• Home
  • »
  • News
  • »
  • state
  • »
  • Karnataka Assembly Elections: ಬಿಟಿಎಂ ಲೇಔಟ್‌ನಲ್ಲಿ ಹೇಗಿದೆ ಚುನಾವಣಾ ರಣಕಣ? ಕಾಂಗ್ರೆಸ್‌ಗೆ ಏಟು ಕೊಡುತ್ತಾ ಬಿಜೆಪಿ?

Karnataka Assembly Elections: ಬಿಟಿಎಂ ಲೇಔಟ್‌ನಲ್ಲಿ ಹೇಗಿದೆ ಚುನಾವಣಾ ರಣಕಣ? ಕಾಂಗ್ರೆಸ್‌ಗೆ ಏಟು ಕೊಡುತ್ತಾ ಬಿಜೆಪಿ?

ಶಾಸಕ ರಾಮಲಿಂಗಾ ರೆಡ್ಡಿ

ಶಾಸಕ ರಾಮಲಿಂಗಾ ರೆಡ್ಡಿ

ಸದ್ಯ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಕ್ಷೇತ್ರದ ಶಾಸಕರಾಗಿದ್ದಾರೆ. ಮಾಜಿ ಗೃಹ ಸಚಿವರಾಗಿರುವ ರಾಮಲಿಂಗಾರೆಡ್ಡಿ ರಾಜಕೀಯದಲ್ಲಿ ಅಪಾರ ಅನುಭವಿ. ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ರಾಮಲಿಂಗಾರೆಡ್ಡಿ, ಇದೀಗ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರಿನ (Bengaluru) ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರವು (BTM Layout Constituency) ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರವು ಮುಂಚೆ ಉತ್ತರಹಳ್ಳಿ (Uttarahalli) ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಬಳಿಕ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತ್ರ ರಚನೆಯಾಗಿದೆ. ಆಗಿನಿಂದ ಈತನಕ ಮೂರು ಬಾರಿ ಮಾಜಿ ಗೃಹ ಸಚಿವ (Ex Home Minister) ರಾಮಲಿಂಗಾರೆಡ್ಡಿ (Ramlinga Reddy) ಸತತ ಗೆಲವು ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಅತ್ತ ಬಿಜೆಪಿಯಿಂದ (BJP) ವಿವೇಕ್ ರೆಡ್ಡಿ (Vivek Reddy) ಆಕಾಂಕ್ಷಿಯಾಗಿದ್ದು, ಅವರೊಂದಿಗೆ ಇನ್ನಿಬ್ಬರು ಟಿಕೆಟ್ (Ticket) ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಅಲ್ಲಿ ಬಿರುಸಿನ ಸ್ಪರ್ಧೆ ಏರ್ಪಡುವ ನಿರೀಕ್ಷೆಗಳಿವೆ.


ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವಿಶೇಷ


ಬಿಟಿಎಂ ಲೇಔಟ್ ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದು. ರಾಜೇಂದ್ರನಗರ, ಬೋವಿಕಾಲೋನಿ ಸೇರಿದಂತೆ 4 ದೊಡ್ಡ ಹಾಗೂ 3 ಚಿಕ್ಕ ಸ್ಲಂಗಳನ್ನು ಈ ಕ್ಷೇತ್ರ ಹೊಂದಿದೆ. ಕೋರಮಂಗಲ, ಬಿಟಿಎಂ ಲೇಔಟ್ ಮುಂತಾದ ಏರಿಯಾಗಳು, ಫೋರಂ ಮಾಲ್ ಸೇರಿದಂತೆ ಪ್ರಮುಖ ವಾಣಿಜ್ಯ ತಾಣಗಳು ಈ ಪ್ರದೇಶದಲ್ಲಿದೆ. ಉಳಿದಂತೆ ಮೈಕೋ ಕಂಪನಿ, ಬೆಂಗಳೂರು ಡೈರಿ, ನಿಮ್ಹಾನ್ಸ್ ನ ಸ್ವಲ್ಪ ಭಾಗವಿರೋದು ಇದೇ ವಿಧಾನಸಭಾ ಕ್ಷೇತ್ರದಲ್ಲೇ. ಎಲ್ಲಿ ನೋಡಿದ್ರೂ ಎತ್ತರ ಅಂತಸ್ತಿನ ಮನೆಗಳೇ ಕಣ್ಣಿಗೆ ಕಾಣುತ್ತವೆ. ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ ಸೇರಿ ಒಟ್ಟು 8 ವಾರ್ಡ್​ಗಳು ಬಿಟಿಎಂ ಲೇಔಟ್ ಅಸೆಂಬ್ಲಿಯಲ್ಲಿದೆ.‘


4ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ರಾಮಲಿಂಗಾರೆಡ್ಡಿ


ಸದ್ಯ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಕ್ಷೇತ್ರದ ಶಾಸಕರಾಗಿದ್ದಾರೆ. ಮಾಜಿ ಗೃಹ ಸಚಿವರಾಗಿರುವ ರಾಮಲಿಂಗಾರೆಡ್ಡಿ ರಾಜಕೀಯದಲ್ಲಿ ಅಪಾರ ಅನುಭವಿ. ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ರಾಮಲಿಂಗಾರೆಡ್ಡಿ, ಇದೀಗ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ಇದನ್ನೂ ಓದಿ: Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?


ರಾಮಲಿಂಗಾರೆಡ್ಡಿ ಪ್ಲಸ್ ಪಾಯಿಂಟ್ಸ್


ಮಾಜಿ ಸಚಿವರಾಗಿ, ಶಾಸಕರಾಗಿ ಅಪಾರ ಅನುಭವ ಹೊಂದಿದ್ದಾರೆ ಎನ್ನುವುದು ರಾಮಲಿಂಗಾರೆಡ್ಡಿ ಅವರ ಪ್ಲಸ್ ಪಾಯಿಂಟ್. ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಲ್ಲಿ ಇವರೂ ಕೂಡ ಒಬ್ರು. ಶಾಸಕರು ಕೈಗೆ ಸಿಗ್ತಾರೆ. ಕೆಲಸಗಳು ಆಗಿವೆ. ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಬಗೆಹರಿದಿದೆ ಎನ್ನುವುದು ಜನರ ಅಭಿಪ್ರಾಯ. ಕಳೆದ 5 ವರ್ಷದಲ್ಲಿ ಬಿಟಿಎಂ ಕ್ಷೇತ್ರದಲ್ಲಿ ರಾಜಕಾಲುವೆ ಅಭಿವೃದ್ಧಿ, ವೈಟ್ ಟಾಪಿಂಗ್, ಸಮುದಾಯ ಭವನ ನಿರ್ಮಾಣ, ಕೇಂದ್ರೀಯ ಸದನದಿಂದ ಈಜಿಪುರದ ತನಕ ಮೇಲ್ಸೇತುವೆ ಕೆಲಸ ಆಗಿದೆ ಅಂತಾರೆ ರಾಮಲಿಂಗಾರೆಡ್ಡಿ.


ಸಚಿವರಾಗಿದ್ದಾಗಲೂ ಜನಪರ ಕಾರ್ಯ


ಹಿರಿಯ ಜನಪ್ರತಿನಿಧಿಯಾಗಿ ಎಲ್ಲರಿಂದಲೂ ಸಮಾನ ಗೌರವ ಸಂಪಾದಿಸಿದ್ದಾರೆ. 4 ಬಾರಿ ಜಯನಗರ ಕ್ಷೇತ್ರದಿಂದ ಜಯಶಾಲಿಯಾಗಿದ್ದ ಹೆಗ್ಗಳಿಕೆ. ಕ್ಷೇತ್ರ ಪುನ ರ್ವಿಂಗಡಣೆಯಿಂದ ಬಿಟಿಎಂ ಲೇಔಟ್ ಗೆ ಸ್ಥಳಾಂತರಗೊಂಡು ಅಲ್ಲೂ ಜಯ ಸಾಧಿಸಿದ್ದಾರೆ. ಸಚಿವರಾಗಿಯೂ ಜನಕ್ಕೆ ಹತ್ತಿರವಾಗಿದ್ದರು. ರಸ್ತೆ, ಫುಟ್ ಪಾತ್, ಪಾರ್ಕ್, ಒಳಚರಂಡಿ ಅಭಿವೃದ್ಧಿಯಾಗಿದೆ. ಕೋರಮಂಗಲದ ಸ್ಯಾನಿಟರಿ ಸರಿಪಡಿಸಲಾಗಿದೆ. ರಾಜೇಂದ್ರ ನಗರ, ಬೋವಿ ಕಾಲನಿಯಲ್ಲಿ ಮನೆ ಕಟ್ಟಿಸಿಕೊಡಲಾಗಿದೆ.

ಕಾಂಗ್ರೆಸ್ಬಿಜೆಪಿಜೆಡಿಎಸ್
ರಾಮಲಿಂಗಾರೆಡ್ಡಿವಿವೇಕ್ ರೆಡ್ಡಿಗೊತ್ತಿಲ್ಲ
ಲಲ್ಲೇಶ್ ರೆಡ್ಡಿ
ಅನಿಲ್ ಶೆಟ್ಟಿ

ಟಿಕೆಟ್‌ಗಾಗಿ ಭಾರೀ ಪೈಪೋಟಿ


ಈ ಬಾರಿಯೂ ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿ ಅವರೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅತ್ತ ಬಿಜೆಪಿಯಲ್ಲಿ ಪೈಪೋಟಿ ಜೋರಾಗಿದ್ದು ವಕೀಲ ವಿವೇಕ್ ರೆಡ್ಡಿ, ಸಮಾಜ ಸೇವಕ ಅನಿಲ್ ಶೆಟ್ಟಿ ಜೊತೆಗೆ ಹಿಂದಿನ ಬಾರಿ ಸೋತಿದ್ದ ಸ್ಥಳೀಯ ಮುಖಂಡ ಲಲ್ಲೇಶ್ ರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದಾರೆ.


ವಲಸಿಗರೇ ಹೆಚ್ಚಿರುವ ಕ್ಷೇತ್ರ


2.63 ಲಕ್ಷ ಮತದಾರರನ್ನು ಹೊಂದಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಭಾರತದವರು, ಮಲಯಾಳಿಗಳು ಸೇರಿದಂತೆ ವಲಸಿಗರೇ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಮತಗಳು ಕೂಡ ಚುನಾವಣೆಯಲ್ಲಿ ನಿರ್ಣಾಯಕವಾಗಿವೆ.

ಒಟ್ಟು ಮತದಾರರು2,83,000
ಒಕ್ಕಲಿಗರು55,000
ಲಿಂಗಾಯತರು5,000
ಬ್ರಾಹ್ಮಣರು23,000
ಒಬಿಸಿ28,000
ಎಸ್‌ಸಿ-ಎಸ್‌ಟಿ52,000
ಮುಸ್ಲಿಂ12,000
ಇತರೇ1,08,000

ಬಿಟಿಎಂ ಜಾತಿ ಲೆಕ್ಕಾಚಾರ


ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ-2,83,000 ಇದೆ. ಈ ಪೈಕಿ ಒಕ್ಕಲಿಗರು-55,000, ಲಿಂಗಾಯತರು-5,000, ಬ್ರಾಹ್ಮಣರು-23,000, ಒಬಿಸಿ-28,000, ಎಸ್ಸಿ-ಎಸ್ಟಿ-52,000, ಮುಸ್ಲಿಂ-12,000 ಹಾಗೂ ಇತರೆ-1,08,000 ಮತದಾರರಿದ್ದಾರೆ.


ಇದನ್ನೂ ಓದಿ: Karnataka Assembly Elections: ಬಸವನಗುಡಿಯಲ್ಲಿ ಈ ಬಾರಿ ಗೆಲುವಿನ ಪರಿಷೆ ಯಾರದ್ದು? ರವಿಸುಬ್ರಹ್ಮಣ್ಯಗೆ ಸಿಗುತ್ತಾ ದೊಡ್ಡಗಣಪತಿ ಆಶೀರ್ವಾದ?


ಕ್ಷೇತ್ರದ ಸಮಸ್ಯೆಗಳು


ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಈ ಪೈಕಿ ಪ್ರಮುಖವಾಗಿ ಸಿಲ್ಕ್ ಬೋರ್ಡ್, ಡೇರಿ ಸರ್ಕಲ್ ಮೊದಲಾದ ಕಡೆ ಟ್ರಾಫಿಕ್ ಜಾಮ್​ಗೆ ಪರಿಹಾರ ಸಿಕ್ಕಿಲ್ಲ. ಕಾನೂನು ವ್ಯವಸ್ಥೆ, ಸಾರಿಗೆ, ಕುಡಿಯುವ ನೀರು ವ್ಯವಸ್ಥೆ ಜನರಿಗೆ ಸಮಾಧಾನ ತಂದಿದೆ. ಕೆಲವೊಂದು ಅಭಿವೃದ್ಧಿ ಕಾರ್ಯಗಳು ಬಾಕಿಯಿವೆ ಎಂದು ಸ್ಥಳೀಯರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

Published by:Annappa Achari
First published: