• Home
  • »
  • News
  • »
  • state
  • »
  • Karnataka Assembly Elections: ಬೊಮ್ಮನಹಳ್ಳಿಯಲ್ಲಿ ಗೆಲುವಿನ ಕಿಂದರಿ ಬಾರಿಸುವ ಜೋಗಿ ಯಾರು? ಹಾಲಿ ಶಾಸಕರಿಗೆ ಹೇಗಿದೆ ಜನಬೆಂಬಲ?

Karnataka Assembly Elections: ಬೊಮ್ಮನಹಳ್ಳಿಯಲ್ಲಿ ಗೆಲುವಿನ ಕಿಂದರಿ ಬಾರಿಸುವ ಜೋಗಿ ಯಾರು? ಹಾಲಿ ಶಾಸಕರಿಗೆ ಹೇಗಿದೆ ಜನಬೆಂಬಲ?

ಹಾಲಿ ಶಾಸಕ ಸತೀಶ್ ರೆಡ್ಡಿ

ಹಾಲಿ ಶಾಸಕ ಸತೀಶ್ ರೆಡ್ಡಿ

ಹೆಸರಿನಲ್ಲಿ 'ಹಳ್ಳಿ'ಯಿದ್ದರೂ ಸದ್ಯ ಬೊಮ್ಮನಹಳ್ಳಿ ವೇಗವಾಗಿ ಬೆಳೆಯುತ್ತಿರುವ ತಾಣವಾಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವು ಸಾಧಿಸಿ, 4ನೇ ಯತ್ನದಲ್ಲಿದ್ದಾರೆ. ಅವರ ಜನಕ್ಕೆ ಬ್ರೇಕ್ ಹಾಕೋಕೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ.

ಮುಂದೆ ಓದಿ ...
  • Share this:

2023ರ ವಿಧಾನಸಭಾ ಚುನಾವಣೆಗೆ (Assembly Election) ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸಜ್ಜಾಗುತ್ತಿದೆ. ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲೂ ಚುನಾವಣೆ ತಯಾರಿ ನಡೆಯುತ್ತಿದೆ. ಈ ಪೈಕಿ ಬೊಮ್ಮನಹಳ್ಳಿ (Bommanahalli) ಕ್ಷೇತ್ರದಲ್ಲಿಯೂ  ಚುನಾವಣಾ ಅಬ್ಬರ ಜೋರಾಗಿದೆ. ಬೊಮ್ಮನಹಳ್ಳಿ ಬೆಂಗಳೂರಿನ ಒಂದು ಪ್ರತಿಷ್ಠಿತ ಪ್ರದೇಶ ಮತ್ತು ಬಿಬಿಎಂಪಿಯ (BBMP) ವಲಯಗಳಲ್ಲಿ ಒಂದಾಗಿದೆ. ಕರ್ನಾಟಕ, ತಮಿಳುನಾಡನ್ನು (Karnataka-Tamil Nadu) ಸಂಪರ್ಕಿಸುವ ಹೊಸೂರು ರಾಷ್ಟ್ರೀಯ ಹೆದ್ದಾರಿ 44ರ (Hosur Highway) ಪಕ್ಕದಲ್ಲಿದೆ. ಜೊತೆಗೆ ಇದು IT ಹಬ್ (IT Hub) ಎಂದೇ ಕರೆಯಲ್ಪಡುವ ಎಲೆಕ್ಟ್ರಾನಿಕ್ಸ್ ಸಿಟಿಗೆ (Electronic City) ಸಮೀಪದಲ್ಲಿದೆ. ಹೆಸರಿನಲ್ಲಿ ಹಳ್ಳಿಯಿದ್ದರೂ ಸದ್ಯ ಬೊಮ್ಮನಹಳ್ಳಿ ವೇಗವಾಗಿ ಬೆಳೆಯುತ್ತಿರುವ ತಾಣವಾಗಿದೆ. ಬಿಜೆಪಿಯ (BJP) ಭದ್ರಕೋಟೆಯಾಗಿರುವ ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ (Satish Reddy) ಹ್ಯಾಟ್ರಿಕ್ ಗೆಲುವು ಸಾಧಿಸಿ, 4ನೇ ಯತ್ನದಲ್ಲಿದ್ದಾರೆ. ಅವರ ಜನಕ್ಕೆ ಬ್ರೇಕ್ ಹಾಕೋಕೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ.


8 ವಾರ್ಡ್‌ಗಳಿರುವ ಕ್ಷೇತ್ರ


ಬೊಮ್ಮನಹಳ್ಳಿ, ಎಚ್ಎಸ್‌ಆರ್‌ ಬಡಾವಣೆ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಅರಕೆರೆ ಸೇರಿದಂತೆ 8 ಬಿಬಿಎಂಪಿ ವಾರ್ಡ್‌ಗಳು ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇವುಗಳ ಪೈಕಿ ಅತಿ ಹೆಚ್ಚು ಬಿಜೆಪಿ ಪ್ರಾಬಲ್ಯವಿದೆ. ಸದ್ಯ ಬೊಮ್ಮನಹಳ್ಳಿಯು ಅತ್ಯಂತ ಫಲಪ್ರದ ರಿಯಾಲ್ಟಿ ತಾಣವಾಗಿ ಹೊರಹೊಮ್ಮಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಎಚ್‌ಎಸ್‌ಆರ್ ಲೇಔಟ್‌ನಂತಹ ಸ್ಥಾಪಿತ ಪ್ರದೇಶಗಳಿಗೆ ಅದರ ಸಾಮೀಪ್ಯವು ಬೊಮ್ಮನಹಳ್ಳಿಯನ್ನು ನಿರ್ಮಾಣ ಚಟುವಟಿಕೆಗಳಿಂದ ಗದ್ದಲದ ನೆರೆಹೊರೆಯಾಗಿ ಪರಿವರ್ತಿಸಿದೆ.


4ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಸತೀಶ್ ರೆಡ್ಡಿ


ಬೇಗೂರು ಜಿಲ್ಲಾ ಪಂಚಾಯಿತಿ ಹಾಗೂ ಬೊಮ್ಮನಹಳ್ಳಿ ನಗರಸಭೆ ಸದಸ್ಯ ಸ್ಥಾನದಿಂದ ನೇರವಾಗಿ ವಿಧಾನಸೌಧದ ಮೆಟ್ಟಿಲೇರಿದ ಸತೀಶ್‌ ರೆಡ್ಡಿ ಅವರು ಪ್ರಸ್ತುತ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು. 2008ರಿಂದಲೂ ಈ ಕ್ಷೇತ್ರದ ಮೇಲೆ ಸತೀಶ್ ರೆಡ್ಡಿ ಹಿಡಿತ ಸಾಧಿಸಿದ್ದಾರೆ. ‘ಹ್ಯಾಟ್ರಿಕ್‌’ ಗೆಲುವು ಪಡೆದು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿರುವ ಸತೀಶ್ ರೆಡ್ಡಿ, ಈ ಬಾರಿ 4ನೇ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.


ಇದನ್ನೂ ಓದಿ: Karnataka Assembly Elections: ಬಿಟಿಎಂ ಲೇಔಟ್‌ನಲ್ಲಿ ಹೇಗಿದೆ ಚುನಾವಣಾ ರಣಕಣ? ಕಾಂಗ್ರೆಸ್‌ಗೆ ಏಟು ಕೊಡುತ್ತಾ ಬಿಜೆಪಿ?


ಸತೀಶ್ ರೆಡ್ಡಿ ಹೆಚ್ಚುಗಾರಿಕೆ


ಸತೀಶ್ ರೆಡ್ಡಿ ಅಧಿಕಾರಾವಧಿಯಲ್ಲಿ ರಾಜಾ ಕಾಲುವೆಗಳ ಪುನರುಜ್ಜೀವನ ಕಂಡಿದ್ದು, ಪುಟ್ಟೇನಹಳ್ಳಿಯಲ್ಲಿ 'ನೊರೆ' ಹಾವಳಿ ಮಾಯವಾಗಿದೆ. ಕೆರೆಗಳ ಅಭಿವೃದ್ಧಿಯಾಗಿದೆ. ಒತ್ತುವರಿ ತೆರವುಗೊಳಿಸಿ 500 ಕೋಟಿ ರೂ. ಆಸ್ತಿ ಸರಕಾರದ ವಶಕ್ಕೆ ವಾಪಸ್ ಪಡೆದಿರುವುದು ಮಹತ್ತರಸಾಧನೆ ಎನ್ನಲಾಗಿದೆ.

ಬಿಜೆಪಿಕಾಂಗ್ರೆಸ್ಜೆಡಿಎಸ್
ಸತೀಶ್ ರೆಡ್ಡಿಕವಿತಾ ರೆಡ್ಡಿಸಮೀರ್ ಖಾನ್
ಉಮಾಪತಿ
ಸುಷ್ಮಾ ರಾಜಗೋಪಾಲ್ ರೆಡ್ಡಿ

ಈ ಬಾರಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?


ಈ ಬಾರಿ ಬಿಜೆಪಿಯಿಂದ ಶಾಸಕ ಸತೀಶ್ ರೆಡ್ಡಿ ಮತ್ತೊಮ್ಮೆ ಸ್ಪರ್ಧಿಸಲು ಬಯಸಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲಿ ಟೆಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ, ಸ್ಥಳೀಯ ಮುಖಂಡ ಉಮಾಪತಿ ಟಿಕೆಟ್ ಬಯಸಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಸೋತಿದ್ದ ಸುಷ್ಮಾ ರಾಜಗೋಪಾಲ್ ರೆಡ್ಡಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಸಮೀರ್ ಖಾನ್​ ಸ್ಪರ್ಧಿಸುವ ಸಾಧ್ಯತೆ ಇದೆ.


ಕವಿತಾ ರೆಡ್ಡಿ


ಬೊಮ್ಮನಹಳ್ಳಿ ಜಾತಿ ಲೆಕ್ಕಾಚಾರ


ಕ್ಷೇತ್ರದಲ್ಲಿ ಒಟ್ಟು ಮತದಾರರು ಸಂಖ್ಯೆ-4,27,300 ಇದೆ. ಈ ಪೈಕಿ ಒಕ್ಕಲಿಗರು-95,000, ಲಿಂಗಾಯತರು-2000, ಬ್ರಾಹ್ಮಣರು-43000, ಒಬಿಸಿ-55,000, ಎಸ್ಸಿ,ಎಸ್ಟಿ- 1,23,300, ಅಲ್ಪಸಂಖ್ಯಾತರು- 27,500 ಹಾಗೂ ಇತರೇ ಸಮುದಾಯದ ಮತದಾರರ ಸಂಖ್ಯೆ 81,500ರಷ್ಟಿದೆ.


ಮೂಲ ನಿವಾಸಿಗಳಿಗಿಂತ ವಲಸಿಗರ ಸಂಖ್ಯೆ ಜಾಸ್ತಿ!


ಕ್ಷೇತ್ರದಲ್ಲಿ 4.2 ಲಕ್ಷ ಮತದಾರರಿದ್ದು, ಮೂಲ ನಿವಾಸಿಗಳಿಗಿಂತ ವಲಸಿಗರ ಸಂಖ್ಯೆಯೇ ಜಾಸ್ತಿ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಸಮುದಾಯದವರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಪರಿಶಿಷ್ಟ ಜಾತಿ, ಪಂಗಡದ ಜನಾಂಗದವರು ಸಹ ಸಮ ಸಂಖ್ಯೆಯಲ್ಲಿದ್ದಾರೆ. ತೆಲುಗು, ವಲಸಿಗ ಹಿಂದಿ, ತಮಿಳು ಭಾಷಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದು ಕ್ಷೇತ್ರದ ಮತ್ತೊಂದು ವಿಶೇಷವಾಗಿದೆ.


ಇದನ್ನೂ ಓದಿ: Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?


ಕ್ಷೇತ್ರದಲ್ಲಿದೆ ಹಲವು ಸಮಸ್ಯೆ


ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಕಿರಿದಾದ ರಸ್ತೆಗಳು ಮತ್ತು ಆಗಾಗ್ಗೆ ಟ್ರಾಫಿಕ್ ಜಾಮ್ ಆಗಿದೆ. ಬನ್ನೇರುಘಟ್ಟ ರಸ್ತೆ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಮಸ್ಯೆ ತೀವ್ರವಾಗಿದೆ.

Published by:Annappa Achari
First published: