆಟ್​ ತಪ್ಪಿಸುವುದು ಸುಲಭದ ಮಾತಲ್ಲ ಎಂಬ ಅಭಿಪ್ರಾಯವೂ ಇದೆ.


*  ಗೋವಿಂದ ಬಾಬು ಪೂಜಾರಿ: ಉದ್ಯಮಿಯಾಗಿರುವ ಗೋವಿಂದ ಬಾಬು ಪೂಜಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆದಾರರೂ ಹೌದು.


* ಬಾಬು ಹೆಗ್ಡೆ: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ


* ದೀಪಕ್ ಕುಮಾರ್​ ಶೆಟ್ಟಿ: ಉದ್ಯಮಿ


* ಶರತ್​ ಶೆಟ್ಟಿ ಉಪ್ಪುಂದ: ಯುವ ಮೋರ್ಚಾದ ಕಾರ್ಯದರ್ಶಿ


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


*  ಗೋಪಾಲ ಪೂಜಾರಿ: ಮಾಜಿ ಶಾಸಕರಾಗಿರುವ ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರದಿಂದ ಒಟ್ಟು ಐದು ಬಾರಿ ಸ್ಪರ್ಧಿಸಿ, ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಜನರ ನೋವಿಗೆ ಮಿಡಿಯುವ ಇವರು ಸೋತರೂ ತನ್ನ ಕ್ಷೇತ್ರದ ಸಂಪರ್ಕ ಕಾಯ್ದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸುಖಸಾಗರ್ ಗ್ರೂಪ್ ಆಪ್ ಹೊಟೇಲ್ಸ್ ಮಾಲಿಕ ಗೋಪಾಲ ಪೂಜಾರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ.


ಗೋಪಾಲ ಪೂಜಾರಿ


* ರಾಜು ಪೂಜಾರಿ: ಕಾಂಗ್ರೆಸ್​ ಮುಖಂಡರಾಗಿರುವ ರಾಜು ಪೂಜಾರಿ ಕೂಡಾ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ.


* ಯುಬಿ ಶೆಟ್ಟಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತರಾಗಿರುವ ಗುತ್ತಿಗೆದಾರ ಯುಬಿ ಶೆಟ್ಟಿ ಹೆಸರು ಕೂಡಾ ಈ ಬಾರಿಯ ಟಿಕೆಟ್​ ಆಕಾಂಕ್ಷಿಗಳ ರೇಸ್​ನಲ್ಲಿದೆ.


ಜಾತಿ ಲೆಕ್ಕಾಚಾರ

ಒಟ್ಟು ಮತದಾರರು2,05,319
ಬಿಲ್ಲವ47,000
ಬಂಟ್ಸ್35,000
ಮೊಗವೀರ30,000
ಮುಸ್ಲಿಂ18,000
ರಾಮಕ್ಷತ್ರಿಯ15,000
ದೇವಾಡಿಗ14,000
ಗಾಣಿಗ12,000
ಪರಿಶಿಷ್ಟ ಜಾತಿ13,000
ಬ್ರಾಹ್ಮಣ9,000

2018ರಲ್ಲಿ ಬೈಂದೂರು ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಕುಮಾರ್​ ಶೆಟ್ಟಿ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಗೋಪಾಲ ಪೂಜಾರಿ ಸ್ಪರ್ಧೆಯೊಡ್ಡಿದ್ದರು. ಆದರೆ ಕೋಮುಗಲಭೆ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಮಲ ಪಾಳಯ ಅಭ್ಯರ್ಥಿ 24,393 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಸುಕುಮಾರ್​ ಶೆಟ್ಟಿ96,029
ಕಾಂಗ್ರೆಸ್ಗೋಪಾಲ ಪೂಜಾರಿ71,636

Published by:Precilla Olivia Dias
First published: