• Home
  • »
  • News
  • »
  • state
  • »
  • Karnataka Assembly Elections: ಬ್ಯಾಟರಾಯನಪುರದಲ್ಲಿ ಹೇಗಿದೆ ಜಿದ್ದಾಜಿದ್ದಿ? ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಬಿಜೆಪಿ?

Karnataka Assembly Elections: ಬ್ಯಾಟರಾಯನಪುರದಲ್ಲಿ ಹೇಗಿದೆ ಜಿದ್ದಾಜಿದ್ದಿ? ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಬಿಜೆಪಿ?

ಶಾಸಕ ಕೃಷ್ಣ ಬೈರೇಗೌಡ ಮತ್ತು ಬಿಜೆಪಿಯ ಎ. ರವಿ

ಶಾಸಕ ಕೃಷ್ಣ ಬೈರೇಗೌಡ ಮತ್ತು ಬಿಜೆಪಿಯ ಎ. ರವಿ

ಶಾಸಕ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಸಚಿವರಾಗಿಯೂ ಕೆಲಸ ಮಾಡಿದವರು. ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಇಲ್ಲಿನ ಜನರ ಮಾತು. ಅತ್ತ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಿಜೆಪಿ ಸತತ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ ಒಕ್ಕಲಿಗರ ಪಾರಮ್ಯ ಇರುವುದರಿಂದ ಜೆಡಿಎಸ್ ಕೂಡ ಇಲ್ಲಿ ಪ್ರಬಲವಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: 2008ರಿಂದ ಕಾಂಗ್ರೆಸ್​ (Congress) ಕೈಯಲ್ಲಿರೋ ಬ್ಯಾಟರಾಯನಪುರ (Byatarayanapura) ಕ್ಷೇತ್ರದಲ್ಲಿ ಈಗಾಗಲೇ  ಮೂರು ಬಾರಿ ಶಾಸಕರಾಗಿರುವ ಕೃಷ್ಣ ಭೈರೇಗೌಡ (Krishna Bhairegowda ) ಹ್ಯಾಟ್ರಿಕ್ ಬಾರಿಸಿದ್ದಾರೆ. ಆದ್ರೆ ಕಾಂಗ್ರೆಸ್​ನ ಹ್ಯಾಟ್ರಿಕ್​ ಕನಸನ್ನ ಭಗ್ನಗೊಳಿಸಿ, ಈ ಬಾರಿಯಾದರೂ ಗೆಲ್ಲಬೇಕು ಅಂತ ಬಿಜೆಪಿ (BJP) ಕಸರತ್ತು ಪ್ರಾರಂಭಿಸಿದೆ. ಈ ಕ್ಷೇತ್ರದಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್​ಗಳಿದ್ದು (BBMP Ward), ಈ ಪೈಕಿ ಕಾಂಗ್ರೆಸ್ (Congress) ಬಲವೇ ಹೆಚ್ಚಿದೆ. ಶಾಸಕ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಸಚಿವರಾಗಿಯೂ (Minister) ಕೆಲಸ ಮಾಡಿದವರು. ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಜನರ ಕೈಗೆ ಸುಲಭವಾಗಿ ಸಿಗುತ್ತಾರೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಇಲ್ಲಿನ ಜನರ ಮಾತು. ಅತ್ತ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಿಜೆಪಿ ಸತತ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ ಒಕ್ಕಲಿಗರ ಪಾರಮ್ಯ ಇರುವುದರಿಂದ ಜೆಡಿಎಸ್‌ (JDS) ಕೂಡ ಇಲ್ಲಿ ಪ್ರಬಲವಾಗಿದೆ.


 ಕ್ಷೇತ್ರದ ವಿಶೇಷತೆ ಏನು?


ಚುನಾವಣಾ ಸಂದರ್ಭದಲ್ಲಿ ಬೀಸುವ ಅಲೆ ಯಾರನ್ನು, ಯಾವ ದಿಕ್ಕಿಗೆ ಕರೆದೊಯ್ಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿರುವ 7 ಬಿಬಿಎಂಪಿ ವಾರ್ಡ್‌ಗಳು ಮತ್ತು 5 ಗ್ರಾಮ ಪಂಚಾಯ್ತಿಗಳಿದ್ದು, ಇದು ಕಾಂಗ್ರೆಸ್​ಗೆ ಲಾಭವಾಗಬಹುದು. ಈ ಭಾಗದಲ್ಲಿ ಒಕ್ಕಲಿಗ, ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಸಮುದಾಯದವರೇ ಇಲ್ಲಿ ನಿರ್ಣಾಯಕರು. ಮೂಲ ನಿವಾಸಿಗಳು ಮತ್ತು ವಲಸೆ ಬಂದಿರುವವರು ಸರಿಸಮನರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿ-ಜನಾಂಗದವರು ಈ ಕ್ಷೇತ್ರದಲ್ಲಿರುವುದು ಮತ್ತೊಂದು ವಿಶೇಷ.


ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೃಷ್ಣ ಬೈರೇಗೌಡ


 ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಒಬ್ಬರು ಕೃಷ್ಣ ಬೈರೇಗೌಡ. ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಇವರು ಮಾಜಿ ಸಚಿವ ದಿ. ಸಿ. ಬೈರೇಗೌಡರ ಪುತ್ರ.ಒಕ್ಕಲಿಗ ಸಮುದಾಯದ ನಾಯಕ ಕೃಷ್ಣ ಬೈರೇಗೌಡ ಅಮೆರಿಕದಲ್ಲಿ ವ್ಯಾಸಂಗ ಮಾಡಿದವರು. 2003ರಲ್ಲಿ ತಂದೆ ನಿಧನದ ಬಳಿಕ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. 2004ರಲ್ಲಿ ಇದೇ ಕ್ಷೇತ್ರದಿಂದ ಪುನರಾಯ್ಕೆಗೊಂಡರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಗೊಂಡಿತು. ವೇಮಗಲ್ ಕ್ಷೇತ್ರವೇ ಅಸ್ತಿತ್ವ ಕಳೆದುಕೊಂಡಿತು. 2008ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರವನ್ನು ಕೃಷ್ಣ ಬೈರೇಗೌಡ ಆಯ್ಕೆ ಮಾಡಿಕೊಂಡರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಆಯ್ಕೆಯಾದರು.


 ಇದನ್ನೂ ಓದಿ:  Karnataka Assembly Elections: ಸರ್ವಜನಾಂಗದ ತೋಟ ಸರ್ವಜ್ಞನಗರ! ಕಾಂಗ್ರೆಸ್ ಕೋಟೆಯಲ್ಲಿ ಈ ಬಾರಿ ಗೆಲ್ಲೋದ್ಯಾರು?


ಹಾಲಿ ಶಾಸಕರ ಬಗ್ಗೆ ಮತದಾರರು ಏನಂತಾರೆ?


ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಸಚಿವರಾಗಿ ಕೃಷ್ಣಬೈರೇಗೌಡ ಶಾಸಕರಾಗಿ, ಈ ಹಿಂದೆ ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದಾರೆ ಅನ್ನೋದು ಕ್ಷೇತ್ರದ ಜನರ ಮಾತು. ಅಲ್ಲದೆ, ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಅಂತಾರೆ ಮತದಾರರು.


ಬಿಜೆಪಿ ಅಭ್ಯರ್ಥಿ ಹೇಳುವುದೇನು?


ಮೂರು ಬಾರಿ ಶಾಸಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣೇಬೈರೇಗೌಡ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸವೇ ಮಾಡಿಲ್ಲ ಅನ್ನೋ ಮಾತು ಬಿಜೆಪಿಗರದ್ದು. ನಾಲ್ಕನೇ ಬಾರಿಗೆ ಅಖಾಡಕ್ಕಿಳಿದಿರುವ ಎ. ರವಿ ಮೇಲೆ ಜನರ ಅನುಕಂಪವಿದೆ. ಹಾಲಿ ಶಾಸಕರು ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ದಿ ಕಾರ್ಯ ಮಾತ್ರ ಕುಂಠಿತವಾಗಿದೆ. ಆಡಳಿತ ವಿರೋಧಿ ಅಲೆ ಇದೆ. ಎ. ರವಿ ಅವ್ರದ್ದೇ ಗೆಲುವು ಅಂತಾರೆ ಬಿಜೆಪಿ ಬೆಂಬಲಿಗರು.


ಈ ಬಾರಿ ಅಕಾಂಕ್ಷಿಗಳು ಯಾರು?


ಕಾಂಗ್ರೆಸ್‌ನಿಂದ ಕೃಷ್ಣ ಬೈರೇಗೌಡ ಅವರೇ ಮತ್ತೊಮ್ಮೆ ಇಲ್ಲಿಂದ ಸ್ಪರ್ಧೆ ಬಯಸಿದ್ದಾರೆ. ಬಿಜೆಪಿಯಿಂದ ಎ. ರವಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಬಯಸಿದ್ದಾರೆ. ಕಳೆದ ಬಾರಿ 5 ಸಾವಿರ ಮತಗಳ ಅಂತರದಿಂದ ಸೋತಿದ್ದ ರವಿ, ಈ ಬಾರಿಯಾದರೂ ಗೆಲ್ಲಬೇಕು ಅಂತ ಪಣ ತೊಟ್ಟಿದ್ದಾರೆ. ಅತ್ತ ಒಕ್ಕಲಿಗರ ಮತ ಸೆಳೆಯಲು ಜೆಡಿಎಸ್ ಪ್ಲಾನ್ ಮಾಡಿದ್ದು, ಸ್ಥಳೀಯ ಮುಖಂಡ ವೇಣುಗೋಪಾಲ್ ಹಾಗೂ ಚಂದ್ರು ಟಿಜಿ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ.

ಒಟ್ಟು ಮತದಾರರುಪುರುಷರುಮಹಿಳೆಯರು
4,19,5872,19,7751,99,733

ಕ್ಷೇತ್ರದಲ್ಲಿ ಒಟ್ಟು 4,19,587 ಮತದಾರರಿದ್ದಾರೆ. ಈ ಪೈಕಿ ಪುರುಷ ಮತದಾರರು 2,19,775 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 1,99,733 ಆಗಿದೆ.
ಒಕ್ಕಲಿಗ140,000
ಎಸ್‌ಸಿ-ಎಸ್‌ಟಿ 1,00,000
ಮುಸ್ಲಿಂ 80,000
ಕ್ರಿಶ್ಚಿಯನ್40,000
ಲಿಂಗಾಯತ26,000
ತಿಗಳ20,000
ಬ್ರಾಹ್ಮಣ  10,000
ಇತರೇ14,000

ಕ್ಷೇತ್ರದಲ್ಲಿ ಇವೆ ಹಲವು ಸಮಸ್ಯೆಗಳು


ಹತ್ತು ವರ್ಷದಲ್ಲಿ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅಭಿವೃದ್ಧಿಗೆ ಮುಂದಾಗಿದ್ದರೂ, ಜನರ ನಿರೀಕ್ಷೆಗೆ ತಕ್ಕಂತೆ ಹೆಚ್ಚಿನ ಕೆಲಸ ಮಾಡಿಲ್ಲ ಎಂಬ ಆಕ್ಷೇಪ ಕ್ಷೇತ್ರದಲ್ಲಿ ಮನೆ ಮಾಡಿದೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಹಾಗೆಯೇ ಉಳಿದುಕೊಂಡಿವೆ. ನಗರ ಹಾಗೂ ಗ್ರಾಮೀಣ ಭಾಗಗಳನ್ನು ಹೊಂದಿದ್ದು, ಅಭಿವೃದ್ಧಿ ಕೂಡ ಸಮಾನವಾಗಿ ಆಗಿಲ್ಲ ಎಂಬ ಆರೋಪ ಇದೆ.


ಇದನ್ನೂ ಓದಿ: Karnataka Assembly Elections: ಯಲಹಂಕ ಉಪನಗರದಲ್ಲಿ ವಿಶ್ವನಾಥನ ದರ್ಬಾರ್! ಬಿಜೆಪಿಯನ್ನು ಸೋಲಿಸುವವರು ಯಾರು?


ಕಂದಾಯ ಲೇಔಟ್‌ಗಳು ಹೆಚ್ಚಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ ಸಂಪರ್ಕಕ್ಕಾಗಿ ಜನರು ಅಪೇಕ್ಷಿಸಿದ್ದಾರೆ. ಹಳ್ಳಿಗಳಲ್ಲಿ ವಿದ್ಯುತ್‌ ಸಮಸ್ಯೆಯೂ ಕಾಡುತ್ತಿದೆ. ಅರ್ಕಾವತಿ ಬಡಾವಣೆಗೆ ಜಮೀನು ಕಳೆದುಕೊಂಡಿರುವ ಹೆಚ್ಚಿನ ರೈತರಿಗೆ ಪರಿಹಾರ ದೊರೆತಿದ್ದರೂ, ನಿವೇಶನ ಆಕಾಂಕ್ಷಿಗಳು ಇನ್ನೂ ಬಿಡಿಎ ಕಚೇರಿಗೆ ಅಲೆದಾಟ ನಡೆಸಿದ್ದಾರೆ.

Published by:Annappa Achari
First published: