• Home
 • »
 • News
 • »
 • state
 • »
 • Karnataka Assembly Elections: 'ಬ್ಯಾಡಗಿ' ಮೆಣಸು ಈ ಬಾರಿ ಯಾರಿಗೆ ಖಾರ? ಕ್ಷೇತ್ರದಲ್ಲಿ ಹೇಗಿದೆ ಮತದಾರರ ಲೆಕ್ಕಾಚಾರ?

Karnataka Assembly Elections: 'ಬ್ಯಾಡಗಿ' ಮೆಣಸು ಈ ಬಾರಿ ಯಾರಿಗೆ ಖಾರ? ಕ್ಷೇತ್ರದಲ್ಲಿ ಹೇಗಿದೆ ಮತದಾರರ ಲೆಕ್ಕಾಚಾರ?

ಬ್ಯಾಡಗಿ ವಿಧಾನಸಭಾ ಕ್ಷೇತ್ರ

ಬ್ಯಾಡಗಿ ವಿಧಾನಸಭಾ ಕ್ಷೇತ್ರ

ಬ್ಯಾಡಗಿ ಮೆಣಿಸಿನಿಂದಲೇ ಬ್ಯಾಡಗಿ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದೆ. ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಬ್ಯಾಡಗಿಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಶಾಸಕರಾಗಿದ್ದಾರೆ. ಹಾಗಿದ್ರೆ ಅಲ್ಲಿ ಹೇಗಿದೆ ಚುನಾವಣಾ ಕಾವು? ಈ ಬಾರಿ ಬ್ಯಾಡಗಿ ಯಾರಿಗೆ ಖಾರವಾಗಲಿದೆ? ಯಾರಿಗೆ ಸಿಹಿ ನೀಡಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Haveri, India
 • Share this:

‘ಬ್ಯಾಡಗಿ’ (Byadgi) ಅಂದರೆ ಗೃಹಿಣಿಯರ ಕಿವಿ ನೆಟ್ಟಗಾಗುತ್ತದೆ. ಕಾರಣ ಅಡುಗೆಗೆ ವಿಶಿಷ್ಟ ಖಾರ, ಕೆಂಪು ಬಣ್ಣ, ವಿಶಿಷ್ಟ ಸುವಾಸನೆ ನೀಡುವ ಬ್ಯಾಡಗಿ ಮೆಣಸು (Byadgi Chilli)! ಹೌದು ಬ್ಯಾಡಗಿ ಅಂದರೆ ಮೊದಲು ನೆನಪಿಗೆ ಬರುವುದೇ ಬ್ಯಾಡಗಿ ಮೆಣಸು. ಇದು ಬ್ಯಾಡಗಿ ವಿಧಾನಸಭಾ ಕ್ಷೇತ್ರವು (Byadgi assembly constituency) ಹಾವೇರಿ (Haveri) ಜಿಲ್ಲೆಯ ಒಂದು ಮತಕ್ಷೇತ್ರವಾಗಿದೆ. ಬ್ಯಾಡಗಿ ಮೆಣಿಸಿನಿಂದಲೇ ಬ್ಯಾಡಗಿ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲೂ (Intrenational level) ಗುರುತಿಸಲ್ಪಟ್ಟಿದೆ. ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಬ್ಯಾಡಗಿಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ (Virupakshappa Bellery) ಶಾಸಕರಾಗಿದ್ದಾರೆ. ಹಾಗಿದ್ರೆ ಅಲ್ಲಿ ಹೇಗಿದೆ ಚುನಾವಣಾ ಕಾವು? ಈ ಬಾರಿ ಬ್ಯಾಡಗಿ ಯಾರಿಗೆ ಖಾರವಾಗಲಿದೆ? ಯಾರಿಗೆ ಸಿಹಿ ನೀಡಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…


ಬ್ಯಾಡಗಿ ಕ್ಷೇತ್ರ ಪರಿಚಯ


ಬ್ಯಾಡಗಿ ವಿಧಾನಸಭಾ ಕ್ಷೇತ್ರವು ಹಾವೇರಿಯ ಒಂದು ಮತಕ್ಷೇತ್ರ. ಇದು ಮೆಣಸಿನಕಾಯಿಗೆ ಪ್ರಸಿದ್ಧ. ಇಲ್ಲಿನ ಮೆಣಸಿನಕಾಯಿಗೆ ಒಳ್ಳೆಯ ಕೆಂಪು ಬಣ್ಣ ಇದೆ.ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ."ಬ್ಯಾಡಗಿ ಮೆಣಸಿನಕಾಯಿ" ಎಂದರೆ ಪ್ರಪಂಚದಲ್ಲಿ ಎರಡನೇ ಸ್ಥಾನ ಪಡೆದಿದೆ. ಹಾಗೆಯೆ ಸುತ್ತೇಳು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಬ್ಯಾಡಗಿ ಜಿಲ್ಲೆಯಲ್ಲಿ ಅತಿಹೆಚ್ಚು ಮೆಣಸಿನಕಾಯಿಯನ್ನು ಬೆಳೆಯುತ್ತಾರೆ.


ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸು


ಬ್ಯಾಡಗಿ ವಿಧಾನಸಭಾ ಕ್ಷೇತ್ರ


ಬ್ಯಾಡಗಿ ವಿಧಾನಸಭಾ ಕ್ಷೇತ್ರ ರಚನೆಯಾಗಿದ್ದು 1962ರಲ್ಲಿ ಮೊದಲ ಮೂರು ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿತ್ತು. ಬಳಿಕ 1978ರಿಂದ 2004ರವರೆಗೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಬಳಿಕ 2008 ಮತ್ತು 2013ರಲ್ಲಿ ಸಾಮಾನ್ಯವರ್ಗಕ್ಕೆ ಮೀಸಲಾದ ಕ್ಷೇತ್ರವಾಯ್ತು. ಹಾವೇರಿ-ಬ್ಯಾಡಗಿ-ರಾಣೆಬೆನ್ನೂರು ತಾಲೂಕುಗಳ ಆಯ್ದ ಹಳ್ಳಿಗಳನ್ನು ಸೇರಿಸಿ ಕ್ಷೇತ್ರ ರಚಿಸಲಾಗಿದೆ.


ಇದನ್ನೂ ಓದಿ: Karnataka Assembly Elections: 'ಕೌರವ'ನ ಕೋಟೆಯೊಳಗೆ ರಂಗೇರಿದ ರಣಕಣ! ಹಿರೇಕೆರೂರು ಕುರುಕ್ಷೇತ್ರದಲ್ಲಿ ಗೆಲ್ಲುವವರು ಯಾರು?


ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ


ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮೂಲಕ ಮತದಾರರ ಮನ ಗೆದ್ದಿದ್ದ ಮಾಜಿ ಶಾಸಕ ಬಸವರಾಜ ಶಿವಣ್ಣನವರಿಗೆ 2018ರ ಟಿಕೆಟ್ ನೀಡಿರಲಿಲ್ಲ. ಹಿರಿಯ ಮುಖಂಡ ಹಾಗೂ ಸಚಿವ ಎಚ್‌.ಕೆ. ಪಾಟೀಲ ಅವರ ಪರಮಾಪ್ತ ಎಸ್‌.ಆರ್‌. ಪಾಟೀಲ ತಮಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದು, ಕಳೆದ ಬಾರಿ ಸ್ಪರ್ಧಿಸಿದ್ದರು. ಕ್ಷೇತ್ರಕ್ಕೆ ಹೊಸ ಮುಖ ಎಂಬ ಕಾರಣದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಸೋತು, ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಗೆದ್ದು ಬೀಗಿದ್ದರು.


ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ


ಈ ಬಾರಿ ಯಾರಿಗೆ ಟಿಕೆಟ್?


ಈ ಬಾರಿ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಅವರೊಂದಿಗೆ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಲಿಸ್ಟ್ ದೊಡ್ಡದಿದೆ. ಕುರುಬರ ಕೋಮಿನ ಮಾಜಿ ಶಾಸಕ ಬಸವರಾಜ್ ಶಿವಣ್ಣವರ್ ಹಾಗೂ ಲಿಂಗಾಯತ ಸಮುದಾಯದ ಎಸ್.ಆರ್. ಪಾಟೀಲ್ ಮಧ್ಯೆ ಹಣಾಹಣಿ ನಡೆಯುತ್ತಿದೆ. ಜೆಡಿಎಸ್‌ ಟಿಕೆಟ್ ಆಕಾಂಕ್ಷಿಗಳು ಯಾರು ಎನ್ನುವುದು ಸದ್ಯಕ್ಕೆ ನಿಗೂಢ.


ಕಾಂಗ್ರೆಸ್ ನಾಯಕ ಎಸ್‌.ಆರ್‌. ಪಾಟೀಲ್


ಇದನ್ನೂ ಓದಿ: Karnataka Assembly Elections: ಏಲಕ್ಕಿ ನಾಡಲ್ಲಿ ಮತ್ತೆ ಅರಳುತ್ತಾ ಕಮಲ? ಹಾವೇರಿ ಮತದಾರರ ಲೆಕ್ಕಾಚಾರ ಹೇಗಿದೆ?


ಬ್ಯಾಡಗಿ ಕ್ಷೇತ್ರದ ಮತದಾರರ ವಿವರ


ಲಿಂಗಾಯತ ಮತ್ತು ಕುರುಬ ಜನಾಂಗದ ಪ್ರಾಬಲ್ಯ ಇಲ್ಲಿದೆ.. ಬ್ಯಾಡಗಿ ವಿದಾನಸಭಾ ಕ್ಷೇತ್ರಕ್ಕೆ ಹಾವೇರಿ ತಾಲೂಕಿನ ಕೆಲವು ಗ್ರಾಮಗಳು ಹಾಗೂ ರಾಣೆಬೆನ್ನೂರು ತಾಲೂಕಿನ ಕೆಲ ಗ್ರಾಮಗಳು ಸೇರಿಕೊಂಡಿದ್ದು ಈ ಭಾಗದಲ್ಲಿ ಕುರುಬರ ಮತಗಳೇ ಅಭ್ಯರ್ಥಿಗಳ ಗೆಲುವಿನಲ್ಲಿ ಆಟವಾಡಬಹುದು. ಸದ್ಯ ಒಟ್ಟೂ 2,05,773 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತ – 60,000, ಕುರುಬ  - 50,000, ದಲಿತರು – 35,000 ಹಾಗೂ ಗಂಗಾ ಮತಸ್ಥರು – 12,000 ಮತದಾರರಿದ್ದಾರೆ.

Published by:Annappa Achari
First published: